ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಪ್ರಭು ಶ್ರೀರಾಮನ ಆಜ್ಞೆ ಮೀರಿದ ಲಕ್ಷ್ಮಣ

ಭಗವಾನ್ ವಿಷ್ಣುವಿನ ಅವತಾರಗಳು ಸಾಮಾನ್ಯ ಮತ್ತು ಸಾವನ್ನು ಮೀರಿ ನಿಂತಿರುತ್ತದೆ. ಭಗವಾನ್ ಶ್ರೀರಾಮನು ಸರಯು ನದಿಯನ್ನು ಪ್ರವೇಶಿಸಿ ಅಲ್ಲಿಂದ ವೈಕುಂಠಕ್ಕೆ ತೆರಳಿದ ನೆಂಬ ಪ್ರತೀತಿಯಿದೆ. ಪದ್ಮ ಪುರಾಣವು ಭಗವಾನ್ ರಾಮನ ಸಾವಿನ ಬಗ್ಗೆ ವಿವರಿಸಲು ಪ್ರಯತ್ನಿಸಿದೆ.

ಪ್ರಭು ಶ್ರೀರಾಮನ ಆಜ್ಞೆ ಮೀರಿದ ಲಕ್ಷ್ಮಣ

ಒಂದೊಳ್ಳೆ ಮಾತು

rgururaj628@gmail.com

ಭಗವಾನ್ ಶ್ರೀರಾಮಚಂದ್ರ ಹಲವಾರು ಅಗ್ನಿಪರೀಕ್ಷೆ ಮತ್ತು ಸಂಕಷ್ಟಗಳನ್ನು ಎದುರಿಸಿ ಅಂತಿಮವಾಗಿ ಧರ್ಮ ಸ್ಥಾಪಿಸುವ ತನ್ನ ಗುರಿಯಲ್ಲಿ ಯಶಸ್ವಿಯಾದ. ಧರ್ಮದ ಮಾರ್ಗ ದಲ್ಲಿ ಸಾಗಿರುವುದು ಮತ್ತು ಒಳ್ಳೆಯ ಮಾರ್ಗದಲ್ಲೇ ಮುನ್ನಡೆದಿದ್ದರಿಂದ ಆತನನ್ನು ಪರಿಪೂರ್ಣ ವ್ಯಕ್ತಿಯೆಂದು ಕರೆಯಲಾಗುತ್ತದೆ. ತನ್ನ ಜೀವನದಲ್ಲಿ ರಾಮ ಎದುರಿಸಿದ ಹಲವಾರು ಅಗ್ನಿ ಪರೀಕ್ಷೆಗಳ ಹಾಗೂ ಜೀವನದ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಆದರೆ ಭಗವಾನ್ ರಾಮನ ಸಾವಿನ ಬಗ್ಗೆ ಮಾತ್ರ ಪ್ರಶ್ನೆಗಳು ಹಾಗೆ ಉಳಿದುಕೊಂಡಿದೆ. ಹಿಂದೂ ಧರ್ಮದಲ್ಲಿ ಉಲ್ಲೇಖಿಸಿರುವಂತೆ ಭಗವಾನ್ ರಾಮನನ್ನು ವಿಷ್ಣುವಿನ ಅವತಾರವೆನ್ನ ಲಾಗಿದೆ.

ಭಗವಾನ್ ವಿಷ್ಣುವಿನ ಅವತಾರಗಳು ಸಾಮಾನ್ಯ ಮತ್ತು ಸಾವನ್ನು ಮೀರಿ ನಿಂತಿರುತ್ತದೆ. ಭಗವಾನ್ ಶ್ರೀರಾಮನು ಸರಯು ನದಿಯನ್ನು ಪ್ರವೇಶಿಸಿ ಅಲ್ಲಿಂದ ವೈಕುಂಠಕ್ಕೆ ತೆರಳಿದ ನೆಂಬ ಪ್ರತೀತಿಯಿದೆ. ಪದ್ಮ ಪುರಾಣವು ಭಗವಾನ್ ರಾಮನ ಸಾವಿನ ಬಗ್ಗೆ ವಿವರಿಸಲು ಪ್ರಯತ್ನಿಸಿದೆ.

