IPL 2025: ʻನನ್ನನ್ನು ಯಾರೂ ಗುರುತಿಸಲಿಲ್ಲʼ-ಕೆಕೆಆರ್ ವಿರುದ್ಧ ಶ್ರೇಯಸ್ ಅಯ್ಯರ್ ಗಂಭೀರ ಆರೋಪ!
Shreyas Iyer on KKR: ಕಳೆದ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ತಮ್ಮ ನಾಯಕತ್ವದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಪ್ರಶಸ್ತಿ ತಂದುಕೊಟ್ಟಿದ್ದ ಹೊರತಾಗಿಯೂ ತನ್ನನ್ನು ಯಾರೂ ಗುರುತಿಸಲಿಲ್ಲ ಎಂದು ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಗಂಭೀರ ಆರೋಪ ಮಾಡಿದ್ದಾರೆ.

ಕೆಕೆಆರ್ ವಿರುದ್ದ ಶ್ರೇಯಸ್ ಅಯ್ಯರ್ ಅಸಮಾಧಾನ.

ನವದೆಹಲಿ: ಪಂಜಾಬ್ ಕಿಂಗ್ಸ್ ತಂಡದ ಪರ ಮುಂಬರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯನ್ನು ಆಡಲು ಎದುರು ನೋಡುತ್ತಿರುವ ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ( Shreyas Iyer), ತಮ್ಮ ಕಳೆದ ವರ್ಷದ ತಂಡ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತನ್ನ ನಾಯಕತ್ವದಲ್ಲಿ ಕೆಕೆಆರ್ ತಂಡಕ್ಕೆ ಪ್ರಶಸ್ತಿಯನ್ನು ತಂದುಕೊಟ್ಟಿದ್ದರ ಹೊರತಾಗಿಯೂ ಕೋಲ್ಕತಾ ಫ್ರಾಂಚೈಸಿಯಲ್ಲಿ ನನ್ನನ್ನು ಯಾರೂ ಗುರಿತಿಸಲಿಲ್ಲ ಎಂದು ಶ್ರೇಯಸ್ ಅಯ್ಯರ್ ದೂರಿದ್ದಾರೆ. ಅದರಂತೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದಿದ್ದ ಮೆಗಾ ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ಅವರನ್ನು ಕೋಲ್ಕತಾ ಫ್ರಾಂಚೈಸಿ ಉಳಿಸಿಕೊಂಡಿರಲಿಲ್ಲ. ಹಿನ್ನೆಲೆಯಲ್ಲಿ ಅವರನ್ನು ಪಂಜಾಬ್ ಕಿಂಗ್ಸ್ ತಂಡ ಮೆಗಾ ಹರಾಜಿನಲ್ಲಿ 26.75 ಕೋಟಿ ರೂ. ಗಳಿಗೆ ಖರೀದಿಸಿತ್ತು.
ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ ಶ್ರೇಯಸ್ ಅಯ್ಯರ್, "ನನ್ನ ದೊಡ್ಡ ಗುರಿ ಐಪಿಎಲ್ ಗೆಲ್ಲುವುದಾಗಿತ್ತು ಹಾಗೂ ಅನ್ನು ಗೆದ್ದಿದ್ದೇನೆ. ಐಪಿಎಲ್ ಗೆದ್ದ ನಂತರ ನಾನು ಬಯಸಿದ ಮನ್ನಣೆ ಸಿಗಲಿಲ್ಲ ಎಂದು ನನಗೆ ವೈಯಕ್ತಿಕವಾಗಿ ಅನಿಸಿತು ಆದರೆ ದಿನದ ಅಂತ್ಯದಲ್ಲಿ ನೀವು ಸ್ವಯಂ ಸಮಗ್ರತೆಯನ್ನು ಹೊಂದಿದ್ದರೆ ಮತ್ತು ಯಾರೂ ನೋಡದಿದ್ದಾಗ ನೀವು ಸರಿಯಾದ ಕೆಲಸಗಳನ್ನು ಮಾಡುತ್ತಿದ್ದರೆ, ಅದು ಹೆಚ್ಚು ಮುಖ್ಯ ಮತ್ತು ಅದನ್ನೇ ನಾನು ಮಾಡುತ್ತಿದ್ದೆ," ಅವರು ಹೇಳಿದ್ದಾರೆ.
IND vs ENG: 4ನೇ ಕ್ರಮಾಂಕದಲ್ಲಿ ಯಾರಿಂದಲೂ ಸಾಧ್ಯವಾಗದ ದಾಖಲೆ ಬರೆದ ಶ್ರೇಯಸ್ ಅಯ್ಯರ್!
"ಮನ್ನಣೆ ಬಗ್ಗೆ ನಾನು ಮಾತನಾಡಿದಾಗ, ಅದು ಗೌರವವನ್ನು ನೀಡುವುದಾಗಿರುತ್ತದೆ. ಮೈದಾನದಲ್ಲಿ ನಾನು ಹಾಕಿದ ಪ್ರಯತ್ನ ಹಾಗೂ ಕಠಿಣ ಪರಿಶ್ರಮದ ಗೌರವ ಇದಾಗಿದೆ. ಕೆಲವೊಮ್ಮೆ ಇದಕ್ಕೆ ಯಾರೂ ಮನ್ನಣೆ ನೀಡುವುದಿಲ್ಲ ಅಥವಾ ಗುರುತಿಸುವುದಿಲ್ಲ ಎಂದು ನನಗೆ ಅನಿಸುತ್ತದೆ. ಆದರೆ, ನನ್ನ ಪ್ರಯತ್ನದ ಬಗ್ಗೆ ನನಗೆ ಸಂಪೂರ್ಣ ತೃಪ್ತಿ ಇದೆ. ಏಕೆಂದರೆ ಬ್ಯಾಟಿಂಗ್‌ಗೆ ಇಲ್ಲಿನ ಪಿಚ್ ತುಂಬಾ ಕಠಿಣವಾಗಿತ್ತು," ಎಂದು ಶ್ರೇಯಸ್ ಅಯ್ಯರ್ ತಿಳಿಸಿದ್ದಾರೆ.
