Customs Duty Evasion: ಕಸ್ಟಮ್ಸ್ ಸುಂಕ ವಂಚಿಸಿ 116 ಕೋಟಿ ರೂ ಮೌಲ್ಯದ ಚಿನ್ನ ಆಮದು- ಅಮೆರಿಕದಲ್ಲಿ ಭಾರತೀಯನಿಗೆ ಜೈಲು
ನ್ಯೂಯಾರ್ಕ್‌ನಲ್ಲಿ ಆಭರಣ ಕಂಪನಿಗಳನ್ನು ನಡೆಸುತ್ತಿದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬ ಕಸ್ಟಮ್ಸ್ ಸುಂಕವನ್ನು ವಂಚಿಸಿ 13.5 ಮಿಲಿಯನ್ ಡಾಲರ್(116 ಕೋಟಿ ರೂ.)ಗಿಂತ ಹೆಚ್ಚಿನ ಮೌಲ್ಯದ ಆಭರಣಗಳನ್ನು ಆಮದು ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಅಕ್ರಮವಾಗಿ ವಹಿವಾಟು ನಡೆಸಿದ ಕಾರಣಕ್ಕಾಗಿ 30 ತಿಂಗಳ ಜೈಲು ಶಿಕ್ಷೆಗೆ ಒಳಗಾಗಿದ್ದಾರೆ ಎಂದು ಅಮೆರಿಕದ ವಕೀಲರೊಬ್ಬರು ತಿಳಿಸಿದ್ದಾರೆ.

Viral News

ವಾಷಿಂಗ್ಟನ್: ನ್ಯೂಯಾರ್ಕ್‌ನಲ್ಲಿ(New York) ಆಭರಣ ಕಂಪನಿಗಳನ್ನು ನಡೆಸುತ್ತಿದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬ 13.5 ಮಿಲಿಯನ್ ಡಾಲರ್‌ಗಿಂತ(116 ಕೋಟಿ ರೂ.) ಹೆಚ್ಚಿನ ಮೌಲ್ಯದ ಆಭರಣಗಳನ್ನು ಆಮದು(Import) ಮಾಡಿಕೊಂಡಿದ್ದು, ಕಸ್ಟಮ್ಸ್ ಸುಂಕವನ್ನು(Customs Duty Evasion) ವಂಚಿಸಿದ್ದಾರೆ. ಅಷ್ಟೇ ಅಲ್ಲದೆ ಪರವಾನಗಿ ಇಲ್ಲದೆ(Unlicensed) 10.3 ಮಿಲಿಯನ್ ಡಾಲರ್‌ಗಳನ್ನು ಅಕ್ರಮವಾಗಿ ವಹಿವಾಟು ನಡೆಸಿದ್ದಾರೆ. ಈ ಆರೋಪಗಳ ಮೇಲೆ ಅವರು 30 ತಿಂಗಳ ಜೈಲು ಶಿಕ್ಷೆಗೆ ಒಳಗಾಗಿದ್ದಾರೆ ಎಂದು ಅಮೆರಿಕದ ವಕೀಲರೊಬ್ಬರು ತಿಳಿಸಿದ್ದಾರೆ. ಇದೀಗ ಈ ಸುದ್ದಿ ಭಾರೀ(Viral News) ಸದ್ದು ಮಾಡುತ್ತಿದೆ.
ಅಮೆರಿಕದ ಹಂಗಾಮಿ ವಕೀಲ ವಿಕಾಸ್ ಖನ್ನಾ ಅವರು ಪ್ರಕರಣ ಕುರಿತು ಮಾಹಿತಿ ನೀಡಿದ್ದಾರೆ. ಮುಂಬೈ ಮೂಲದ ಸದ್ಯ ನ್ಯೂಜೆರ್ಸಿಯ ಜೆರ್ಸಿ ಸಿಟಿಯಲ್ಲಿ ವಾಸವಿರುವ ಮೋನಿಶ್‌ಕುಮಾರ್, ಕಿರಣ್‌ಕುಮಾರ್ ದೋಷಿ ಶಾ ಜಿಲ್ಲಾ ನ್ಯಾಯಾಧೀಶ ಎಸ್ತರ್ ಸಲಾಸ್ ಅವರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ನ್ಯಾಯಾಲಯವು ಕಸ್ಟಮ್ಸ್ ಸುಂಕ ವಂಚನೆಯ ಹಗರಣ ಮತ್ತು ಪರವಾನಗಿ ಇಲ್ಲದೆ ಹಣದ ವಹಿವಾಟು ನಡೆಸಿದ ಕಾರಣಕ್ಕಾಗಿ ಆರೋಪಿಗಳಿಗೆ ಜೈಲು ಶಿಕ್ಷೆ ವಿಧಿಸಿದೆ.
