ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

MLA KH Puttaswamy Gowda: ಕಾಯಕಶರಣರ ಜಯಂತಿ ಆಚರಣೆ ಉದ್ದೇಶ ಸಮಾಜಕ್ಕೆ ಅರಿವು ಮೂಡಿಸುವುದಾಗಿದೆ : ಶಾಸಕ ಪುಟ್ಟಸ್ವಾಮಿಗೌಡ

ವಚನ ಚಳವಳಿಯ ಅನರ್ಘ್ಯ ರತ್ನಗಳಾದ ಶರಣರನ್ನು ಸ್ಮರಿಸುವ ಮೂಲಕ ಜನರಲ್ಲಿ ತಿಳಿವಳಿಕೆ ಮೂಡಿಸಲು ಕಾಯಕ ಶರಣರಂತಹ ಮಹನೀಯರ ಜಯಂತಿಗಳನ್ನು ಸರ್ಕಾರದಿಂದ ಆಚರಿಸಲಾಗು ತ್ತಿದೆ. ವಚನಕಾರರ ಕಾಯಕ ನಿಷ್ಠೆ ನೆನೆದುಕೊಂಡು ಅವರ ಹಾದಿಯಲ್ಲಿ ನಾವೆಲ್ಲರೂ ಕೂಡ ನಡೆಯುವ ಸಂಕಲ್ಪ ಮಾಡೋಣ

ಕಾಯಕಶರಣರ ಜಯಂತಿ ಆಚರಣೆ ಉದ್ದೇಶ ಸಮಾಜಕ್ಕೆ ಅರಿವು ಮೂಡಿಸುವುದಾಗಿದೆ

-

Ashok Nayak
Ashok Nayak Feb 12, 2026 12:56 PM

ಗೌರಿಬಿದನೂರು: ವಚನ ಚಳವಳಿಯ ಅನರ್ಘ್ಯ ರತ್ನಗಳಾದ ಶರಣರನ್ನು ಸ್ಮರಿಸುವ ಮೂಲಕ ಜನರಲ್ಲಿ ತಿಳಿವಳಿಕೆ ಮೂಡಿಸಲು ಕಾಯಕ ಶರಣರಂತಹ ಮಹನೀಯರ ಜಯಂತಿಗಳನ್ನು ಸರ್ಕಾರದಿಂದ ಆಚರಿಸಲಾಗುತ್ತಿದೆ. ವಚನಕಾರರ ಕಾಯಕ ನಿಷ್ಠೆ ನೆನೆದುಕೊಂಡು ಅವರ ಹಾದಿಯಲ್ಲಿ ನಾವೆಲ್ಲರೂ ಕೂಡ ನಡೆಯುವ ಸಂಕಲ್ಪ ಮಾಡೋಣ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ(MLA KH Puttaswamy Gowda) ಹೇಳಿದರು.

ತಾಲೂಕು ಕಚೇರಿಯ ಸಭಾಂಗಣದಲ್ಲಿ ಕಾಯಕ ಶರಣರ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಂದು ವೃತ್ತಿಯನ್ನು ಗೌರವದಿಂದ ನಡೆಸಿ ಮಹನೀಯರಾದ ಕಾಯಕ ಶರಣರು ನಮ್ಮೆಲ್ಲರಿಗೂ ಆದರ್ಶವಾಗಿದ್ದಾರೆ. 'ವಚನ' ಎಂದರೆ ಮಾತು, ಏಕೆಂದರೆ ಶರಣರ ನಡೆ-ನುಡಿ, ಇವರ ಆಚಾರ-ವಿಚಾರ, ಕಾಯಕ ಒಂದೇ ಆಗಿತ್ತು, ಆದ್ದರಿಂದ ಅವು ವಚನಗಳು ಎಂದು ಕರೆಯಲ್ಪಟ್ಟವು ಎಂದರು.

ಇದನ್ನೂ ಓದಿ: Gauribidanur News: ನಾಗರೀಕರ ಅಪೇಕ್ಷೆಯಂತೆ ಕಂದಾಯ ಇಲಾಖೆಗಳು ಸಕಾಲದಲ್ಲಿ ಕಾರ್ಯ ನಿರ್ವಹಿಸಿ ಅರ್ಜಿದಾರರಿಗೆ ನೆರವಾಗಬೇಕು : ಜಿಲ್ಲಾಧಿಕಾರಿ ಜಿ.ಪ್ರಭು

ಇಂದಿನ ಸಂವಿಧಾನದ ಮಾದರಿಯಲ್ಲೇ ಅಂದಿನ ಅನುಭವ ಮಂಟಪ ಇತ್ತು, ಯಾರನ್ನೂ ಕೀಳಾಗಿ ಕಾಣಬಾರದು ಎಂಬುವುದು ಬಸವೇಶ್ವರರ ತತ್ವವಾಗಿದ್ದು, ಅವರ ಹಾದಿಯಲ್ಲಿ ನಡೆದ ಕಾಯಕ ಶರಣರಾದ ಮಾದಾರ ಚನ್ನಯ್ಯ, ಉರಿಲಿಂಗ ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗಪೆದ್ದಿಯಂತಹ ಶರಣರು ಮಹನೀಯರಾಗಿದ್ದಾರೆ ಎಂದರು.