ಭಗವಾನ್ ರಾಮ ಸುಮಾರು 11000 ವರ್ಷಗಳ ಕಾಲ ರಾಜ್ಯಭಾರ ಮಾಡಿದನೆಂದು ನಂಬಲಾಗಿದೆ. ಆತನ ಮುಖ್ಯ ಧ್ಯೇಯವೆಂದರೆ ಧರ್ಮ ಸ್ಥಾಪನೆ ಅಥವಾ ಜನರಿಗೆ ಸುಖ ಸಮೃದ್ಧಿಯನ್ನು ನೀಡುವುದಾಗಿತ್ತು. ರಾಮನ ಬಳಿಕ ಆತನ ಮಕ್ಕಳಾದ ಲವ ಮತ್ತು ಕುಶ ತಂದೆಯ ಧ್ಯೇಯದೊಂದಿಗೆ ರಾಜ್ಯಭಾರ ಮಾಡಿದರು. ರಾಮನ ಆಳ್ವಿಕೆ ಬಳಿಕ ರಾಮನ ಪತ್ನಿ ಸೀತಾ ದೇವಿಯನ್ನು ಭೂತಾಯಿ ತನ್ನೊಳಗೆ ಸೆಳೆದುಕೊಂಡಳೆಂದು ನಂಬಲಾಗಿದೆ.

ಇದನ್ನೂ ಓದಿ: Roopa Gururaj Column: ರಾಮನ ನಡೆ ಚೆಂದ, ಕೃಷ್ಣನ ನುಡಿ ಚೆಂದ

ಈಗ ಕೆಲವೊಂದು ಅಚ್ಚರಿಯ ವಿಷಯಗಳು ಇಲ್ಲಿವೆ. ಒಂದು ದಿನ ರಾಮನಲ್ಲಿ ಅತೀ ಮಹತ್ವದ ವಿಷಯವೊಂದನ್ನು ತುಂಬಾ ಖಾಸಗಿಯಾಗಿ ಮಾತನಾಡಬೇಕಿದೆಯೆಂದು ಋಷಿಯೊಬ್ಬರು ಹೇಳಿದರು. ಋಷಿಯೊಂದಿಗೆ ಕೋಣೆಯೊಂದರೊಳಗೆ ತೆರಳಿದ ರಾಮ, ಕೋಣೆಗೆ ಕಾವಲು ಕಾಯುವಂತೆ ಮತ್ತು ಯಾವುದೇ ಆತ್ಮವೂ ಇದರೊಳಗೆ ಪ್ರವೇಶಿಸದಂತೆ ರಕ್ಷಣೆ ನೀಡಬೇಕೆಂದು ತಮ್ಮನಾದ ಲಕ್ಷ್ಮಣನಿಗೆ ಆದೇಶಿಸಿದ್ದ.

ಋಷಿಯೊಂದಿಗೆ ಭಗವಾನ್ ರಾಮ ನಡೆಸಿದ ಮಾತುಕತೆಯು ಆತನ ಅಂತಿಮ ಮಾತುಕತೆ ಎನ್ನಲಾಗಿದೆ. ಸಮಯವು ಋಷಿಯ ರೂಪದಲ್ಲಿ ಬಂದು ರಾಮನೊಂದಿಗೆ ಮಾತನಾಡಿತ್ತು. ಭೂಮಿ ಮೇಲೆ ನಿನ್ನ ಕಾರ್ಯವು ಮುಗಿದಿದೆ ಮತ್ತು ವೈಕುಂಠಕ್ಕೆ ತೆರಳುವ ಸಮಯ ಬಂದಿದೆ ಎಂದು ಋಷಿ ಹೇಳುತ್ತಾನೆ.

ನೀನು (ಭಗವಾನ್ ರಾಮ) ದೈವಿ ಶಕ್ತಿಯೆಂದು ಋಷಿ ರಾಮನಿಗೆ ತಿಳಿಸುತ್ತಾನೆ. ಈ ಸಮಯ ದಲ್ಲಿ ತುಂಬಾ ಕೋಪಿಷ್ಠನಾಗಿರುವ ದುರ್ವಾಸ ಮುನಿಯು ರಾಮನನ್ನು ಭೇಟಿಯಾಗಲು ಬಯಸುತ್ತಾನೆ. ಲಕ್ಷ್ಮಣ ಇದಕ್ಕೆ ನಿರಾಕರಿಸಿದಾಗ ಸಂಪೂರ್ಣ ಅಯೋಧ್ಯೆ ನಗರಕ್ಕೆ ಶಾಪ ಹಾಕುತ್ತಾರೆ.

