Tiktok: ಅಮೆರಿಕದಲ್ಲಿ ಬ್ಯಾನ್ ಆಗಿದ್ದ ಟಕ್‌ಟಾಕ್ ಮತ್ತೆ ಕಾರ್ಯಾರಂಭ ; ನಿಷೇಧ ವಾಪಾಸ್ ಪಡೆದ ಟ್ರಂಪ್
ಜ.19 ರಂದು ಅಮೆರಿಕದಲ್ಲಿ ನಿಷೇಧ ಮಾಡಿದ್ದ ಚೀನಾ ನಿರ್ಮಿತ ಟಿಕ್‌ಟಾಕ್ ಆಪ್ ಇದೀಗ ಮತ್ತೆ ಕಾರ್ಯರಂಭಿಸಿದೆ. ನಿಷೇಧ ಆಜ್ಞೆಯನ್ನು ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತೆರವುಗೊಳಿಸಿದ್ದಾರೆ. ಇಂದಿನಿಂದ ಅಮೆರಿಕದಲ್ಲಿ ಟಿಕ್‌ಟಾಕ್ ಮತ್ತೆ ದೊರಕಲಿದೆ.
ವಾಷಿಂಗ್ಟನ್ : ಚೀನಾದ ಬೈಟ್‌ಡ್ಯಾನ್ಸ್ ಕಂಪನಿಯ ಒಡೆತನದ ಪ್ಲಾಟ್‌ಫಾರ್ಮ್ ಟಿಕ್‌ಟಾಕ್ ಅನ್ನು (Tiktok) ಅಮೆರಿಕದಲ್ಲಿ ನಿಷೇಧಿಸಲಾಗಿತ್ತು. ಡ್ಡಣ್ಣ ಅಮೆರಿಕ (America) ಕೂಡ ಅದೇ ನಿರ್ಧಾರವನ್ನು ಕೈಗೊಂಡಿದೆ. ಈಗ ಅಮೆರಿಕದಲ್ಲಿ ಸಹ ಟಿಕ್‌ಟಾಕ್ ಸ್ಥಗಿತಗೊಂಡಿದೆ. ಅಮೆರಿಕದಲ್ಲಿರುವ ಟಿಕ್‌ಟಾಕ್ ಬಳಕೆದಾರರು ಟಿಕ್‌ಟಾಕ್ ಆ್ಯಪ್ ಅನ್ನು ಓಪನ್ ಮಾಡಿದಾಗ ಟಿಕ್‌ಟಾಕ್ ಪ್ರಸ್ತುತ ಲಭ್ಯವಿಲ್ಲ ಎಂಬ ಸಂದೇಶವನ್ನು ಪಡೆಯುತ್ತಿದ್ದರು. ಇದೀಗ ಹೇರಿದ್ದ ನಿಷೇಧವನ್ನು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹಿಂಪಡೆದಿದ್ದಾರೆ.
ಅಧಿಕಾರ ವಹಿಸಿಕೊಳ್ಳುವುದಕ್ಕೂ ಮೊದಲು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, ಅಧಕಾರ ವಹಿಸಿಕೊಂಡ ನಂತರ ಟಿಕ್‌ಟಾಕ್ ಮೇಲಿನ ನಿಷೇಧವನ್ನು ಹಿಂಪಡೆಯುವುದಾಗಿ ಭರವಸೆ ನೀಡಿದ್ದಾರೆ. ಟಿಕ್‌ಟಾಕ್ ಎಂದರೆ ನನಗೂ ಇಷ್ಟ. ಅಮೆರಿಕದಲ್ಲಿ ಟಿಕ್‌ಟಾಕ್ ಮತ್ತೆ ಬರಲಿದೆ. ಅದರಲ್ಲಿ ನಾನೂ ಕೆಲ ವಿಡಿಯೋಗಳನ್ನು ಮಾಡಿದ್ದೆ ಎಂದು ಹೇಳಿದ್ದಾರೆ.
ನಾನು ಟಿಕ್‌ಟಾಕ್ ಸಿಇಒ ಜತೆ ಮಾತನಾಡಿದ್ದೇನೆ, ಶೇ 50 ರಷ್ಟು ಪಾಲು ಅಮೆರಿಕದ್ದಾಗಿರಬೇಕು ಎಂಬ ಷರತ್ತಿಗೆ ಅವರು ಒಪ್ಪಿಗೆ ಸೂಚಿಸಿದ್ದಾರೆ. ನಾವು ಹಲವು ಮಂದಿಯ ಉದ್ಯೋಗವನ್ನು ಉಳಿಸಬೇಕಾಗಿದೆ. ಇದು 70 ಲಕ್ಷಕ್ಕೂ ಹೆಚ್ಚು ಸಣ್ಣ ವ್ಯಾಪಾರಗಳು ಅಭಿವೃದ್ಧಿ ಹೊಂದಲು ಅವಕಾಶ ಮಾಡಿಕೊಡುತ್ತವೆ ಎಂದು ಹೇಳಿದ್ದಾರೆ.
ಟ್ರಂಪ್ ಅವರ ಈ ನಿರ್ಧಾರಕ್ಕೆ ಟಿಕ್‌ಟಾಕ್ ಧನ್ಯವಾದ ತಿಳಿಸಿ ಎಕ್ಸ್‌ನಲ್ಲಿ ಟ್ವೀಟ್ ಮಾಡಿದೆ.
STATEMENT FROM TIKTOK:
— TikTok Policy (@TikTokPolicy) January 19, 2025
In agreement with our service providers, TikTok is in the process of restoring service. We thank President Trump for providing the necessary clarity and assurance to our service providers that they will face no penalties providing TikTok to over 170…
ಈ ಸುದ್ದಿಯನ್ನೂ ಓದಿ : TikTok Ban: ಅಮೆರಿಕದಲ್ಲಿಯೂ ಬ್ಯಾನ್ ಆಯ್ತು ಟಿಕ್ ಟಾಕ್ ! ಕಾರಣವೇನು ಗೊತ್ತಾ?
ಚೀನಾ ಮೂಲದ ಈ ಅಪ್ಲಿಕೇಶನ್ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟು ಮಾಡಲಿದೆ ಎಂದು ಜೋ ಬೈಡನ್ ಜ. 19 ರಿಂದ ನಿಷೇಧಿಸುವಂತೆ ಸಹಿ ಮಾಡಿದ್ದರು. ನಂತರ ಬೈಡನ್ ಅವರ ಆದೇಶವನ್ನು ಅಮೆರಿಕದ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ಇದೀಗ ಟ್ರಂಪ್ ನಿಷೇಧವನ್ನು ತೆರವುಗೊಳಿಸಿದ್ದಾರೆ.