Bengaluru news: ಸಿಲಿಕಾನ್ ಸಿಟಿಗೆ ಬರುವ ತರಕಾರಿಯಲ್ಲಿ ವಿಷಕಾರಿ ಅಂಶ ಪತ್ತೆ
ಬೆಂಗಳೂರಿನಲ್ಲಿ ಮಾರಾಟವಾಗುವ ತರಕಾರಿಗಳಲ್ಲಿ ಸೀಸದ (ಲೆಡ್) ಪ್ರಮಾಣ ಹೆಚ್ಚಿದೆ ಎಂದು ತಿಳಿಸಿದ್ದು, ಈ ತರಕಾರಿ ತಿಂದರೆ ಕಿಡ್ನಿ, ಮೆದುಳಿಗೆ ಸಮಸ್ಯೆಯಾಗಬಹುದು. ಸಂಗ್ರಹಿಸಿದ 72 ಮಾದರಿಗಳ ಪೈಕಿ 10 ಮಾದರಿಗಳಲ್ಲಿ 8 ಕೀಟನಾಶಕ ಅವಶೇಷಗಳು ಪತ್ತೆಯಾಗಿದೆ. ನಗರದ ವಿವಿಧ ಮಾರುಕಟ್ಟೆಗಳಲ್ಲಿ ಕಂಡುಬರುವ ತರಕಾರಿಗಳಲ್ಲಿ ಸೀಸದ ಪ್ರಮಾಣ ಮಿತಿಗಿಂತ ಹೆಚ್ಚು ಮಟ್ಟದಲ್ಲಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಫೆ.24: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru news) ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆಯುವ ತರಕಾರಿಯಲ್ಲಿ (vegetables) ಮಾನವ ಆರೋಗ್ಯಕ್ಕೆ ಹಾನಿಕಾರಕವಾದ ವಿಷಕಾರಿ (poisonous) ಅಂಶ ಪತ್ತೆಯಾಗಿದ್ದು, ಸುರಕ್ಷಿತವಿಲ್ಲ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರೀಕ್ಷೆಯಿಂದ ದೃಢಪಟ್ಟಿದೆ.
ಬೆಂಗಳೂರಿನಲ್ಲಿ ಮಾರಾಟವಾಗುವ ತರಕಾರಿಗಳಲ್ಲಿ ಸೀಸದ (ಲೆಡ್) ಪ್ರಮಾಣ ಹೆಚ್ಚಿದೆ ಎಂದು ತಿಳಿಸಿದ್ದು, ಈ ತರಕಾರಿ ತಿಂದರೆ ಕಿಡ್ನಿ, ಮೆದುಳಿಗೆ ಸಮಸ್ಯೆಯಾಗಬಹುದು. ಸಂಗ್ರಹಿಸಿದ 72 ಮಾದರಿಗಳ ಪೈಕಿ 10 ಮಾದರಿಗಳಲ್ಲಿ 8 ಕೀಟನಾಶಕ ಅವಶೇಷಗಳು ಪತ್ತೆಯಾಗಿದೆ. ನಗರದ ವಿವಿಧ ಮಾರುಕಟ್ಟೆಗಳಲ್ಲಿ ಕಂಡುಬರುವ ತರಕಾರಿಗಳಲ್ಲಿ ಸೀಸದ ಪ್ರಮಾಣ ಮಿತಿಗಿಂತ ಹೆಚ್ಚು ಮಟ್ಟದಲ್ಲಿದೆ.
ಕಳೆದ ವರ್ಷ ಸಂಗ್ರಹಿಸಲಾದ 72 ತರಕಾರಿ ಮಾದರಿಗಳ ಸಮಗ್ರ ವಿಶ್ಲೇಷಣೆಯ ನಂತರ ಹೆಚ್ಚಿನ ಪ್ರಮಾಣದ ಸೀಸದ 19 ಮಾದರಿಗಳು ಪತ್ತೆಯಾಗಿದೆ. ಸೋರೆಕಾಯಿಯಲ್ಲಿ ಗಮನಿಸಲಾದ ಸೀಸದ ಸಾಂದ್ರತೆಯು 1.75ಎಂಜಿ/ಕೆಜಿ ಪತ್ತೆಯಾಗಿದೆ. ತರಕಾರಿ ಬೆಳೆಯುವ ಮಣ್ಣನ್ನು ಕೂಡ ಪರೀಕ್ಷೆಗೆ ಒಳಪಡಿಸಿದ್ದು, ಅದರಲ್ಲೂ ಕೀಟನಾಶಕ ಅಂಶ ಪತ್ತೆಯಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ನೆಲಮಂಗಲದ ಹೊಲಗಳಿಂದ 23 ಮಾದರಿ ಮಣ್ಣು ಪರೀಕ್ಷೆ ಮಾಡಲಾಗಿದ್ದು, ಈ ಸಂಗ್ರಹವಾದ ಮಣ್ಣು ಕೂಡ ಕಲುಷಿತ ಎಂದು ತಿಳಿದುಬಂದಿದೆ.
ಮ್ಯಾಕ್‌ಡೊನಾಲ್ಡ್ಸ್‌ನಲ್ಲಿ ಅವಧಿ ಮೀರಿದ ಆಹಾರಗಳ ಬಳಕೆ; ವಿಷಕಾರಿ ಎಣ್ಣೆಯ ಅಂಶ ಪತ್ತೆ!
ಈ ಹಿಂದೆ ರಾಜ್ಯದಲ್ಲಿ ಆಹಾರ ಸುರಕ್ಷತೆ ಮಂಡಳಿಯು ಹಲವಾರು ಬೀದಿ ಬದಿಯ ಪದಾರ್ಥಗಳು ಅಸುರಕ್ಷಿತ ಎಂದು ಪರೀಕ್ಷೆ ಮಾಡಿ ತಿಳಿಸಿತ್ತು. ಹೀಗಾಗಿ ಗೋಬಿ ಮಂಚೂರಿಯಲ್ಲಿ ಬಣ್ಣ ಇತ್ಯಾದಿಗಳನ್ನು ನಿಷೇಧಿಸಲಾಗಿದೆ. ಬೇಕರಿ ಪದಾರ್ಥಗಳಲ್ಲಿ ಕೂಡ ಅಶುದ್ಧ ಸಾಮಗ್ರಿಗಳನ್ನು ಕೆಲವರು ಬಳಸುವುದು ಕಂಡುಬಂದಿತ್ತು.