ಚಿಂತಾಮಣಿ : ತಾಲ್ಲೂಕಿನ ಕೈವಾರ ಗ್ರಾಮದ ಸ್ಪಂದನ ಟ್ರಸ್ಟ್ ಬುದ್ಧಿಮಾಂದ್ಯ ಮಕ್ಕಳ ವಿಶೇಷ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದ ನಂತರ ಅಲ್ಲಿಯೇ ಸಮೀಪವಿರುವ ಚೈತನ್ಯ ವೃದ್ರಾಶ್ರಮದ ಹಿರಿಯರೊಂದಿಗೆ ಕೇಕ್ ಕತ್ತರಿಸಿ ಡಾ.ಎಂ.ಸಿ.ಸುಧಾಕರ್ ಅವರ 56ನೇ ಹುಟ್ಟು ಹಬ್ಬವನ್ನು ಕಾಂಗ್ರೆಸ್ ಮುಖಂಡರು ಹಾಗೂ ಸಮಾಜಸೇವಕರಾದ ಅಬ್ದುಲ್ ಸಮದ್ ಸಮ್ಮುಖ ದಲ್ಲಿ ಸಚಿವ ಎಂಸಿಎಸ್ ಬೆಂಬಲಿಗರು ಅರ್ಥಪೂರ್ಣವಾಗಿ ಆಚರಿಸಿದರು.
ಇದನ್ನೂ ಓದಿ: Chikkaballapur Crime: ಕಾಡ್ಗಿಚ್ಚಿಗೆ ಶ್ರೀಗಂಧದ ಮರಗಳು ಬೆಂಕಿಗಾಹುತಿ ಲಕ್ಷಾಂತರ ರೂಪಾಯಿ ನಷ್ಟದಲ್ಲಿ ರೈತ
ಈ ವೇಳೆ ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಸಮ್ಮದ್ ಮಾತನಾಡಿ ಬುದ್ಧಿಮಾಂದ್ಯ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಚಿವರ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ತುಂಬಾ ಸಂತೋಷ ವಾಗುತ್ತಿದೆ. ಸಚಿವ ಎಂ.ಸಿ.ಸುಧಾಕರ್ ಅವರಿಗೆ ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಇನ್ನೂ ಉನ್ನತ ಸ್ಥಾನಮಾನ ದೊರೆಯಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸೈಯದ್ ಮುಸ್ತಫಾ,ಸೈಯದ್ ಶಾಜಹಾನ್, ಸೈಯದ್ ಬಾಬಾ,ಅಸ್ಲಾಂ ಪಾಷ ಉರ್ಫ್ ಪಿಟ್ಟು,ಮುನಿ,ಸೈಯದ್ ಜಮೀಲ್,ಅಯಾಜ್ ಅಹ್ಮದ್, ಅಕ್ಬರ್,ಭಟ್ಟು ಸೇರಿದಂತೆ ಮತ್ತಿತ ರರು ಇದ್ದರು.