ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಹಜ ಪ್ರಸವ ಮಾಯ, ಶಸ್ತ್ರಚಿಕಿತ್ಸೆ ಅಯೋಮಯ

ಖಾಸಗಿ ಆಸ್ಪತ್ರೆಗಳಲ್ಲಿ ಬಹುತೇಕ ಸಿಸೇರಿಯನ್ ಹೆರಿಗೆಗೆ ಆದ್ಯತೆ ನೀಡಲಾಗುತ್ತದೆ. ಸಹಜ ಹೆರಿಗೆಯ ಲಕ್ಷಣಗಳಿದ್ದರೂ ಗರ್ಭಿಣಿಯರಲ್ಲಿ ಆತಂಕ ಮೂಡಿಸಿ, ಸಿಸೇರಿಯನ್‌ಗೆ ಪ್ರೋತ್ಸಾಹಿಸಲಾಗುತ್ತದೆ. ಸಹಜ ಹೆರಿಗೆಗೆ ಹೋಲಿಸಿದರೆ ಸಿಸೇರಿಯನ್ ತಾಯಿ, ಮಗುವಿನ ಆರೋಗ್ಯ ಕಾಪಾಡಲು ಉತ್ತಮ ಎನಿಸಿದರೂ ಬಡವರ ಪಾಲಿಗೆ ಬಿಸಿ ತುಪ್ಪವಾಗಿದೆ

ಸಿಸೇರಿಯನ್ ಹೆರಿಗೆಗೆ ಪ್ರಾಮುಖ್ಯ ನೀಡುತ್ತಿರುವ ಪ್ರಕರಣಗಳು ಹೆಚ್ಚು

Profile Ashok Nayak Mar 12, 2025 8:36 PM

ರಂಗನಾಥ ಕೆ.ಹೊನ್ನಮರಡಿ

ವರ್ಷದಿಂದ ವರ್ಷಕ್ಕೆ ತುಮಕೂರು ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಹೆರಿಗೆ ಅಬ್ಬರ ಹೆಚ್ಚಳವಾಗಿದ್ದು, ಸರಕಾರಿ ಆಸ್ಪತ್ರೆಗಳಲ್ಲಿಯೂ ಸಹಜ ಪ್ರಸವ ಪ್ರಮಾಣ ತಗ್ಗಿದೆ. ಸಹಜ ಹೆರಿಗೆಯ ಲಕ್ಷಣಗಳಿದ್ದರೂ ಆತಂಕ ಮೂಡಿಸಿ ಸಿಸೇರಿಯನ್ ಹೆರಿಗೆಗೆ ಪ್ರಾಮುಖ್ಯ ನೀಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಆ ಮೂಲಕ ಆಸ್ಪತ್ರೆಗಳು ಹಣ ಮಾಡುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಕಾನೂನು ಜಾರಿಗೊಳಿಸುವ ಅವಶ್ಯಕತೆ ಇದೆ. ಕಲ್ಪತರು ನಾಡಿನ ಖಾಸಗಿ ಆಸ್ಪತ್ರೆಗಳಲ್ಲಿ ಶಸಚಿಕಿತ್ಸೆ ಹೆರಿಗೆ ಪ್ರಮಾಣ ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದೆ. ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಸಹಜ ಪ್ರಸವ ಪ್ರಕ್ರಿಯೆ ಮಾಯವಾಗುತ್ತಿದ್ದು, ಸಿಸೇರಿಯನ್ ಮಾಯೆ ಎಲ್ಲೆಡೆ ಆವರಿಸುವ ಮೂಲಕ ರಾಜ್ಯದಲ್ಲಿ ತುಮಕೂರು ಜಿಲ್ಲೆ ಈ ಬಾಬತ್ತಿನಲ್ಲಿ ಮುಂಚೂ ಣಿಯಲ್ಲಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಬಹುತೇಕ ಸಿಸೇರಿಯನ್ ಹೆರಿಗೆಗೆ ಆದ್ಯತೆ ನೀಡಲಾಗುತ್ತದೆ. ಸಹಜ ಹೆರಿಗೆಯ ಲಕ್ಷಣಗಳಿದ್ದರೂ ಗರ್ಭಿಣಿಯರಲ್ಲಿ ಆತಂಕ ಮೂಡಿಸಿ, ಸಿಸೇರಿಯನ್‌ಗೆ ಪ್ರೋತ್ಸಾಹಿಸಲಾಗುತ್ತದೆ. ಸಹಜ ಹೆರಿಗೆಗೆ ಹೋಲಿಸಿದರೆ ಸಿಸೇರಿಯನ್ ತಾಯಿ, ಮಗುವಿನ ಆರೋಗ್ಯ ಕಾಪಾಡಲು ಉತ್ತಮ ಎನಿಸಿದರೂ ಬಡವರ ಪಾಲಿಗೆ ಬಿಸಿ ತುಪ್ಪವಾಗಿದೆ. ಕೆಲವು ಖಾಸಗಿ ಆಸ್ಪತ್ರೆಗಳು ಸಿಸೇರಿಯನ್ ಹೆರಿಗೆ ನೆಪದಲ್ಲಿ ಹಣ ಮಾಡುವ ದಂಧೆ ಮಾಡುತ್ತಿವೆ. ಸರಕಾರಿ ಆಸ್ಪತ್ರೆಗಳಲ್ಲಿಯೂ ಸಹಜ ಹೆರಿಗೆಗೆ ಆದ್ಯತೆ ನೀಡದೆ ಸಿಸೇರಿಯನ್ ಹೆರಿಗೆಗೆ ಪ್ರಾಮುಖ್ಯ ನೀಡುವ ಮೂಲಕ ಹೆರಿಗೆ ಪ್ರಕ್ರಿಯೆಯನ್ನು ಸುಲಭ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Tumkur (Sira) News: ವಿಜ್ಞಾನ ಪ್ರದರ್ಶನವು ಶೈಕ್ಷಣಿಕ ಮತ್ತು ಮನರಂಜನಾ ಕಾರ್ಯಕ್ರಮ