ನಿವೃತ್ತ ಪ್ರಾಂಶುಪಾಲ ಡಾ.ಕೆ.ಪಿ.ನಾರಾಯಣಪ್ಪ ಮಾತನಾಡಿ, ಕಾಯಕ ಶರಣರು ಸಮಾಜದಲ್ಲಿ ಆತ್ಮವಿಶ್ವಾಸ ಮೂಡಿಸಿ, ಸತ್ಯ, ಶುದ್ಧ ಕಾಯಕದಿಂದ ಬದುಕನ್ನು ನಡೆಸುವ ಮೂಲಕ ಆದರ್ಶ ಗಳನ್ನು ನಮ್ಮ ಮುಂದಿಟ್ಟ ಮಹಾಪುರುಷರಾಗಿದ್ದಾರೆ. ವಚನಗಳು ಬದುಕಿನ ಶ್ರೇಷ್ಠ ಮಾನವೀಯ ಮೌಲ್ಯಗಳು, ಸಹೋದರತೆ, ಸಮಾನತೆ ಸಾರುವ, ಜನರಿಗೆ ಅರ್ಥವಾಗುವ ಪದಗಳಾಗಿದ್ದು, ಇವುಗಳ ಮೂಲಕ 12ನೇ ಶತಮಾನದಲ್ಲಿ ಶಿವಶರಣರು ಕಲ್ಯಾಣ ಕ್ರಾಂತಿ ಮಾಡಿದ್ದರು ಎಂದರು.

ಬಸವಣ್ಣನವರ ಅನುಭವ ಮಂಟಪದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಸಂಕವ್ವ, ಆಯ್ದಕ್ಕಿ ಮಾರಯ್ಯಗೆ ಸ್ಥಾನ ನೀಡುವ ಮೂಲಕ ಸರ್ವೆ ಜನಾಂಗದವರಿಗೂ ವಚನ ಸಾಹಿತ್ಯ ರಚನೆ ಮಾಡಲು ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಉರಿಲಿಂಗಪೆದ್ದಿ 12ನೇ ಶತಮಾನದಲ್ಲಿಯೇ ಪೀಠಾ ಧೀಶರಾಗಿದ್ದು, ಅಂತರ್ ಜಾತಿ ವಿವಾಹ ಮಾಡಿಸಿದ್ದು ಮಾದರಿಯಾಗಿದೆ ಎಂದರು.

ತಹಸೀಲ್ದಾರ್ ಅರವಿಂದ್ ಮಾತನಾಡಿ, ಮೂಢನಂಬಿಕೆಗಳು, ವಿರುದ್ಧ ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಕಾಯಕ ಶರಣರ ಕೊಡುಗೆ ಅಪಾರವಾದದ್ದು. ಅವರ ವಚನ ಗಳು ಇಂದಿನ ಸಮಾಜಕ್ಕೂ ಪ್ರಸ್ತುತವಾಗಿವೆ. ಶರಣರು ನೀಡಿರುವ ಸಂದೇಶಗಳನ್ನು ಎಲ್ಲರೂ ಪಾಲಿಸಿದ್ದಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದರು.

ತಾಪಂ ಇಒ ಜಿ.ಕೆ.ಹೊನ್ನಯ್ಯ,ಸಮಾಜ ಕಲದಯಾಣಾಧಿಕಾರಿ ಚನ್ನಪ್ಪ ಗೌಡ ಮುಖಂಡರಾದ ಜಿ.ಸೋಮಯ್ಯ, ಕಲ್ಲಿನಾಯಕನಹಳ್ಳಿ ಮುನಿಯಪ್ಪ, ಮಲ್ಲಸಂದ್ರ ಗಂಗಾಧರ್, ಸತ್ಯನಾರಾಯಣ್, ವೈಟಿ ಪ್ರಸನ್ನ ಕೆ ನಂಜುಂಡಪ್ಪ, ಅಶ್ವತಪ್ಪ, ಬಾಲಯ್ಯ, ಗಂಗಾಧರ್, ಮಂಜಣ್ಣ ಇದ್ದರು.