Under-19 World Cup: ನ್ಯೂಜಿಲೆಂಡ್ ವಿರುದ್ಧ ಗೆದ್ದು ಇತಿಹಾಸ ಬರೆದ ನೈಜೀರಿಯಾ ವನಿತೆಯರು!
ಮಲೇಷ್ಯಾದಲ್ಲಿ ನಡೆಯುತ್ತಿರುವ ಮಹಿಳೆಯರ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ನೈಜೀರಿಯಾ ವನಿತೆಯರು ಇತಿಹಾಸ ಸೃಷ್ಟಿಸಿದ್ದಾರೆ. ಸೋಮವಾರ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ನೈಜೀರಿಯಾ ಗೆಲುವು ಪಡೆದಿದೆ. ಆ ಮೂಲಕ ಮಹತ್ವದ ಟೂರ್ನಿಯಲ್ಲಿ ಮೊದಲ ಗೆಲುವನ್ನು ದಾಖಲಿಸಿತು.
ಸಿಂಗಾಪುರ: ಇಲ್ಲಿ ನಡೆಯುತ್ತಿರುವ ಮಹಿಳೆಯರ ಅಂಡರ್ 19 ವಿಶ್ವಕಪ್ (Under-19 World Cup) ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ದ ಕೇವಲ ಎರಡು ರನ್‌ಗಳಿಂದ ನೈಜಿರಿಯಾ ತಂಡ ರೋಚಕ ಗೆಲುವು ಪಡೆಯಿತು. ಆ ಮೂಲಕ ಈ ಮಹತ್ವದ ಟೂರ್ನಿಯಲ್ಲಿ ಚೊಚ್ಚಲ ಗೆಲುವು ಪಡೆಯುವ ಮೂಲಕ ನೈಜೀರಿಯಾ ತಂಡ ಇತಿಹಾಸ ಸೃಷ್ಟಿಸಿದೆ. ಇದೇ ಮೊದಲ ಬಾರಿ ಮಹಿಳೆಯರ ಅಂಡರ್ 19 ವಿಶ್ವಕಪ್ ಟೂರ್ನಿಗೆ ಪ್ರವೇಶ ಮಾಡಿದ್ದ ನೈಜೀರಿಯಾ ತಂಡ ತನ್ನ ಮೊದಲ ಗೆಲುವಿನ ಮೂಲಕ ಸಂಭ್ರಮಿಸಿತು.
ಅಂದಹಾಗೆ ಮಳೆಯ ಕಾರಣ ಸಮೋವ್ ವಿರುದ್ದದ ನೈಜಿರಿಯಾ ತಂಡದ ಮೊದಲನೇ ಪಂದ್ಯ ರದ್ದಾಗಿತ್ತು. ಅಲ್ಲದೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೂ ಕೂಡ ಮಳೆ ಅಡ್ಡಿಪಡಿಸಿತ್ತು. ಈ ಹಿನ್ನೆಲೆಯಲ್ಲಿ ಈ ಪಂದ್ಯದ ಇನಿಂಗ್ಸ್ ಅನ್ನು 13 ಓವರ್‌ಗಳಿಗೆ ಇಳಿಸಲಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ನೈಜೀರಿಯಾ ತಂಡ ಬಹುಬೇಗ ಮೊದಲನೇ ವಿಕೆಟ್ ಅನ್ನು ಕಳೆದುಕೊಂಡಿತು. ಹನ್ನಾ ಒ ಕಾನರ್ ಅವರನ್ನು ವಿಕ್ಟರಿ ಔಟ್ ಮಾಡಿದ್ದರು. ಆ ಮೂಲಕ ನೈಜೀರಿಯಾ ತಂಡ ಒಂದು ರನ್‌ಗೆ ಒಂದು ವಿಕೆಟ್ ಕಳೆದುಕೊಂಡಿತ್ತು.
MS Dhoni: ಐಪಿಎಲ್‌ಗೆ ಅಭ್ಯಾಸ ಆರಂಭಿಸಿದ ಧೋನಿ
ನಂತರ ನಾಯಕಿ ಲಕ್ಕಿ ಪೀಟಿ ಅವರು 22 ಎಸೆತಗಳಲ್ಲಿ 18 ರನ್ ಗಳಿಸಿದರೆ, ಇವರಿಗೆ ಮತ್ತೊಂದು ತುದಿಯಲ್ಲಿ ಬೆಂಬಲ ನೀಡಿದ್ದ ಲಿಲಿಯನ್ ಉದೇ ಅವರು ಕೂಡ ನೈಜೀರಿಯಾಗೆ ನಿರ್ಣಾಯಕ ರನ್‌ಗಳನ್ನು ತಂದುಕೊಟ್ಟರು. ಅವರು ಆಡಿದ್ದ 25 ಎಸೆತಗಳಲ್ಲಿ 19 ರನ್‌ಗಳನ್ನು ಗಳಿಸಿದರು. ಅಂತಿಮವಾಗಿ ನೈಜೀರಿಯಾ ವನಿತೆಯರು ತನ್ನ ಪಾಲಿನ 13 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 65 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಎದುರಾಳಿ ನ್ಯೂಜಿಲೆಂಡ್‌ಗೆ 66 ರನ್‌ಗಳ ಸಾಧಾರಣ ಗುರಿಯನ್ನು ನೀಡಿದ್ದರು.
