ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranji Trophy: ಪಂಜಾಬ್‌ ವಿರುದ್ಧ ದ್ವಿಶತಕ ಸಿಡಿಸಿದ ಕನ್ನಡಿಗ ಸ್ಮರಣ್‌ ರವಿಚಂದ್ರನ್‌!

ಕರ್ನಾಟಕ ತಂಡದ ಯುವ ಬ್ಯಾಟ್ಸ್‌ಮನ್‌ ಸ್ಮರಣ್‌ ರವಿಚಂದ್ರನ್‌ ಅವರು ಪಂಜಾಬ್‌ ವಿರುದ್ಧದ 2024-25ರ ಸಾಲಿನ ರಣಜಿ ಟ್ರೋಫಿ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ದ್ವಿಶತಕವನ್ನು ಸಿಡಿಸಿದ್ದಾರೆ. 277 ಎಸೆತಗಳನ್ನು ಆಡಿದ ಅವರು 203 ರನ್‌ಗಳನು ಕಲೆ ಹಾಕಿದ್ದಾರೆ.

ಪಂಜಾಬ್‌ ಎದುರು ಚೊಚ್ಚಲ ದ್ವಿತಕ ಸಿಡಿಸಿದ ಸ್ಮರಣ್‌ ರವಿಚಂದ್ರನ್‌!

Profile Ramesh Kote Jan 24, 2025 4:20 PM

ಬೆಂಗಳೂರು: ರೆಡ್‌ ಹಾಟ್‌ ಫಾರ್ಮ್‌ನಲ್ಲಿರುವ ಕರ್ನಾಟಕ ತಂಡದ ಯುವ ಬ್ಯಾಟ್ಸ್‌ಮನ್‌ ಸ್ಮರಣ್‌ ರವಿಚಂದ್ರನ್‌ ಅವರು ಪಂಜಾಬ್‌ ವಿರುದ್ಧ 2024-25ರ ಸಾಲಿನ ರಣಜಿ ಟ್ರೋಫಿ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದಾರೆ. ಆ ಮೂಲಕ ಕರ್ನಾಟಕ ತಂಡ 400ಕ್ಕೂ ಅಧಿಕ ರನ್‌ ಗಳಿಸಲು ನೆರವು ನೀಡಿದ್ದಾರೆ.

ಇಲ್ಲಿನ ಎಂ ಚಿನ್ನಸ್ವಾಮಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಪಂಜಾಬ್‌ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ ಸ್ಮರಣ್‌ ರವಿಚಂದ್ರನ್‌, ತಮ್ಮ ಕೌಶಲಭರಿತ ಆಟವನ್ನು ಆಡಿದರು. ಮಯಾಂಕ್‌ ಅಗರ್ವಾಲ್‌, ಅನೀಶ್‌, ದೇವದತ್‌ ಪಡಿಕ್ಕಲ್‌, ಕೃಷ್ಣನ್‌ ಶ್ರೀಜಿತ್‌ ಹಾಗೂ ಅಭಿನವ್‌ ಮನೋಹರ್‌ ಅವರು ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾದರು.

ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ಸ್ಮರಣ್‌, ಪಂಜಾಬ್‌ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಮೆಟ್ಟಿ ನಿಂತರು. ಒಟ್ಟು 277 ಎಸೆತಗಳನ್ನು ಆಡಿದ ಅವರು, 3 ಸಿಕ್ಸರ್‌ ಹಾಗೂ 25 ಬೌಂಡರಿಗಳೊಂದಿಗೆ 203 ರನ್‌ಗಳನ್ನು ಬಾರಿಸಿದರು. ಆ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಚೊಚ್ಚಲ ದ್ವಿಶತಕವನ್ನು ಪೂರ್ಣಗೊಳಿಸಿದ್ದಾರೆ.

Ranji Trophy: ಜಡೇಜಾ ಸ್ಪಿನ್‌ ಕಮಾಲ್‌; ಡೆಲ್ಲಿಗೆ 10 ವಿಕೆಟ್‌ ಸೋಲು

ಸ್ಮರಣ್‌ ರವಿಚಂದ್ರನ್‌ ಯಾರು?

