Monalisa Bhosle: ಕುಂಭಮೇಳದ ಮೊನಾಲಿಸಾ ಈಗ ಇನ್‌ಸ್ಟಗ್ರಾಂ ಸುಂದರಿ
ಈಗ ಮೊನಾಲಿಸಾ ತನ್ನದೇ ಫೋಟೋ ಹಾಗೂ ವಿಡಿಯೋಗಳನ್ನು ಇನ್‌ಸ್ಟಗ್ರಾಂನಲ್ಲಿ ಹಾಕಿಕೊಂಡು ಅದರಿಂದ ವ್ಯೂಸ್ ಪಡೆಯಲು ಯತ್ನಿಸುತ್ತಿದ್ದಾಳೆ. ಅದರಲ್ಲಿ ಸಾಕಷ್ಟು ಯಶಸ್ವಿಯೂ ಆಗಿದ್ದಾಳೆ. ಯಾಕೆಂದರೆ ಅವಳ ಇನ್‌ಸ್ಟಾಗ್ರಾಂ ಅಕೌಂಟ್‌ಗೆ ಈಗ 4 ಲಕ್ಷ ಫಾಲೋವರ್‌ಗಳು ಹಾಗೂ ಎಕ್ಸ್‌ನಲ್ಲಿ 20 ಸಾವಿರ ಫಾಲೋವರ್‌ಗಳು ಇದ್ದಾರೆ. ಜೊತೆಗೊಂದು ಫಿಲಂನ ಅವಕಾಶವೂ ಮೊನಾಲಿಸಾ ಪಾಲಿಗೆ ಬಂದಿದೆ.
ರುದ್ರಾಕ್ಷಿ ಸುಂದರಿ, ಹೊಳೆಯುವ ಕಂಗಳ ಚೆಲುವೆ ಕುಂಭಮೇಳದ ಮೊನಾಲಿಸಾ ಬೋಸ್ಲೆ ಇದೀಗ ಸೋಶಿಯಲ್ ಮೀಡಿಯಾದ ಹಾಟ್ ಫೇವರಿಟ್. ಕುಂಭ ಮೇಳದಲ್ಲಿ ರುದ್ರಾಕ್ಷಿ ಮಾರುತ್ತಾ ಇದ್ದ ಈಕೆಯನ್ನು ಜನ ವಿಡಿಯೋ ಮಾಡಿ ಜನಪ್ರಿಯಗೊಳಿಸಿದ್ದು, ಬಳಿಕ ಜನರ ಕಿರುಕುಳ ತಡೆಯಲಾಗದೆ ಆಕೆ ಅಲ್ಲಿಂದ ಹೊರಬಿದ್ದದ್ದು ನಿಮಗೆ ಗೊತ್ತು. ಅಲ್ಲಿಂದ ಬಳಿಕ ತನ್ನೂರು ಸೇರಿಕೊಂಡ ಮೊನಾಲಿಸಾ ಬೋಸ್ಲೆ, ಇದೀಗ ಸೋಶಿಯಲ್ ಮೀಡಿಯಾದಲ್ಲಿ ತನ್ನದೇ ಅಕೌಂಟ್ ತೆರೆದು ಫೇಮಸ್ ಆಗೋಕೆ ಮುಂದಾಗಿದ್ದಾಳೆ. ಮೊದಲು ಈಕೆಯ ವಿಡಿಯೊ ಹಂಚಿಕೊಂಡು ವ್ಲಾಗರ್‌ಗಳು ದುಡ್ಡುಕಾಸು ಮಾಡಿಕೊಳ್ಳಲು ಯತ್ನಿಸಿದರೆ, ಈಗ ಮೊನಾಲಿಸಾ ತನ್ನದೇ ಫೋಟೋ ಹಾಗೂ ವಿಡಿಯೋಗಳನ್ನು ಇನ್‌ಸ್ಟಗ್ರಾಂನಲ್ಲಿ ಹಾಕಿಕೊಂಡು ಅದರಿಂದ ವ್ಯೂಸ್ ಪಡೆಯಲು ಯತ್ನಿಸುತ್ತಿದ್ದಾಳೆ. ಅದರಲ್ಲಿ ಸಾಕಷ್ಟು ಯಶಸ್ವಿಯೂ ಆಗಿದ್ದಾಳೆ. ಯಾಕೆಂದರೆ ಅವಳ ಇನ್‌ಸ್ಟಾಗ್ರಾಂ ಅಕೌಂಟ್‌ಗೆ ಈಗ 4 ಲಕ್ಷ ಫಾಲೋವರ್‌ಗಳು ಹಾಗೂ ಎಕ್ಸ್‌ನಲ್ಲಿ 20 ಸಾವಿರ ಫಾಲೋವರ್‌ಗಳು ಇದ್ದಾರೆ. ಜೊತೆಗೊಂದು ಫಿಲಂನ ಅವಕಾಶವೂ ಮೊನಾಲಿಸಾ ಪಾಲಿಗೆ ಬಂದಿದೆ.
