Birthright Ban: ಫೆ.20ರ ನಂತರ ಅಮೆರಿಕದಲ್ಲಿ ಜನ್ಮಸಿದ್ಧ ಪೌರತ್ವ ಬ್ಯಾನ್-ಸಿಸೇರಿಯನ್ ಮೊರೆ ಹೋದ ಭಾರತೀಯರು
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾರ್ಯನಿರ್ವಾಹಕ ಆದೇಶದಡಿಯಲ್ಲಿ ಜನ್ಮಸಿದ್ಧ ಪೌರತ್ವವನ್ನು ರದ್ದುಗೊಳಿಸಲು ಫೆ.20 ಗಡುವು. ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ತಕ್ಷಣ ಟ್ರಂಪ್ ಸಹಿ ಮಾಡಿದ ಕಾರ್ಯನಿರ್ವಾಹಕ ಆದೇಶಗಳಲ್ಲಿ ಒಂದು ಅಮೆರಿಕದಲ್ಲಿ ಜನ್ಮಸಿದ್ಧ ಪೌರತ್ವವನ್ನು ಕೊನೆಗೊಳಿಸುವುದಾಗಿತ್ತು. ಆದ್ದರಿಂದ, ಫೆಬ್ರವರಿ 19 ರವರೆಗೆ ಅಮೆರಿಕದಲ್ಲಿ ಜನಿಸಿದ ಮಕ್ಕಳು ಅಮೆರಿಕದ ನಾಗರಿಕರಾಗಿ ಜನಿಸುತ್ತಾರೆ.


ವಾಷಿಂಗ್ಟನ್: ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್(Donald Trump) ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಜನ್ಮಸಿದ್ಧ ಪೌರತ್ವದ ಹಕ್ಕನ್ನು(Birthright Ban) ತೆಗೆದು ಹಾಕುವುದಾಗಿ ಘೋಷಿಸಿದ್ದು, ಅದಕ್ಕಾಗಿ ಈಗಾಗಲೇ ಗಡುವನ್ನೂ ನೀಡಿದೆ. ಸರ್ಕಾರದ ಈ ನಿರ್ಧಾರ ಅಸಂಖ್ಯಾತ ಭಾರತೀಯ ಮೂಲದ ವಲಸಿಗರು ಸೇರಿದಂತೆ ಅನೇಕ ವಿದೇಶಿ ಮೂಲದ ಪ್ರಜೆಗಳಿಗೆ ತಲೆನೋವಿನ ಸಂಗತಿಯಾಗಿದೆ. ಫೆ.20ನಂತರ ಅಮೆರಿಕದಲ್ಲಿ ವಲಸಿಗ ದಂಪತಿಗೆ ಹುಟ್ಟುವ ಮಗುವಿಗೆ ಜನ್ಮಸಿದ್ಧ ಪೌರತ್ವದ ಹಕ್ಕು ಸಿಗುವುದಿಲ್ಲ. ಹೀಗಾಗಿ ಮಗುವಿನ ನಿರೀಕ್ಷೆಯಲ್ಲಿರುವ ಭಾರತೀಯ ದಂಪತಿ ಆಪರೇಶನ್ ಮೂಲಕ ಹೆರಿಗೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂಬ ಆಘಾತಕಾರಿ ಸಂಗತಿ ಬಯಲಾಗಿದೆ.
ಭಾರತೀಯ ಮೂಲದ ಪ್ರಸೂತಿ ತಜ್ಞರೊಬ್ಬರು ಪ್ರತಿಕ್ರಿಯಿಸಿದ್ದು, ಅಮೆರಿಕ ಸರ್ಕಾರ ಜನ್ಮ ಸಿದ್ಧ ಪೌರತ್ವದ ಹಕ್ಕನ್ನು ಫೆ.20ನಂತರ ಹಿಂಪಡೆಯಲಿದೆ. ಹೀಗಾಗಿ ಸದ್ಯದಲ್ಲೇ ಮಗುವಿನ ನಿರೀಕ್ಷೆಯಲ್ಲಿರುವ ಭಾರತೀಯ ದಂಪತಿ ವೈದ್ಯರ ಬಳಿ ದೌಡಾಯಿಸಿ ಫೆ.20ಕ್ಕಿಂತ ಮುನ್ನವೇ ಆಪರೇಷನ್ ಮೂಲಕ ಹೆರಿಗೆ ಮಾಡಿಸುವಂತೆ ಮನವಿ ಮಾಡುತ್ತಿದ್ದಾರೆ. ಹೀಗೆ 20ಕ್ಕೂ ಹೆಚ್ಚು ದಂಪತಿ ವೈದ್ಯರನ್ನು ಸಂಪರ್ಕಿಸಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Tiktok: ಅಮೆರಿಕದಲ್ಲಿ ಬ್ಯಾನ್ ಆಗಿದ್ದ ಟಕ್‌ಟಾಕ್ ಮತ್ತೆ ಕಾರ್ಯಾರಂಭ ; ನಿಷೇಧ ವಾಪಾಸ್ ಪಡೆದ ಟ್ರಂಪ್
