ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur Crime: ಕಾಡ್ಗಿಚ್ಚಿಗೆ ಶ್ರೀಗಂಧದ ಮರಗಳು ಬೆಂಕಿಗಾಹುತಿ ಲಕ್ಷಾಂತರ ರೂಪಾಯಿ ನಷ್ಟದಲ್ಲಿ ರೈತ

ಕಾಡ್ಗಿಚ್ಚಿಗೆ ಒಳಗಾಗಿ ಅಪಾರ ಪ್ರಮಾಣದ ಮರಗಳು ಸುಟ್ಟಿದ್ದು ಭಾರೀ ಪ್ರಮಾಣದ ನಷ್ಟಕ್ಕೆ ಒಳಗಾಗಿ ದ್ದೇನೆ. ದಯವಿಟ್ಟು ಜಿಲ್ಲಾ ಧಿಕಾರಿಗಳು ನನಗೆ ಆಗಿರುವ ನಷ್ಟದ ಅಂದಾಜನ್ನು ಅಧಿಕಾರಿಗಳ ಮೂಲಕ ಸಮೀಕ್ಷೆ ಮಾಡಿಸಿ ಪ್ರಾಕೃತಿಕ ವಿಕೋಪದ ನಿಧಿಯಲ್ಲಿ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಲ್ಲದೆ, ಈಕುರಿತು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಕೂಡ ಸಲ್ಲಿಸಿದ್ದಾರೆ

ಲಕ್ಷಾಂತರ ರೂಪಾಯಿ ಬೆಲೆಬಾಳುವ ಅಮೂಲ್ಯ ಮರಗಳು ಬೆಂಕಿಗೆ ಆಹುತಿ

ಚೇಳೂರು ತಾಲೂಕಿನ ಚಿಲಕಲನೇರ್ಪು ಹೋಬಳಿಯ ತುಳುವನೂರು ಗ್ರಾಮದ ಪ್ರಗತಿಪರ ರೈತನಾದ ಟಿ.ನರಸಿಂಹಪ್ಪಗೆ ಸೇರಿದ ತೋಟಕ್ಕೆ ಕಾಡ್ಗಿಚ್ಚುನಂತೆ ಒಮ್ಮೇಲೆ ನುಗ್ಗಿದ ಬೆಂಕಿ ಭಸ್ಮವಾಗಿರುವ ಹುಲ್ಲಿನ ಬಣವೆಗಳ ಚಿತ್ರ.

Profile Ashok Nayak Mar 17, 2025 9:19 PM

ಚೇಳೂರು : ಚೇಳೂರು ತಾಲೂಕಿನ ಚಿಲಕಲನೇರ್ಪು ಹೋಬಳಿಯ  ತುಳುವನೂರು  ಗ್ರಾಮದ ಪ್ರಗತಿಪರ ರೈತನಾದ ಟಿ.ನರಸಿಂಹಪ್ಪಗೆ ಸೇರಿದ ಶ್ರೀಗಂಧದ ತೋಟಕ್ಕೆ ಬೆಂಕಿಬಿದ್ದು ಲಕ್ಷಾಂತರ ರೂಪಾಯಿ ಬೆಲೆಬಾಳುವ ಅಮೂಲ್ಯ ಮರಗಳು ಬೆಂಕಿಗೆ ಆಹುತಿಯಾಗಿದ್ದು ಇದನ್ನೇ ನಂಬಿ ಕೊಂಡಿದ್ದ ರೈತ ಬೀದಿಗೆ ಬರುವಂತಾಗಿದೆ. ಬೆಂಕಿಗೆ ಆಹುತಿಯಾದವುಗಳ ಪೈಕಿ ೧೦ ಶ್ರೀಗಂಧದ ಮರಗಳು. ೫ ಮಾವಿನ ಮರಗಳು. ೪ ನೇರಳೆ. ೫ ತೆಂಗು. ೫ ಬಿದಿರು. ಮರಗಳಿಗೆ ಹನಿ ನೀರಾವರಿ ಪೈಪುಗಳು ಜತೆಗೆ ಎರಡು ಹುಲ್ಲಿ ಬಣವೆ ಇತರೆ ಕಟ್ಟಿಗೆ ಸಾಮಾನುಗಳು ಸೇರಿವೆ.

ಇದನ್ನೂ ಓದಿ: Chikkaballapur News: ನಮ್ಮ ಕ್ಲಿನಿಕ್ ಸಾರ್ವಜನಿಕರಿಗೆ ಗುಣಮಟ್ಟದ ಸೇವೆಗೆ ಆದ್ಯತೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

ಬೆಂಕಿಯ ಶಾಖಕ್ಕೆ ಶೆಡ್ಡ್ನಲ್ಲಿನ ಆರು ಕಲ್ಲಿನ ಕೂಚಗಳು  ಮುರಿದು ಹೋಗಿವೆ.ಇದರಿಂದಾಗಿ ರೈತನಿಗೆ ಲಕ್ಷಾಂತರ ರೂಪಾಯಿಗಳು ನಷ್ಟವಾಗಿದೆ.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ರೈತ ಟಿ,ನರಸಿಂಹಪ್ಪ ಕಾಡ್ಗಿಚ್ಚಿಗೆ ಒಳಗಾಗಿ ಅಪಾರ ಪ್ರಮಾಣದ ಮರಗಳು ಸುಟ್ಟಿದ್ದು ಭಾರೀ ಪ್ರಮಾಣದ ನಷ್ಟಕ್ಕೆ ಒಳಗಾಗಿದ್ದೇನೆ. ದಯವಿಟ್ಟು ಜಿಲ್ಲಾ ಧಿಕಾರಿಗಳು ನನಗೆ ಆಗಿರುವ ನಷ್ಟದ ಅಂದಾಜನ್ನು ಅಧಿಕಾರಿಗಳ ಮೂಲಕ ಸಮೀಕ್ಷೆ ಮಾಡಿಸಿ ಪ್ರಾಕೃತಿಕ ವಿಕೋಪದ ನಿಧಿಯಲ್ಲಿ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಲ್ಲದೆ, ಈಕುರಿತು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಕೂಡ ಸಲ್ಲಿಸಿದ್ದಾರೆ.