Kolkata Horror: ಕೊಲ್ಕತ್ತಾ ವೈದ್ಯೆ ಕೊಲೆ ಕೇಸ್- ಅಪರಾಧಿ ಸಂಜಯ್ ಸಿಂಗ್‌ಗೆ ಶಿಕ್ಷೆ ಪ್ರಮಾಣ ಪ್ರಕಟ
ಕೊಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಸಂಜಯ್ ರಾಯ್‌ಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ಕೊಲ್ಕತ್ತಾ : ಕಳೆದ ವರ್ಷ ಕೊಲ್ಕತ್ತಾದ ಆರ್‌ಜಿಕರ್ (Kolkata Horror) ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಅಪರಾಧಿಗೆ ಸೆಷನ್ ಕೋರ್ಟ್ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ. ಸೀಲ್ದಾ ನ್ಯಾಯಾಲಯ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದು, ಅಪರಾಧಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ. ಅತ್ಯಾಚಾರ-ಕೊಲೆ ಮಾಡಿದ ಆರೋಪಿ ಸಂಜಯ್ ರಾಯ್ ತಪ್ಪಿತಸ್ಥ ಎಂದು ಕೋಲ್ಕತ್ತಾ ನ್ಯಾಯಾಲಯ ಶನಿವಾರ ಘೋಷಿಸಿತ್ತು. ಇದೀಗ ಪ್ರಕರಣದ ಕೂಲಂಕುಷ ತನಿಖೆ ಮಾಡಿದ ನ್ಯಾಯಮೂರ್ತಿ ಅನಿರ್ಬನ್ ದಾಸ್, ಅವರು ಶಿಕ್ಷೆ ವಿಧಿಸಿದ್ದಾರೆ(RG Kar College).
ಅತ್ಯಾಚಾರ ಎಸಗಿ ಕೊಲೆ ಮಾಡಿದ ಅಪರಾಧಿ ಸಂಜಯ್ ರಾಯ್‌ಗೆ ಸೋಮವಾರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ್ದು, ತರಬೇತಿ ವೈದ್ಯರ ಕುಟುಂಬಕ್ಕೆ 17 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ ಹೊರಡಿಸಿದೆ. ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಸಿಬಿಐ ಇದೊಂದು ಅಪರೂಪದಲ್ಲಿಯೇ ಅಪರೂಪವಾದ ಪ್ರಕರಣ ಎಂದು ಹೇಳಿತ್ತು. ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ನ್ಯಾಯಾಲಯವನ್ನು ಕೋರಿತ್ತು. ಆದರೆ ಇದು ಅಪರೂಪದ ಪ್ರಕರಣ ಅಲ್ಲಎಂದ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ಪ್ರಕಟ ಮಾಡಿದೆ.
ನ್ಯಾಯಾಧೀಶರಿಗೆ ಪ್ರತಿಕ್ರಿಯಿಸಿದ ಅಪರಾಧಿ ,ನಾನೇನೂ ಮಾಡಿಲ್ಲ ಮತ್ತು ತನ್ನನ್ನು ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ ಎಂದು ಆರೋಪಿಸಿದ್ದಾನೆ. ತನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಮತ್ತು ಚಿತ್ರಹಿಂಸೆ ನೀಡಲಾಗುತ್ತಿದೆ ಎಂದು ರಾಯ್ ಹೇಳಿದ್ದಾನೆ. ತೀರ್ಪು ಪ್ರಕಟವಾದ ನಂತರ ಸಂತ್ರಸ್ಥೆಯ ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಅವರು ಗಲ್ಲು ಶಿಕ್ಷೆ ಪ್ರಕಟ ಮಾಡಬೇಕೆಂದು ಪಟ್ಟು ಹಿಡಿದಿದ್ದರು ಹಾಗೂ ತಾವು ಯಾವುದೇ ರೀತಿಯ ಪರಿಹಾರ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ : Kolkata Horror : ಕೊನೆಗೂ ಸಿಕ್ಕಿತು ಕೊಲ್ಕತ್ತಾ ವೈದ್ಯೆಯ ಹತ್ಯೆಗೆ ನ್ಯಾಯ ; ಹಂತಕ ಸಂಜಯ್‌ರಾಯ್ ತಪ್ಪಿತಸ್ಥ ಎಂದು ತೀರ್ಪು
ಪ್ರಕರಣ ಏನು?
ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 2024 ಆಗಸ್ಟ್ 9 ರಂದು ರಾತ್ರಿ ಪಾಳಿಯಲ್ಲಿದ್ದ ಕಿರಿಯ ವೈದ್ಯೆಯ ಮೇಲೆ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿತ್ತು. ಮಹಿಳಾ ವೈದ್ಯೆಯ ಮೃತ ದೇಹವು ಗಾಯದ ಗುರುತುಗಳೊಂದಿಗೆ ಪತ್ತೆಯಾಗಿತ್ತು. ವೈದ್ಯೆಯ ಹತ್ಯೆಯನ್ನು ಖಂಡಿಸಿ ಇಡೀ ದೇಶದಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಆರ್‌ಜಿಕರ್ ಕಾಲೇಜಿನ ವೈದ್ಯರು ನಿರಂತರವಾಗಿ ಪ್ರತಿಭಟನೆ ನಡೆಸಿದ್ದರು. ಕೊಲ್ಕತ್ತಾ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಭಟನಾ ನಿರತರರ ಜೊತೆಗೆ ಮಾತನಾಡಿ ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡಿದ್ದರು.