Mumbai Horror : ಅಪರಾಧದ ಪ್ರಮುಖ ಸಾಕ್ಷಿ ಆಗಿದ್ದ ಉದ್ಯಮಿಯನ್ನೇ ಗುಂಡಿಕ್ಕಿ ಕೊಂದ ಹಂತಕರು!
Mumbai Horror : ಕ್ರಿಮಿನಲ್ ಪ್ರಕರಣವೊಂದರಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಮಹಾರಾಷ್ಟ್ರದ ಥಾಣೆಯ ಮೀರಾ ರೋಡ್ ಪ್ರದೇಶದಲ್ಲಿ ಈ ಕೊಲೆ ನಡೆದಿದೆ.
Vishakha Bhat
January 4, 2025
ಮುಂಬೈ: ಕ್ರಿಮಿನಲ್ ಪ್ರಕರಣವೊಂದರಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಮಹಾರಾಷ್ಟ್ರದ (Maharashtra) ಥಾಣೆಯ ಮೀರಾ ರೋಡ್ ಪ್ರದೇಶದಲ್ಲಿ ಈ ಕೊಲೆ ನಡೆದಿದ್ದು, ಉದ್ಯಮಿಯನ್ನು ಶಮ್ಸ್ ತಬ್ರೇಜ್ ಅನ್ಸಾರಿ ಅಲಿಯಾಸ್ ಸೋನು ಎಂದು ಗುರುತಿಸಲಾಗಿದೆ. ಅಪರಿಚಿತರಿಂದ ಈ ಕೃತ್ಯ ನಡೆದಿದೆ. (Mumbai Horror)
ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಮೀರಾ ರಸ್ತೆಯ ಶಾಂತಿ ಶಾಪಿಂಗ್ ಸೆಂಟರ್‌ನಲ್ಲಿ 35 ವರ್ಷದ ಶಮ್ಸ್ ತಬ್ರೇಜ್ ಅನ್ಸಾರಿ ತಲೆಗೆ ಸಮೀಪದಿಂದ ಗುಂಡು ಹಾರಿಸಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಕ್ರಿಮಿನಲ್ ಪ್ರಕರಣವೊಂದರಲ್ಲಿ ಅನ್ಸಾರಿ ಪ್ರಮುಖ ಸಾಕ್ಷಿಯಾಗಿದ್ದು, ಕಳೆದ ಹಲವು ದಿನಗಳಿಂದ ಕೊಲೆ ಬೆದರಿಕೆಗಳನ್ನು ಎದುರಿಸುತ್ತಿದ್ದರು. ಈ ಬಗ್ಗೆ ಅನ್ಸಾರಿ ಪೊಲೀಸರಿಗೂ ದೂರು ನೀಡಿದ್ದರು.
ದಾಳಿಯ ನಂತರ, ನಯಾ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಘಟನೆಯಾದ ಪ್ರದೇಶವನ್ನು ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳನ್ನು ಪತ್ತೆಮಾಡಲು ಸಿಸಿಟಿವಿ ದೃಶ್ಯಗಳು ಸೇರಿದಂತೆ ಪುರಾವೆಗಳನ್ನು ಸಂಗ್ರಹಿಸಲು ಪ್ರಾರಂಭಿಸಿದ್ದಾರೆ. ಅನ್ಸಾರಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರತ್ಯೇಕ ಘಟನೆಯಲ್ಲಿ ಡಿ 24 ರಂದು ಹರಿಯಾಣಾದ ಪಂಚಕುಲ ಜಿಲ್ಲೆಯ ಪಿಂಜೋರ್ ಬಳಿಯ ಬುರ್ಜ್ ಕೋಟ್ಯಾನ್‌ನ ಮೋರ್ನಿ ರಸ್ತೆಯಲ್ಲಿರುವ ಹೋಟೆಲ್‌ನ ಪಾರ್ಕಿಂಗ್ ಪ್ರದೇಶದಲ್ಲಿ ದರೋಡೆಕೋರರು ಮತ್ತು ಯುವತಿ ಸೇರಿದಂತೆ ಮೂವರನ್ನು ಕೊಲೆ ಮಾಡಿರುವದು ಬೆಳಕಿಗೆ ಬಂದಿದೆ.
ಮೃತಪಟ್ಟಿರುವವರನ್ನು ದೆಹಲಿಯ ನಜಾಫ್‌ಗಢ್‌ನ ವಿನಿತ್ ಗೆಹ್ಲೋಟ್ ಅಲಿಯಾಸ್ ವಿಕ್ಕಿ ಮಿತ್ರೌ (29), ಅದೇ ಪ್ರದೇಶದ ಅವರ ಸೋದರಳಿಯ ತಿರತ್ (17) ಮತ್ತು ಹರಿಯಾಣದ ಜಿಂದ್ ಜಿಲ್ಲೆಯ ಉಚ್ಚಾನ ಕಲಾನ್‌ನ ವಂದನಾ ಅಲಿಯಾಸ್ ನಿಯಾ (22) ಎಂದು ಗುರುತಿಸಲಾಗಿದೆ.
ವಿಕ್ಕಿಯ ಕ್ರಿಮಿನಲ್ ಹಿನ್ನೆಲೆ
ಮೃತರ ಪೈಕಿ ವಿಕ್ಕಿ ಅಪರಾಧ ಹಿನ್ನಲೆಯನ್ನು ಹೊಂದಿದ್ದು, ಪಂಚಕುಲ, ಚಂಡೀಗಢ ಮತ್ತು ಉತ್ತರಪ್ರದೇಶದಲ್ಲಿ ಕೊಲೆ, ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ, ದರೋಡೆ ಸೇರಿದಂತೆ ಹಲವು ಪ್ರಕರಣಗಳು ಆತನ ಮೇಲೆ ದಾಖಲಾಗಿವೆ. ಚಂಡೀಗಢ ಪೋಲೀಸರ ಅಪರಾಧ ವಿಭಾಗವು ಜಿರಾಕ್‌ಪುರನಲ್ಲಿ ಏಳು ಬಂದೂಕುಗಳೊಂದಿಗೆ ವಿಕ್ಕಿಯನ್ನು ಬಂಧಿಸಿದ್ದರು. ಈತ ಯುಪಿ, ಹರಿಯಾಣ ಮತ್ತು ದೆಹಲಿ ಎನ್‌ಸಿಆರ್‌ನಲ್ಲಿ ಸಕ್ರಿಯವಾಗಿರುವ ಮಂಜೀತ್ ಮಹಲ್ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದರು.
ಈ ಸುದ್ದಿಯನ್ನೂ ಓದಿ : Self Harming: ಪತ್ನಿಯ ಕಿರುಕುಳಕ್ಕೆ ಮತ್ತೊಂದು ಬಲಿ? ದೆಹಲಿಯ ಉದ್ಯಮಿ ಆತ್ಮಹತ್ಯೆ
https://youtu.be/DwsD5t5qWZk?si=oLNHIdDOcKPuf0sS