IND vs ENG: ಟೀಮ್ ಇಂಡಿಯಾಕ್ಕೆ ಕನ್ನಡಿಗ ರಘುರಾಮ್ ಭಟ್ ಮ್ಯಾನೇಜರ್
IND vs ENG: 2022ರಿಂದ ಕೆಎಸ್‌ಸಿಎ ಅಧ್ಯಕ್ಷರಾಗಿರುವ ರಘುರಾಮ್ ಭಟ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. 1983ರಲ್ಲಿ ಭಾರತ ತಂಡದ ಪರ 2 ಟೆಸ್ಟ್ ಪಂದ್ಯಗಳನ್ನು ಆಡಿದ್ದರು.
ಬೆಂಗಳೂರು: ಪ್ರವಾಸಿ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯನ್ನಾಡುವ ಭಾರತ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ರಘುರಾಮ್ ಭಟ್ ಅವರು ನೇಮಕವಾಗಿದ್ದಾರೆ. ಭಟ್ ಅವರು ಇದೇ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುವುದು ಇದೇ ಮೊದಲು.
2022ರಿಂದ ಕೆಎಸ್‌ಸಿಎ ಅಧ್ಯಕ್ಷರಾಗಿರುವ ರಘುರಾಮ್ ಭಟ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. 1983ರಲ್ಲಿ ಭಾರತ ತಂಡದ ಪರ 2 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. 4 ವಿಕೆಟ್ ಪಡೆದಿದ್ದಾರೆ. ಎಡಗೈ ಸ್ಪಿನ್ನರ್ ಆಗಿದ್ದ ಅವರು ಕರ್ನಾಟಕ ತಂಡದ ನಾಯಕನಾಗಿದ್ದರು. ಒಟ್ಟಾರೆ 82 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅವರು 374 ವಿಕೆಟ್‌ಗಳನ್ನು ಕಿತ್ತಿದ್ದಾರೆ. 12 ಲಿಸ್ಟ್ ಎ ಪಂದ್ಯಳಿಂದ 12 ವಿಕೆಟ್ ಕಲೆಹಾಕಿದ್ದಾರೆ.
ಭಾರತ ತಂಡವು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಸೋತ ನಂತರ ಬಿಸಿಸಿಐ ಶಿಸ್ತು ಸಂಹಿತೆಯನ್ನು ಬಿಗಿಗೊಳಿಸಿ 10 ಅಂಶಗಳ ನಿಯಮಾವಳಿಯನ್ನು ಜಾರಿ ಮಾಡಿತ್ತು. ಈ ನಿಯಮಗಳು ಇಂಗ್ಲೆಂಡ್ ವಿರುದ್ಧದ ಸರಣಿಯಿಂದಲೇ ಈ ನಿಯಮ ಪಾಲನೆಯಾಗಲಿದೆ. ಅದರಂತೆ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುತ್ತಿರುವ ಭಾರತ ತಂಡದ ಆಟಗಾರರಿಗೆ ಪ್ರತ್ಯೇಕ ವಾಹನ ನೀಡದೆ ತಂಡದ ಬಸ್‌ನಲ್ಲಿ ಪ್ರಯಾಣಿಸುವುದು ಕಡ್ಡಾಯ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ)ಬಿಸಿಸಿಐ ಸೂಚಿಸಿದೆ.
Mohammed Shami's bowling practice session at Eden Gardens ahead of India vs England 1st T20#INDvsENG pic.twitter.com/a9hRYekevK
— Samar (@SamarPa71046193) January 20, 2025
2023ರಲ್ಲಿ ಏಕದಿನ ವಿಶ್ವಕಪ್ ಫೈನಲ್ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವೇಗಿ ಮೊಹಮ್ಮದ್ ಶಮಿ ಅವರು 14 ತಿಂಗಳ ಬಳಿಕ ಭಾರತ ಪರ ಆಡುತ್ತಿರುವ ಮೊದಲ ಸರಣಿ ಇದಾಗಿದೆ. ಶಮಿ ಭಾನುವಾರ ತಮ್ಮ ಎಡಗಾಲು ಮಂಡಿಗೆ ದಪ್ಪ ಟೇಪ್ ಕಟ್ಟಿಕೊಂಡು ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಮಾರ್ಗದರ್ಶನದಲ್ಲಿ ಬೌಲಿಂಗ್ ಮಾಡಿದರು.
ಸರಣಿ ವೇಳಾಪಟ್ಟಿ
ಮೊದಲ ಪಂದ್ಯ; ಜ. 22 ಕೋಲ್ಕತಾ
ದ್ವಿತೀಯ ಪಂದ್ಯ; ಜ. 25 ಚೆನ್ನೈ
ತೃತೀಯ ಪಂದ್ಯ; ಜ. 28 ರಾಜ್‌ಕೋಟ್
ನಾಲ್ಕನೇ ಪಂದ್ಯ;ಫೆ. 6 ನಾಗ್ಪುರ
ಐದನೇ ಪಂದ್ಯ;ಫೆ. 12 ಅಹ್ಮದಾಬಾದ್