ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಕಲ್ಲೂಡಿ ವ್ಯವಸಾಯ ಸೇವಾ ಸಹಕಾರ ಸಂಘ : ಪುಟ್ಟಸ್ವಾಮಿಗೌಡರ ಬಣದ ಪಾಲು

ತಾಲೂಕಿನ ಜನತೆ ಶಾಸಕರ  ಪರ ಇದ್ದಾರೆ ಎಂಬುದನ್ನು ಸಂಘಕ್ಕೆ ನಡೆದ ಚುನಾವಣೆಯ ಫಲಿತಾಂಶ ಸೂಚಿಸುತ್ತದೆ. ಸಂಘದ ಎಲ್ಲಾ ಹನ್ನೆರಡು ನಿರ್ದೇಶಕರ ಸ್ಥಾನಗಳಲ್ಲಿ ಶಾಸಕ ಕೆಎಚ್ ಪುಟ್ಟಸ್ವಾಮಿಗೌಡರ ಬಣದ ಅಭ್ಯರ್ಥಿಗಳು ಗೆಲುವು ಸಾಧಿಸಿ ಪ್ರಾಬಲ್ಯ ಮೆರೆದಿದ್ದಾರೆ.

ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡರ ಬೆಂಬಲಿತ ಅಭ್ಯರ್ಥಿಗಳು ಅವಿರೋಧ ಆಯ್ಕೆ

ತಾಲೂಕಿನ ಕಲ್ಲೂಡಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡರ ಬೆಂಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Profile Ashok Nayak Apr 6, 2025 8:33 AM

ಗೌರಿಬಿದನೂರು: ತಾಲೂಕಿನ ಕಲ್ಲೂಡಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡರ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಹನ್ನೆರಡು ಮಂದಿ ನಿರ್ದೇಶಕರ ಸ್ಥಾನಗಳಿಗಾಗಿ ಇತ್ತೀಚೆಗೆ ನಡೆದ ಚುನಾವಣೆ ಯಲ್ಲಿ ಶಾಸಕರ ಬಣದವರು ಎಲ್ಲಾ ಹನ್ನೆರಡು ಸ್ಥಾನಗಳಲ್ಲೂ ಆಯ್ಕೆಯಾಗುವ ಮೂಲಕ ಸಂಘದ ಅಧಿಕಾರವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದರು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶಾಸಕರ ಬಣದ ಕೆಜಿ. ಗಂಗಪ್ಪ  ಹಾಗೂ ಉಪಾಧ್ಯಕ್ಷರಾಗಿ ಗಂಗಾಧರಯ್ಯ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾದರು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆ. ಜಿ. ಗಂಗಪ್ಪ ಮಾತನಾಡಿ, ನಿರ್ದೇಶಕರ ಸಹಕಾರ ದೊಂದಿಗೆ ಸಂಘವನ್ನು ಮುನ್ನಡೆಸಿಕೊಂಡು ಹೋಗುತ್ತೇವೆ. ಸಂಘದ ವ್ಯಾಪ್ತಿ ಯಲ್ಲಿ ಬರುವ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ದೊರಕಿಸಿ ಕೊಡುವುದರ ಜೊತೆಗೆ ಮಹಿಳೆಯರಿಗೆ ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಲು ಶ್ರಮಿಸಲಾಗುವುದು ಎಂದರು.

ಇದನ್ನೂ ಓದಿ: Chikkaballapur News: ಎರಡು ಸಲ ಕಳ್ಳತನ ಮಾಡಿದರೆ ಶಿಕ್ಷೆ ಪ್ರಮಾಣ ದ್ವಿಗುಣವಾಗಲಿದೆ

ಉಪಾಧ್ಯಕ್ಷ ಗಂಗಾಧರಯ್ಯ ಮಾತನಾಡಿ, ನಮ್ಮ ಮೇಲೆ ವಿಶ್ವಾಸವಿರಿಸಿ ಆಯ್ಕೆ ಮಾಡಿದ ನಿರ್ದೇಶಕರು ಮತ್ತು ಶಾಸಕರಿಗೆ ನಾವು ಆಭಾರಿಯಾಗಿದ್ದೇವೆ. ಮುಂದಿನ ದಿನಗಳಲ್ಲಿ ಸಂಘವನ್ನು ಮತ್ತಷ್ಟು ಬಲಪಡಿಸುವ ಕೆಲಸವನ್ನು ಮಾಡುತ್ತೇವೆ ಎಂದರು.

ಕೆ.ಎಚ್.ಪಿ ಬಣದ ಮುಖಂಡ ಸಾಗಾನಹಳ್ಳಿ ಶಿವಕುಮಾರ್ ಮಾತನಾಡಿ, ತಾಲೂಕಿನ ಜನತೆ ಶಾಸಕರ  ಪರ ಇದ್ದಾರೆ ಎಂಬುದನ್ನು ಸಂಘಕ್ಕೆ ನಡೆದ ಚುನಾವಣೆಯ ಫಲಿತಾಂಶ ಸೂಚಿಸುತ್ತದೆ. ಸಂಘದ ಎಲ್ಲಾ ಹನ್ನೆರಡು ನಿರ್ದೇಶಕರ ಸ್ಥಾನಗಳಲ್ಲಿ ಶಾಸಕ ಕೆಎಚ್ ಪುಟ್ಟಸ್ವಾಮಿಗೌಡರ ಬಣದ ಅಭ್ಯರ್ಥಿಗಳು ಗೆಲುವು ಸಾಧಿಸಿ ಪ್ರಾಬಲ್ಯ ಮೆರೆದಿದ್ದಾರೆ. ತಾಲೂಕಿನಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ಎಲ್ಲಾ ಸ್ಥಳೀಯ ಚುನಾವಣೆಗಳಲ್ಲಿ ಕೂಡ ನಮ್ಮ ಬಣದ ಬೆಂಬಲಿಗರ ವಿಜಯದ ಪತಾಕೆ ಮುಂದುವರಿಯಲಿದೆ ಎಂದರು.

ಈ ಸಂಧರ್ಭದಲ್ಲಿ ನಿರ್ದೇಶಕರಾದ ಕೆವಿ ವೆಂಕಟಾಚಲ, ಜೆ. ಕೃಷ್ಣಪ್ಪ,ಎಸ್ ಎ ರಾಮ ಲಿಂಗಯ್ಯ, ಬೈಪಾಸ್ ನಾಗರಾಜ್, ನಾರಾಯಣಪ್ಪ,ವಿಜಯ ರಾಘವ, ಚಿಕ್ಕಪ್ಪಯ್ಯ, ಸಾವಿತ್ರಮ್ಮ, ಕೆ ವಿ ನರಸಿಂಹಮೂರ್ತಿ,ಸುನAದಮ್ಮ ಹಾಗೂ ಮುಖಂಡರಾದ ರಾಜಣ್ಣ, ಗಂಗಾಧರಪ್ಪ,ವೆAಕಟಾಚಲ,ಅರುಣ,ಸುಬ್ರಮಣ್ಯ ಗೌಡ,ಮೂರ್ತಿ,ಅಶೋಕ, ವೆಂಕಟೇಶ್, ಶ್ರೀನಿವಾಸ, ಮದನ್,ಕೃಷ್ಣೇಗೌಡ,ಡೈರಿ ನಾಗರಾಜ್,ರಮೇಶ್,ಶ್ರೀಧರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.