ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಎರಡು ಸಲ ಕಳ್ಳತನ ಮಾಡಿದರೆ ಶಿಕ್ಷೆ ಪ್ರಮಾಣ ದ್ವಿಗುಣವಾಗಲಿದೆ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುಮಾರು 750 ಎಕರೆ ಜಾಗದಲ್ಲಿ ರೈತರು “ಶ್ರೀಗಂಧ ವನ” ಕೃಷಿ ಯನ್ನು ಮಾಡಿ ೩ ಲಕ್ಷಕ್ಕೂ ಹೆಚ್ಚು ಮರಗಳನ್ನು ಬೆಳೆಸುತ್ತಿದ್ದಾರೆ. ಆ ರೈತರಿಗೆ ಕಾಡು ಪ್ರಾಣಿ ಗಳಾದ ಹಂದಿ, ಜಿಂಕೆ, ಕೋತಿ ಹಾಗೂ ನವಿಲುಗಳ ಕೂಡ ಒಂದೆಡೆಯಾದರೆ ಶ್ರೀ ಗಂಧದ ಕಳ್ಳರ ಕಾಟದ ಭೀತಿಯು ಸಹ ಜಿಲ್ಲೆಯಲ್ಲಿದೆ. ರೈತರು ಬಹಳ ಶ್ರಮವಹಿಸಿ ಬೆಳೆಸಿದ ಗಂಧದ ಮರಗಳನ್ನು ಕಳ್ಳರು ರಾತ್ರೋರಾತ್ರಿ ಕತ್ತರಿಸಿಕೊಂಡು ಹೋಗುತ್ತಿರುವುದು ಜಿಲ್ಲಾ ಡಳಿತದ ಗಮನಕ್ಕೆ ಬಂದಿದೆ

ಶ್ರೀಗಂಧದ ಮರಗಳ ರಕ್ಷಣೆಗೆ ಜಿಲ್ಲಾಡಳಿತ ಕ್ರಮ: ಪಿ.ಎನ್.ರವೀಂದ್ರ

ಅಪರಾಧಿ ಕೃತ್ಯಗಳಲ್ಲಿ ತೊಡಗಿರುವವರನ್ನು ಶಿಕ್ಷೆಗೆ ಒಳಪಡಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು.

Profile Ashok Nayak Apr 4, 2025 8:41 PM

ಚಿಕ್ಕಬಳ್ಳಾಪುರ: ಯಾವುದೇ ವಯಸ್ಸಿನ ಶ್ರೀಗಂಧದ ಮರದ ಕೊಂಬೆಯನ್ನು ಕತ್ತರಿಸು ವುದು, ಕೊಯ್ದು ನೋಡುವುದು ಹಾಗೂ ಕಳ್ಳತನ ಮಾಡುವುದು ಶಿಕ್ಷಾರ್ಹ ಅಪರಾಧ ವಾಗಿದೆ. ಇಂತಹ ಅಪರಾಧಿ ಕೃತ್ಯಗಳಲ್ಲಿ ತೊಡಗಿರುವವರನ್ನು ಶಿಕ್ಷೆಗೆ ಒಳಪಡಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಕಟ್ಟು ನಿಟ್ಟಿನ ಸೂಚನೆಗಳನ್ನು ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ “ಶ್ರೀಗಂಧದ ಮರಗಳ ರಕ್ಷಣೆ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುಮಾರು 750 ಎಕರೆ ಜಾಗದಲ್ಲಿ ರೈತರು “ಶ್ರೀಗಂಧ ವನ” ಕೃಷಿಯನ್ನು ಮಾಡಿ ೩ ಲಕ್ಷಕ್ಕೂ ಹೆಚ್ಚು ಮರಗಳನ್ನು ಬೆಳೆಸುತ್ತಿದ್ದಾರೆ. ಆ ರೈತರಿಗೆ ಕಾಡು ಪ್ರಾಣಿಗಳಾದ ಹಂದಿ, ಜಿಂಕೆ, ಕೋತಿ ಹಾಗೂ ನವಿಲುಗಳ ಕೂಡ ಒಂದೆಡೆಯಾದರೆ  ಶ್ರೀ ಗಂಧದ ಕಳ್ಳರ ಕಾಟದ ಭೀತಿಯು ಸಹ ಜಿಲ್ಲೆಯಲ್ಲಿದೆ. ರೈತರು ಬಹಳ ಶ್ರಮವಹಿಸಿ ಬೆಳೆಸಿದ ಗಂಧದ ಮರಗಳನ್ನು ಕಳ್ಳರು ರಾತ್ರೋರಾತ್ರಿ ಕತ್ತರಿಸಿಕೊಂಡು ಹೋಗುತ್ತಿರುವುದು ಜಿಲ್ಲಾ ಡಳಿತದ ಗಮನಕ್ಕೆ ಬಂದಿದೆ. ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವುವರನ್ನು ಪತ್ತೆ ಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.

