RCB vs CSK: ಹೆಚ್ಚುವರಿ ಸ್ಪಿನ್ನರ್ ಮೂಲಕ ಚೆನ್ನೈ ಕಟ್ಟಿಹಾಕಲು ಆರ್‌ಸಿಬಿ ತಂತ್ರ
ಚೆನ್ನೈ ತಂಡದ ಪರ ವಿಶ್ವ ಶ್ರೇಷ್ಠ ಸ್ಪಿನ್ನರ್‌ಗಳಿದ್ದಾರೆ. ಆರ್.ಅಶ್ವಿನ್, ರವೀಂದ್ರ ಜಡೇಜಾ ಹಾಗೂ ನೂರ್ ಅಹ್ಮದ್ ಜತೆ ರಚಿನ್ ರವೀಂದ್ರ ಕೂಡ ಇರುವುದು ತಂಡಕ್ಕೆ ಹೆಚ್ಚಿನ ಬಲ. ಕಳೆದ ಮುಂಬೈ ವಿರುದ್ಧ ಪಂದ್ಯದಲ್ಲಿ ನೂರ್ ಅಹ್ಮದ್ 4 ವಿಕೆಟ್ ಕಿತ್ತಿದ್ದರು. ಹೀಗಾಗಿ ಆರ್‌ಸಿಬಿ ವಿರುದ್ಧವೂ ಕೈಚಳಕ ತೋರಿಸುವ ಸಾಧ್ಯತೆಯಿದೆ.


ಚೆನ್ನೈ: ಚೆಪಾಕ್(MA Chidambaram Stadium) ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡಲಿರುವ ಕಾರಣ ಆರ್‌ಸಿಬಿ(RCB vs CSK) ತಂಡ ಇಂದು(ಮಾ.28) ನಡೆಯುವ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆಡುವ ಬಳಗವನ್ನು ಬದಲಾಯಿಸುವುದು ಖಚಿತವಾಗಿದೆ. ತಂಡದ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿರುವ ದಿನೇಶ್ ಕಾರ್ತಿಕ್(Dinesh Karthik) ಕೂಡ ಹೆಚ್ಚುವರಿ ಸ್ಪಿನ್ನರ್ ಆಡಿಸುವ ಬಗ್ಗೆ ಸುಳಿವು ನೀಡಿದ್ದಾರೆ. ಹೀಗಾಗಿ ಕೃನಾಲ್ ಪಾಂಡ್ಯ, ಸುಯಶ್ ಶರ್ಮಾ ಜತೆ ಸ್ವಪ್ನಿಲ್ ಸಿಂಗ್‌ಗೆ ಅವಕಾಶ ಸಿಗಬಹುದು. ವಿವಿಂಗ್‌ಸ್ಟೋನ್ ಕೂಡ ಸ್ಪಿನ್ ಆಲ್‌ರೌಂಡರ್ ಆಗಿರುವ ಕಾರಣ ಒಟ್ಟು ನಾಲ್ವರು ಸ್ಪಿನ್ನರ್‌ಗಳು ಸಿಕ್ಕಂತಗುತ್ತದೆ. ಹೀಗಾದರೆ ವೇಗಿಗಳಾದ ರಸಿಕ್ ಸಲಾಮ್, ಭುವನೇಶ್ವರ್ ಕುಮಾರ್‌ಗೆ ಸ್ಥಾನ ಸಿಗುವ ಸಾಧ್ಯತೆ ಕಡಿಮೆ.
ಚೆನ್ನೈ ತಂಡದ ಪರ ವಿಶ್ವ ಶ್ರೇಷ್ಠ ಸ್ಪಿನ್ನರ್‌ಗಳಿದ್ದಾರೆ. ಆರ್.ಅಶ್ವಿನ್, ರವೀಂದ್ರ ಜಡೇಜಾ ಹಾಗೂ ನೂರ್ ಅಹ್ಮದ್ ಜತೆ ರಚಿನ್ ರವೀಂದ್ರ ಕೂಡ ಇರುವುದು ತಂಡಕ್ಕೆ ಹೆಚ್ಚಿನ ಬಲ. ಕಳೆದ ಮುಂಬೈ ವಿರುದ್ಧ ಪಂದ್ಯದಲ್ಲಿ ನೂರ್ ಅಹ್ಮದ್ 4 ವಿಕೆಟ್ ಕಿತ್ತಿದ್ದರು. ಹೀಗಾಗಿ ಆರ್‌ಸಿಬಿ ವಿರುದ್ಧವೂ ಕೈಚಳಕ ತೋರಿಸುವ ಸಾಧ್ಯತೆಯಿದೆ.