ಬಳಿಕ ಗುರಿ ಹಿಂಬಾಲಿಸಿದ ನ್ಯೂಜಿಲೆಂಡ್ ತಂಡದ ಪರ ಕೇಟ್ ಇರ್ವಿನ್ ಅವರು ಮೊಟ್ಟ ಮೊದಲ ಎಸೆತದಲ್ಲಿಯೇ ರನ್‌ಔಟ್ ಆದರು. ಉಸೇನ್ ಪೀಸ್ ಅವರು ಎಮ್ಮಾ ಮಕ್‌ಲೀಡ್ ಅವರನ್ನು ಬಹುಬೇಗ ಔಟ್ ಮಾಡಿದರು. ಆ ಮೂಲಕ ನ್ಯೂಜಿಲೆಂಡ್ ತಂಡ ಕೇವಲ 7 ರನ್‌ಗಳಿಗೆ 2 ವಿಕೆಟ್‌ಗಳನ್ನು ಕಳೆದುಕೊಂಡಿತು. ಅನಿಕಾ ಟಾಡ್ (19) ಹಾಗೂ ಎವೆ ವಾಲೆಂಡ್ ಅವರು 31 ರನ್‌ಗಳ ಜೊತೆಯಾಟವಾಡುವ ಮೂಲಕ ನ್ಯೂಜಿಲೆಂಡ್ ತಂಡವನ್ನು ಮೇಲೆತ್ತಿದ್ದರು. ಆದರೆ, ಲಕ್ಕಿ ಪೀಟಿ ಅವರು ಈ ಜತೆಯಾಟವನ್ನು ಮುರಿಯುವ ಮೂಲಕ ಪಂದ್ಯಕ್ಕೆ ಟರ್ನಿಂಗ್ ಪಾಯಿಂಟ್ ತಂದುಕೊಟ್ಟರು.
IND vs ENG: ಟೀಮ್ ಇಂಡಿಯಾಕ್ಕೆ ಕನ್ನಡಿಗ ರಘುರಾಮ್ ಭಟ್ ಮ್ಯಾನೇಜರ್
ಅಂದಹಾಗೆ ಕೊನೆಯ ಓವರ್‌ನಲ್ಲಿ ನ್ಯೂಜಿಲೆಂಡ್ ತಂಡಕ್ಕೆ 9 ರನ್ ಅಗತ್ಯವಿತ್ತು. ಈ ವೇಳೆ ತಾಷ್ ವಾಕ್ಲಿನ್ ಅವರು 18 ರನ್ ಗಳಿಸಿ ಕ್ರೀಸ್‌ನಲ್ಲಿ ಉಳಿಯುವ ಮೂಲಕ ಕಿವೀಸ್‌ಗೆ ಆಸರೆಯನ್ನು ನೀಡಿದ್ದರು. ಪಂದ್ಯದ ಫಲಿತಾಂಶ ನಿರ್ಧಾರದ ಓವರ್ ಅನ್ನು ಬೌಲ್ ಮಾಡುವ ಜವಾಬ್ದಾರಿಯನ್ನು ಉಡೇ ಅವರು ಪಡೆದಿದ್ದರು. ಈ ಒತ್ತಡದ ಸನ್ನಿವೇಶವನ್ನು ಕೊನೆಯ ಓವರ್‌ನ ಆರಂಭಿಕ ನಾಲ್ಕು ಎಸೆತಗಳಲ್ಲಿ ಇವರು ನಾಲ್ಕು ಸಿಂಗಲ್ ರನ್‌ಗಳನ್ನು ನೀಡಿದ್ದರು. ಐದನೇ ಎಸೆತವನ್ನು ಡಾಟ್ ಹಾಗೂ ಆರನೇ ಮತ್ತು ಅಂತಿಮ ಎಸೆತದಲ್ಲಿ ಕಿವೀಸ್ ಎರಡು ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ನ್ಯೂಜಿಲೆಂಡ್ ತಂಡ ಕೇವಲ ಎರಡು ರನ್‌ಗಳಿಂದ ಸೋಲು ಅನುಭವಿಸಿತು.
ಈ ಐತಿಹಾಸಿಕ ಗೆಲುವಿನ ಮೂಲಕ ನೈಜೀರಿಯಾ ತಂಡ ಟೂರ್ನಿಯ ಸಿ ಗುಂಪಿನ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ. ದಕ್ಷಿಣ ಆಫ್ರಿಕಾ ತಂಡ ಎರಡನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಸಮೋವ್ ಮತ್ತು ನ್ಯೂಜಿಲೆಂಡ್ ತಂಡಗಳು ಇವೆ. ನೈಜೀರಿಯಾ ತಂಡ ತನ್ನ ಮುಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.