ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Mysterious Illness: ಜಮ್ಮು-ಕಾಶ್ಮೀರದಲ್ಲಿ 17 ಮಂದಿ ಜೀವ ತೆಗೆದ ನಿಗೂಢ ಕಾಯಿಲೆ- ತಜ್ಞರಿಂದ ಶಾಕಿಂಗ್‌ ಸಂಗತಿ ಬಯಲು

ಜಮ್ಮು ಮತ್ತು ಕಾಶ್ಮೀರದಲ್ಲಿ ಆತಂಕ ಸೃಷ್ಟಿಸಿದ್ದ ನಿಗೂಢ ಕಾಯಿಲೆ ಹಿಂದಿನ ಕಾರಣ ತಿಳಿದು ಬಂದಿದೆ. ಇದೀಗ ತಜ್ಞರು ಹೇಳುವ ಪ್ರಕಾರ ಈ ಸಾವಿಗೆ ವೈರಸ್ ಅಥವಾ ಬ್ಯಾಕ್ಟೀರಿಯಾ ಕಾರಣವಲ್ಲ. ಬದಲಾಗಿ ಕ್ಯಾಡ್ಮಿಮಮ್‌ ಟಾಕ್ಸಿನ್​ನಿಂದ ಜನರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಜಮ್ಮು-ಕಾಶ್ಮೀರದ ನಿಗೂಢ ಕಾಯಿಲೆಗೆ ಕಾರಣ ಪತ್ತೆ ; ಬ್ಯಾಕ್ಟಿರಿಯಾನೂ ಅಲ್ಲ, ವೈರಸ್ಸೂ ಅಲ್ಲ! ಹಾಗಾದ್ರೆ ಮತ್ತಿನ್ನೇನು?

Mystery Illness j&K

Profile Vishakha Bhat Jan 24, 2025 5:17 PM

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu& Kashmir) ರಾಜೌರಿಯಲ್ಲಿ ಕನಿಷ್ಠ 17 ಜೀವಗಳನ್ನು ಬಲಿಪಡೆದು ಆತಂಕ ಸೃಷ್ಟಿಸಿದ್ದ ನಿಗೂಢ ಕಾಯಿಲೆ (Mysterious Illness) ಹಿಂದಿನ ಕಾರಣ ಇದೀಗ ಬಯಲಾಗಿದೆ. ಸಾವಿಗೆ ಕಾರಣವನ್ನು ತಜ್ಞರು ಪತ್ತೆ ಮಾಡಿದ್ದಾರೆ. ಕಳೆದ ತಿಂಗಳಿನಿಂದ ಬಧಾಲ್ (Badhal) ಗ್ರಾಮದಲ್ಲಿ ಹಲವು ಜನ ಮೃತಪಟ್ಟಿದ್ದರು. ಅದರಲ್ಲಿ ಹೆಚ್ಚಿನವರು 18 ವರ್ಷಕ್ಕೂ ಕಡಿಮೆ ವಯಸ್ಸಿನವರಾಗಿದ್ದರು. ಸಾವಿಗೆ ಕಾರಣವನ್ನು ತನಿಖೆ ಮಾಡಲು ಕೇಂದ್ರ ತಂಡವನ್ನು ಕೂಡ ರಚಿಸಲಾಗಿತ್ತು. ಇದೀಗ ತಜ್ಞರು ಹೇಳುವ ಪ್ರಕಾರ ಈ ಸಾವಿಗೆ ವೈರಸ್‌ ಅಥವಾ ಬ್ಯಾಕ್ಟೀರಿಯಾ ಕಾರಣವಲ್ಲ. ಕ್ಯಾಡ್ಮಿಮಮ್‌ ಟಾಕ್ಸಿನ್​ನಿಂದ ಜನರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್​​ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಪ್ರಕಾರ ವಿಚಿತ್ರ ಕಾಯಿಲೆಯಿಂದ ಜೀವ ಕಳೆದುಕೊಂಡವರ ದೇಹದ ಸ್ಯಾಂಪಲ್​ಗಳನ್ನು ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್​ ಟೆಕ್ಸಿಲಕೊಲಜಿ ರಿಸರ್ಚ್​​​ ಲಖನೌನಲ್ಲಿ ಪರೀಕ್ಷಿಸಲಾಗಿದೆ. ಸಾವನ್ನಪ್ಪಿದವರ ದೇಹದಲ್ಲಿ ಕ್ಯಾಡಮಿಯಮ್ ಎಂಬ ವಿಷ ಪತ್ತೆಯಾಗಿದೆ. ಜನರು ಯಾವುದೇ ಬ್ಯಾಕ್ಟೀರಿಯಾ ಅಥವಾ ವೈರಸ್​ನಿಂದ ಮೃತಪಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.



