Crime News: ಮಂಗಳೂರಿನಲ್ಲೊಂದು ವಿಚಿತ್ರ ಘಟನೆ; ಕಾರು ಗುದ್ದಿಸಿ ಯುವಕನ ಕೊಲ್ಲಲು ಯತ್ನ, ಕಂಪೌಂಡ್‌ನಲ್ಲಿ ನೇತಾಡಿದ ಮಹಿಳೆ!
ಅಕ್ಕಪಕ್ಕದ ಮನೆಯವರ ನಡುವೆ ತಕರಾರು ಇದ್ದು, ಇದೇ ವಿಚಾರಕ್ಕೆ ಮುರಳಿ ಪ್ರಸಾದ್ನನ್ನು ಕೊಲ್ಲಲು ಸತೀಶ್ ಕುಮಾರ್ ಎಂಬಾತ ಸ್ಕೆಚ್ ಹಾಕಿದ್ದ. ಅದರಂತೆ ನಿನ್ನೆ ಮುರಳಿ ಪ್ರಸಾದ್ ಬೈಕ್ನಲ್ಲಿ ಹೋಗುತ್ತಿರುವುದನ್ನು ನೋಡಿ ಸತೀಶ್ ಕುಮಾರ್ ಕಾರಿನಿಂದ ಗುದ್ದಲು ಪ್ರಯತ್ನಿಸಿದ್ದಾನೆ.


ಮಂಗಳೂರು: ಇದು ಮಂಗಳೂರಿನಲ್ಲಿ (Mangaluru news) ನಡೆದ ವಿಚಿತ್ರ ಘಟನೆ (Crime news) ಹಾಗೂ ಕೊಲೆ ಯತ್ನದ (Murder Attempt) ಪ್ರಕರಣ. ಕಾರು ಚಾಲಕನೊಬ್ಬ ರಸ್ತೆ ಬದಿಯಲ್ಲಿದ್ದ ಬೈಕ್ ಸವಾರನಿಗೆ ವೇಗವಾಗಿ ಗುದ್ದಲು ಹೋಗಿದ್ದಾನೆ. ಆದರೆ ಅದರ ಬದಲು ಮಹಿಳೆಗೆ ಕಾರು ಡಿಕ್ಕಿ ಹೊಡೆದಿದ್ದು, ಗುದ್ದಿದ ರಭಸಕ್ಕೆ ಮಹಿಳೆ ಕಾಂಪೌಂಡ್ ಮೇಲೆ ನೇತಾಡಿದ್ದಾರೆ. ಈ ಎದೆ ಝಲ್ ಎನಿಸುವಂಥ ಭೀಕರ ಅಪಘಾತ ಸಿಸಿ ಟಿವಿ ಕ್ಯಾಮೆರದಲ್ಲೂ ಸೆರೆಯಾಗಿದೆ.
ಅಕ್ಕಪಕ್ಕದ ಮನೆಯವರ ನಡುವೆ ತಕರಾರು ಇದ್ದು, ಇದೇ ವಿಚಾರಕ್ಕೆ ಮುರಳಿ ಪ್ರಸಾದ್ನನ್ನು ಕೊಲ್ಲಲು ಸತೀಶ್ ಕುಮಾರ್ ಎಂಬಾತ ಸ್ಕೆಚ್ ಹಾಕಿದ್ದ. ಅದರಂತೆ ನಿನ್ನೆ ಮುರಳಿ ಪ್ರಸಾದ್ ಬೈಕ್ನಲ್ಲಿ ಹೋಗುತ್ತಿರುವುದನ್ನು ನೋಡಿ ಸತೀಶ್ ಕುಮಾರ್ ಕಾರಿನಿಂದ ಗುದ್ದಲು ಪ್ರಯತ್ನಿಸಿದ್ದಾನೆ. ಆದರೆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಮಹಿಳೆಗೆ ಗುದ್ದಿದ್ದಾನೆ. ಡಿಕ್ಕಿಯಾದ ರಭಸಕ್ಕೆ ಮಹಿಳೆ ಮನೆಯೊಂದರ ಕಂಪೌಂಡ್ ಮೇಲೆ ನೇತಾಡಿದ್ದಾರೆ.
ಬಳಿಕ ಸ್ಥಳೀಯರು ಓಡೋಡಿ ಬಂದು ಮಹಿಳೆಯನ್ನು ರಕ್ಷಿಸಿದ್ದಾರೆ. ಕಾರು ಚಾಲಕ ಸತೀಶ್ ಕುಮಾರ್ ವಿರುದ್ಧ ಉರ್ವಾ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಕೇಸ್ ದಾಖಲಾಗಿದೆ. ಮಂಗಳೂರು ಪಶ್ಚಿಮ ಸಂಚಾರಿ ಠಾಣೆಯಲ್ಲೂ ಸಹ ಹಿಟ್ ಆ್ಯಂಡ್ ರನ್ ಕೇಸ್ ಬುಕ್ ಆಗಿದೆ. ಮಹಿಳೆ ಹಾಗೂ ಯುವಕ ಬದುಕುಳಿದಿದ್ದು, ಗಾಯಗಳಾಗಿವೆ.
ಕ್ಷುಲ್ಲಕ ಕಾರಣಕ್ಕೆ ಬಸ್ ಕಂಡಕ್ಟರ್‌ಗೆ ಹಲ್ಲೆ
ಪಾವಗಡ: ಕ್ಷುಲ್ಲಕ ಕಾರಣಕ್ಕೆ ಸಾರಿಗೆ ಬಸ್ ನಿರ್ವಾಹಕ ಮತ್ತು ಪ್ರಯಾಣಿಕರ ಮಧ್ಯೆ ಜಗಳ ನಡೆದು, ನಿರ್ವಾಹಕನನ್ನು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ (Assault Case) ಪಾವಗಡ ಪಟ್ಟಣದಲ್ಲಿ ನಡೆದಿದೆ. ನಿರ್ವಾಹಕ ಅನಿಲ್ ಕುಮಾರ್ ಎಂಬುವವರ ಮೇಲೆ ಪ್ರಯಾಣಿಕರು ಹಲ್ಲೆ ನಡೆಸಿದ್ದು, ಈ ಸಂಬಂಧ ಪೊಲೀಸ್ ಠಾಣೆಗೆ ನಿರ್ವಾಹಕ ದೂರು ನೀಡಿದ್ದಾರೆ.
ಇತ್ತೀಚೆಗೆ ಶಕ್ತಿ ಯೋಜನೆ ಜಾರಿಯಾದ ನಂತರ ಮಹಿಳೆಯರು ಸೀಟಿಗಾಗಿ ಕಿತ್ತಾಡುವ ಪ್ರಕರಣಗಳು ಹೆಚ್ಚಾಗಿವೆ. ಅದೇ ರೀತಿ ನಿರ್ವಾಹಕ ಹಾಗೂ ಚಾಲಕರ ಮೇಲೆ ಪ್ರಯಾಣಿಕರು ಹಲ್ಲೆ ನಡೆಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಪಾವಗಡ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್ ನಿರ್ವಾಹಕ ಹಾಗೂ ಪ್ರಯಾಣಿಕರ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: Actress Soundarya: ಸೌಂದರ್ಯ ಸಾವಿನ ಹಿಂದೆ ಕೊಲೆ ಸಂಚು? ಬಹಿರಂಗ ಪತ್ರ ಬರೆದ ನಟಿಯ ಪತಿ ರಘು