ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Tumkur (Sira) News: ವಿಜ್ಞಾನ ಪ್ರದರ್ಶನವು ಶೈಕ್ಷಣಿಕ ಮತ್ತು ಮನರಂಜನಾ ಕಾರ್ಯಕ್ರಮ

ಪ್ರದರ್ಶನದಲ್ಲಿ ರಾಮನ್ ಎಫೆಕ್ಟ್, ಸೋಲಾರ್ ಸಿಸ್ಟಮ್, ಚಂದ್ರಯಾನ, ಆಪ್ಟಿಕಲ್ ಫೈಬರ್, ಆಮ್ಲ ಮಳೆ, ಭೂಕಂಪನ, ಬಾಹ್ಯಾಕಾಶ ಯಾನ ಮಾದರಿಗಳು ವೈಜ್ಞಾನಿಕ ಪ್ರಯೋಗಗಳು ಮತ್ತು ಮಾದರಿಗಳನ್ನು ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಪ್ರದರ್ಶಿಸ ಲಾಯಿತು. ಶಿರಾ ತಾಲೂಕಿನ ಭೌಗೋಳಿಕ ಮಾದರಿ ಈ ಪ್ರದರ್ಶನದಲ್ಲಿ ಹೆಚ್ಚು ಆಕರ್ಷಣೀ ಯವಾಗಿತ್ತು

ವಿಜ್ಞಾನ ಪ್ರದರ್ಶನ ಉದ್ಘಾಟನೆ

ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ವಿಜ್ಞಾನ ಪ್ರದರ್ಶನವನ್ನು ವೀಕ್ಷಿಸಿದರು.

Profile Ashok Nayak Mar 1, 2025 11:38 AM

ಶಿರಾ: ವಿಜ್ಞಾನ ಪ್ರದರ್ಶನವು ವಿಜ್ಞಾನದ ಅನೇಕ ಅಂಶಗಳನ್ನು ಆಕರ್ಷಕವಾಗಿ ಪರಿಚ ಯಿಸುವ ಒಂದು ಶೈಕ್ಷಣಿಕ ಮತ್ತು ಮನರಂಜನಾ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯ ಕ್ರಮಗಳಿಂದ ವೈಜ್ಞಾನಿಕ ತತ್ವಗಳು, ಆವಿಷ್ಕಾರಗಳು ಮತ್ತು ತಂತ್ರಜ್ಞಾನಗಳ ಬಗ್ಗೆ ವಿದ್ಯಾ ರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ತಿಳಿಸಿದರು. ಅವರು ಶಿರಾ ನಗರದ ಮಂಜುಶ್ರೀ ಇಂಗ್ಲೀಷ್ ಸ್ಕೂಲ್ ನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ವಿಜ್ಞಾನ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. 

ಇದನ್ನೂ ಓದಿ: Tumkur News: 89ನೇ ತ್ರಿಮೂರ್ತಿ ಶಿವ ಜಯಂತಿ ಅಂಗವಾಗಿ ವಿವಿಧ ಕಾರ್ಯಕ್ರಮ

ವಿಜ್ಞಾನದ ನವೀನ ತತ್ವಗಳು, ಸಂಶೋಧನೆಗಳು ಮತ್ತು ಆವಿಷ್ಕಾರಗಳು ಕುರಿತು ವಿವರ ವಾದ ಮಾಹಿತಿ ದೊರಕುವುದರಿಂದ ಯುವ ಪೀಳಿಗೆಯವರು ನವೀನ ಆಲೋಚನೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ.

ಈ ಪ್ರದರ್ಶನವು ವಿದ್ಯಾರ್ಥಿಗಳಲ್ಲಿ ಕುತೂಹಲವನ್ನು ಮತ್ತು ಸಂಶೋಧನಾ ಮನೋ ಭಾವವನ್ನು ಹುಟ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಹಾಗೆಯೇ ವಿಜ್ಞಾನ ಕ್ಷೇತ್ರದಲ್ಲಿ ಮುಂದಿನ ಆವಿಷ್ಕಾರಗಳಿಗೆ ಪ್ರೇರಣೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.

ಪ್ರದರ್ಶನದಲ್ಲಿ ರಾಮನ್ ಎಫೆಕ್ಟ್, ಸೋಲಾರ್ ಸಿಸ್ಟಮ್, ಚಂದ್ರಯಾನ, ಆಪ್ಟಿಕಲ್ ಫೈಬರ್, ಆಮ್ಲ ಮಳೆ, ಭೂಕಂಪನ, ಬಾಹ್ಯಾಕಾಶ ಯಾನ ಮಾದರಿಗಳು ವೈಜ್ಞಾನಿಕ ಪ್ರಯೋಗಗಳು ಮತ್ತು ಮಾದರಿಗಳನ್ನು ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಪ್ರದರ್ಶಿಸ ಲಾಯಿತು. ಶಿರಾ ತಾಲೂಕಿನ ಭೌಗೋಳಿಕ ಮಾದರಿ ಈ ಪ್ರದರ್ಶನದಲ್ಲಿ ಹೆಚ್ಚು ಆಕರ್ಷಣೀ ಯವಾಗಿತ್ತು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಇ ಸಿ ಓ ಕರಿಯಣ್ಣ, ಸಂಸ್ಥೆಯ ಮುಖ್ಯಸ್ಥ ಮಹಾಲಿಂಗಪ್ಪ, ಕಾರ್ಯದರ್ಶಿ ಡಾ.ಉಮೇಶ್, ವಿಜ್ಞಾನ ಶಿಕ್ಷಕರಾದ ನರಸಿಂಹಣ್ಣ, ಅರ್ಶಿಯ, ಕಾವ್ಯ, ಮುಬಾಶಿರ, ದೀಪ, ಮಧುಶ್ರೀ, ನಯನ, ಮುಖ್ಯಶಿಕ್ಷಕರಾದ ಶಿವಮೂರ್ತಿ, ಹೇಮಂತ್, ಶಿಕ್ಷಕರುಗಳು ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.