ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

32 ಸದಸ್ಯರ ಭಾರತದ ಪುರುಷರ ಹಾಕಿ ತಂಡ ಪ್ರಕಟ

ತಂಡವನ್ನು ಹಿರಿಯ ಡ್ರ್ಯಾಗ್‌ಫ್ಲಿಕರ್ ಹರ್ಮನ್‌ಪ್ರೀತ್ ಸಿಂಗ್ ಮುನ್ನಡೆಸಲಿದ್ದಾರೆ. ಹಾರ್ದಿಕ್ ಸಿಂಗ್ ಉಪನಾಯಕನಾಗಿದ್ದಾರೆ. ಫೆಬ್ರವರಿ 15ರಿಂದ 25ರ ತನಕ ಟೂರ್ನಿ ನಡೆಯಲಿದೆ. ಭಾರತ ತಂಡ ಸ್ಪೇನ್, ಜರ್ಮನಿ, ಐರ್ಲೆಂಡ್‌ ಹಾಗೂ ಇಂಗ್ಲೆಂಡ್ ತಂಡಗಳನ್ನು ಎದುರಿಸಲಿದೆ.

32 ಸದಸ್ಯರ ಭಾರತದ ಪುರುಷರ ಹಾಕಿ ತಂಡ ಪ್ರಕಟ

Indian men’s hockey team

Profile Abhilash BC Jan 31, 2025 11:04 AM

ಬೆಂಗಳೂರು: ಒಡಿಶಾ ರಾಜಧಾನಿ ಭುವನೇಶ್ವರದ ಕಳಿಂಗ ಹಾಕಿ ಕ್ರೀಡಾಂಗಣದಲ್ಲಿ ನಡೆಯಲಿರುವ ಎಫ್‌ಐಎಚ್ ಪ್ರೊ ಲೀಗ್‌ಗೆ(FIH Pro League 2024-25) ಹಾಕಿ ಇಂಡಿಯಾ 32 ಸದಸ್ಯರನ್ನು ಒಳಗೊಂಡಿರುವ ಭಾರತೀಯ ಪುರುಷರ ಹಾಕಿ ತಂಡವನ್ನು(Indian men’s hockey team) ಪ್ರಕಟಿಸಿದೆ.

ತಂಡವನ್ನು ಹಿರಿಯ ಡ್ರ್ಯಾಗ್‌ಫ್ಲಿಕರ್ ಹರ್ಮನ್‌ಪ್ರೀತ್ ಸಿಂಗ್ ಮುನ್ನಡೆಸಲಿದ್ದಾರೆ. ಹಾರ್ದಿಕ್ ಸಿಂಗ್ ಉಪನಾಯಕನಾಗಿದ್ದಾರೆ. ಫೆಬ್ರವರಿ 15ರಿಂದ 25ರ ತನಕ ಟೂರ್ನಿ ನಡೆಯಲಿದೆ. ಭಾರತ ತಂಡ ಸ್ಪೇನ್, ಜರ್ಮನಿ, ಐರ್ಲೆಂಡ್‌ ಹಾಗೂ ಇಂಗ್ಲೆಂಡ್ ತಂಡಗಳನ್ನು ಎದುರಿಸಲಿದೆ.

22ರ ಹರೆಯದ ಅಂಗದ್ ಸಿಂಗ್ ಹಾಗೂ 20ರ ವಯಸ್ಸಿನ ಅರ್ಷದೀಪ್ ಸಿಂಗ್ ಇದೇ ಮೊದಲ ಬಾರಿ ಸೀನಿಯರ್ ತಂಡಕ್ಕೆ ಕರೆ ಪಡೆದಿದ್ದಾರೆ. ಉಭಯ ಆಟಗಾರರು ಜೂನಿಯರ್ ತಂಡ ಹಾಗೂ ಹಾಕಿ ಇಂಡಿಯಾ ಲೀಗ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು.

ತಂಡ

ಗೋಲ್‌ಕೀಪರ್‌ಗಳು: ಕೃಷ್ಣ ಬಹದ್ದೂರ್ ಪಾಠಕ್, ಸೂರಜ್ ಕರ್ಕೇರ, ಪ್ರಿನ್ಸ್‌ದೀಪ್ ಸಿಂಗ್.

ಡಿಫೆಂಡರ್‌ಗಳು: ಜರ್ಮನ್‌ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ಹರ್ಮನ್‌ಪ್ರೀತ್ ಸಿಂಗ್(ನಾಯಕ), ಸುಮಿತ್, ಸಂಜಯ್, ಜುಗ್ರಾಜ್ ಸಿಂಗ್, ನೀಲಂ ಸಂಜೀಪ್, ವರುಣ್ ಕುಮಾರ್, ಯಶ್‌ದೀಪ್ ಸಿವಾಚ್‌.

