ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs NZ Final: ಫೈನಲ್​ಗೆ ಮಳೆ ಕಾಡಿದರೆ?, ಪಂದ್ಯ ಟೈ ಆದರೆ ಫಲಿತಾಂಶ ನಿರ್ಧಾರ ಹೇಗೆ?

Champions Trophy Final 2025: ಭಾನುವಾರ ನಡೆಯುವ ಫೈನಲ್‌ ಪಂದ್ಯಕ್ಕೆ ಯಾವುದೇ ಮಳೆ ಭೀತಿ ಎದುರಾಗಿಲ್ಲ. ಪಂದ್ಯ ಆರಂಭದ ಸಮಯದಲ್ಲಿ ತಾಪಮಾನವು 34 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಕಾಳೆ ತಿಳಿಸಿದೆ. ಸಂಜೆ ವೇಳೆ ತಾಪಮಾನವು ಕಡಿಮೆಯಾಗುವ ನಿರೀಕ್ಷೆಯಿದೆ. ಆದಾಗ್ಯೂ, ಮಧ್ಯಾಹ್ನ 3 ಗಂಟೆಯಿಂದ ದುಬೈನಲ್ಲಿ ಮೋಡ ಕವಿದ ವಾತಾವರಣವಿರಲಿದೆ.

ಫೈನಲ್​ಗೆ ಮಳೆ ಕಾಡಿದರೆ?, ಪಂದ್ಯ ಟೈ ಆದರೆ ಫಲಿತಾಂಶ ನಿರ್ಧಾರ ಹೇಗೆ?

Profile Abhilash BC Mar 8, 2025 1:20 PM

ದುಬೈ: ಭಾರತ-ನ್ಯೂಜಿಲ್ಯಾಂಡ್‌(IND vs NZ Final) ನಡುವೆ ಭಾನುವಾರ ದುಬೈ ಸ್ಟೇಡಿಯಂನಲ್ಲಿ ನಿಗದಿಯಾಗಿರುವ ಚಾಂಪಿಯನ್ಸ್‌ ಟ್ರೋಫಿ​ ಫೈನಲ್(Champions Trophy Final 2025)​ ಪಂದ್ಯಕ್ಕೆ ಮಳೆ ಭೀತಿ ಇರುವುದಿಲ್ಲ. ಆದರೂ, ಒಂದು ವೇಳೆ ಅನಿರೀಕ್ಷಿತವಾಗಿ ಮಳೆ ಸುರಿದರೂ ಪಂದ್ಯಕ್ಕೆ ಮೀಸಲು ದಿನವಿದೆ. ಒಂದೊಮ್ಮೆ ಮೀಸಲು ದಿನವೂ ಪಂದ್ಯ ನಡೆಯದಿದ್ದರೆ? ಅಥವಾ ಪಂದ್ಯ ಟೈ ಆದರೆ ಫಲಿತಾಂಶ ನಿರ್ಧಾರ ಹೇಗೆ ಎಂಬ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಹೀಗಿದೆ.

ಪಂದ್ಯ ಟೈ ಆದರೆ?

ಒಂದು ವೇಳೆ ಫೈನಲ್​ ಪಂದ್ಯ ಟೈ ಆದರೆ ಸೂಪರ್​ ಓವರ್​ ಇರಲಿದೆ. 2019ರ ಏಕದಿನ ವಿಶ್ವಕಪ್‌ ಫೈನಲ್ ಬಳಿಕ ಈ ನಿಯಮ ಜಾರಿಗೆ ತರಲಾಗಿತ್ತು. ಅಂದು ಸೂಪರ್​ ಓವರ್​ ಟೈ ಆದಾಗ ಬೌಂಡರಿ ಕೌಂಟ್​ ನಿಯಮದನ್ವಯ ವಿಜೇತರನ್ನು ಘೋಷಿಸಲಾಗಿತ್ತು. ಇದು ಭಾರೀ ವಿವಾದ ಸೃಷ್ಟಿಸಿತ್ತು. ಹೀಗಾಗಿ ಆ ಬಳಿಕದ ಎಲ್ಲ ಐಸಿಸಿ ಟೂರ್ನಿಯಲ್ಲಿ ಸೂಪರ್​ ಓವರ್​ ಟೈ ಆದರೆ, ಸ್ಪಷ್ಟ ಫಲಿತಾಂಶ ಬರುವವರೆಗೂ ಸೂಪರ್​ ಓವರ್​ ಮುಂದುವರಿಸುವ ಹೊಸ ನಿಯಮ ತರಲಾಗಿತ್ತು. ಆದರೆ ಹೆಚ್ಚುವರಿ ಸೂಪರ್​ ಓವರ್​ಗೆ ಸಮಯದ ಅಭಾವ ಇದ್ದರೆ ಜಂಟಿ ಚಾಂಪಿಯನ್​ ಘೋಷಿಸಲಾಗುತ್ತದೆ.

