ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral Video: ಮಹಾಕುಂಭ ಮೇಳ ಬಿಟ್ಟು ಮನೆಗೆ ಹೋದ ಮೊನಾಲಿಸಾ; ಕಾರಣ ಕೇಳಿದ್ರೆ ಶಾಕ್‌ ಆಗ್ತೀರಿ

2025ರ ಮಹಾಕುಂಭಮೇಳದಲ್ಲಿ ಗಮನ ಸೆಳೆದ ಇಂದೋರನ ಹಾರ ಮಾರಾಟಗಾರ್ತಿ ಮೊನಾಲಿಸಾ ಭೋಂಸ್ಲೆ ಇದೀಗ ಕುಂಭಮೇಳ ಬಿಟ್ಟು ಮನೆಗೆ ಹಿಂತಿರುಗಿದ್ದಾಳೆ. ಈ ಬಗ್ಗೆ ಆಕೆ ತನ್ನ ಎಕ್ಸ್ ಖಾತೆಯಲ್ಲಿ ಸಂದೇಶ ನೀಡಿದ್ದಾಳೆ. ಇದು ವೈರಲ್ ಆಗಿದೆ. ಆಕೆಯ ಈ ನಿರ್ಧಾರಕ್ಕೆ ಕಾರಣವೇನು?

ಸುರಕ್ಷತೆಯ ದೃಷ್ಟಿಯಿಂದ ಮನೆಗೆ ಮರಳಿದ ಮೊನಾಲಿಸಾ

monalisa

Profile pavithra Jan 25, 2025 1:38 PM

ಲಖನೌ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ವ್ಯಾಪಕ ಗಮನ ಸೆಳೆದ ಇಂದೋರನ ಮೋನಾಲಿಸಾ ಭೋಂಸ್ಲೆ ತನ್ನ ಸುರಕ್ಷತೆಗಾಗಿ ಪ್ರಯಾಗ್‌ರಾಜ್‌ ಬಿಟ್ಟು ಮನೆಗೆ ಮರಳಿದ್ದಾಳೆ. ಆಕೆ ತನ್ನ ಎಕ್ಸ್‌ನಲ್ಲಿ ಈ ಸಂದೇಶವನ್ನು ಹಂಚಿಕೊಂಡಿದ್ದಾಳೆ. ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಆಕೆ ತಿಳಿಸಿದ್ದಾಳೆ. ಇದಕ್ಕೆ ಸಂಬಂಧಪಟ್ಟ ಆಕೆಯ ಪೋಸ್ಟ್ ವೈರಲ್ (Viral Video) ಆಗಿದೆ.

ಈ ಬಗ್ಗೆ ವಿವರಣೆ ನೀಡಿದ ಆಕೆ, “ನನ್ನ ಕುಟುಂಬ ಮತ್ತು ನನ್ನ ಸುರಕ್ಷತೆಗಾಗಿ ನಾನು ಇಂದೋರ್‌ಗೆ ಹಿಂತಿರುಗಬೇಕಾಗಿದೆ. ಸಾಧ್ಯವಾದರೆ ಮುಂದಿನ ಮಹಾಕುಂಭಮೇಳಕ್ಕೆ ಮರಳುತ್ತೇನೆ” ಎಂದು ತಿಳಿಸಿದ್ದಾಳೆ. ಮೋನಾಲಿಸಾ ಭೋಂಸ್ಲೆ ಅವಳ ಈ ನಿರ್ಧಾರಕ್ಕೆ ಮುಖ್ಯ ಕಾರಣ ಅಲ್ಲಿ ಆಕೆ ಜನಸಾಮಾನ್ಯರಿಂದ ಕಿರುಕುಳವನ್ನು ಅನುಭವಿಸಿದ್ದಾಳಂತೆ.



ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ವಿಡಿಯೊದಲ್ಲಿ ಮೊನಾಲಿಸಾ ಕಾರಣ ವಿವರಿಸಿದ್ದಾಳೆ. ತನ್ನ ಜತೆ ಸೆಲ್ಫಿ ತೆಗೆದುಕೊಳ್ಳಲು ಒಂದಷ್ಟು ಜನ ಮುತ್ತಿಗೆ ಹಾಕಿದ್ದಾರಂತೆ. ಕೊನೆಗೆ ಕುಟುಂಬದ ಸದಸ್ಯರೊಬ್ಬರು ಮಧ್ಯ ಪ್ರವೇಶಿಸಿ, ಅವಳನ್ನು ಸುರಕ್ಷಿತವಾಗಿ ಕರೆದೊಯ್ಯುದಿದ್ದಾರೆ. ಕುಂಭಮೇಳದಲ್ಲಿ ಜನರು ಸೆಲ್ಫಿಗಳಿಗಾಗಿ ಅವಳನ್ನು ಹಿಂಸಿಸಿದ್ದಾರೆ ಮತ್ತು ಅವಳ ವ್ಯಾಪಾರಕ್ಕೆ ತೊಂದರೆ ನೀಡಿದ್ದಾರಂತೆ.

ಈ ವಿಡಿಯೊ ಆಕ್ರೋಶವನ್ನು ಹುಟ್ಟು ಹಾಕಿದೆ. ಅನೇಕರು ಯುವತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಕಿರುಕುಳದ ಹಿನ್ನೆಲೆಯಲ್ಲಿ ಮೊನಾಲಿಸಾಳ ತಂದೆ ಅವಳನ್ನು ಮನೆಗೆ ಕಳುಹಿಸಲು ನಿರ್ಧರಿಸಿದರಂತೆ. ಅವಳ ಹಠಾತ್ ಖ್ಯಾತಿಯ ಕಾರಣದಿಂದ ಅವಳ ವ್ಯವಹಾರದ ಮೇಲೆ ಪರಿಣಾಮ ಬೀರಿದೆ. ಯಾಕೆಂದರೆ ಅನೇಕ ಜನರು ಅವಳಿಂದ ಹೂಮಾಲೆಗಳನ್ನು ಖರೀದಿಸುವ ಬದಲು ಸೆಲ್ಫಿಗಳಿಗಾಗಿ ಬೇಡಿಕೆ ಇಟ್ಟಿದ್ದಾರಂತೆ.

ಈ ಸುದ್ದಿಯನ್ನೂ ಓದಿ:Viral Video: ಪಾರ್ಕಿಂಗ್ ಏರಿಯಾದ ಎರಡನೇ ಮಹಡಿಯಿಂದ ಬಿದ್ದ ಕಾರು: ಭಯಾನಕ ವಿಡಿಯೊ ವೈರಲ್

ಈ ಪೋಸ್ಟ್‌ಗೆ ಕಾಮೆಂಟ್ ಮಾಡಿದ ವ್ಯಕ್ತಿಯೊಬ್ಬರು, "ಅವಳು ತನ್ನ ಪ್ರತಿ ಸೆಲ್ಫಿಗೆ 1,000 ರೂ.ಗಳನ್ನು ವಿಧಿಸಬೇಕು. ತನ್ನ ಅನುಮತಿಯಿಲ್ಲದೆ ತನ್ನ ಚಿತ್ರವನ್ನು ಬಳಸುವವರ ವಿರುದ್ಧ ಮೊಕದ್ದಮೆ ಹೂಡುವುದಾಗಿ ನೋಟಿಸ್ ನೀಡಬೇಕು” ಎಂದು ಸಲಹೆ ನೀಡಿದ್ದಾರೆ. ಇನ್ನೊಬ್ಬರು "ಖ್ಯಾತಿಯು ಎಷ್ಟು ಅಪಾಯಕಾರಿಯಾಗಬಹುದು ಎಂಬುದಕ್ಕೆ ಮಹಾ ಕುಂಭಮೇಳದಲ್ಲಿ ಮೊನಾಲಿಸಾ ಒಂದು ಉದಾಹರಣೆಯಾಗಿದ್ದಾಳೆ” ಎಂದು ತಿಳಿಸಿದ್ದಾರೆ.