ಮಿಡ್‌ಫೀಲ್ಡರ್‌ಗಳು: ರಾಜ್‌ಕುಮಾರ್ ಪಾಲ್, ಶಂಶೇರ್ ಸಿಂಗ್, ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್(ಉಪ ನಾಯಕ), ವಿವೇಕ್ ಸಾಗರ್ ಪ್ರಸಾದ್, ನೀಲಕಂಠ ಶರ್ಮಾ,ಎಂ.ರಬಿಚಂದ್ರ ಸಿಂಗ್, ರಾಜಿಂದರ್ ಸಿಂಗ್.

ಫಾರ್ವರ್ಡ್‌ಗಳು: ಅಭಿಷೇಕ್, ಸುಖಜೀತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಮನ್‌ದೀಪ್ ಸಿಂಗ್, ಗುರ್ಜಂತ್ ಸಿಂಗ್, ಬಾಬಿ ಸಿಂಗ್ ಧಾಮಿ, ಶೀಲಾನಂದ ಲಾಕ್ರಾ, ದಿಲ್‌ಪ್ರೀತ್ ಸಿಂಗ್, ಅರೈಜೀತ್ ಸಿಂಗ್, ಉತ್ತಮ್ ಸಿಂಗ್, ಅಂಗದ್ ಸಿಂಗ್, ಅರ್ಷದೀಪ್ ಸಿಂಗ್.

24 ಸದಸ್ಯರುಗಳನ್ನು ಒಳಗೊಂಡ ಭಾರತ ಮಹಿಳಾ ಹಾಕಿ ತಂಡವನ್ನು ಸಲಿಮಾ ಟೇಟೆ ಮುನ್ನಡೆಸಲಿದ್ದಾರೆ. ಫಾರ್ವರ್ಡ್ ಆಟಗಾರ್ತಿ ನವನೀತ್ ಕೌರ್ ಉಪ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಪ್ರಮುಖ ತಂಡದ ಜತೆಗೆ ಮೀಸಲು ಆಟಗಾರರಾಗಿ ಗೋಲ್‌ಕೀಪರ್ ಬನ್ವಾರಿ ಸೋಲಂಕಿ, ಡಿಫೆಂಡರ್‌ ಗಳಾದ ಅಕ್ಷತಾ ಅಬಾಸೊ ಧೇಕಾಲೆ, ಜ್ಯೋತಿ ಸಿಂಗ್ ಹಾಗೂ ಫಾರ್ವರ್ಡ್‌ಗಳಾದ ಸಾಕ್ಷಿ ರಾಣಾ, ಅನ್ನು ಹಾಗೂ ಸೋನಮ್ ಆಯ್ಕೆಯಾಗಿದ್ದಾರೆ.

ಭಾರತದ ಮಹಿಳಾ ಹಾಕಿ ತಂಡ

ಗೋಲ್‌ಕೀಪರ್ಸ್‌: ಸವಿತಾ ಪೂನಿಯ, ಬಿಚು ದೇವಿ ಖರಿಬಮ್

ಡಿಫೆಂಡರ್‌ಗಳು: ಸುಶೀಲಾ ಚಾನು, ನಿಕ್ಕಿ ಪ್ರಧಾನ್, ಉದಿತಾ, ಜ್ಯೋತಿ, ಇಶಿಕಾ ಚೌಧರಿ, ಜ್ಯೋತಿ ಛತ್ರಿ.

ಮಿಡ್ ಫೀಲ್ಡರ್‌ಗಳು: ವೈಷ್ಣವಿ ವಿಠಲ್ ಫಾಲ್ಕೆ, ನೇಹಾ, ಮನಿಶಾ ಚೌಹಾಣ್, ಸಲಿಮಾ ಟೇಟೆ(ನಾಯಕಿ), ಸುನೆಲಿತಾ ಟೊಪ್ಪೊ, ಲಾಲ್‌ರೆಂಸಿಯಾಮಿ, ಬಲ್ಜೀತ್ ಕೌರ್, ಶರ್ಮಿಳಾ ದೇವಿ.

ಫಾರ್ವರ್ಡ್‌ಗಳು: ನವನೀತ್ ಕೌರ್(ಉಪ ನಾಯಕಿ), ಮುಮ್ತಾಝ್ ಖಾನ್, ಪ್ರೀತಿ ದುಬೆ, ಋತುಜಾ ದಾದಾಸೊ ಪಿಸಾಲ್, ಬ್ಯೂಟಿ ಡಂಗ್‌ಡಂಗ್, ಸಂಗೀತಾ ಕುಮಾರಿ, ದೀಪಿಕಾ, ವಂದನಾ ಕಟಾರಿಯಾ.