ಅಲ್ಲಿಗೆ, ಕುಂಭ ಮೇಳದಲ್ಲಿ ದೊರೆತ ಖ್ಯಾತಿಯಿಂದಾಗಿ ಆಕೆಯ ಬದುಕು ಹಸನಾಗಿದೆ ಅಂತ್ಲೇ ಹೇಳಬಹುದು. 16 ವರ್ಷ ಪ್ರಾಯದ ಮೊನಾಲಿಸಾ ಸದ್ಯ ಮಧ್ಯಪ್ರದೇಶದ ಖರ್ಗೋನ್ ಜಿಲ್ಲೆಯ ತನ್ನೂರು ಮಾಹೇಶ್ವರ್‌ನಲ್ಲಿ ಇದ್ದಾಳೆ. ಹದಿನೈದೇ ದಿನಗಳಲ್ಲಿ ಆಕೆಯ ಬದುಕು ಬದಲಾಯಿಸಿದೆ, ಅದೃಷ್ಟ ಖುಲಾಯಿಸಿದೆ. ಲೇಟೆಸ್ಟ್ ಪೋಸ್ಟ್‌ನಲ್ಲಿ ಆಕೆ "ನಾನು ಇಂದೋರ್‌ಗೆ ಬಂದರೂ ಜನ ನನ್ನನ್ನು ಭೇಟಿಯಾಗಲು ಇಲ್ಲಿವರೆಗೆ ಬರುತ್ತಿದ್ದಾರೆ ಎಂದರೆ ನನ್ನಂತಹ ಸಾಮಾನ್ಯ ಹುಡುಗಿಗೆ ಇನ್ನೇನು ಬೇಕು? ನನಗೆ ನಿಮ್ಮೆಲ್ಲರ ಸಹಕಾರ ಬೇಕು. ಮತ್ತೊಮ್ಮೆ ಕುಂಭ ಮೇಳದಲ್ಲಿ ಭೇಟಿಯಾಗೋಣ" ಎಂದು ಬರೆದುಕೊಂಡಿದ್ದಾಳೆ.
ಪ್ರಸ್ತುತ ಆಕೆ ಸೋಶಿಯಲ್ ಮೀಡಿಯಾದಲ್ಲಿ ಹಾಕುವ ಪೋಸ್ಟ್‌ಗಳಲ್ಲಿ ಆಕೆಯ ಫೋಟೋ, ವಿಡಿಯೋ, ಆಕೆಯ ಗ್ರಾಮೀಣ ಬದುಕಿನ ಕೆಲವು ನೋಟಗಳು, ಸ್ಫೂರ್ತಿಯ ಮಾತುಗಳೆಲ್ಲ ಇರುತ್ತವೆ. "ಯಾರೂ ಕನಸು ಕಾಣುವುದನ್ನು ನಿಲ್ಲಿಸಬಾರದು, ಕನಸು ಕಾಣೋದೇ ಯಶಸ್ಸಿನ ಮೂಲ" "ಯಶಸ್ಸಿನ ಎರಡನೇ ಹೆಸರೆಂದರೆ ಕಠಿಣ ಪರಿಶ್ರಮ, ಪರಿಶ್ರಮವನ್ನು ಬಿಡದಿರೋಣ" ಅಂತೆಲ್ಲ ಬರೆದುಕೊಳ್ಳುತ್ತಾಳೆ. ಇದನ್ನೆಲ್ಲ ಈಕೆಯೇ ಬರೆದಿರಬಹುದಾ, ಅಥವಾ ಈಕೆಯ ಅಕೌಂಟ್ ಅನ್ನು ಬೇರೆ ಯಾರಾದರೂ ನಿರ್ವಹಿಸ್ತಿದಾರಾ ಎಂಬ ಅನುಮಾನವೂ ಇದೆ. ಸದ್ಯ ಲೋಕಲ್ ಸರಕಾರಿ ಶಾಲೆಯೊಂದರಲ್ಲಿ ಆಕೆ ತನ್ನ ಶಿಕ್ಷಣ ಮುಂದುವರಿಸಿದ್ದಾಳೆ.