243 ರನ್‌ಗಳನ್ನು ಕಲೆ ಹಾಕಿದ್ದ ಶ್ರೇಯಸ್ ಅಯ್ಯರ್
ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಹಲವು ತಿಂಗಳುಗಳ ಕಾಲ ದೂರ ಉಳಿದಿದ್ದ ಬಗ್ಗೆ ಶ್ರೇಯಸ್ ಅಯ್ಯರ್ ಮಾತನಾಡಿದ್ದಾರೆ. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿನ ಒತ್ತಡದಲ್ಲಿ ಶ್ರೇಯಸ್ ಅಯ್ಯರ್ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಅವರು ಆಡಿದ್ದ ಐದು ಪಂದ್ಯಗಳಿಂದ 243 ರನ್‌ಗಳನ್ನು ಕಲೆ ಹಾಕಿದ್ದರು. ನ್ಯೂಜಿಲೆಂಡ್ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಗಳಿಸಿದ್ದ 79 ರನ್ ವೈಯಕ್ತಿಕ ಗರಿಷ್ಠ ಮೊತ್ತವಾಗಿತ್ತು.
IND vs NZ: ನೆಟ್ ಬೌಲರ್‌ಗೆ ವಿಶೇಷ ಉಡುಗೊರೆ ನೀಡಿ ಹೃದಯವಂತಿಕೆ ಮೆರೆದ ಶ್ರೇಯಸ್ ಅಯ್ಯರ್!
"ನನಗೆ ಸಂಪೂರ್ಣ ತೃಪ್ತಿ ಇದೆ. ಪ್ರಾಮಾಣಿಕವಾಗಿ ಹೇಳುವುದಾದರೆ ಇದೊಂದು ಪಯಣವಾಗಿದೆ. 2023ರ ಏಕದಿನ ವಿಶ್ವಕಪ್ ಟೂರ್ನಿಯ ಬಳಿಕ ನಾನು ಭಾರತ ತಂಡದಿಂದ ಹೊರಗುಳಿದಿದ್ದೆ ಹಾಗೂ ಈ ಅವಧಿಯಲ್ಲಿ ನಾನು ಸಾಕಷ್ಟು ಸಂಗತಿಗಳನ್ನು ಕಲಿತುಕೊಂಡಿದ್ದೇನೆ. ನಾನು ಎಲ್ಲಿ ತಪ್ಪು ಮಾಡಿದ್ದೇನೆ, ಮುಂದೆ ಏನು ಮಾಡಬೇಕು, ನನ್ನ ಫಿಟ್‌ನೆಸ್ ಸುಧಾರಣೆಗೆ ಏನು ಮಾಡಬೇಕೆಂಬ ಬಗ್ಗೆ ಮನವರಿಕೆಯಾಗಿದೆ. ಈ ಎಲ್ಲಾ ಪ್ರಶ್ನೆಗಳನ್ನು ನಾನು ನನಗೆ ಕೇಳಿಕೊಂಡಿದ್ದೇನೆ. ಅದರಂತೆ ನಾನು ಈ ದಿನಚರಿಯನ್ನು ಹಿಂಬಾಲಿಸಿದ್ದೇನೆ. ನನ್ನ ತರಬೇತಿ ಮತ್ತು ಕೌಶಲದ ಬಗ್ಗೆ ನಾನು ಗಮನ ಹರಿಸಿದ್ದೇನೆ," ಎಂದು ಶ್ರೇಯಸ್ ಅಯ್ಯರ್ ತಿಳಿಸಿದ್ದಾರೆ.
"ಒಮ್ಮೆ ದೇಶಿ ಕ್ರಿಕೆಟ್‌ನಲ್ಲಿ ಪಂದ್ಯಗಳು ನಿರಂತರವಾಗಿ ನಡೆಯುತ್ತಿದ್ದ ವೇಳೆ, ಫಿಟ್‌ನೆಸ್ ಎಷ್ಟು ಮುಖ್ಯ ಎಂಬುದು ಮನವರಿಕೆಯಾಯಿತು. ಆ ಮೂಲಕ ವರ್ಷದ ಆರಂಭದಲ್ಲಿ ನನ್ನನ್ನು ನಾನೇ ಪ್ರಶ್ನೆ ಮಾಡಿಕೊಂಡಿದ್ದೆ. ಒಟ್ಟಾರೆಯಾಗಿ ನನ್ನ ಪಯಣದ ಬಗ್ಗೆ ನನಗೆ ಖುಷಿ ಇದೆ. ಕಠಿಣ ದಿನಗಳಿಂದ ಹೊರಬರಲು ಹಾಗೂ ಸನ್ನಿವೇಶವನ್ನು ನಿರ್ವಹಿಸಿದ ರೀತಿ, ಇಲ್ಲಕ್ಕಿಂತ ಮುಖ್ಯವಾಗಿ ನನ್ನ ಮೇಲೆ ನಾನು ನಂಬಿಕೆಯನ್ನು ಇಟ್ಟುಕೊಂಡಿದ್ದೆ," ಎಂದು ಭಾರತ ತಂಡದ ಬ್ಯಾಟ್ಸ್‌ಮನ್ ಹೇಳಿದ್ದಾರೆ.