ಕ್ಯಾಡ್ಮಿಮಮ್‌ ಹೆಚ್ಚು ವಿಷಕಾರಿ ಲೋಹವಾಗಿದ್ದು ಅದು ದೇಹದೊಳಗೆ ಸೇರಿಕೊಂಡ ನಂತರ ಹಲವಾರು ಕಾಯಿಲೆಗಳನ್ನು ಉಂಟುಮಾಡಬಹುದು. ಕ್ಯಾಡ್ಮಿಮಮ್‌ಟಾಕ್ಸಿನ್ ಯಾವ ರೂಪದಲ್ಲಿ ಬೇಕಾದರೂ ಮನುಷ್ಯನ ದೇಹವನ್ನು ಸೇರಬಹುದು. ಈ ಒಂದು ವಿಷ ಗಾಳಿಯ ಮೂಲಕ ಇಲ್ಲವೇ ನಾವು ಸೇವಿಸುವ ಆಹಾರ ಹಾಗೂ ನೀರಿನ ಮೂಲಕವೂ ಮನುಷ್ಯರ ದೇಹಕ್ಕೆ ಸೇರಿ ಸಾವಿಗೆ ಕಾರಣವಾಗಬಹುದು ಎಂದು ಹೇಳಲಾಗಿದೆ.

ಈ ಸುದ್ದಿಯನ್ನೂ ಓದಿ : Jammu & Kashmir: ನಿಗೂಢ ಕಾಯಿಲೆಗೆ 8 ಮಕ್ಕಳು ಬಲಿ; ಜಮ್ಮು-ಕಾಶ್ಮೀರದಲ್ಲಿ ಕಟ್ಟೆಚ್ಚರ

ಮೃತರಿಂದ ಪಡೆಯಲಾದ ಸ್ಯಾಂಪಲ್ಸ್​ಗಳನ್ನು ನ್ಯಾಷನಲ್ ಸೆಂಟರ್ ಆಫ್ ಡಿಸೀಸ್ ಕಂಟ್ರೋಲ್ ಹಾಗೂ ನ್ಯಾಷನಲ್ ಇನ್ಸ್​ಟಿಟ್ಯೂಟ್ ಆಫ್ ವೈರಾಲಾಜಿ ಪುಣೆಯಂತಹ ಟಾಪ್ ಲ್ಯಾಬರೋಟರಿಗಳಲ್ಲಿ ಪರೀಕ್ಷೆ ಮಾಡಲಾಗಿದೆ. ಈ ಎರಡು ಕಡೆ ಮೃತರ ದೇಹದಲ್ಲಿ ನ್ಯೂರೊಟಾಕ್ಸಿನ್ಸ್​ನಿಂದಾಗಿ ಬ್ರೇನ್ ಡ್ಯಾಮೇಜ್ ಆಗಿ ಸಾವು ಸಂಭವಿಸಿದ ಬಗ್ಗೆ ಸ್ಪಷ್ಟನೆ ಬಂದಿದೆ ಎಂದು ರಜೌರಿಯ ಸರ್ಕಾರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ ಎಎಸ್​ ಭಾಟಿಯಾ ಹೇಳಿದ್ದಾರೆ.