ಇದನ್ನೂ ಓದಿ: Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ

ಶ್ರೀಗಂಧದ ಮರಗಳನ್ನು ಕತ್ತರಿಸಿ ಹೊರ ತೆಗೆಯಲು ಉದ್ದೇಶಿಸಿರುವ ಯಾವುದೇ ಮಾಲೀ ಕನು ಅಥವಾ ರೈತರು ಸಂಬಂಧಿತ ವಲಯ ಅರಣ್ಯ ಅಧಿಕಾರಿಗೆ ವಿವರ ನೀಡಿ ಕತ್ರಾವಣೆ ಮಾಡಬೇಕು. ಕತ್ರಾವಣೆ ಮಾಡಿ ತೆಗೆದ ಶ್ರೀಗಂಧವನ್ನು ರಾಜ್ಯ ಸರ್ಕಾರಕ್ಕೆ ಅಥವಾ ರಾಜ್ಯ ಸರ್ಕಾರವು ಅಧಿಸೂಚಿಸಿರುವ ಯಾವುದೇ ಉದ್ದಿಮೆಗೆ ಅಥವಾ ಸಂಸ್ಥೆಗೆ ಮಾರಾಟ ಮಾಡ ಬಹುದು. ಈ ಪ್ರಕ್ರಿಯೆಯ ಸಂದರ್ಭದಲ್ಲಿ ಸಮಂಜಸ ರೈತರು ದಾಖಲೆಗಳನ್ನು ಇಟ್ಟು ಕೊಳ್ಳಬೇಕು. ಈ ಎಲ್ಲ ಪ್ರಕ್ರಿಯೆಗಳಲ್ಲಿ ಸಂಬಂಧಪಟ್ಟವರನ್ನು ಬಿಟ್ಟು ಬೇರೆ ಯಾವುದೇ ವ್ಯಕ್ತಿಗಳು ಅಕ್ರಮವಾಗಿ ಭಾಗಿಯಾದಲ್ಲಿ ಕೂಡಲೆ ಕಾನೂನು ಕ್ರಮಕ್ಕೆ ಒಳಪಡಿಸಬೇಕು. ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಹಾಗೂ ಕಳ್ಳತನಕ್ಕೆ ಸಹಕಾರ ನೀಡಿದವರಿಗೆ mob ಕಾರ್ಡ್ ತೆಗೆಯಬೇಕು. ಅಂತಹವರ ಚಲನವಲನದ ಮೇಲೆ ನಿಗಾ ಇಡಬೇಕು. ಎರಡು ಸಲ ಕಳ್ಳತನ ಮಾಡಿದರೆ ಶಿಕ್ಷೆ ಪ್ರಮಾಣ ದ್ವಿಗುಣವಾಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಕಾಡ್ಗಿಚ್ಚು, ಬೆಂಕಿ, ನೆರೆ ಪ್ರವಾಹದಿಂದ ರೈತರು ಬೆಳೆದ ಶ್ರೀಗಂಧದ ಮರಗಳು ನಾಶವಾದಾಗ ರೈತರ  ನೆರವಿಗೆ ಸರ್ಕಾರ ದಾವಿಸಬೇಕು. ಸಹಾಯಧನ ಬೆಳೆಹಾನಿ ಪರಿಹಾರವನ್ನು ನೀಡ ಬೇಕು. ಶ್ರೀಗಂಧದ ಮರಗಳನ್ನು ಖಾಸಗಿ ಜಮೀನುಗಳಲ್ಲಿ ಬೆಳೆಯಲು ರೈತರನ್ನು ಪ್ರೋತ್ಸಾ ಹಿಸಬೇಕು, ತತ್ಸಬಂಧ ವೈಜ್ಞಾನಿಕ  ಕೃಷಿಜ್ಞಾನ, ಆರ್ಥಿಕ ಸಬಲೀಕರಣ, ಮಾರುಕಟ್ಟೆ ವ್ಯವಸ್ಥೆಯ ಬಗ್ಗೆ ಪರಿಪೂರ್ಣ ಮಾಹಿತಿಯನ್ನು ರೈತರಿಗೆ ನೀಡಬೇಕು. ಶ್ರೀಗಂಧದ ಕೃಷಿ ಮಾಡುವ ಜಮೀನಿಗೆ ಬೇಲಿ ನಿರ್ಮಿಸಿಕೊಳ್ಳಲು ತೋಟಗಾರಿಕೆ ಇಲಾಖೆಯಿಂದ ಸಹಾಯ ಧನ ನೀಡಬೇಕು.

ಶ್ರೀಗಂಧಕ್ಕೆ ಖ್ಯಾತಿಯಾಗಿರುವ ಕರ್ನಾಟಕದಲ್ಲಿ ಗಂಧದ ಕೃಷಿ ಮಾಡುವವರಿಗೆ ಇರುವ ಜೀವಂತ ಹಾಗೂ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗ ಬೇಕು ಎಂದು “ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘ”ಧ ಪದಾಧಿ ಕಾರಿಗಳು ಈ ವೇಳೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಕಳೆದ ಮಾರ್ಚ್-೧೪ ರಂದು ಜಿಲ್ಲೆಯ ಚೇಳೂರು ತಾಲೂಕಿನ ತುಳುವನೂರು ಗ್ರಾಮದ ರೈತ ಬಿ.ನರಸಿಂಹಪ್ಪ ಅವರ ಜಮೀನಿನಲ್ಲಿ ಅಗ್ನಿಅವಘಡದಿಂದಾಗಿ ೧೦ ಶ್ರೀಗಂಧದ ಮರಗಳು, ೫ ಮಾವಿನ ಮರಗಳು, ೪ ನೇರಳೆ ಮರಗಳು, ೫ ತೆಂಗಿನ ಮರಗಳು ಹಾಗೂ ಹುಲ್ಲಿನ ಬಣವೆ ನಾಶವಾಗಿರುವ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದು ನೆರವಿಗೆ ಧಾವಿಸ ಬೇಕು ಎಂದು ಮನವಿ ಮಾಡಲಾಯಿತು.

ಸಭೆಯಲ್ಲಿ ಉಪ ಪೊಲೀಸ್ ಅಧೀಕ್ಷಕ ಶಿವಕುಮಾರ, ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಪದಾಧಿಕಾರಿಗಳು, ಸದಸ್ಯರು, ರೈತರು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.