ಪ್ರಾದೇಶಿಕ ಸೇನೆ ನಿಯೋಜನೆಗೆ ನಿರ್ಧಾರ; ಬಾರ್ಡರ್‌ಗೆ ಹೋಗ್ತಾರಾ ಧೋನಿ, ಸಚಿನ್?
ಪ್ರಾದೇಶಿಕ ಸೇನೆಯು 1949ರ ಅಕ್ಟೋಬರ್ 9ರಂದು ಸ್ಥಾಪನೆಯಾಗಿದ್ದು, 75 ವರ್ಷಗಳನ್ನು ಪೂರೈಸಿದೆ. ಸೇನೆಯೊಂದಿಗೆ ಪೂರ್ಣವಾಗಿ ಸಂಯೋಜಿಸಲ್ಪಟ್ಟಿರುವ ಘಟಕ ಇದಾಗಿದ್ದು, ಸೈನಿಕ ತರಬೇತಿ ಪಡೆದ ಸಾಮಾನ್ಯ ನಾಗರಿಕರು ಪ್ರಾದೇಶಿಕ ಸೇನೆಯ ಭಾಗವಾಗಿರುತ್ತಾರೆ. ಸದ್ಯ , ಭಾರತದಲ್ಲಿ ಸುಮಾರು 14.75 ಲಕ್ಷ ಸಕ್ರಿಯ ಮಿಲಿಟರಿ ಸಿಬ್ಬಂದಿ ಮತ್ತು 16 ಲಕ್ಷಕ್ಕೂ ಹೆಚ್ಚು ಅರೆಸೈನಿಕ ಸಿಬ್ಬಂದಿ ಇದ್ದಾರೆ.


ನವದೆಹಲಿ: ಪಾಕಿಸ್ತಾನ ನಡುಗೆ ಗಡಿಯಲ್ಲಿ ಉದ್ವಿಗ್ನತೆ(India-Pakistan Tension) ಹೆಚ್ಚಿದ ಬೆನ್ನಲ್ಲೇ ಭಾರತ ಯುದ್ಧ ಸನ್ನದ್ಧತೆ ತೀವ್ರಗೊಳಿಸಿದೆ. ಕೇಂದ್ರ ಗೃಹ ಸಚಿವಾಲಯ ಸುಮಾರು 50,000 ಅರೆಕಾಲಿಕ ಯೋದರನ್ನು ಹೊಂದಿರುವ 'ಟೆರಿಟೋರಿಯಲ್ ಆರ್ಮಿ'(territorial army) ಪೆಡೆಯನ್ನು ಕರೆಸಿಕೊಳ್ಳುವಂತೆ ಸೇನಾ ಮುಖ್ಯಸ್ಥರಿಗೆ ಸೂಚಿಸಿದೆ. ಭಾರತದ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ(MS Dhoni), ನಟರಾದ ಅಕ್ಷಯ್ ಕುಮಾರ್, ಮೊಹನ್‌ಲಾಲ್ ಸೇರಿದಂತೆ ಹಲವರು ಈ ಪಡೆಯಲ್ಲಿದ್ದಾರೆ.
