#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

ODI tri-series: 47ನೇ ಶತಕ ಸಿಡಿಸಿ ಎಬಿ ಡಿ ವಿಲಿಯರ್ಸ್‌ ದಾಖಲೆ ಸರಿಗಟ್ಟಿದ ಕೇನ್‌ ವಿಲಿಯಮ್ಸನ್‌!

Kane Williamson scored 14th odi hundred: ದಕ್ಷಿಣ ಆಫ್ರಿಕಾ ವಿರುದ್ದ ಏಕದಿನ ತ್ರಿಕೋನ ಸರಣಿಯ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡದ ಮಾಜಿ ನಾಯಕ ಕೇನ್‌ ವಿಲಿಯಮ್ಸನ್‌ ತಮ್ಮ ಒಡಿಐ ವೃತ್ತಿ ಜೀವನದ 47ನೇ ಶತಕವನ್ನು ಸಿಡಿಸಿದ್ದಾರೆ. ಆ ಮೂಲಕ ದಕ್ಷಿಣ ಆಫ್ರಿಕಾ ದಿಗ್ಗಜ ಎಬಿ ಡಿ ವಿಲಿಯರ್ಸ್‌ ದಾಖಲೆಯನ್ನು ಸರಿಗಟ್ಟಿದ್ದಾರೆ.

ಎಬಿ ಡಿ ವಿಲಿಯರ್ಸ್‌ ದಾಖಲೆ ಸರಿಗಟ್ಟಿದ ಕೇನ್‌ ವಿಲಿಯಮ್ಸನ್‌!

Kane Williamson scored 14th odi hundred

Profile Ramesh Kote Feb 10, 2025 7:36 PM

ಲಾಹೋರ್‌: ದಕ್ಷಿಣ ಆಫ್ರಿಕಾ ವಿರುದ್ಧ ತ್ರಿಕೋನ ಏಕದಿನ ಸರಣಿಯ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡದ ಹಿರಿಯ ಬ್ಯಾಟ್ಸ್‌ಮನ್‌ ಕೇನ್‌ ವಿಲಿಯಮ್ಸನ್‌ ತಮ್ಮ ಒಡಿಐ ವೃತ್ತಿ ಜೀವನದ 14ನೇ ಹಾಗೂ ಒಟ್ಟಾರೆ 47ನೇ ಶತಕವನ್ನು ಪೂರ್ಣಗೊಳಿಸಿದರು. ಆ ಮೂಲಕ ದಕ್ಷಿಣ ಆಫ್ರಿಕಾ ದಿಗ್ಗಜ ಎಬಿ ಡಿ ವಿಲಿಯರ್ಸ್‌ ಅವರ ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ಅಂದ ಹಾಗೆ ವಿಲಿಯಮ್ಸನ್‌ ಶತಕದ ಬಲದಿಂದ ನ್ಯೂಜಿಲೆಂಡ್‌ ತಂಡ 6 ವಿಕೆಟ್‌ಗಳ ಗೆಲುವು ಪಡೆಯಿತು. ಇದಕ್ಕೂ ಮುನ್ನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿಯೂ ಕಿವೀಸ್‌ ಗೆದ್ದು ಬೀಗಿತ್ತು. ಶತಕದ ಮೂಲಕ ಕೇನ್‌ ವಿಲಿಯಮ್ಸನ್‌ ಫಾರ್ಮ್‌ಗೆ ಮರಳಿರುವುದು ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ನಿಮಿತ್ತ ಕಿವೀಸ್‌ಗೆ ಪ್ಲಸ್‌ ಪಾಯಿಂಟ್‌ ಆಗಿದೆ.