ಅಯೋಧ್ಯೆಯ ಜನರನ್ನು ರಕ್ಷಿಸುವ ಸಲುವಾಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಲಕ್ಷ್ಮಣ ದುರ್ವಾಸ ಮುನಿಯನ್ನು ಎದುರಿಸಲು ನಿರ್ಧರಿಸುತ್ತಾನೆ. ಅಯೋಧ್ಯೆಯ ಜನರ ರಕ್ಷಣೆಗಾಗಿ ಲಕ್ಷ್ಮಣನು ಯಾವುದೇ ರೀತಿಯ ಶಿಕ್ಷೆಯನ್ನು ಎದುರಿಸಲು ಸಜ್ಜಾಗುತ್ತಾನೆ.

ಲಕ್ಷ್ಮಣನು ಶೇಷನಾಗನ ರೂಪವಾಗಿದ್ದನು, ಅಂತೆಯೇ ವಿಷ್ಣುವಿನ ಅವತಾರ ಶ್ರೀರಾಮನು ನಿರ್ಗಮಿಸುವ ಮೊದಲು ಅವನು ತೆರಳಬೇಕಾಗಿತ್ತು. ಅಂತೆಯೇ ಲಕ್ಷ್ಮಣನು ಜಲ ಸಮಾಧಿ ಯನ್ನು ತೆಗೆದುಕೊಂಡು ತನ್ನ ಮಾನವ ದೇಹವನ್ನು ತ್ಯಜಿಸಿ ಶೇಷನಾಗನ ರೂಪವನ್ನು ಪಡೆದನು.

ಪ್ರಭು ಶ್ರೀರಾಮನು ತನ್ನ ಮಿಕ್ಕ ಸಹೋದರರಿಗೆ ರಾಜ್ಯವನ್ನು ಹಂಚಿದನು. ತನ್ನ ಪುತ್ರ ಲವನನ್ನು ಲುವಪುರಿಯ ರಾಜನನ್ನಾಗಿ ಮಾಡಿದನು ಮತ್ತು ಕುಶನಿಗೆ ಅಯೋಧ್ಯಾ ನಗರದ ಸಿಂಹಾಸನವನ್ನು ನೀಡಿದನು. ಇದಾದ ನಂತರ, ಶ್ರೀ ರಾಮ ಜನಸಮಾಧಿಯಾಗಲು ಸರಯು ನದಿಯ ಕಡೆಗೆ ನಡೆಯಲು ಪ್ರಾರಂಭಿಸಿದನು.

ಶ್ರೀರಾಮನು ಜಲ ಸಮಾಧಿಯನ್ನು ಪಡೆದು ಮಾನವ ದೇಹವನ್ನು ತ್ಯಜಿಸಿ ವಿಷ್ಣುವಿನ ರೂಪವನ್ನು ಪಡೆದು ವೈಕುಂಠಕ್ಕೆ ತೆರಳಿದನು. ಕಾಲನ ಕರೆಗೆ ಒಗೊಟ್ಟು ಎಲ್ಲರೂ ಒಂದಲ್ಲ ಒಂದು ದಿನ ನಡೆಯಲೇಬೇಕು, ಇದಕ್ಕೆ ಪ್ರಭು ಶ್ರೀ ರಾಮ ಲಕ್ಷ್ಮಣರೇ ಹೊರತಲ್ಲ. ಅಂತೆಯೇ ಇರುವಷ್ಟು ದಿನ ಉತ್ತಮ ಆಚರಣೆಗಳಿಂದ, ನಾಲ್ಕು ಜನರಿಗೆ ಉಪಯೋಗವಾಗುವಂತೆ ಬದುಕು ನಡೆಸೋಣ. ಶ್ರೀ ರಾಮನ ಬದುಕು, ಆದರ್ಶ ನಮ್ಮೆಲ್ಲರಿಗೂ ಮಾದರಿಯಾಗಲಿಜೈ ಶ್ರೀ ರಾಮ್.