ಕುತೂಹಲ ಎನಿಸಿರುವುದು ಆಕೆ ಪೋಸ್ಟರ್ ಒಂದರ ಮುಂದೆ ನಿಂತು ಕ್ಲಿಕ್ಕಿಸಿ ಹಾಕಿರುವ ಫೋಟೋ. ಪುಷ್ಪ-2 ಸಿನಿಮಾದ ಪೋಸ್ಟರ್ ಮುಂದೆ ನಿಂತ ಆಕೆಯ ಫೋಟೋಗೆ ಆಕೆ ನೀಡಿದ ಕ್ಯಾಪ್ಷನ್ ಹೀಗಿದೆ- "ಇಂದು ಪೋಸ್ಟರ್‌ನ ಹೊರಗೆ, ನಾಳೆ ಒಳಗೆ ಇರಬಹುದು. ಇದು ಸಮಯದ ಚಕ್ರ. ಬೇಗನೇ ಮುಂಬಯಿಯಲ್ಲಿ ಸಿಗೋಣ" ಎಂದಿದೆ. ಅಂದರೆ ಆಕೆಗೆ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ತುಡಿತ ಇರುವುದು ಸ್ಪಷ್ಟ. ತನ್ನ ಕೆಲವು ವಿಡಿಯೋ ಕ್ಲಿಪ್‌ಗಳಿಗೆ ಈಕೆ 1985ರ ಸಾಗರ್ ಫಿಲಂ ʼಸಾಗರ್ ಜೈಸೀ ಆಂಖೋವಾಲೀʼ ಟ್ರ್ಯಾಕ್‌ನ್ನು ಹಿಂದುಗಡೆ ಹಾಕಿಕೊಂಡಿದ್ದಾಳೆ. ಒಂದು ವಿಡಿಯೋದಲ್ಲಿ "ನಾನು ರುದ್ರಾಕ್ಷಿಗಳನ್ನು ಮಾರುತ್ತೇನೆ. ಆದರೆ ನಕಲಿ ಐಟಂಗಳನ್ನು ಮಾರುವವಳಲ್ಲ. ಪಂಚಮುಖಿ ರುದ್ರಾಕ್ಷಿಯ ಒಳಗೆ ಒಂದು ಬೀಜ ಇರುವುದು ನಿಮಗೆ ಗೊತ್ತೇ? ಅದುವೇ ಅದರ ಐಡೆಂಟಿಟಿ" ಎಂದಿದ್ದಾಳೆ.
ಬಾಲಿವುಡ್ ಫಿಲಂ ಮೇಕರ್ ಸನೋಜ್ ಮಿಶ್ರಾ ಅವರು ಮೊನಲಿಸಾಳ ಜನಪ್ರಿಯತೆಯನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ. ತಮ್ಮ ಮುಂದಿನ ʼಡೈರಿ ಆಫ್ ಮಣಿಪುರ್ʼ ಚಿತ್ರದಲ್ಲಿ ಆಕೆಯನ್ನು ಬಳಸಿಕೊಳ್ಳುವುದಾಗಿ ಅವರು ಹೇಳಿದ್ದಾರೆ. ಅವರ ಘಜ್ನವಿ, ಶ್ರೀನಗರ್, ಶಶಾಂಕ್, ಡೈರಿ ಆಫ್ ವೆಸ್ಟ್ ಬೆಂಗಾಲ್ ಮೊದಲಾದವು ಇವರ ಫಿಲಂಗಳು.
ಮೊನಾಲಿಸಾಳ ತಂದೆ ಸಣ್ಣ ಪ್ರಮಾಣದ ಕೃಷಿಕ. ತಾಯಿ ರುದ್ರಾಕ್ಷಿ ಸೇರಿದಂತೆ ಕರಕುಶಲ ವಸ್ತುಗಳನ್ನು ಮಾರುತ್ತಾರೆ. ತಮ್ಮ ಮಗಳಿಗೆ ಬಂದ ದಿಡೀರ್ ಜನಪ್ರಿಯತೆಯ ಬಗ್ಗೆಅವರಿಗೆ ಆತಂಕ ಮೂಡಿದೆ. ಹಿರಿಯರ ಹಾಗೂ ಹಿತೈಷಿಗಳ ಸಲಹೆ ಮಾರ್ಗದರ್ಶನದಲ್ಲಿ ಅವರು ಮುಂದುವರಿಯಲು ನಿರ್ಧರಿಸಿದ್ದಾರೆ. ಮೊನಾಲಿಸಾಳ ಜನಪ್ರಿಯತೆಯ ಕತೆ, ಸೋಶಿಯಲ್ ಮೀಡಿಯಾಗಳ ಪ್ರಭಾವದ ಅಪ್ಪಟ ನಿದರ್ಶನ ಎಂದು ಹೇಳಬಹುದು.
ಇದನ್ನೂ ಓದಿ: Viral Video: ಮಹಾಕುಂಭ ಮೇಳ ಬಿಟ್ಟು ಮನೆಗೆ ಹೋದ ಮೊನಾಲಿಸಾ; ಕಾರಣ ಕೇಳಿದ್ರೆ ಶಾಕ್ ಆಗ್ತೀರಿ