ಇಲ್ಲಿಮ ಗಡಾಫಿ ಸ್ಟೇಡಿಯಂನಲ್ಲಿ ಸೋಮವಾರ ನಡೆದಿದ್ದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ 305 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ನ್ಯೂಜಿಲೆಂಡ್‌ ತಂಡದ ಪರ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಕೇನ್‌ ವಿಲಿಯಮ್ಸನ್‌ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಅವರು ಕೇವಲ 72 ಎಸೆತಗಳಲ್ಲಿ ಶತಕವನ್ನು ಸಿಡಿಸಿದ್ದರು. ತಮ್ಮ ಏಕದಿನ ವೃತ್ತಿ ಜೀವನದ ಎರಡನೇ ವೇಗದ ಶತಕವನ್ನು ಸಿಡಿಸಿದರು. ಇದು ಅವರ 14 ಏಕದಿನ ಶತಕವಾಗಿದೆ. ಒಟ್ಟು 113 ಎಸೆತಗಳನ್ನು ಆಡಿದ ವಿಲಿಯಮ್ಸನ್‌, ಎರಡು ಸಿಕ್ಸರ್‌ ಹಾಗೂ 13 ಬೌಂಡರಿಗಳೊಂದಿಗೆ ಅಜೇಯ 133 ರನ್‌ಗಳನ್ನು ದಾಖಲಿಸಿದರು.

SA vs NZ: ಏಕದಿನ ಪದಾರ್ಪಣೆ ಪಂದ್ಯದಲ್ಲೇ 150 ರನ್ ಸಿಡಿಸಿ ವಿಶ್ವ ದಾಖಲೆ ಬರೆದ ಮ್ಯಾಥ್ಯೂ ಬ್ರಿಯಝ್ಕಾ!

ಎಬಿ ಡಿ ವಿಲಿಯರ್ಸ್‌ ದಾಖಲೆ ಸರಿಗಟ್ಟಿದ ಕೇನ್‌ ವಿಲಿಯಮ್ಸನ್‌

ಈ ಶತಕದೊಂದಿಗೆ ಕೇನ್‌ ವಿಲಿಯಮ್ಸನ್‌, ದಕ್ಷಿಣ ಆಫ್ರಿಕಾ ದಿಗ್ಗಜ ಎಬಿ ಡಿ ವಿಲಿಯರ್ಸ್‌ ಅವರ ಒಟ್ಟಾರೆ ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ಕೇನ್‌ ವಿಲಿಯಮ್ಸನ್‌ ಇದೀಗ ಮೂರು ಸ್ವರೂಪಗಳಲ್ಲಿ ಆಡಿದ 365 ಪಂದ್ಯಗಳಿಂದ 47 ಶತಕಗಳನ್ನು ಬಾರಿಸಿದ್ದಾರೆ. ಎಬಿ ಡಿ ವಿಲಿಯರ್ಸ್‌ ಎಲ್ಲಾ ಸ್ವರೂಪದಲ್ಲಿಯೂ 420 ಪಂದ್ಯಗಳಿಂದ 47 ಶತಕಗಳನ್ನು ಸಿಡಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಕೇನ್‌ ವಿಲಿಯಮ್ಸನ್‌ ಮತ್ತು ಎಬಿ ಡಿ ವಿಲಿಯರ್ಸ್‌ 14ನೇ ಸ್ಥಾನವನ್ನು ಜಂಟಿಯಾಗಿ ಅಲಂಕರಿಸಿದ್ದಾರೆ. 100 ಶತಕಗಳೊಂದಿಗೆ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅಗ್ರ ಸ್ಥಾನದಲ್ಲಿದ್ದಾರೆ.



ಭಾರತ ತಂಡದ ನಾಯಕ ರೋಹಿತ್‌ ಶರ್ಮಾ 49ನೇ ಶತಕವನ್ನು ಸಿಡಿಸಿದ ಒಂದು ದಿನದ ಬಳಿಕ ಕೇನ್‌ ವಿಲಿಯಮ್ಸನ್‌ ತಮ್ಮ 47ನೇ ಶತಕವನ್ನು ಪೂರ್ಣಗೊಳಿಸಿದ್ದಾರೆ. ವಿಲ್‌ ಯಂಗ್‌ ವಿಕೆಟ್‌ ಒಪ್ಪಿಸಿದ ಬಳಿಕ ಡೆವೋನ್‌ ಕಾನ್ವೇ ಜೊತೆ ಸೇರಿದ ವಿಲಿಯಮ್ಸನ್‌ ಮುರಿಯದ ಎರಡನೇ ವಿಕೆಟ್‌ಗೆ 187 ರನ್‌ಗಳನ್ನು ಕಲೆ ಹಾಕಿದರು. ಕಾನ್ವೇ 97 ರನ್‌ಗಳಿಗೆ ಔಟ್‌ ಆದರು. ಆ ಮೂಲಕ ಕೇವಲ ಮೂರು ರನ್‌ಗಳ ಅಂತರದಲ್ಲಿ ಶತಕವನ್ನು ತಪ್ಪಿಸಿಕೊಂಡರು. ಅಂದ ಹಾಗೆ ಕೇನ್‌ ವಿಲಿಯಮ್ಸನ್‌, ಫಾಸ್ಟ್‌ ಹಾಗೂ ಸ್ಪಿನ್ನರ್‌ಗಳ ಎದುರು ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದರು.



ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ಗಳ ವಿವರ

  • ಸಚಿನ್ ತೆಂಡೂಲ್ಕರ್ (ಭಾರತ) - ಪಂದ್ಯಗಳು: 664, ಶತಕಗಳು: 100
  • ವಿರಾಟ್ ಕೊಹ್ಲಿ (ಭಾರತ) - ಪಂದ್ಯಗಳು: 544, ಶತಕಗಳು: 81
  • ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ/ಐಸಿಸಿ) - ಪಂದ್ಯಗಳು: 560, ಶತಕಗಳು: 71
  • ಕುಮಾರ್ ಸಂಗಕ್ಕಾರ (ಏಷ್ಯಾ/ಐಸಿಸಿ/ಶ್ರೀಲಂಕಾ) - ಪಂದ್ಯಗಳು: 594, ಶತಕಗಳು: 63
  • ಜಾಕ್‌ ಕಾಲಿಸ್ (ಆಫ್ರಿಕಾ/ಐಸಿಸಿ/ದಕ್ಷಿಣ ಆಫ್ರಿಕಾ) - ಪಂದ್ಯಗಳು: 519, ಶತಕಗಳು: 62
  • ಹಾಶೀಮ್ ಆಮ್ಲಾ (ದಕ್ಷಿಣ ಆಫ್ರಿಕಾ/ವಿಶ್ವ) - ಪಂದ್ಯಗಳು: 349, ಶತಕಗಳು: 55
  • ಮಹೇಲಾ ಜಯವರ್ಧನೆ (ಏಷ್ಯಾ/ಶ್ರೀಲಂಕಾ) - ಪಂದ್ಯಗಳು: 652, ಶತಕಗಳು: 54
  • ಬ್ರಿಯಾನ್ ಲಾರಾ (ಐಸಿಸಿ/ವೆಸ್ಟ್ ಇಂಡೀಸ್) - ಪಂದ್ಯಗಳು: 430, ಶತಕಗಳು: 53
  • ಜೋ ರೂಟ್ (ಇಂಗ್ಲೆಂಡ್) - ಪಂದ್ಯಗಳು: 357, ಶತಕಗಳು: 52
  • ರೋಹಿತ್ ಶರ್ಮಾ (ಭಾರತ) - ಪಂದ್ಯಗಳು: 493, ಶತಕಗಳು: 49
  • ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) - ಪಂದ್ಯಗಳು: 383, ಶತಕಗಳು: 49
  • ರಾಹುಲ್ ದ್ರಾವಿಡ್ (ಏಷ್ಯಾ/ಐಸಿಸಿ/ಭಾರತ) - ಪಂದ್ಯಗಳು: 509, ಶತಕಗಳು: 48
  • ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ) - ಪಂದ್ಯಗಳು: 348, ಶತಕಗಳು: 48
  • ಎಬಿ ಡಿವಿಲಿಯರ್ಸ್ (ಆಫ್ರಿಕಾ/ದಕ್ಷಿಣ ಆಫ್ರಿಕಾ) - ಪಂದ್ಯಗಳು: 420, ಹಡ್ರೆಡ್ಸ್: 47
  • ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್) - ಪಂದ್ಯಗಳು: 365; ಶತಕಗಳು: 47