ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mahakumbh: ಬಾಹ್ಯಾಕಾಶದಿಂದ ಮಹಾ ಕುಂಭಮೇಳ ಹೇಗೆ ಕಾಣಿಸುತ್ತೆ? ನಾಸಾದಿಂದ ಅದ್ಭುತ ಫೋಟೊ ರಿಲೀಸ್!

ವಿಶ್ವದ ಅತಿ ದೊಡ್ಡ ಧಾರ್ಮಿಕ ಉತ್ಸವವಾದ ಮಹಾ ಕುಂಭಮೇಳದ ಅದ್ಭುತ ಚಿತ್ರವನ್ನು ನಾಸಾ ಗಗನಯಾತ್ರಿ ಡಾನ್ ಪೆಟ್ಟಿಟ್ ಹಂಚಿಕೊಂಡಿದ್ದಾರೆ. ಭಾರತದ ಮೇಲೆ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹಾರುತ್ತಿರುವಾಗ ಬಾಹ್ಯಾಕಾಶದ ವಾಂಟೇಜ್ ಪಾಯಿಂಟ್‌ನಿಂದ ನಾಸಾ ಗಗನಯಾತ್ರಿ ಡಾನ್ ಪೆಟ್ಟಿಟ್ ಅವರು ಚಿತ್ರವನ್ನು ಸೆರೆ ಹಿಡಿದಿದ್ದಾರೆ. ತಮ್ಮ ಎಕ್ಸ್​ ಖಾತೆಯಲ್ಲಿ ಫೋಟೊವನ್ನು ಪೋಸ್ಟ್​ ಮಾಡಿರುವ ಅವರು, ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ 2025 ಮಹಾ ಕುಂಭಮೇಳ ಗಂಗಾನದಿ ತೀರ್ಥಯಾತ್ರೆ ರಾತ್ರಿ ವೇಳೆಯ ಚಿತ್ರವಿದು. ವಿಶ್ವದ ಅತಿದೊಡ್ಡ ಉತ್ಸವವು ಚೆನ್ನಾಗಿ ಬೆಳಗಿದೆ ಎಂದು ಬರೆದಿದ್ದಾರೆ.

Mahakumbh

ಲಖನೌ: ವಿಶ್ವದ ಅತಿ ದೊಡ್ಡ ಧಾರ್ಮಿಕ ಉತ್ಸವವಾದ ಮಹಾಕುಂಭ ಮೇಳದ (Mahakumbh) ಅದ್ಭುತ ಚಿತ್ರವನ್ನು ನಾಸಾ ಗಗನಯಾತ್ರಿ ಡೊನಾಲ್ಡ್ ಪೆಟ್ಟಿಟ್ (Donald Pettit) ಹಂಚಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಹಾರುವ ವೇಳೆಯಲ್ಲಿ ಬಾಹ್ಯಾಕಾಶದ ವಾಂಟೇಜ್ ಪಾಯಿಂಟ್‌ನಿಂದ ಅವರು ಚಿತ್ರವನ್ನು ಸೆರೆ ಹಿಡಿದಿದ್ದಾರೆ.

ಬಾಹ್ಯಾಕಾಶದಿಂದ ಅತ್ಯದ್ಭುತವಾದ ಚಿತ್ರವನ್ನು ಸೆರೆ ಹಿಡಿದಿರುವ ಪೆಟ್ಟಿಟ್‌ ಅದನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದು “ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಸೆರೆ ಹಿಡಿದ 2025 ಮಹಾ ಕುಂಭಮೇಳ ಗಂಗಾನದಿ ತೀರ್ಥಯಾತ್ರೆ ರಾತ್ರಿವೇಳೆಯ ಚಿತ್ರವಿದು. ವಿಶ್ವದ ಅತಿದೊಡ್ಡ ಧಾರ್ಮಿಕ ಮೇಳವು ಚೆನ್ನಾಗಿ ಬೆಳಗಿದೆ" ಎಂದು ಬರೆದಿದ್ದಾರೆ.



ಇಸ್ರೋದಿಂದ ಕುಂಭಮೇಳದ ಫೋಟೊ ರಿಲೀಸ್‌

ಜನವರಿ 22ರಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಸಹ ಮಹಾಕುಂಭ ಮೇಳದ ಉಪಗ್ರಹದ ಮೂಲಕ ಸೆರೆ ಹಿಡಿದ ಚಿತ್ರಗಳನ್ನು ಹಂಚಿಕೊಂಡಿತ್ತು. ಚಿತ್ರಗಳನ್ನು EOS-04 (RISAT-1A) ‘C’ ಬ್ಯಾಂಡ್ ಮೈಕ್ರೋವೇವ್ ಉಪಗ್ರಹದಿಂದ ಸೆರೆಹಿಡಿಯಲಾಗಿದ್ದು, ಅದರ ಎಲ್ಲ ಹವಾಮಾನ ಸಾಮರ್ಥ್ಯ ಮತ್ತು ಉತ್ತಮ ರೆಸಲ್ಯೂಶನ್ (FRS-1, 2.25m) ಆಗಿದೆ.

ಈ ಸುದ್ದಿಯನ್ನೂ ಓದಿ:Mahakumbh 2025: ಕುಂಭಮೇಳದ ಅಮೃತ ಸ್ನಾನಕ್ಕೆ ಪಾಪಗಳನ್ನು ತೊಳೆಯುವ ಶಕ್ತಿ ಇದೆಯೇ? ಇಲ್ಲಿದೆ ವಿವರವಾದ ಮಾಹಿತಿ

ಚಿತ್ರದಲ್ಲಿ ಪ್ರಯಾಗ್​​ರಾಜ್‌ನಲ್ಲಿ ಭಾರತ-ಆಕಾರದ ಉದ್ಯಾನವನವು 12 ಎಕರೆ ಭೂಮಿಯಲ್ಲಿ ಹರಡಿದೆ ಮತ್ತು ಉತ್ಸವದ ಪ್ರಮುಖ ಆಕರ್ಷಣೆಯಾಗಿ ವಿನ್ಯಾಸಗೊಳಿಸಲಾಗಿದೆ. ಮೂರು ಪ್ರತ್ಯೇಕ ದಿನಾಂಕಗಳಲ್ಲಿ ತೆಗೆದ ಚಿತ್ರಗಳು ಮನಃ ಸೆಳೆಯುತ್ತವೆ. ಚಿತ್ರಗಳು ಟೆಂಟ್ ಸಿಟಿಯ ವಿವರಗಳು ಮತ್ತು ಧಾರ್ಮಿಕ ಕಾರ್ಯಕ್ರಮದ ಮೂಲಸೌಕರ್ಯ ಅಭಿವೃದ್ಧಿಯ ಬಗ್ಗೆ ಅನನ್ಯ ಒಳನೋಟಗಳನ್ನು ಒದಗಿಸಿದೆ.