#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

ಕುಂಭ ಸ್ನಾನ ಮಾಡಿದ ಕ್ರಿಕೆಟಿಗ ರೈನಾ, ಬಾಕ್ಸರ್‌ ಮೇರಿ ಕೋಮ್‌

ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಗೌರವಿಸಿ ಮತ್ತು ಸ್ವತಃ ಅನುಭ ಪಡೆಯಲು ಬಯಸಿದ್ದರಿಂದ ಪ್ರಯಾಗ್‌ರಾಜ್‌ಗೆ ಬಂದಿದ್ದೇನೆ. ಕುಂಭ ಮೇಳದಲ್ಲಿ ಪಾಲ್ಗೊಂಡಿರುವುದಕ್ಕೆ ಬಹಳ ಖುಷಿಯಾಗಿದೆ ಎಂದು ಮೇರಿ ಹೇಳಿದರು.

ಕುಂಭ ಸ್ನಾನ ಮಾಡಿದ ಕ್ರಿಕೆಟಿಗ ರೈನಾ, ಬಾಕ್ಸರ್‌ ಮೇರಿ ಕೋಮ್‌

Mary Kom-Suresh Raina

Profile Abhilash BC Jan 27, 2025 8:46 AM

ಪ್ರಯಾಗ್‌ರಾಜ್‌: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ(Maha Kumbh Mela) ಭಾರತದ ಮಾಜಿ ಬಾಕ್ಸರ್‌ ಮೇರಿ ಕೋಮ್‌(Mary Kom), ಕ್ರಿಕೆಟಿಗ ಸುರೇಶ್‌ ರೈನಾ(Suresh Raina) ಭೇಟಿ ನೀಡಿ ಪವಿತ್ರ ಕುಂಭ ಸ್ನಾನ ಮಾಡಿದ್ದಾರೆ. ಈ ಫೋಟೋಗಳನ್ನು ಮೇರಿ ಮತ್ತು ರೈನಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಕುಂಭ ಮೇಳದಲ್ಲಿ ಪಾಲ್ಗೊಂಡಿರುವುದಕ್ಕೆ ಬಹಳ ಖುಷಿಯಾಗಿದೆ ಎಂದು ಹೇಳಿದರು.

'ಮಹಾಕುಂಭದಲ್ಲಿ ಅವಿಸ್ಮರಣೀಯ ದರ್ಶನದ ಅನುಭವವಾಯಿತು! ಕೂಟದ ದೈವಿಕ ಶಕ್ತಿ ಮತ್ತು ಆಧ್ಯಾತ್ಮಿಕತೆಯನ್ನು ಅನುಭವಿಸಿದೆ. ಈ ಪವಿತ್ರ ಕಾರ್ಯಕ್ರಮದ ಭಾಗವಾಗಿರಲು ಆಶೀರ್ವದಿಸಿದ್ದೇನೆ' ಎಂದು ಸುರೇಶ್ ರೈನಾ ಟ್ವೀಟ್ ಮಾಡಿದ್ದಾರೆ.



ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಗೌರವಿಸಿ ಮತ್ತು ಸ್ವತಃ ಅನುಭ ಪಡೆಯಲು ಬಯಸಿದ್ದರಿಂದ ಪ್ರಯಾಗ್‌ರಾಜ್‌ಗೆ ಬಂದಿದ್ದೇನೆ. ಕುಂಭ ಮೇಳದಲ್ಲಿ ಪಾಲ್ಗೊಂಡಿರುವುದಕ್ಕೆ ಬಹಳ ಖುಷಿಯಾಗಿದೆ ಎಂದು ಮೇರಿ ಹೇಳಿದರು.



ಕೆಲ ದಿನಗಳ ಹಿಂದಷ್ಟೇ ಧಿಂಗ್‌ ಎಕ್ಸ್‌ಪ್ರೆಸ್‌ ಖ್ಯಾತಿಯ ಹಿಮಾ ದಾಸ್‌ ಕೂಡ ಪ್ರಯಾಗ್‌ರಾಜ್‌ಗೆ ಭೇಟಿ ನೀಡಿ ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡಿದ್ದರು. 2023 ಜುಲೈ 22ರಿಂದ 2024ರ ನವೆಂಬರ್‌ 21ರವರೆಗೆ ಅಮಾನತು ಮಾಡಿತ್ತು. ನಿಷೇಧದಿಂದ ಮುಕ್ತವಾಗಿರುವ ಅವರು ಪ್ರಸ್ತುತ ತರಬೇತಿ ಪಡೆಯುತ್ತಿದ್ದಾರೆ. ಈ ವರ್ಷ ನಡೆಯುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸ್ಪರ್ಧಿಸುವ ನಿರೀಕ್ಷೆಯಲ್ಲಿದ್ದಾರೆ.

ಬೆಂಗಳೂರು ಮೂಲದ ಅಭಿಮಾನಿಯೊಬ್ಬ ಆರ್‌ಸಿಬಿ ತಂಡಕ್ಕೆ ಒಳಿತಾಗಲಿ, ಈ ಬಾರಿ ತಂಡ ಕಪ್‌ ಗೆಲ್ಲುವಂತಾಗಲಿ ಎಂದು ಪ್ರಾರ್ಥಿಸಿ ಮಹಾ ಕುಂಭಮೇಳದಲ್ಲಿ ಆರ್‌ಸಿಬಿ ಜರ್ಸಿ ತೊಟ್ಟು ತ್ರಿವೇಣಿ ಸಂಗಮದಲ್ಲಿ 7 ಬಾರಿ ಮಿಂದೆದ್ದಿದ್ದಾನೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(viral video) ಆಗಿದೆ.

ಇದನ್ನೂ ಓದಿ ODI tri-series: ತ್ರಿಕೋನ ಸರಣಿ ಬಳಿಕ ಚಾಂಪಿಯನ್ಸ್‌ ಟ್ರೋಫಿಗೆ ಪಾಕ್‌ ತಂಡ ಪ್ರಕಟ

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಈಗಾಗಲೇ ಕೋಟ್ಯಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಭಾಗವಹಿಸಿ ಪವಿತ್ರ ಸ್ನಾನ ಮಾಡಿದ್ದಾರೆ. ಗಂಗಾ, ಯಮುನಾ ಮತ್ತು ಸರಸ್ವತಿ ಎಂಬ ಮೂರು ನದಿಗಳ ಸಂಗಮವನ್ನು ತ್ರಿವೇಣಿ ಸಂಗಮ ಎಂದು ಕರೆಯಲಾಗುತ್ತದೆ. ಈ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರೆ ಪಾಪಗಳೆಲ್ಲಾ ತೊಳೆದು ಹೋಗಿ ಮೋಕ್ಷ ಪ್ರಾಪ್ತಿಯಾಗಲಿದೆ ಎಂಬ ನಂಬಿಕೆ ನೂರಾರು ವರ್ಷಗಳಿಂದ ಚಾಲ್ತಿಯಲ್ಲಿದೆ.