ಸರಕಾರಿ ಆಸ್ಪತ್ರೆಗಳಲ್ಲಿ ಸಹಜ ಹೆರಿಗೆ ಪ್ರಕ್ರಿಯೆ ಪ್ರಮಾಣ ಅಧಿಕವಾಗಿದ್ದರೂ ಹೆರಿಗೆ ಸಂದರ್ಭದಲ್ಲಿ ಕೆಲವು ವೈದ್ಯರುಗಳು ಗರ್ಭಿಣಿಯರಲ್ಲಿ ಆತಂಕ ಮೂಡಿಸಿ ಸಿಸೇರಿಯನ್ ಹೆರಿಗೆಗೆ ಖಾಸಗಿ ಆಸ್ಪತ್ರೆ ಗಳಿಗೆ ಶಿಫಾರಸು ಮಾಡುವ ಪ್ರಕ್ರಿಯೆ ಜಿಲ್ಲೆಯಲ್ಲಿ ಅಧಿಕವಾಗಿದ್ದು, ಸರಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಪ್ರಮಾಣ ಕಡಿಮೆಯಾಗುತ್ತಿದೆ. ಆಸ್ಪತ್ರೆಗಳು ಸಹಜ ಪ್ರಸವ ಪ್ರಕ್ರಿಯೆಗೆ ಮೊದಲ ಆದ್ಯತೆ ನೀಡಬೇಕು. ತಾಯಿ, ಮಗುವಿನ ಆರೋಗ್ಯಕ್ಕೆ ತೊಂದರೆ ಇದ್ದಾಗ ಮಾತ್ರ ಸಿಸೇರಿಯನ್ ಹೆರಿಗೆ ಪ್ರಕ್ರಿಯೆ ಕೈಗೊಳ್ಳ ಬೇಕು. ಆದರೆ ಸಹಜ ಹೆರಿಗೆಯ ಲಕ್ಷಣಗಳಿದ್ದರೂ ಆತಂಕ ಮೂಡಿಸಿ ಸಿಸೇರಿಯನ್ ಹೆರಿಗೆಗೆ ಪ್ರಾಮು ಖ್ಯ ನೀಡುತ್ತಿರುವುದು ದುರದೃಷ್ಟಕರ.