ಪ್ರಾದೇಶಿಕ ಸೇನೆಯು 1949ರ ಅಕ್ಟೋಬರ್ 9ರಂದು ಸ್ಥಾಪನೆಯಾಗಿದ್ದು, 75 ವರ್ಷಗಳನ್ನು ಪೂರೈಸಿದೆ. ಸೇನೆಯೊಂದಿಗೆ ಪೂರ್ಣವಾಗಿ ಸಂಯೋಜಿಸಲ್ಪಟ್ಟಿರುವ ಘಟಕ ಇದಾಗಿದ್ದು, ಸೈನಿಕ ತರಬೇತಿ ಪಡೆದ ಸಾಮಾನ್ಯ ನಾಗರಿಕರು ಪ್ರಾದೇಶಿಕ ಸೇನೆಯ ಭಾಗವಾಗಿರುತ್ತಾರೆ. ಅಗತ್ಯಬಿದ್ದರೆ ಇವರು ದೇಶ ರಕ್ಷಣೆಗೆ ಸೇನೆಗೆ ನೆರವು ನೀಡುತ್ತಾರೆ. ಪ್ರಾದೇಶಿಕ ಸೈನ್ಯವು ಅರೆಕಾಲಿಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಸ್ವಯಂಸೇವಕರು ಪ್ರತಿ ವರ್ಷ 2 ತಿಂಗಳ ತರಬೇತಿಗೆ ಒಳಗಾಗಬೇಕಾಗುತ್ತದೆ. ವೈದ್ಯರು, ಉದ್ಯಮಿಗಳು ಎಂಜಿನಿಯರ್‌ಗಳಂಥ ವೃತ್ತಿಪರರು ಹೆಚ್ಚಾಗಿ ಪ್ರಾದೇಶಿಕ ಸೇನೆ ಸೇರುತ್ತಾರೆ.
ಸದ್ಯ , ಭಾರತದಲ್ಲಿ ಸುಮಾರು 14.75 ಲಕ್ಷ ಸಕ್ರಿಯ ಮಿಲಿಟರಿ ಸಿಬ್ಬಂದಿ ಮತ್ತು 16 ಲಕ್ಷಕ್ಕೂ ಹೆಚ್ಚು ಅರೆಸೈನಿಕ ಸಿಬ್ಬಂದಿ ಇದ್ದಾರೆ. ಏತನ್ಮಧ್ಯೆ, ಪಾಕಿಸ್ತಾನದಲ್ಲಿ 7 ಲಕ್ಷ ಸಕ್ರಿಯ ಸೇಣಾ ಸಿಬ್ಬಂದಿ ಮತ್ತು 2.9 ಲಕ್ಷ ಪ್ಯಾರಾಮಿಲಿಟರಿ ಸಿಬ್ಬಂದಿ ಇದ್ದಾರೆ.
ಮೇ 6ರಂದು ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆ ಪ್ರಕಾರ, ಪ್ರಾದೇಶಿಕ ಸೇನೆಯ 33ನೇ ನಿಯಮದದಂತೆ ಸೇನಾ ಮುಖ್ಯಸ್ಥರಿಗೆ ಪ್ರಾದೇಶಿಕ ಸೇನೆಯ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಯನ್ನು ಅನುಕೂಲಕ್ಕೆ ತಕ್ಕಂತೆ ನಿಯೋಜಿಸುವ ಅಧಿಕಾರ ನೀಡಿದೆ.
ಇದನ್ನೂ ಓದಿ Operation Sindoor: ಪಾಕಿಸ್ತಾನದ ಡ್ರೋನ್‌ಗಳನ್ನು ಹೊಡೆದುರುಳಿಸಿದ ಭಾರತೀಯ ಸೇನೆ; ವಿಡಿಯೋ ನೋಡಿ
ಪ್ರಾದೇಶಿಕ ಸೇನೆಯ ಪ್ರಮುಖರು
ಎಂ.ಎಸ್. ಧೋನಿ, ಲೆಫ್ಟಿನೆಂಟ್ ಕರ್ನಲ್ (ಗೌರವ).
ಕಪಿಲ್ ದೇವ್, ಲೆಫ್ಟಿನೆಂಟ್ ಕರ್ನಲ್ (ಗೌರವ).
ಸಚಿನ್ ಪೈಲಟ್, ಲೆಫ್ಟಿನೆಂಟ್ (ನಿಯೋಜಿತ ಅಧಿಕಾರಿ).
ಅನುರಾಗ್ ಠಾಕೂರ್, ಕ್ಯಾಪ್ಟನ್.
ಸಚಿನ್ ತೆಂಡುಲ್ಕರ್, ಗ್ರೂಪ್ ಕ್ಯಾಪ್ಟನ್.