ದಿನೇಶ್ ಕಾರ್ತಿಕ್ ಚೆನ್ನೈ ಮೂಲದವರೇ ಆಗಿರುವ ಕಾರಣ ಇಲ್ಲಿನ ಪಿಚ್ ಬಗ್ಗೆ ಅವರಿಗೆ ಅಪಾರ ಅನುಭವವಿದೆ. ಹೀಗಾಗಿ ಅವರು ಆರ್‌ಸಿಬಿ ಪರ ಮೂವರು ಸ್ಪೆಷಲಿಸ್ಟ್ ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವುದು ಖಚಿತ. ಆರ್‌ಸಿಬಿ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ, ಪಡಿಕ್ಕಲ್, ನಾಯಕ ಪಾಟೀದಾರ್, ಸಾಲ್ಟ್ ಅವರೆಲ್ಲ ಗುರುವಾರ ಸ್ಪಿನ್ ದಾಳಿಗೆ ಹೆಚ್ಚಿನ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದರು. ರಜತ್ ಪಾಟೀದಾರ್ ಸ್ಪಿನ್ನರ್‌ಗಳ ಎದುರು ಉತ್ತಮ ದಾಖಲೆ ಹೊಂದಿರುವ ಕಾರಣ ಅವರ ಮೇಲೆ ತಂಡ ಹೆಚ್ಚಿನ ಭರವಸೆ ಇಟ್ಟಿದೆ.
ಇದನ್ನೂ ಓದಿ RCB vs CSK: ʻಚೆನ್ನೈನಲ್ಲಿ ಗೆಲ್ಲುವುದು ಸುಲಭವಲ್ಲʼ- ಆರ್‌ಸಿಬಿಗೆ ವಾರ್ನಿಂಗ್ ಕೊಟ್ಟ ಶೇನ್ ವ್ಯಾಟ್ಸನ್!
ಸ್ಪಿನ್ ಸ್ನೇಹಿ ಪಿಚ್ ಆದ ಕಾರಣ ಪಂದ್ಯದಲ್ಲಿ ದೊಡ್ಡ ಮೊತ್ತ ನಿರೀಕ್ಷಿಸುವಂತಿಲ್ಲ. ಇನ್ನೊಂದಡೆ ಆರ್‌ಸಿಬಿ 17 ವರ್ಷಗಳ ಬಳಿಕ ಚೆಪಾಕ್ ಮೈದಾನದಲ್ಲಿ ಗೆಲುವು ಸಾಧಿಸಬಹುದೇ ಎಂಬ ಕುತೂಹಲವೂ ಈ ಪಂದ್ಯದ್ದಾಗಿದೆ. ಹೌದು ಆರ್‌ಸಿಬಿ ತಂಡ ಚೆನ್ನೈನಲ್ಲಿ ಕೊನೆ ಬಾರಿ ಗೆದ್ದಿದ್ದು 2008ರ ಚೊಚ್ಚಲ ಆವೃತ್ತಿಯಲ್ಲಿ. ಆ ಬಳಿಕ ತಂಡ 8 ಬಾರಿ ಚೆನ್ನೈನಲ್ಲಿ ಸಿಎಸ್‌ಕೆ ವಿರುದ್ಧ ಆಡಿದ್ದರೂ ಒಂದರಲ್ಲೂ ಗೆಲುವು ಸಾಧಿಸಿಲ್ಲ. ಈ ಬಾರಿಯ ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ವಿರುದ್ಧ ಆರ್‌ಸಿಬಿ ಸಂಘಟಿತ ಪ್ರದರ್ಶನದ ಮೂಲಕ ಗೆಲುವು ಸಾಧಿಸಿತ್ತು. ಇದೇ ಹುಮ್ಮಸ್ಸಿನಲ್ಲಿ ತಂಡ ಶುಕ್ರವಾರ ಕಣಕ್ಕಿಳಿಯಲಿದೆ.
ಸಂಭಾವ್ಯ ತಂಡಗಳು
ಚೆನ್ನೈ: ರಚಿನ್ ರವೀಂದ್ರ, ಋತುರಾಜ್ ಗಾಯಕ್ವಾಡ್(ನಾಯಕ), ರಾಹುಲ್ ತ್ರಿಪಾಠಿ, ದೀಪಕ್ ಹೂಡಾ, ಶಿವಂ ದುಬೆ, ಸ್ಯಾಮ್ ಕರ್ರನ್, ರವೀಂದ್ರ ಜಡೇಜಾ, ಎಂಸ್.ಎಸ್ ಧೋನಿ, ಆರ್.ಅಶ್ವಿನ್, ನೇಥನ್ ಎಲ್ಲಿಸ್, ನೂರ್ ಅಹ್ಮದ್, ಖಲೀಲ್ ಅಹ್ಮದ್.
ಆರ್‌ಸಿಬಿ: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟೀದಾರ್ (ನಾಯಕ), ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮ, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಜೋಶ್ ಹೇಜಲ್‌ವುಡ್, ಯಶ್ ದಯಾಳ್, ಸುಯಶ್.