IPL 2025: ತಂಡದ ಸಿಬ್ಬಂದಿಯನ್ನು ಸ್ವಿಮ್ಮಿಂಗ್ ಪೂಲ್‌ಗೆ ಎತ್ತಿ ಬಿಸಾಕಿದ ರೋಹಿತ್ ಟೀಮ್
ಚೆನ್ನೈ ವಿರುದ್ಧದ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸೋಲು ಕಂಡಿತ್ತು. ರೋಹಿತ್ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡಿದ್ದರು. ಉಸ್ತುವಾರಿ ನಾಯಕ ಸೂರ್ಯಕುಮಾರ್ ಕೂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ನಿಷೇಧ ಶಿಕ್ಷೆಯಿಂದ ಮೊದಲ ಪಂದ್ಯ ಆಡದ ನಾಯಕ ಹಾರ್ದಿಕ್ ಪಾಂಡ್ಯ ಗುಜರಾತ್ ವಿರುದ್ಧ ಆಡಲಿಳಿಯಲಿದ್ದಾರೆ.


ಮುಂಬಯಿ: 18ನೇ ಆವೃತ್ತಿಯ ಐಪಿಎಲ್(IPL 2025) ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್(Mumbai Indians) ಆಡಿದ ಮೊದಲ ಪಂದ್ಯದಲ್ಲಿ ಸೋಲು ಕಂಡಿತ್ತು. ಇದೀಗ 2ನೇ ಪಂದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಶನಿವಾರ ಎದುರಿಸಲಿದೆ. ಈ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮ(Rohit Sharma), ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಸೇರಿಕೊಂಡು ತಂಡದ ಆಡ್ಮಿನ್ ಒಬ್ಬರನ್ನು ಈಜುಕೊಳ್ಳಕ್ಕೆ ಎತ್ತಿ ಹಾಕಿದ ವಿಡಿಯೊವೊಂದು ಇದೀಗ ವೈರಲ್(Viral Video) ಆಗಿದೆ.
ಮುಂಬೈ ಇಂಡಿಯನ್ಸ್ ಆಟಗಾರರು ತಂಗಿರುವ ಹೊಟೆಲ್‌ನಲ್ಲಿ ಮೋಜು ಮಸ್ತಿ ನಡೆಸಿ ತಂಡದ ಆಡ್ಮಿನ್ ಒಬ್ಬರನ್ನು ತಮಾಷೆಗಾಗಿ ರೋಹಿತ್ ಗ್ಯಾಂಗ್ ಎತ್ತಿ ಈಜುಕೊಳ್ಳಕ್ಕೆ ಹಾಕಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಕೆಲ ನೆಟ್ಟಿಗರು ಮೊದಲು ಆಟದ ಕಡೆ ಗಮನಕೊಡಿ ಎಂದಿದ್ದಾರೆ.
Rohit Sharma, Tilak Varma & Suryakumar Yadav just tossed the MI admin straight into the pool! 😭🤣🔥#TATAIPL2025 #IPL2025 #RohitSharma𓃵 #MI pic.twitter.com/ZuuPZ89l3T
— Crick45 (@Googlyfacts45) March 27, 2025
ಚೆನ್ನೈ ವಿರುದ್ಧದ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸೋಲು ಕಂಡಿತ್ತು. ರೋಹಿತ್ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡಿದ್ದರು. ಉಸ್ತುವಾರಿ ನಾಯಕ ಸೂರ್ಯಕುಮಾರ್ ಕೂಡ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ನಿಷೇಧ ಶಿಕ್ಷೆಯಿಂದ ಮೊದಲ ಪಂದ್ಯ ಆಡದ ನಾಯಕ ಹಾರ್ದಿಕ್ ಪಾಂಡ್ಯ ಗುಜರಾತ್ ವಿರುದ್ಧ ಆಡಲಿಳಿಯಲಿದ್ದಾರೆ. ಗುಜರಾತ್ ಕೂಡ ಮೊದಲ ಪಂದ್ಯದಲ್ಲಿ ಸೋಲು ಕಂಡ ಕಾರಣ ಗಿಲ್ ಪಡೆಗೂ ಈ ಪಂದ್ಯ ಮಹತ್ವದ್ದಾಗಿದೆ.
ಸಂಭಾವ್ಯ ತಂಡ
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮ, ರಿಯಾನ್ ರಿಕಲ್ಟನ್ (ವಿ.ಕೀ.), ವಿಲ್ ಜಾಕ್ಸ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮಾ, ರಾಬಿನ್ ಮಿಂಜ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹಾರ್, ಟ್ರೆಂಟ್ ಬೌಲ್ಟ್, ವಿಘ್ನೇಶ್ ಪುತ್ತೂರ್.
ಇದನ್ನೂ ಓದಿ RCB vs CSK: ಹೆಚ್ಚುವರಿ ಸ್ಪಿನ್ನರ್ ಮೂಲಕ ಚೆನ್ನೈ ಕಟ್ಟಿಹಾಕಲು ಆರ್‌ಸಿಬಿ ತಂತ್ರ
ಗುಜರಾತ್ ಟೈಟಾನ್ಸ್: ಶಭಮನ್ ಗಿಲ್, ಜೋಸ್ ಬಟ್ಲರ್ (wk), ಸಾಯಿ ಸುದರ್ಶನ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ಆರ್. ಸಾಯಿ ಕಿಶೋರ್, ಅರ್ಷದ್ ಖಾನ್, ರಶೀದ್ ಖಾನ್, ಕಗಿಸೋ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.