Vishwavani Editorial: ಅತ್ಯಾಚಾರಿಗಳಿಗೆ ಶಿಕ್ಷೆಯಾಗಲಿ
ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ ವರದಿಯಾದ ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣವು ಶೇ. 0.36ರಷ್ಟಿದೆ. ಸಾಕ್ಷಾಧಾರಗಳ ಕೊರತೆ, ತನಿಖೆ ಹಾಗೂ ವಿಚಾರಣೆ ವಿಳಂಬವಾಗುವುದು ಇದಕ್ಕೆ ಕಾರಣ ಎನ್ನಲಾಗಿದೆ. ಲಭ್ಯ ಮಾಹಿತಿ ಪ್ರಕಾರ 2023ರಿಂದ 2025ರ ಫೆಬ್ರವರಿವರೆಗೆ ರಾಜ್ಯದಲ್ಲಿ 1460 ಅತ್ಯಾಚಾರ ಪ್ರಕರಣಗಳು ನಡೆದಿವೆ.


ರಾಜ್ಯದಲ್ಲಿ ಪ್ರತಿದಿನ ಸರಾಸರಿ ಒಬ್ಬರು ಇಲ್ಲವೇ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಗಳು ದಾಖಲಾಗುತ್ತಿವೆ. ಆದರೆ ಇವು ನ್ಯಾಯಾಲಯದಲ್ಲಿ ಸಾಬೀತಾಗಿ ಶಿಕ್ಷೆಗೊಳಗಾಗು ವವರ ಸಂಖ್ಯೆ ಕಡಿಮೆ. ಅತ್ಯಾಚಾರದಂಥ ಪೈಶಾಚಿಕ ಘಟನೆಗಳಲ್ಲಿ ನ್ಯಾಯಾಲಯದೆದುರು ಪದೇ ಪದೆ ಹಾಜರಾಗಿ ಸಾಕ್ಷಿ ನುಡಿಯುವುದು ಸಂತ್ರಸ್ತ ಮಹಿಳೆಗೆ ಅತ್ಯಾಚಾರಕ್ಕೆ ಸಮಾನವಾದ ಇನ್ನೊಂ ದು ಪೀಡನೆ ಎಂದರೆ ತಪ್ಪಾಗಲಾರದು. ಸಾಂದರ್ಭಿಕ ಸಾಕ್ಷಿ ಮತ್ತು ದಾಖಲೆಗಳನ್ನು ಆಧರಿಸಿ ತೀರ್ಪು ನೀಡುವ ನ್ಯಾಯಾಧೀಶರು ಕೂಡ ಈ ವಿಷಯದಲ್ಲಿ ನಿಸ್ಸಹಾಯಕರು. ಕರ್ನಾಟಕದ ಚಾರಿತ್ರಿಕ ತಾಣ ಹಂಪಿಯಲ್ಲಿ ಇತ್ತೀಚೆಗೆ ವಿದೇಶಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆದಿದ್ದು ದೇಶಾದ್ಯಂತ ಸುದ್ದಿ ಮಾಡಿದೆ. ಈ ಪ್ರಕರಣದಲ್ಲಿ ಆಕೆ ಭಾರತದಲ್ಲಿದ್ದುಕೊಂಡು ಆರೋಪಿಗಳ ವಿರುದ್ಧ ಸಾಕ್ಷಿ ಹೇಳುವುದು ಕಷ್ಟದ ಕೆಲಸ.
ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ ವರದಿಯಾದ ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣವು ಶೇ. 0.36ರಷ್ಟಿದೆ. ಸಾಕ್ಷಾಧಾರಗಳ ಕೊರತೆ, ತನಿಖೆ ಹಾಗೂ ವಿಚಾರಣೆ ವಿಳಂಬವಾಗುವುದು ಇದಕ್ಕೆ ಕಾರಣ ಎನ್ನಲಾಗಿದೆ. ಲಭ್ಯ ಮಾಹಿತಿ ಪ್ರಕಾರ 2023ರಿಂದ 2025ರ ಫೆಬ್ರವರಿವರೆಗೆ ರಾಜ್ಯದಲ್ಲಿ 1460 ಅತ್ಯಾಚಾರ ಪ್ರಕರಣಗಳು ನಡೆದಿವೆ.
ಇದನ್ನೂ ಓದಿ: Vishwavani Editorial: ತಂದೆ-ತಾಯಿ ಕಡೆಗಣನೆ ಕಳವಳಕಾರಿ
ಇದರಲ್ಲಿ 1662 ಆರೋಪಿಗಳ ಬಂಧನ ಆಗಿದೆ. ಆದರೆ ಶಿಕ್ಷೆಯ ಪ್ರಮಾಣ ಮಾತ್ರ ಶೂನ್ಯ. ರಾಜ್ಯದಲ್ಲಿ 2022ರಿಂದ 2024ರ ಅಕ್ಟೋಬರ್ ವರೆಗೆ ದಾಖಲಾದ 1673 ಅತ್ಯಾಚಾರ ಪ್ರಕರಣಗಳಲ್ಲಿ 6 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದ್ದು, 74 ಪ್ರಕರಣಗಳು ಖುಲಾಸೆಗೊಂಡಿವೆ. 1200ಕ್ಕೂ ಹೆಚ್ಚು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. 108 ಪ್ರಕರಣಗಳು ಸುಳ್ಳು ಎಂಬುದು ತನಿಖೆ ವೇಳೆ ಗೊತ್ತಾಗಿದೆ. ರಾಜ್ಯದಲ್ಲಿ ನಡೆದ ಈ ಹೀನ ಪ್ರಕರಣಗಳಲ್ಲಿ 300ಕ್ಕೂ ಹೆಚ್ಚು ಕೃತ್ಯಗಳು ಪರಿಚಿತರಿಂದಲೇ ನಡೆದಿದೆ.
ಅತ್ಯಾಚಾರ ಆದ 24 ಗಂಟೆಗಳ ಒಳಗಾಗಿ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ಆಗಬೇಕು. ಘಟನೆ ಸ್ಥಳದಲ್ಲಿ ವಿಧಿವಿಜ್ಞಾನ ತಂಡ ಸಾಕ್ಷ್ಯಾಧಾರ ಸಂಗ್ರಹಿಸಬೇಕು. ನ್ಯಾಯಾಧೀಶರ ಮುಂದೆ ಸಂತ್ರಸ್ತೆ ಯ ಹೇಳಿಕೆ ದಾಖಲಿಸಬೇಕು. ಆದರೆ, ಬಹುತೇಕ ಪ್ರಕರಣಗಳಲ್ಲಿ ತನಿಖಾ ತಂಡಗಳು ಸೂಕ್ತ ಸಾಕ್ಷ್ಯಾ ಧಾರಗಳನ್ನು ಕಲೆಹಾಕುವಲ್ಲಿ ವಿಫಲವಾಗುತ್ತವೆ. ಈ ನಿಟ್ಟಿನಲ್ಲಿ ನಮ್ಮ ಪೊಲೀಸರ ತನಿಖಾ ಗುಣ ಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕಾಗಿದೆ.