ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಐಪಿಎಲ್‌ನಲ್ಲೂ ಆಟಗಾರರ ಕುಟುಂಬಕ್ಕೆ ನಿರ್ಬಂಧ ಹೇರಿದ ಬಿಸಿಸಿಐ

ಪಂದ್ಯ ಇರುವ ದಿನದಂದು ಈಗಾಗಲೇ ಕುಟುಂಬಸ್ಥರ ಪ್ರವೇಶ ನಿಷೇಧಿಸಲಾಗಿತ್ತು. ಇದೀಗ ಅಭ್ಯಾಸ ಪಂದ್ಯಗಳಿಗೂ ಡ್ರೆಸ್ಸಿಂಗ್ ರೂಂಗೆ ಪ್ರವೇಶಕ್ಕೆ ನಿರ್ಬಂಧ ಹೇರಲು ಮುಂದಾಗಿದೆ. ಪಂದ್ಯದ ವೇಳೆ ಆಟಗಾರರು ಕನಿಷ್ಠ 2 ಓವರ್‌ಗಳಿಗಾದರೂ ಕಿತ್ತಳೆ, ನೇರಳೆ ಬಣ್ಣದ ಕ್ಯಾಪ್‌ ಧರಿಸಬೇಕು. ಪಂದ್ಯದ ಬಳಿಕ ಪ್ರೆಸೆಂಟೇಷನ್‌ ವೇಳೆ ಆಟಗಾರರು ತೋಳಿಲ್ಲದ ಜೆರ್ಸಿಗಳನ್ನು ಧರಿಸುವಂತಿಲ್ಲ.

ಐಪಿಎಲ್‌ನಲ್ಲೂ ಆಟಗಾರರ ಕುಟುಂಬಕ್ಕೆ ನಿರ್ಬಂಧ ಹೇರಿದ ಬಿಸಿಸಿಐ

Profile Abhilash BC Mar 5, 2025 9:32 AM

ನವದೆಹಲಿ: ಟೀಮ್‌ ಇಂಡಿಯಾ ಆಟಗಾರರ ಕ್ರಿಕೆಟ್‌ ಸರಣಿಯ ಪ್ರವಾಸದ ವೇಳೆ ಆಟಗಾರರ ಕುಟುಂಬದ ಪಾಲ್ಗೊಳ್ಳುವಿಕೆಗೆ ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿ ಮಾಡಿದ್ದ ಬಿಸಿಸಿಐ, ಇದೀಗ ಐಪಿಎಲ್‌(IPL 2025) ಗೂ ಅದೇ ನಿಯಮಗಳನ್ನು ಜಾರಿ ಮಾಡುತ್ತಿದೆ. ಅಲ್ಲದೆ ಆಟಗಾರರು ತಂಡದ ಬಸ್‌ನಲ್ಲಿ ಪ್ರಯಾಣಿಸುವುದನ್ನು ಕಡ್ಡಾಯಗೊಳಿಸಿದೆ, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಆಟಗಾರರು ಪಾಲಿಸಬೇಕಾದ ನಿಯಮವನ್ನು ಐಪಿಎಲ್‌ ನಲ್ಲೂ ಪಾಲಿಸಬೇಕಿದೆ.

ಆಟಗಾರರ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಪ್ರತ್ಯೇಕ ವಾಹನದಲ್ಲಿ ಬರಬೇಕು. ಅವರು ಪ್ರ್ಯಾಕ್ಟೀಸ್‌ ಸೆಶನ್‌ ಗಳನ್ನು ಹಾಸ್ಪಿಟಾಲಿಟಿ ಏರಿಯಾದಲ್ಲಿ ಕುಳಿತು ವೀಕ್ಷಿಸಬಹುದು. ಹೆಚ್ಚುವರಿ ಸಿಬ್ಬಂದಿಗಳ (ಥ್ರೋಡೌನ್‌ ತಜ್ಞ, ನೆಟ್‌ ಬೌಲರ್)‌ ಪಟ್ಟಿಯನ್ನು ಬಿಸಿಸಿಐ ಅನುಮತಿಗೆ ಕಳುಹಿಸಬೇಕು.

ಪಂದ್ಯ ಇರುವ ದಿನದಂದು ಈಗಾಗಲೇ ಕುಟುಂಬಸ್ಥರ ಪ್ರವೇಶ ನಿಷೇಧಿಸಲಾಗಿತ್ತು. ಇದೀಗ ಅಭ್ಯಾಸ ಪಂದ್ಯಗಳಿಗೂ ಡ್ರೆಸ್ಸಿಂಗ್ ರೂಂಗೆ ಪ್ರವೇಶಕ್ಕೆ ನಿರ್ಬಂಧ ಹೇರಲು ಮುಂದಾಗಿದೆ. ಪಂದ್ಯದ ವೇಳೆ ಆಟಗಾರರು ಕನಿಷ್ಠ 2 ಓವರ್‌ಗಳಿಗಾದರೂ ಕಿತ್ತಳೆ, ನೇರಳೆ ಬಣ್ಣದ ಕ್ಯಾಪ್‌ ಧರಿಸಬೇಕು. ಪಂದ್ಯದ ಬಳಿಕ ಪ್ರೆಸೆಂಟೇಷನ್‌ ವೇಳೆ ಆಟಗಾರರು ತೋಳಿಲ್ಲದ ಜೆರ್ಸಿಗಳನ್ನು ಧರಿಸುವಂತಿಲ್ಲ. ಅಲ್ಲದೇ ಯಾವುದೇ ಜೆರ್ಸಿ ಸಂಖ್ಯೆಗಳ ಬದಲಾವಣೆ ಮಾಡುವುದಿದ್ದರೆ 24 ಗಂಟೆಗೂ ಮುಂಚೆ ತಿಳಿಸಬೇಕು.

ಇದನ್ನೂ ಓದಿ IPL 2025: ಕೋಲ್ಕತಾ ನೈಟ್‌ ರೈಡರ್ಸ್‌ಗೆ ಅಜಿಂಕ್ಯ ರಹಾನೆ ನಾಯಕ, ವೆಂಕಟೇಶ್‌ ಅಯ್ಯರ್‌ ಉಪ ನಾಯಕ!

ಕ್ರಿಕೆಟಿಗನೊಬ್ಬ 45ಕ್ಕೂ ಅಧಿಕ ದಿನಗಳ ಕಾಲ ವಿದೇಶಿ ಕ್ರಿಕೆಟ್‌ ಪ್ರವಾಸದಲ್ಲಿದ್ದರೆ, ಆಗ ಕುಟುಂಬ ಸದಸ್ಯರು ಗರಿಷ್ಠ 2 ವಾರಗಳ ಕಾಲ ಅವರ ಜತೆಗಿರಬಹುದು. 45 ದಿನಗಳಿಗಿಂತ ಕಡಿಮೆ ಅವಧಿಯ ಪ್ರವಾಸಗಳಿಗೆ ಕುಟುಂಬಗಳು ಆಟಗಾರರ ಜತೆಯಲ್ಲಿ ಬರಲು ಅನುಮತಿ ಇಲ್ಲ. ಇದೇ ಕಾರಣಕ್ಕೆ ಮೂರು ವಾರಗಳ ಚಾಂಪಿಯನ್ಸ್‌ ಟ್ರೋಫಿಗೆ ಆಟಗಾರರ ಜತೆ ಕುಟುಂಬ ಸದಸ್ಯರಿಗೆ ಅನುಮತಿ ನೀಡಿಲ್ಲ. ಆದರೂ ಕೊನೆಗೆ ಬಿಸಿಸಿಐ ಒಂದು ಪಂದ್ಯಕ್ಕೆ ಮಾತ್ರ ಅವಕಾಶ ನೀಡಿತ್ತು.

ಐಪಿಎಲ್‌ ಆರಂಭ

ಬಹುನಿರೀಕ್ಷಿತ 18ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಮಾ. 22ರಂದು ಆರಂಭವಾಗಲಿದೆ. ಮೇ 25ರ ತನಕ ನಡೆಯಲಿದೆ. ಮಾ. 22ರಂದು ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಹಾಲಿ ಚಾಂಪಿಯ್‌ ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಕಣಕ್ಕಿಳಿಯುವ ಮೂಲಕ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್‌ ಲೀಗ್‌ಗೆ ಚಾಲನೆ ದೊರೆಯಲಿದೆ. ಒಟ್ಟು 10 ತಂಡಗಳು ಪರಸ್ಪರ ಸೆಣಸಾಡಲಿದ್ದು, 13 ತಾಣಗಳಲ್ಲಿ 74 ಪಂದ್ಯಗಳು ನಡೆಯಲಿವೆ.