ಪಂಜಾಬ್‌ ವಿರುದ್ಧ ದ್ವಿಶತಕ ಸಿಡಿಸಿದ‌ ಕರ್ನಾಟಕ ಸ್ಮರಣ್‌ ರವಿಚಂದ್ರನ್‌ ಅವರು ಈಗಷ್ಟೇ ಬೆಳಕಿಗೆ ಬಂದಿರುವ ಪ್ರತಿಭೆ. ಅವರು ಇಲ್ಲಿಯವರೆಗೂ 9 ಲಿಸ್ಟ್‌ ಎ ಪಂದ್ಯಗಳು ಹಾಗೂ 7 ಟಿ20 ಪಂದ್ಯಗಳನ್ನು ಆಡಿದ್ದಾರೆ. ಆ ಮೂಲಕ ಅವರು 600ಕ್ಕೂ ಅಧಿಕ ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಇದರಲ್ಲಿ ಅವರು ಮೂರು ಶತಕಗಳನ್ನು ಸಿಡಿಸಿದ್ದಾರೆ. ವಿದರ್ಭ ವಿರುದ್ಧ ವಿಜಯ್‌ ಹಝಾರೆ ಟ್ರೋಫಿ ಫೈನಲ್‌ ಪಂದ್ಯದಲ್ಲಿಯೂ ಸ್ಮರಣ್‌ ಶತಕ ಸಿಡಿಸಿದ್ದರು. ಆ ಮೂಲಕ ಕರ್ನಾಟಕ ತಂಡ ಚಾಂಪಿಯನ್‌ ಆಗಲು ನೆರವು ನೀಡಿದ್ದರು.



ಸಿಕೆ ನಾಯ್ಡು ಟ್ರೋಫಿಯಲ್ಲಿ 829 ರನ್‌

ಇದಕ್ಕೂ ಮುನ್ನ ಸ್ಮರಣ್‌ ರವಿಚಂದ್ರನ್‌, ಸಿಕೆ ನಾಯ್ಡು ಟ್ರೋಫಿ ಟೂರ್ನಿಯಲ್ಲಿ ಮಿಂಚಿದ್ದರು. ಈ ಟೂರ್ನಿಯಲ್ಲಿ ಅವರು 829 ರನ್‌ಗಳನ್ನು ಕಲೆ ಹಾಕಿದ್ದರು. ಇದಾದ ಬಳಿಕ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಅಜೇಯ ಶತಕವನ್ನು ಸಿಡಿಸಿದ್ದರು. ಅಂದ ಹಾಗೆ ಈ ಹಿಂದೆ ಕರ್ನಾಟಕ ಹಿರಿಯರ ತಂಡದಲ್ಲಿ ಸ್ಮರಣ್‌ ಅವರನ್ನು ನಿರಂತರವಾಗಿ ಕಡೆಗಣಿಸಲಾಗಿತ್ತು. ಆದರೆ, 2024-25ರ ಸಾಲಿನ ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಸಿಕ್ಕ ಅವಕಾಶವನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡರು. ಆ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು.

Ranji Trophy: ಕರ್ನಾಟಕದ ಬೌಲಿಂಗ್‌ ದಾಳಿಗೆ ತತ್ತರಿಸಿದ ಪಂಜಾಬ್‌; 55 ರನ್‌ಗೆ ಆಲೌಟ್‌

ಕರ್ನಾಟಕ ತಂಡಕ್ಕೆ ದೊಡ್ಡ ಮುನ್ನಡೆ

ಪಂಜಾಬ್‌ ತಂಡವನ್ನು ಪ್ರಥಮ ಇನಿಂಗ್ಸ್‌ನಲ್ಲಿ 55 ರನ್‌ಗಳಿಗೆ ಆಲ್‌ಔಟ್‌ ಮಾಡಿದ ಬಳಿಕ ಪ್ರಥಮ ಇನಿಂಗ್ಸ್‌ ಆರಂಭಿಸಿದ ಕರ್ನಟಕ ತಂಡ, ಸ್ಮರಣ್‌ ರವಿಚಂದ್ರನ್‌ (203 ರನ್‌) ಅವರ ದ್ವಿಶತಕದ ಬಲದಿಂದ 122.1 ಓವರ್‌ಗಳಿಗೆ 475 ರನ್‌ಗಳನ್ನು ಗಳಿಸಿ ಆಲ್‌ಔಟ್‌ ಆಯಿತು. ಆ ಮೂಲಕ ಕರ್ನಾಟಕ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 420 ರನ್‌ಗಳ ಬೃಹತ್‌ ಮುನ್ನಡೆಯನ್ನು ಪಡೆದಿದೆ.