IPL 2025: ಗೆಲುವಿನ ಸಂತಸದಲ್ಲಿದ್ದ ನಾಯಕ ಗಿಲ್‌ಗೆ 12 ಲಕ್ಷ ದಂಡದ ಬರೆ
Shubman Gill: 'ಪ್ರಸಕ್ತ ಸೀಸನ್‌ನಲ್ಲಿ ಗುಜರಾತ್ ಓವರ್ ಗತಿ ಕಾಯ್ದುಕೊಳ್ಳಲು ವಿಫಲವಾದ ಮೊದಲ ನಿದರ್ಶನ ಇದಾಗಿದೆ. ಇದರಂತೆ ಐಪಿಎಲ್ ನಿಯಮಾನುಸಾರ ನಾಯಕ ಗಿಲ್ ಅವರಿಗೆ 12 ಲಕ್ಷ ರೂ. ದಂಡ ಹೇರಲಾಗಿದೆ' ಎಂದು ಐಪಿಎಲ್ ಪ್ರಕಟನೆ ತಿಳಿಸಿದೆ.


ಅಹಮದಾಬಾದ್: ಡೆಲ್ಲಿ ಕ್ಯಾಪಿಟಲ್ಸ್(DC vs GT) ವಿರುದ್ಧದ ಐಪಿಎಲ್(IPL 2025) ಪಂದ್ಯದಲ್ಲಿ ಓವರ್ ರೇಟ್ ಕಾಯ್ದುಕೊಳ್ಳಲು ವಿಫಲರಾದ ಕಾರಣಕ್ಕೆ ಗುಜರಾತ್ ಟೈಟಾನ್ಸ್(Gujarat Titans) ತಂಡದ ನಾಯಕ ಶುಭ್ಮನ್ ಗಿಲ್(Shubman Gill)ಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಇದರೊಂದಿಗೆ ಈ ಬಾರಿಯ ಐಪಿಎಲ್ನಲ್ಲಿ ದಂಡದ ಶಿಕ್ಷೆಗೆ ಗುರಿಯಾದ 7ನೇ ನಾಯಕ ಎನಿಸಿಕೊಂಡಿದ್ದಾರೆ. ಶನಿವಾರ ನಡೆದಿದ್ದ ಪಂದ್ಯದಲ್ಲಿ ಪಂಜಾಬ್ ತಂಡ ಡೆಲ್ಲಿ ವಿರುದ್ಧ 7 ವಿಕೆಟ್ ಅಂತರದ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.
'ಪ್ರಸಕ್ತ ಸೀಸನ್‌ನಲ್ಲಿ ಗುಜರಾತ್ ಓವರ್ ಗತಿ ಕಾಯ್ದುಕೊಳ್ಳಲು ವಿಫಲವಾದ ಮೊದಲ ನಿದರ್ಶನ ಇದಾಗಿದೆ. ಇದರಂತೆ ಐಪಿಎಲ್ ನಿಯಮಾನುಸಾರ ನಾಯಕ ಗಿಲ್ ಅವರಿಗೆ 12 ಲಕ್ಷ ರೂ. ದಂಡ ಹೇರಲಾಗಿದೆ' ಎಂದು ಐಪಿಎಲ್ ಪ್ರಕಟನೆ ತಿಳಿಸಿದೆ.
ಗಿಲ್ ಎರಡನೇ ಬಾರಿಗೆ ಈ ತಪ್ಪು ಮರುಕಳಿಸಿದರೆ, 24 ಲಕ್ಷ ರೂ. ದಂಡಕ್ಕೆ ಗುರಿಯಾಗಲಿದ್ದಾರೆ. ಜತೆಗೆ ತಂಡದ ಇನ್ನುಳಿದ ಆಟಗಾರರಿಗೆ ತಲಾ 6 ಲಕ್ಷ ರೂ. ಅಥವಾ ಪಂದ್ಯ ಶುಲ್ಕದ ಶೇ. 25ರಷ್ಟು ದಂಡವನ್ನು ವಿಧಿಸಲಾಗುತ್ತದೆ. ಈ ಆವೃತ್ತಿಯಲ್ಲಿ ಸಂಜು ಸ್ಯಾಮ್ಸನ್ 24 ಲಕ್ಷ ದಂಡಕ್ಕೆ ಗುರಿಯಾಗಿದ್ದರು.
GT skipper Shubman Gill fined ₹12 lakh for slow over-rate vs Delhi, under Article 2.22 of IPL’s Code of Conduct. pic.twitter.com/333YWQaUsm
— CricTracker (@Cricketracker) April 20, 2025
ಮೂರನೇ ಬಾರಿಗೆ ಈ ತಪ್ಪನ್ನು ಮಾಡಿದರೆ ನಾಯಕರಿಗೆ ದಂಡ ವಿಧಿಸಿ, 1 ಡಿಮೆರಿಟ್ ಅಂಕ ನೀಡಲಾಗುತ್ತದೆ. ಡಿಮೆರಿಟ್ ಅಂಕದ ಅವಧಿ 3 ವರ್ಷ ಇರಲಿದ್ದು, ಈ ಅವಧಿಯಲ್ಲಿ 4 ಡಿಮೆರಿಟ್ ಅಂಕ ಪಡೆದರೆ ನಾಯಕನಿಗೆ ಪಂದ್ಯದ ಸಂಭಾವನೆಯ ಶೇ.100ರಷ್ಟು ದಂಡ ವಿಧಿಸಲಾಗುತ್ತದೆ.
ಇದನ್ನೂ ಓದಿ IPL 2025: ಗೆಲುವಿನೊಂದಿಗೆ 2 ಪ್ರಮುಖ ದಾಖಲೆ ಬರೆದ ಗುಜರಾತ್ ಟೈಟಾನ್ಸ್
ಶನಿವಾರ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿದ್ದ ಹಗಲು ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಡೆಲ್ಲಿ ಕ್ಯಾಪಿಟಲ್ಸ್ 8 ವಿಕೆಟ್‌ಗೆ 203 ರನ್ ಕಲೆಹಾಕಿತು. ಬೃಹತ್ ಮೊತ್ತವನ್ನು ಬೆನ್ನಟ್ಟಿದ ಗುಜರಾತ್ ತಂಡ ಜಾಸ್ ಬಟ್ಲರ್ ಅವರ ಅಜೇಯ 97 ರನ್ ಸಾಹಸದಿಂದ 19.2 ಓವರ್‌ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ 204 ರನ್ ಬಾರಿಸಿ ಗೆಲುವಿನ ನಗೆ ಬೀರಿತ್ತು.