ಫೆಬ್ರವರಿ 20 ಏಕೆ?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಾರ್ಯನಿರ್ವಾಹಕ ಆದೇಶದಡಿಯಲ್ಲಿ ಜನ್ಮಸಿದ್ಧ ಪೌರತ್ವವನ್ನು ರದ್ದುಗೊಳಿಸಲು ಫೆ.20 ಗಡುವು. ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ತಕ್ಷಣ ಟ್ರಂಪ್ ಸಹಿ ಮಾಡಿದ ಕಾರ್ಯನಿರ್ವಾಹಕ ಆದೇಶಗಳಲ್ಲಿ ಒಂದು ಅಮೆರಿಕದಲ್ಲಿ ಜನ್ಮಸಿದ್ಧ ಪೌರತ್ವವನ್ನು ಕೊನೆಗೊಳಿಸುವುದಾಗಿತ್ತು. ಆದ್ದರಿಂದ, ಫೆಬ್ರವರಿ 19 ರವರೆಗೆ ಅಮೆರಿಕದಲ್ಲಿ ಜನಿಸಿದ ಮಕ್ಕಳು ಅಮೆರಿಕದ ನಾಗರಿಕರಾಗಿ ಜನಿಸುತ್ತಾರೆ. ಫೆಬ್ರವರಿ 19ರ ನಂತರ, ವಲಸಿಗ ನಾಗರಿಕರಲ್ಲದ ದಂಪತಿಗಳಿಗೆ ಜನಿಸಿದ ಮಕ್ಕಳು ಜನ್ಮದತ್ತವಾಗಿ ಪೌರತ್ವ ಪಡೆಯುವುದಿಲ್ಲ. ಯುಎಸ್‌ನಲ್ಲಿ ತಾತ್ಕಾಲಿಕ H-1B ಮತ್ತು L1 ವೀಸಾಗಳಲ್ಲಿ ಕೆಲಸ ಮಾಡುತ್ತಿರುವ ಹತ್ತಾರು ಸಾವಿರ ಭಾರತೀಯರು ಇದ್ದಾರೆ. ಅವರು ಅಮೆರಿಕದಲ್ಲಿ ಶಾಶ್ವತ ನಿವಾಸವನ್ನು ನೀಡುವ ಗ್ರೀನ್ ಕಾರ್ಡ್‌ಗಳಿಗಾಗಿಯೂ ಸಾಲಿನಲ್ಲಿದ್ದಾರೆ. ಅಮೆರಿಕದ ನಾಗರಿಕರು ಅಥವಾ ಗ್ರೀನ್ ಕಾರ್ಡ್ ಹೊಂದಿರುವವರು ಇಲ್ಲದ ಪೋಷಕರಿಗೆ ಜನಿಸಿದ ಮಕ್ಕಳು ಹುಟ್ಟಿನಿಂದಲೇ ಅಮೆರಿಕದ ನಾಗರಿಕರಾಗುವುದಿಲ್ಲ. ಫೆಬ್ರವರಿ 20ರ ಮೊದಲು ಸಿ-ಸೆಕ್ಷನ್ ಮೂಲಕ ಶಿಶುಗಳನ್ನು ಹೆರಿಗೆ ಮಾಡುವ ಆತುರ ಇದಕ್ಕೆ ಕಾರಣ.
ಜನ್ಮಸಿದ್ಧ ವೀಸಾ ರದ್ದತಿಯಿಂದ ಈ ಶೇ.66 ಭಾರತೀಯರಲ್ಲಿ ಯಾರಿಗಾದರೂ ಮಕ್ಕಳಾದರೆ ಆ ಮಗುವಿಗೆ ತನ್ನಿಂತಾನೇ ಅಮೆರಿಕ ಪೌರತ್ವ ಸಿಗದು. ಇವರು ತಮ್ಮ ಮಕ್ಕಳಿಗಾಗಿ ಪೌರತ್ವಕ್ಕೆ ಹೊಸದಾಗಿ ಅರ್ಜಿ ಹಾಕಬೇಕಾಗಬಹುದು. ಅರ್ಜಿ ಮಂಜೂರಾಗುವವರೆಗೆ ಮಗುವನ್ನು ಅವರು ಭಾರತದಲ್ಲೇ ಬಿಟ್ಟು ಬರಬೇಕಾದ ಸ್ಥಿತಿ ಉಂಟಾಗಬಹುದು. ಇಲ್ಲವೇ ಪ್ರವಾಸಿ ವೀಸಾಗೆ ಅರ್ಜಿ ಹಾಕಬೇಕು. ಎಚ್-1ಬಿ ವೀಸಾ ಸೌಲಭ್ಯದಿಂದ ಅಮೆರಿಕಕ್ಕೆ ಹೋಗುವವರಲ್ಲಿ ಭಾರತೀಯರೇ ಅಧಿಕವಿದ್ದಾರೆ. ಭಾರತೀಯರು ಸೇರಿ 6.5 ಲಕ್ಷ ವಿದೇಶಿಗರು ಎಚ್-1ಬಿ ವೀಸಾ ಪಡೆದರೆ, 20 ಸಾವಿರ ಭಾರತೀಯರು ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ಹೋಗುತ್ತಾರೆ.