ಮಳೆ ಬಂದು ಪಂದ್ಯ ರದ್ದಾದರೆ?

ಭಾನುವಾರ ನಡೆಯುವ ಫೈನಲ್‌ ಪಂದ್ಯಕ್ಕೆ ಯಾವುದೇ ಮಳೆ ಭೀತಿ ಎದುರಾಗಿಲ್ಲ. ಪಂದ್ಯ ಆರಂಭದ ಸಮಯದಲ್ಲಿ ತಾಪಮಾನವು 34 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಕಾಳೆ ತಿಳಿಸಿದೆ. ಸಂಜೆ ವೇಳೆ ತಾಪಮಾನವು ಕಡಿಮೆಯಾಗುವ ನಿರೀಕ್ಷೆಯಿದೆ. ಆದಾಗ್ಯೂ, ಮಧ್ಯಾಹ್ನ 3 ಗಂಟೆಯಿಂದ ದುಬೈನಲ್ಲಿ ಮೋಡ ಕವಿದ ವಾತಾವರಣವಿರಲಿದೆ.

ಇದನ್ನೂ ಓದಿ IND vs NZ Final: ಫೈನಲ್‌ ಪಂದ್ಯದ ಪಿಚ್‌ ರಿಪೋರ್ಟ್‌, ಸಂಭಾವ್ಯ ತಂಡ, ಮಳೆ ನಿಯಮ ಹೇಗಿದೆ?

ಒಂದು ವೇಳೆ ಅನಿರೀಕ್ಷಿತ ಮಳೆ ಅಥವಾ ಇನ್ನೇನಾದರು ಕಾರಣದಿಂದ ಪಂದ್ಯ ನಿಗದಿತ ದಿನದಂದು ನಡೆಯದೇ ಹೋದರೆ, ಮೀಸಲು ದಿನವಿದೆ. ಉಭಯ ತಂಡಗಳು ಕನಿಷ್ಠ 20 ಓವರ್​ ಆಡದಿದ್ದರೆ ಆಗ ಮೀಸಲು ದಿನವಾದ ಸೋಮವಾರಕ್ಕೆ ಪಂದ್ಯ ವಿಸ್ತರಿಸಲ್ಪಡಲಿದೆ. ಮೀಸಲು ದಿನವೂ ಪಂದ್ಯ ನಡೆಯದೇ ಹೋದರೆ ಆಗ ಎರಡೂ ತಂಡಗಳನ್ನು ಜಂಟಿ ಚಾಂಪಿಯನ್ಸ್‌ ಎಂದು ಘೋಷಿಸಲಾಗುವುದು. 2002ರಲ್ಲಿ ಮಳೆಯಿಂದಾಗಿಯೇ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಕಪ್‌ ಗೆದ್ದಿತ್ತು.

ಉಭಯ ತಂಡಗಳ ಇತಿಹಾಸ

ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತ ಕಳೆದ 27 ವರ್ಷಗಳಿಂದ ಅಜೇಯ ದಾಖಲೆ ಹೊಂದಿದೆ. 1998ರ ಚೊಚ್ಚಲ ಆವೃತ್ತಿಯಲ್ಲಿ ಭಾರತ ಫೈನಲ್‌ನಲ್ಲಿ ಸೋತಿತ್ತು. ಆ ಬಳಿಕ ಸೆಮಿಫೈನಲ್‌ಗೇರಿದ ಪ್ರತಿ ಬಾರಿಯೂ ತಂಡ ಫೈನಲ್‌ ಪ್ರವೇಶಿಸಿದೆ. 2004, 2006, 2009ರಲ್ಲಿ ಗುಂಪು ಹಂತದಲ್ಲೇ ಹೊರಬಿದ್ದಿತ್ತು.

ನ್ಯೂಜಿಲೆಂಡ್‌ 16 ವರ್ಷಗಳ ಬಳಿಕ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಪ್ರವೇಶಿಸಿವೆ. 2009ರಲ್ಲಿ ಫೈನಲ್‌ಗೇರಿದ್ದ ತಂಡ, ಆಸ್ಟ್ರೇಲಿಯಾ ವಿರುದ್ಧ ಸೋತು ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.