IND vs NZ Final: ಟಾಸ್ ಸೋತು ಬೌಲಿಂಗ್ ಆಹ್ವಾನ ಪಡೆದ ಭಾರತ
IND vs NZ Final: ಟಾಸ್ ಪ್ರಕ್ರಿಯೆಗೆ ಮೈದಾನಕ್ಕಿಳಿಯುತ್ತಿದ್ದಂತೆ ನಾಯಕ ರೋಹಿತ್ ಶರ್ಮ ದಾಖಲೆಯೊಂದನ್ನು ತಮ್ಮ ಹೆಸೆರಿಗೆ ಬರೆದರು. ಎಲ್ಲ ನಾಲ್ಕು ಐಸಿಸಿ ಟೂರ್ನಿಗಳಲ್ಲಿ ತಂಡವನ್ನು ಮುನ್ನಡೆಸಿದ ವಿಶ್ವದ ಮೊದಲ ನಾಯಕ ಎನಿಸಿಕೊಂಡರು. ರೋಹಿತ್ ನಾಯಕತ್ವದಲ್ಲಿ ಭಾರತ 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್, 2023ರ ಏಕದಿನ ವಿಶ್ವಕಪ್, 2024ರ ಟಿ20 ವಿಶ್ವಕಪ್‌ನಲ್ಲಿ ಆಡಿತ್ತು.


ದುಬೈ: ಚಾಂಪಿಯನ್ಸ್ ಟ್ರೋಫಿ ಹೈವೋಲ್ಟೇಜ್ ಫೈನಲ್(Champions Trophy 2025 final) ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲ್ಯಾಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಭಾರತ ಮೊದಲು ಬೌಲಿಂಗ್ ನಡೆಸಲಿದೆ. ನಾಲ್ವರು ಸ್ಪಿನ್ನರ್ಗಳ ಕಾರ್ಯತಂತ್ರವನ್ನು ಬಳಿಸಿ, ಕಳೆದೆರಡು ಪಂದ್ಯಗಳಲ್ಲಿ ಸುಲಭ ಗೆಲುವು ಸಾಧಿಸಿರುವ ತಂಡ ಸಂಯೋಜನೆಯನ್ನೇ ಭಾರತ ಫೈನಲ್ನಲ್ಲೂ ಮುಂದುವರಿಸಿತು. ನ್ಯೂಜಿಲ್ಯಾಂಡ್ ಒಂದು ಬದಲಾವಣೆ ಮಾಡಿತು. ಭುಜದ ನೋವಿಗೆ ತುತ್ತಾದ ಮ್ಯಾಟ್ ಹೆನ್ರಿ ಬದಲು ನಾಥನ್ ಸ್ಮಿತ್ ಸ್ಥಾನ ಪಡೆದರು.
ದಾಖಲೆ ಬರೆದ ರೋಹಿತ್
ಟಾಸ್ ಪ್ರಕ್ರಿಯೆಗೆ ಮೈದಾನಕ್ಕಿಳಿಯುತ್ತಿದ್ದಂತೆ ನಾಯಕ ರೋಹಿತ್ ಶರ್ಮ ದಾಖಲೆಯೊಂದನ್ನು ತಮ್ಮ ಹೆಸೆರಿಗೆ ಬರೆದರು. ಎಲ್ಲ ನಾಲ್ಕು ಐಸಿಸಿ ಟೂರ್ನಿಗಳಲ್ಲಿ ತಂಡವನ್ನು ಮುನ್ನಡೆಸಿದ ವಿಶ್ವದ ಮೊದಲ ನಾಯಕ ಎನಿಸಿಕೊಂಡರು. ರೋಹಿತ್ ನಾಯಕತ್ವದಲ್ಲಿ ಭಾರತ 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್, 2023ರ ಏಕದಿನ ವಿಶ್ವಕಪ್, 2024ರ ಟಿ20 ವಿಶ್ವಕಪ್‌ನಲ್ಲಿ ಆಡಿತ್ತು. ರೋಹಿತ್ ಹೊರತುಪಡಿಸಿ ಮಹೇಂದ್ರ ಸಿಂಗ್ ಧೋನಿ ಮತ್ತು ನ್ಯೂಜಿಲ್ಯಾಂಡ್‌ನ ಕೇನ್ ವಿಲಿಯಮ್ಸನ್ ಮೂರು ಮಾದರಿಯ ಐಸಿಸಿ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಿದ್ದರು.
Two teams eager to etch their name in the history books. Who's winning the #ChampionsTrophy? 🏆
— ICC (@ICC) March 9, 2025
Details 👉 https://t.co/NHbnqbFDpt pic.twitter.com/PTJhe9a5JA
ಭಾರತ ಗೆದ್ದರೆ 7ನೇ ಬಾರಿ ಐಸಿಸಿ ಟ್ರೋಫಿ ಗೆದ್ದಂತಾಗುತ್ತದೆ. ಭಾರತ ಇದುವರೆಗೆ ತಲಾ 2 ಬಾರಿ ಏಕದಿನ ವಿಶ್ವಕಪ್ (1983, 2011), ಟಿ20 ವಿಶ್ವಕಪ್ (2007, 2024) ಮತ್ತು ಚಾಂಪಿಯನ್ಸ್ ಟ್ರೋಫಿ (2002, 2013) ಜಯಿಸಿದೆ. ಭಾರತ ಗೆದ್ದರೆ 7ನೇ ಬಾರಿ ಐಸಿಸಿ ಟ್ರೋಫಿ ಗೆದ್ದಂತಾಗುತ್ತದೆ. ಭಾರತ ಇದುವರೆಗೆ ತಲಾ 2 ಬಾರಿ ಏಕದಿನ ವಿಶ್ವಕಪ್ (1983, 2011), ಟಿ20 ವಿಶ್ವಕಪ್ (2007, 2024) ಮತ್ತು ಚಾಂಪಿಯನ್ಸ್ ಟ್ರೋಫಿ (2002, 2013) ಜಯಿಸಿದೆ.
ಇದನ್ನೂ ಓದಿ IND vs NZ Final: ಭಾರತ ಕಪ್ ಗೆಲ್ಲಲಿ, ಕೊಹ್ಲಿ ಹಲವು ದಾಖಲೆ ಬರೆಯಲಿ; ಅಭಿಮಾನಿಗಳ ಹಾರೈಕೆ
ಆಡುವ ಬಳಗ
ಭಾರತ: ರೋಹಿತ್ ಶರ್ಮ (ನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ.
ನ್ಯೂಜಿಲೆಂಡ್: ವಿಲ್ ಯಂಗ್, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್, ಡ್ಯಾರಿಲ್ ಮಿಚೆಲ್, ಟಾಮ್ ಲೇಥಮ್ (ವಿ ಕಿ), ಗ್ಲೆನ್ ಫಿಲಿಪ್ಸ್, ಮೈಕಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಸ್ಮಿತ್, ಕೈಲ್ ಜೇಮಿಸನ್, ವಿಲಿಯಮ್ ರೌರ್ಕಿ.