ಮೊದಲ ಏಕದಿನ ಪಂದ್ಯದ ಪಿಚ್ ರಿಪೋರ್ಟ್, ಹವಾಮಾನ ವರದಿ, ಸಂಭಾವ್ಯ ತಂಡ ಹೀಗಿದೆ
India vs England 1st ODI: ಪಂದ್ಯಕ್ಕೆ ಯಾವುದೇ ಮಳೆ ಸಾಧ್ಯತೆ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪಂದ್ಯದ ವೇಳೆ 32 ಮತ್ತು ಕನಿಷ್ಠ 18 ಡಿಗ್ರಿ ಸೆಲ್ಸಿಯಸ್‌ನ ಅತ್ಯಧಿಕ ತಾಪಮಾನ ಇರಲಿದೆ.
ನಾಗ್ಪುರ: ಟಿ20 ಸರಣಿಯನ್ನು ಕಳೆದುಕೊಂಡ ಇಂಗ್ಲೆಂಡ್(India vs England 1st ODI) ತಂಡ ಇದೀಗ ಏಕದಿನ ಸರಣಿಯನ್ನು ಒಲಿಸಿಕೊಳ್ಳುವ ವಿಶ್ವಾಸದೊಂದಿಗೆ ಭಾರತ ವಿರುದ್ಧ ಗುರುವಾರ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಹಸಿರು ಹುಲ್ಲಿನಿಂದ ಕೂಡಿದ ವಿಸಿಎ ಸ್ಟೇಡಿಯಂನ ವೇಗದ ಬೌಲಿಂಗ್ ಟ್ರ್ಯಾಕ್ ಇತ್ತಂಡಗಳಿಗೆ ಕಾದು ಕುಳಿತಿದೆ.
ಪಿಚ್ ರಿಪೋರ್ಟ್
ನಾಗ್ಪುರ ಸ್ಟೇಡಿಯಂ ಏಕದಿನ ಪಂದ್ಯದಲ್ಲಿ ಹೆಚ್ಚು ಸ್ಕೋರ್ ಮಾಡಿದ ಇತಿಹಾಸವನ್ನು ಹೊಂದಿದೆ. ಈ ಮೈದಾನದಲ್ಲಿ ಆಡಿದ ಒಂಬತ್ತು ಏಕದಿನ ಪಂದ್ಯದಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 288 ಆಗಿದೆ. 2009 ರಲ್ಲಿ, ಭಾರತವು ಆಸ್ಟ್ರೇಲಿಯಾ ವಿರುದ್ಧ ಗರಿಷ್ಠ 354ರನ್ ಬಾರಿಸಿತ್ತು. ಎಂಎಸ್ ಧೋನಿ ನೇತೃತ್ವದ ತಂಡ 2009 ರಲ್ಲಿ ಆಸೀಸ್ ವಿರುದ್ಧವೇ 351 ರನ್ ಚೇಸ್ ಮಾಡಿ ಗೆಲುವು ಸಾಧಿಸಿತ್ತು.
ಹವಾಮಾನ ವರದಿ
ಪಂದ್ಯಕ್ಕೆ ಯಾವುದೇ ಮಳೆ ಸಾಧ್ಯತೆ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಪಂದ್ಯದ ವೇಳೆ 32 ಮತ್ತು ಕನಿಷ್ಠ 18 ಡಿಗ್ರಿ ಸೆಲ್ಸಿಯಸ್‌ನ ಅತ್ಯಧಿಕ ತಾಪಮಾನ ಇರಲಿದೆ. ಮೊದಲು ಬ್ಯಾಟಿಂಗ್ ನಡೆಸುವ ತಂಡಕ್ಕೆ ಇದು ಅಪಾಯಕಾರಿ. ಬ್ಯಾಟರ್‌ಗಳು ಬಿಸಿಲಿನ ಜಳಕ್ಕೆ ಬಸವಳಿದು ದೊಡ್ಡ ಮೊತ್ತ ಪೇರಿಸಲು ಕಷ್ಟವಾಗಬಹುದು.
ಇದನ್ನೂ ಓದಿ ಭಾರತ-ಇಂಗ್ಲೆಂಡ್ ಏಕದಿನ ಪಂದ್ಯದ ದಾಖಲೆ ಹೇಗಿದೆ?
ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ (ವಿ.ಕೀ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್.
ಇಂಗ್ಲೆಂಡ್: ಬೆನ್ ಡಕೆಟ್, ಫಿಲ್ ಸಾಲ್ಟ್ (ವಿ.ಕೀ), ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜೇಮೀ ಓವರ್‌ಸ್ಟನ್, ಬ್ರೈಡನ್ ಕಾರ್ಸೆ, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್.