IPL 2025: ಐಪಿಎಲ್ ಪ್ಲೇ-ಆಫ್ ಪಂದ್ಯಗಳಿಗೆ ದಕ್ಷಿಣ ಆಫ್ರಿಕಾ ಆಟಗಾರರು ಅಲಭ್ಯ
ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಐಪಿಎಲ್‌ಗೆ ಮರಳುವ ಆಯ್ಕೆಯನ್ನು ಆಟಗಾರರಿಗೆ ಬಿಟ್ಟದ್ದು ಎಂದಿದೆ. ಆಟಗಾರರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರಲು ನಾವು ಸಿದ್ಧ ಎಂದಿದೆ. ಹೀಗಾಗಿ ಕೆಲ ಆಸ್ಟ್ರೇಲಿಯಾದ ಕೆಲ ಆಟಗಾರರು ಮತ್ತೆ ಐಪಿಎಲ್ ಆಡುವುದು ಅನುಮಾನ.


ನವದೆಹಲಿ: ಜೂನ್ 11ರಿಂದ ಲಾರ್ಡ್ಸ್‌ನಲ್ಲಿ ಆಸ್ಟ್ರೇಲಿಯ- ದಕ್ಷಿಣ ಆಫ್ರಿಕಾ ನಡುವೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್(WTC final) ಆರಂಭವಾಗಲಿದೆ. ಫೈನಲ್ ಪಂದ್ಯಕ್ಕೆ ಈಗಾಗಲೇ ಉಭಯ ತಂಡಗಳ ಪ್ರಕಟವೂ ಆಗಿದೆ. ಇದೀಗ ಐಪಿಎಲ್‌ನಲ್ಲಿ(IPL 2025) ಆಡುತ್ತಿರುವ ಎಂಟು ದಕ್ಷಿಣ ಆಫ್ರಿಕಾದ ಆಟಗಾರರು(South Africa players) ಪ್ಲೇ ಆಫ್(IPL playoffs) ಪಂದ್ಯಕ್ಕೂ ಮುನ್ನ ಐಪಿಎಲ್ ತೊರೆಯಲಿದ್ದಾರೆ ಎಂದು ತಿಳಿದುಬಂದಿದೆ. ಫೈನಲ್ ಪಂದ್ಯಕ್ಕೆ ಆಯ್ಕೆಯಾದ ಆಟಗಾರರು ಮೇ 25 ರ ಒಳಗೆ ರಾಷ್ಟ್ರೀಯ ತಂಡದ ಕರ್ತವ್ಯಕ್ಕೆ ಹಾಜರಾಗಬೇಕೆಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಆಟಗಾರರಿಗೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಇನ್ನೊಂದೆಡೆ ಕ್ರಿಕೆಟ್ ಆಸ್ಟ್ರೇಲಿಯಾ ಐಪಿಎಲ್‌ಗೆ ಮರಳುವ ಆಯ್ಕೆಯನ್ನು ಆಟಗಾರರಿಗೆ ಬಿಟ್ಟದ್ದು ಎಂದಿದೆ. ಆಟಗಾರರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧವಾಗಿರಲು ನಾವು ಸಿದ್ಧ ಎಂದಿದೆ. ಹೀಗಾಗಿ ಕೆಲ ಆಸೀಸ್ ಆಟಗಾರರು ಮತ್ತೆ ಐಪಿಎಲ್ ಆಡುವುದು ಅನುಮಾನ.
ವಿಶ್ವ ಟೆಸ್ಟ್ ಫೈನಲ್ ಆಡಲಿರುವ ಕಗಿಸೊ ರಬಾಡ (ಗುಜರಾತ್ ಟೈಟಾನ್ಸ್), ಲುಂಗಿ ಎನ್‌ಗಿಡಿ (ಆರ್‌ಸಿಬಿ), ಟ್ರಿಸ್ಟಾನ್ ಸ್ಟಬ್ಸ್ (ದಕ್ಷಿಣ ಆಫ್ರಿಕಾ), ಐಡೆನ್ ಮಾರ್ಕ್ರಾಮ್ (ಎಲ್‌ಎಸ್‌ಜಿ), ರಯಾನ್ ರಿಕಲ್ಟನ್, ಕಾರ್ಬಿನ್ ಬಾಷ್ (ಮುಂಬೈ ಇಂಡಿಯನ್ಸ್), ಮಾರ್ಕೊ ಜಾನ್ಸೆನ್ (ಪಂಜಾಬ್ ಕಿಂಗ್ಸ್) ಮತ್ತು ವಿಯಾನ್ ಮುಲ್ಡರ್ (ಹೈದರಾಬಾದ್) ಮೇ 30 ರಂದು ತಂಡದ ಉಳಿದ ಆಟಗಾರರೊಂದಿಗೆ ಲಂಡನ್‌ಗೆ ಹೊರಡುವ ಮೊದಲು ದಕ್ಷಿಣ ಆಫ್ರಿಕಾಕ್ಕೆ ಮರಳಬೇಕಿದೆ. ಹೀಗಾಗಿ ಇವರೆಲ್ಲ ಪ್ಲೇ ಆಫ್‌ಗೂ ಮುನ್ನ ಐಪಿಎಲ್ ತಂಡಗಳಿಗೆ ಕೈಕೊಡಲಿದ್ದಾರೆ.
ಇದನ್ನೂ ಓದಿ IPL 2025: ಪ್ಲೇಆಫ್ಸ್‌ಗೆ ಸ್ಟಾರ್ ಆಟಗಾರನನ್ನು ಕಳೆದುಕೊಳ್ಳಲಿರುವ ಆರ್‌ಸಿಬಿ, ಮುಂಬೈಗೂ ಹಿನ್ನಡೆ!
ಆಸ್ಟ್ರೇಲಿಯಾ ತಂಡ
ಪ್ಯಾಟ್ ಕಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮರೂನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖವಾಜಾ, ಸ್ಯಾಮ್ ಕಾನ್ಸ್ಟಾಸ್, ಮ್ಯಾಟ್ ಕುಹ್ನೆಮನ್, ಮಾರ್ನಸ್ ಲಬುಶೇನ್, ನಾಥನ್ ಲಿಯಾನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಬ್ಯೂ ವೆಬ್‌ಸ್ಟರ್. ಪ್ರಯಾಣ ಮೀಸಲು: ಬ್ರೆಂಡನ್ ಡಾಗೆಟ್.
ದಕ್ಷಿಣ ಆಫ್ರಿಕಾ
ತೆಂಬಾ ಬವುಮಾ (ನಾಯಕ), ಏಡೆನ್ ಮಾರ್ಕ್ರಾಮ್, ಲುಂಗಿ ಎಂಗಿಡಿ, ಟೋನಿ ಡಿ ಜಾರ್ಜಿ, ಡೇವಿಡ್ ಬೆಡಿಂಗ್‌ಹ್ಯಾಮ್, ಕೇಶವ್ ಮಹಾರಾಜ್, ಟ್ರಿಸ್ಟಾನ್ ಸ್ಟಬ್ಸ್, ಕಾರ್ಬಿನ್ ಬಾಷ್, ಸೆನುರಾನ್ ಮುತ್ತುಸಾಮಿ, ಮಾರ್ಕೊ ಜಾನ್ಸೆನ್, ಕಗಿಸೊ ರಬಾಡಾ, ಕೈಲ್ ವೆರೆನ್, ಡೇನ್ ಪ್ಯಾಟರ್ಸನ್, ವಿಯಾನ್ ಮುಲ್ಡರ್, ರಿಯಾನ್ ರಿಕಲ್ಟನ್.