ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ರಾಮನ ನಡೆ ಚೆಂದ, ಕೃಷ್ಣನ ನುಡಿ ಚೆಂದ

ರಾಮ ಶುಕ್ಲಪಕ್ಷವಾದರೆ, ಕೃಷ್ಣ ಕೃಷ್ಣಪಕ್ಷ. ರಾಮನ ಬದುಕು ತೆರೆದಿಟ್ಟ ಪುಸ್ತಕವಾದರೆ, ಕೃಷ್ಣ ನದ್ದು ರಹಸ್ಯ, ನಿಗೂಢ. ರಾಮ ಏಕಪತ್ನಿ ವ್ರತಸ್ಥ. ಕೃಷ್ಣ 16108 ಪತ್ನಿಯರ ವಲ್ಲಭ. ರಾಮ ಮರ್ಯಾದಾ ಪುರುಷೋತ್ತಮ. ಕೃಷ್ಣಲೀಲಾ ಪುರುಷೋತ್ತಮ. ರಾಮನ ಆಗಮನಕ್ಕೆ ವಿಶ್ವವೇ ಕಾತರಿಸಿತ್ತು.

ರಾಮನ ನಡೆ ಚೆಂದ, ಕೃಷ್ಣನ ನುಡಿ ಚೆಂದ

ಒಂದೊಳ್ಳೆ ಮಾತು

rgururaj628@gmail.com

ರಾಮ, ಕೃಷ್ಣರು ಆದರ್ಶ ಪುರುಷೋತ್ತಮರು. ನಾವು ಹೇಗಿರಬೇಕೆಂದು ಮರ್ಯಾದಾ ಪುರುಷೋತ್ತಮ ಶ್ರೀರಾಮ ಬದುಕಿನ ಮೂಲಕ ಹೇಳಿದ್ದಾನೆ. ಶ್ರೀ. ಕೃಷ್ಣ ನುಡಿದ ‘ಭಗವ ದ್ಗೀತೆ’ ಯಂತೆ, ಶ್ರೀ ರಾಮ ನಡೆದು ತೋರಿಸಿದ. ಅದಕ್ಕಾಗಿಯೇ ಹಿರಿಯರು ಹೇಳಿರುವುದು ರಾಮನ ನಡೆ ಚೆಂದ, ಕೃಷ್ಣನ ನುಡಿ ಚಂದ. ರಾಮನ ಜನನ ನಡು ಮಧ್ಯಾಹ್ನವಾದರೆ, ಕೃಷ್ಣನ ಜನನ ನಡುರಾತ್ರಿ. ಬೇಸಿಗೆ ಕಾಲದಲ್ಲಿ ಅರಮನೆಯಲ್ಲಿ ರಾಮ ಜನಿಸಿದರೆ, ಭೋರ್ಗ ರೆಯುವ ಮಳೆಗಾಲದಲ್ಲಿ ಸೆರೆಮನೆಯಲ್ಲಿ ಕೃಷ್ಣನ ಜನನ. ರಾಮ ಹಿರಿಯ ಮಗನಾದರೆ, ಕೃಷ್ಣ ಕೊನೆಯ ಎಂಟನೆಯವ.

ರಾಮ ಶುಕ್ಲಪಕ್ಷವಾದರೆ, ಕೃಷ್ಣ ಕೃಷ್ಣಪಕ್ಷ. ರಾಮನ ಬದುಕು ತೆರೆದಿಟ್ಟ ಪುಸ್ತಕವಾದರೆ, ಕೃಷ್ಣನದ್ದು ರಹಸ್ಯ, ನಿಗೂಢ. ರಾಮ ಏಕಪತ್ನಿ ವ್ರತಸ್ಥ. ಕೃಷ್ಣ 16108 ಪತ್ನಿಯರ ವಲ್ಲಭ. ರಾಮ ಮರ್ಯಾದಾ ಪುರುಷೋತ್ತಮ. ಕೃಷ್ಣ ಲೀಲಾ ಪುರುಷೋತ್ತಮ. ರಾಮನ ಆಗಮನಕ್ಕೆ ವಿಶ್ವವೇ ಕಾತರಿಸಿತ್ತು.