*

ಕಠಿಣ ಕಾನೂನು ಜಾರಿಯಾಗಲಿ

ಆಸ್ಪತ್ರೆಗಳು ಸಹಜ ಹೆರಿಗೆಗೆ ಆದ್ಯತೆ ನೀಡಬೇಕು. ಸ್ವಯಂ ಪ್ರೇರಿತವಾಗಿ ಬಯಸುವ ಗರ್ಭಿಣಿಯರಿಗೆ ಸಿಸೇರಿಯನ್ ಹೆರಿಗೆ ಮಾಡಿಸುವುದರಲ್ಲಿ ತಪ್ಪಿಲ್ಲ. ತಾಯಿ ಮಗುವಿನ ಆರೋಗ್ಯದ ಕುಂಟುನೆಪದಲ್ಲಿ ಗರ್ಭಿಣಿಯರಿಗೆ ಆತಂಕ ಮೂಡಿಸಿ ಸಹಜ ಹೆರಿಗೆಯ ಲಕ್ಷಣಗಳಿದ್ದರೂ ಸಿಸೇರಿಯನ್ ಹೆರಿಗೆ ನೆಪ ದಲ್ಲಿ ಸರಕಾರಿ, ಖಾಸಗಿ ಆಸ್ಪತ್ರೆಗಳು ಹಣ ಮಾಡುವ ಮಾರ್ಗ ಹುಡುಕಿಕೊಂಡಿವೆ. ಇದಕ್ಕೆ ಕಡಿವಾಣ ಹಾಕಲು ಕಾನೂನು ಜಾರಿಗೊಳಿಸುವ ಅವಶ್ಯಕತೆ ಇದೆ.

*

ಸಹಜ ಹೆರಿಗೆ ಸಾಧ್ಯವಾಗದಿದ್ದ ಸಂದರ್ಭದಲ್ಲಿ ಮಾತ್ರ ಸಿಸೇರಿಯನ್ ಹೆರಿಗೆ ಮಾಡಬೇಕು. ಹೆರಿಗೆ ಮಾಡುವ ವೈದ್ಯರು ಹಾಗೂ ಹೆರಿಗೆಗೆ ಸಹಕರಿಸುವ ಶುಶ್ರೂಷಕರಿಗೆ ನೈಪುಣ್ಯತಾ ತರಬೇತಿ ನೀಡ ಬೇಕು. ವೈದ್ಯ ವೃತ್ತಿಯನ್ನೇ ಆಯ್ಕೆ ಮಾಡಿಕೊಂಡು ಸೇವೆ ಸಲ್ಲಿಸುತ್ತಿರುವ ವೈದ್ಯರು ಮಾನವೀಯತೆ ಯಿಂದ ರೋಗಿಗಳಿಗೆ ಚಿಕಿತ್ಸೆ ನೀಡಬೇಕು.

-ಶುಭ ಕಲ್ಯಾಣ್ ಜಿಲ್ಲಾಧಿಕಾರಿ, ತುಮಕೂರು

ಜಿಲ್ಲೆಯಲ್ಲಿ ಸಹಜ ಹೆರಿಗೆಗೆ ಆದ್ಯತೆ ನೀಡಲು ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ. ಸಿಸೇರಿಯನ್ ಹೆರಿಗೆ ಕೈಗೊಳ್ಳುವ ವೈದ್ಯರಿಗೆ ನೋಟಿಸ್ ಮೂಲಕ ಎಚ್ಚರಿಕೆ ನೀಡಲಾಗಿದೆ. ಡಿಸಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿಯೂ ಸಿಸೇರಿಯನ್ ಹೆರಿಗೆಗೆ ಆದ್ಯತೆ ನೀಡದಂತೆ ಸೂಚಿಸಲಾಗಿದೆ. ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಹೆರಿಗೆ ಪ್ರಮಾಣ ಕಡಿಮೆಯಾಗುತ್ತಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಅಧಿಕವಾಗುತ್ತಿದೆ.

- ಡಾ.ಬಿ.ಎಂ.ಚಂದ್ರಶೇಖರ್ ಡಿಎಚ್‌ಒ, ತುಮಕೂರು