#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Mahakumbh Fire: ಮಹಾ ಕುಂಭಮೇಳದಲ್ಲಿ ಬೆಂಕಿ ಅವಘಡ; ಸಾಧುಗಳಿಗೆ ಸುಟ್ಟ ಗಾಯ

ಪ್ರಯಾಗರಾಜ್​ನ ಚಟ್ನಾಗ್ ಘಾಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಬೆಂಕಿಯ ಅವಘಡ ಸಂಭವಿಸಿದೆ. ಟೆಂಟ್​ಗಳಲ್ಲಿ ಇಂದು ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ಸಿಕ್ಕ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿರುವ ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ. ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಹೇಳಲಾಗಿದೆ. ಆದರೆ ಕೆಲವು ಸಾಧುಗಳಿಗೆ ಸುಟ್ಟ ಗಾಯಗಳಾಗಿರುವುದು ತಿಳಿದು ಬಂದಿದೆ.

ಕುಂಭಮೇಳದಲ್ಲಿ ಮತ್ತೊಂದು ಬೆಂಕಿ ಅವಘಡ; ಸಾಧುಗಳಿಗೆ ಸುಟ್ಟ ಗಾಯ

Mahakumbh Fire

Profile Deekshith Nair Jan 30, 2025 6:03 PM

ಲಖನೌ: ಮಹಾ ಕುಂಭಮೇಳದಲ್ಲಿ ಬುಧವಾರ ಕಾಲ್ತುಳಿತದಿಂದಾಗಿ ಸಾಕಷ್ಟು ಜನರು ದುರ್ಮರಣ ಹೊಂದಿದ್ದರು. ಅಲ್ಲಿ ಆಗಿಂದಾಗ್ಗೆ ಬೆಂಕಿ ಅವಘಡಗಳೂ ಸಂಭವಿಸುತ್ತಿವೆ. ಮೊನ್ನೆಯಷ್ಟೇ ಟೆಂಟ್‌ನಲ್ಲಿ ಬೆಂಕಿ ಹೊತ್ತಿಕೊಂಡು ವಾಹನಗಳು ಸುಟ್ಟು ಕರಕಲಾಗಿದ್ದವು. ಇಂದು (ಜ. 30) ಪ್ರಯಾಗ್‌ರಾಜ್​ನ(Prayagraj) ಚಟ್ನಾಗ್ ಘಾಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಬೆಂಕಿ(Mahakumbh Fire) ಅವಘಡ ಸಂಭವಿಸಿದೆ. ಟೆಂಟ್​ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ಸಿಕ್ಕ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿರುವ ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ. ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಹೇಳಲಾಗಿದೆ. ಆದರೆ ಕೆಲವು ಸಾಧುಗಳಿಗೆ ಸುಟ್ಟ ಗಾಯಗಳಾಗಿರುವುದು ತಿಳಿದು ಬಂದಿದೆ.

ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದು ಈವರೆಗೂ ತಿಳಿದು ಬಂದಿಲ್ಲ. ಸದ್ಯ ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸಿದ್ದು ಯಾವುದೇ ರೀತಿಯ ಪ್ರಾಣಾಪಾಯ ಯಾರಿಗೂ ಆಗಿಲ್ಲ ಎಂದು ಹೇಳಿದೆ. ಕೆಲವು ದಿನಗಳ ಹಿಂದಷ್ಟೇ ಸಿಲಿಂಡರ್ ಬ್ಲಾಸ್ಟ್​ ಆಗಿ ಇದೇ ಕುಂಭಮೇಳದಲ್ಲಿ ದೊಡ್ಡ ಮಟ್ಟದ ಬೆಂಕಿ ಅವಘಢ ಸಂಭವಿಸಿತ್ತು. ಈಗ ಎರಡನೇ ಬಾರಿ ಇಂತಹ ಅವಘಢ ಸಂಭವಿಸಿದ್ದು ಭಕ್ತರು ಆತಂಕಗೊಂಡಿದ್ದಾರೆ.



ಕುಂಭಮೇಳದಲ್ಲಿ ಅಗ್ನಿ ಅವಘಡ; ಸಿಲಿಂಡರ್​ಗಳ ಸ್ಫೋಟ!

ಇತ್ತೀಚೆಗಷ್ಟೇ ಮಹಾ ಕುಂಭಮೇಳದ ಪ್ರದೇಶದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತ್ತು. ಟೆಂಟ್‌ನಲ್ಲಿ ಅಡುಗೆ ಮಾಡುವಾಗ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದು ಬಂದಿತ್ತು. ಬೆಂಕಿ ಹೆಚ್ಚು ಟೆಂಟ್‌ಗಳನ್ನು ಆವರಿಸಿ ಅದರಲ್ಲಿ ಇರಿಸಲಾಗಿದ್ದ ಗ್ಯಾಸ್ ಸಿಲಿಂಡರ್‌ಗಳಲ್ಲಿ ನಿರಂತರ ಸ್ಫೋಟಗಳು ಸಂಭವಿಸಿತ್ತು. 20ರಿಂದ 25 ಟೆಂಟ್‌ಗಳು ಸುಟ್ಟು ಕರಕಲಾಗಿದ್ದವು.

ಈ ಸುದ್ದಿಯನ್ನೂ ಓದಿ:Mahakumbh 2025: ಕುಂಭಮೇಳದಲ್ಲಿ VIP ಪಾಸ್‌ ರದ್ದು, ವಾಹನಗಳಿಗೆ ನಿರ್ಬಂಧ; ಕಾಲ್ತುಳಿತದ ಬೆನ್ನಲ್ಲೇ ರೂಲ್‌ ಚೇಂಜ್‌!

ಅಖಾಡದ ಮುಂಭಾಗದ ರಸ್ತೆಯ ಕಬ್ಬಿಣದ ಸೇತುವೆಯ ಕೆಳಗೆ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿಶಾಮಕ ದಳವೂ ಸ್ಥಳಕ್ಕೆ ತಲುಪಿತ್ತು. ಪ್ರದೇಶವನ್ನು ಸೀಲ್ ಮಾಡಲಾಗಿತ್ತು.