ಇದನ್ನೂ ಓದಿ: Roopa Gururaj Column: ಮಾಡಿದ ದಾನದ ಬಗ್ಗೆ ಡಂಗುರ ಬೇಡ

ರಾಮ ಎಂಬ ಶಬ್ದಕ್ಕೆ ಆಡು, ಆಟವಾಡು ಎಂಬ ಅರ್ಥ. ನಾವು ಪ್ರವಾಸಕ್ಕೆ ಹೋಗುವಾಗ ಹೇಗೆ ತಮ್ಮ ಸರಂಜಾಮಗಳನ್ನು ಹೊತ್ತೊಯ್ಯುತ್ತೇವೋ ರಾಮ ಭೂಲೋಕಕ್ಕೆ ಬರುವಾಗಲೇ ಎಲ್ಲಾ ವಿಷಯಗಳನ್ನು ಹೊತ್ತುತಂದಿದ್ದ. ಧೈರ್ಯ, ಕರ್ತವ್ಯನಿಷ್ಠೆ, ಮಾತಾ ಪಿತೃವಾಕ್ಯ ಪರಿಪಾಲನೆ, ರಾಜ್ಯಾಡಳಿತ, ಪ್ರಜಾಪರಿಪಾಲನೆ, ಕರ್ತವ್ಯ, ಗೌರವ, ಏಕಪತ್ನೀ ವ್ರತ, ಸೋದರ ಪ್ರೇಮ ಹೀಗೇ ಅನೇಕ ವಿಚಾರದಲ್ಲಿ ಸರ್ವ ಕಾಲಕ್ಕೂ ರಾಮಚರಿತೆ ಅತ್ಯಮೂಲ್ಯ ಕೊಡುಗೆಯಾಗಿದೆ! ಪಾವನರನ್ನು ಪಾವನಗೊಳಿಸಲು ಜನರಿದ್ದಾರೆ. ಪತೀ ತರನ್ನು ಪಾವನ ಮಾಡಲು ರಾಮನಿದ್ದಾನೆ.

ಯುದ್ಧವೇ ಮಾಡದೆ ಪಾಂಡವರಿಗೆ ಜಯತಂದುಕೊಟ್ಟಿದ್ದ ಶ್ರೀಕೃಷ್ಣ! ಮಹಾಭಾರತದಲ್ಲಿ ಶ್ರೀಕೃಷ್ಣನ ನಡೆ ಇಂದಿಗೂ ಪ್ರೇರಣೀಯ! ನ್ಯಾಯ ನೀತಿಯನ್ನು ಪಾಲಿಸುತ್ತಿದ್ದಂತೆಯೇ, ಚತುರತೆಯೂ ಕೂಡ ಯುದ್ಧವನ್ನು ಗೆಲ್ಲಲು ಅವಶ್ಯಕ ಎಂಬುದನ್ನು ಕೃಷ್ಣನು ತನ್ನ ನುಡಿ ಗಳಿಂದ ಹಲವಾರು ಬಾರಿ ನಿರೂಪಿಸಿದ್ದಾನೆ.

ಆದ್ದರಿಂದಲೇ ಕೃಷ್ಣನನ್ನು ರಾಜಕೀಯ ಚತುರ ಎಂದು ಇತಿಹಾಸವು ನೆನಪಿಸಿಕೊಳ್ಳುತ್ತದೆ. ಇಂದಿನ ರಾಜಕೀಯವನ್ನು ಗಮನಿಸುವಾಗಲೂ ಹಲವು ಬಾರಿ ಕೃಷ್ಣನ ಜಾಣ ನಡೆಗಳು ನಮಗೆ ಕಾಣಿಸುತ್ತದೆ.

ರಾಮ, ಕಷ್ಣ ಒಂದೇ ದೇವರ ಅವತಾರವಾದರೂ ಅವರ ನಡೆ ನುಡಿಗಳಲ್ಲಿ ವ್ಯತ್ಯಾಸವಿದೆ. ರಾಮನ ನಡೆ ಚೆಂದ ಕೃಷ್ಣನ ನುಡಿ ಚಂದ. ಕೃಷ್ಣ ನುಡಿದಂತೆ ನುಡಿದಾಗ, ರಾಮ ನಡೆ ದಂತೆ ನಡೆದಾಗ ಜಗವ ಗೆಲ್ಲುವ ಹಾದಿ ಸುಗಮವಾಗುತ್ತದೆ.