ಈ ಸುದ್ದಿಯನ್ನೂ ಓದಿ:Hindenburg Research: ಅದಾನಿ ಗ್ರೂಪ್‌ಗೆ ಹಿಂಡೆನ್‌ಬರ್ಗ್ ಮಾಡಿದ ವಂಚನೆ ಹೇಗಿತ್ತು?
ಜೈಲು ಶಿಕ್ಷೆಯ ಜೊತೆಗೆ, ವಂಚನೆಯ ಯೋಜನೆಗಾಗಿ 742,500 (ಯುಎಸ್ ಡಾಲರ್) ಮೊತ್ತವನ್ನು ಮರುಪಾವತಿಸಲು ನ್ಯಾಯಾಧೀಶರು ಆದೇಶಿಸಿದ್ದಾರೆ. ಲೈಸೆನ್ಸ್ ಇಲ್ಲದೆ ಹಣ ರವಾನೆ ಮಾಡಿದ ಆರೋಪದ ಮೇಲೆ 11,126,982.33(ಯುಎಸ್ ಡಾಲರ್) ಹಣದ ಮೇಲೆ ಮುಟ್ಟುಗೋಲು ಹಾಕಿದ್ದಾರೆ. ನ್ಯಾಯಾಲಯದ ದಾಖಲೆಗಳ ಪ್ರಕಾರ, ಡಿಸೆಂಬರ್ 2019 ರಿಂದ ಏಪ್ರಿಲ್ 2022 ರ ಅವಧಿಯಲ್ಲಿ ಟರ್ಕಿ ಮತ್ತು ಭಾರತದಿಂದ ಅಮೆರಿಕ ದೇಶಕ್ಕೆ ಆಭರಣಗಳ ಸಾಗಣೆಗೆ ಸುಂಕವನ್ನು ತಪ್ಪಿಸುವ ವಂಚನೆಯಲ್ಲಿ ಶಾ ತೊಡಗಿದ್ದರು.
ಕಸ್ಟಮ್ಸ್ ಸುಂಕ ವಂಚನೆ: ಮೂವರಿಗೆ ಶಿಕ್ಷೆ-₹5.5 ಕೋಟಿ ದಂಡ
ಎರಡು ದಶಕಗಳಷ್ಟು ಹಳೆಯ ಕಸ್ಟಮ್ಸ್ ಸುಂಕ ಹಗರಣದ ವಿಚಾರಣೆ ಪೂರ್ಣಗೊಳಿಸಿದ ಸಿಬಿಐ ವಿಶೇಷ ನ್ಯಾಯಾಲಯ ಮೂವರು ಹಿರಿಯ ನಾಗರಿಕರಿಗೆ 2022ರಲ್ಲಿ ಶಿಕ್ಷೆ ವಿಧಿಸಿ, ₹5.5 ಕೋಟಿ ದಂಡವನ್ನೂ ವಿಧಿಸಿತ್ತು.
ಆರ್ಥಿಕ ಅಪರಾಧಗಳು ದೇಶದ ಹಣಕಾಸಿನ ಸ್ಥಿತಿಗತಿ ಮೇಲೆ ಗಂಭೀರ ಪರಿಣಾಮಗಳನ್ನು ಉಂಟು ಮಾಡುತ್ತವೆ. ಹೀಗಾಗಿ ಈ ಹಗರಣದ ಪ್ರಮುಖ ಆರೋಪಿಯಾಗಿದ್ದ ತೌಫಿಕ್ ಗಫರ್ (71) ಅವರಿಗೆ 7 ವರ್ಷ ಕಾರಾಗೃಹ ಶಿಕ್ಷೆ ವಿಧಿಸಲಾಗಿತ್ತು. ಜೊತೆಗೆ ₹5.3 ಕೋಟಿ ದಂಡ ಪಾವತಿಸುವಂತೆಯೂ ನಿರ್ದೇಶಿಸಲಾಗಿತ್ತು. ಆರೋಪಿ 2000ರಲ್ಲಿ ₹4.5 ಕೋಟಿ ತೆರಿಗೆ ವಂಚಿಸಿದ್ದರು. ಆ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ್ದರು. ಹೀಗಾಗಿ ದಂಡ ವಿಧಿಸಲಾಗಿದೆ’ ಎಂದು ನ್ಯಾಯಾಧೀಶರಾದ ಎಸ್.ಯು.ವಡಗಾಂವ್ಕರ್ ಅವರು ತೀರ್ಪಿನಲ್ಲಿ ಹೇಳಿದ್ದರು.