ರಾಮ ಕೃಷ್ಣರ ಬಗೆಗಿನ ಈ ಮಾತುಗಳು ನಮಗೆ ಜೀವನಕ್ಕೆ ಪ್ರೇರಣೆಯಾಗಿವೆ. ಭಾರತೀಯ ಧರ್ಮ ಮತ್ತು ಪೌರಾಣಿಕ ಪ್ರತಿಮೆಗಳ ಐತಿಹ್ಯವೇ ಅಂತದ್ದು. ಹುಟ್ಟಿನಿಂದ ಸಾವಿನ ವರೆಗೂ ನಮ್ಮನ್ನು ಒಂದೊಳ್ಳೆ ಮಾರ್ಗದಲ್ಲಿ ನಡೆಸುವ ಅನೇಕ ಜೀವನ ಪಾಠಗಳನ್ನು ಭಗವಂತನ ಹಲವಾರು ರೂಪಗಳ ಮೂಲಕ, ಅವನ ಕಥಾನಕಗಳ ಮೂಲಕ ಮನದಟ್ಟು ಮಾಡುವಂಥದ್ದು.

ಒಮ್ಮೆ ಯೋಚಿಸಿ ನೋಡಿ, ವಿದೇಶಗಳಲ್ಲಿ ಯಾವುದೇ ಧರ್ಮದ ಹಿನ್ನೆಲೆ ಇಲ್ಲದೆ ಹುಟ್ಟಿ ಕೊಂಡ ಜನಾಂಗಗಳು ಈಗಾಗಲೇ ಮಾನಸಿಕ ಸ್ಮಿತವನ್ನೇ ಕಳೆದುಕೊಂಡು, ಖಿನ್ನತೆ, ಆತಂಕ, ಅಸಮಾಧಾನ ಹೀಗೆ ನಾನಾ ರೀತಿಯ ಮಾನಸಿಕ ಗೊಂದಲಕ್ಕೆ ಒಳಗಾಗಿ ಹೈರಾಣಾಗಿದ್ದಾರೆ.

ನಮಗೆ ಅದೆಂಥ ಪರಿಸ್ಥಿತಿಯಲ್ಲೂ ನಮ್ಮನ್ನು ಕೈಹಿಡಿದು ನಡೆಸುವ ದಾರಿ ತೋರುವ ಧಾರ್ಮಿಕ ಗ್ರಂಥಗಳಿವೆ, ರಾಮಾಯಣ, ಮಹಾಭಾರತ, ಭಾಗವತದಂತಹ ಅನೇಕ ಕೃತಿಗಳು ಜೀವನದ ಪ್ರತಿಯೊಂದು ಘಟನೆಗೂ ಕೂಡ ಸಮೀಕರಿಸಿಕೊಳ್ಳಬಹುದಾದಂತಹ ದೈವಿಕ ಬರಹಗಳು.

ಯಾವುದೇ ಕ್ಷಣದಲ್ಲಿ ನೀವು ಇಂತಹ ಯಾವ ಗ್ರಂಥವನ್ನು ತೆಗೆದು ಓದಲು ಪ್ರಾರಂಭಿಸಿ ದರೂ, ಮನಸ್ಸಿಗೆ ಸಾಂತ್ವನ ನೀಡುವ, ಜೀವಕ್ಕೆ ಧೈರ್ಯ ನೀಡುವ , ಬದುಕಿಗೊಂದು ದಾರಿ ನೀಡುವ ಅನೇಕ ವಿಷಯಗಳು ನಮಗಿಲ್ಲಿ ಗೋಚರವಾಗುತ್ತಾ ಹೋಗುತ್ತವೆ. ಇವುಗಳನ್ನ ಮನೆ ಮನೆಯಲ್ಲಿ ನಾವು ಪಠಿಸುತ್ತೇವೆ, ಗುರುವಿನಂತೆ ಮನೆಯ ಹಿರಿಯಂತೆ ಇವು ನಮಗೆ ದಾರಿ ತೋರುತ್ತವೆ.

ಆದ್ದರಿಂದಲೇ ನಾವು ನಮ್ಮ ಮಕ್ಕಳಿಗೆ ಕೊಡಬಹುದಾದ ಅತಿ ದೊಡ್ಡ ಕಾಣಿಕೆ ಎಂದರೆ ನಮ್ಮ ಸನಾತನ ಧರ್ಮ ಆಚರಣೆ ಮತ್ತು ಅದರ ಮಹತ್ವವನ್ನು ಅವರಿಗೆ ತಿಳಿ ಹೇಳಿ ಅವರೂ ಅದನ್ನು ಆಚರಿಸುವಂತೆ ಪ್ರೋತ್ಸಾಹಿಸುವುದು.