#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

SA vs NZ: ಏಕದಿನ ಪದಾರ್ಪಣೆ ಪಂದ್ಯದಲ್ಲೇ 150 ರನ್ ಸಿಡಿಸಿ ವಿಶ್ವ ದಾಖಲೆ ಬರೆದ ಮ್ಯಾಥ್ಯೂ ಬ್ರಿಯಝ್ಕಾ!

Matthew Breetzke sets new world record : ಪಾಕಿಸ್ತಾನದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಮ್ಯಾಥ್ಯೂ ಬ್ರಿಯಝ್ಕಾ 150 ರನ್ ಸಿಡಿಸಿದ್ದಾರೆ. ಆ ಮೂಲಕ ವೆಸ್ಟ್ ಇಂಡೀಸ್ ದಿಗ್ಗಜ ಡಿಸ್ಮೆಂಡ್ ಹೇನ್ಸ್‌ ದಾಖಲೆ ಮುರಿದು ವಿಶ್ವ ದಾಖಲೆ ಬರೆದಿದ್ದಾರೆ.

ಪದಾರ್ಪಣೆ ಪಂದ್ಯದಲ್ಲಿಯೇ ವಿಶ್ವ ದಾಖಲೆ ಬರೆದ ಮ್ಯಾಥ್ಯೂ ಬ್ರಿಯಝ್ಕಾ!

Matthew Breetzke

Profile Ramesh Kote Feb 10, 2025 6:01 PM

ಲಾಹೋರ್: ತಮ್ಮ ಅಂತಾರಾಷ್ಟ್ರೀಯ ಏಕದಿನ ಪದಾರ್ಪಣೆ ಪಂದ್ಯದಲ್ಲೇ ದಕ್ಷಿಣ ಆಫ್ರಿಕಾದ ಯುವ ಆಟಗಾರ ಮ್ಯಾಥ್ಯೂ ಬ್ರಿಯಝ್ಕಾ 150 ರನ್ ಬಾರಿಸಿ ವಿಶ್ವ ದಾಖಲೆ ಬರೆದಿದ್ದಾರೆ. ಆ ಮೂಲಕ ವೆಸ್ಟ್ ಇಂಡೀಸ್ ದಿಗ್ಗಜ ಡಿಸ್ಮೆಂಡ್ ಹೇನ್ಸ್‌ 1978 ರಲ್ಲಿ ಬರೆದಿದ್ದ ದಾಖಲೆಯನ್ನು (148 ರನ್) ಮುರಿದಿದ್ದಾರೆ. ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ ಸೋಮವಾರ (ಫೆಬ್ರವರಿ 10) ನಡೆದಿದ್ದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಯುವ ಆಟಗಾರ ಮ್ಯಾಥ್ಯೂ ಬ್ರಿಯಝ್ಕಾ ಶತಕ (150 ರನ್) ಸಿಡಿಸಿದ ಫಲವಾಗಿ ದಕ್ಷಿಣ ಆಫ್ರಿಕಾ 6 ವಿಕೆಟ್ ನಷ್ಟಕ್ಕೆ 304 ರನ್‌ಗಳನ್ನು ಕಲೆ ಹಾಕಿತು.

ನ್ಯೂಜಿಲೆಂಡ್‌ ವೇಗಿ ಮ್ಯಾಟ್ ಹೆನ್ರಿಗೆ ವಿಕೆಟ್ ಒಪ್ಪಿಸುವುದಕ್ಕೂ ಮುನ್ನ ಮ್ಯಾಥ್ಯೂ ಬ್ರಿಯಝ್ಕಾ ತಾವೆದುರಿಸಿದ 148 ಎಸೆತಗಳಲ್ಲಿ 11 ಮನಮೋಹಕ ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್ ಮೂಲಕ 150 ರನ್‌ಗಳನ್ನು ದಾಖಲಿಸಿದರು.

PAK vs NZ: ನ್ಯೂಜಿಲೆಂಡ್‌ ಎದುರು ಪಾಕಿಸ್ತಾನ ತಂಡಕ್ಕೆ ಹೀನಾಯ ಸೋಲು!

ಏಕದಿನ ಪದಾರ್ಪಣೆ ಪಂದ್ಯದಲ್ಲೇ ಅತಿ ಹೆಚ್ಚು ರನ್ ಗಳಿಸಿದವರು

  • 150 ರನ್- ಮ್ಯಾಥ್ಯೂ ಬ್ರಿಯಝ್ಕಾ- ದಕ್ಷಿಣ ಆಫ್ರಿಕಾ VS ನ್ಯೂಜಿಲೆಂಡ್ - 2025
  • 148 ರನ್- ಡಿಸ್ಮೆಂಡ್ ಹೇನ್ಸ್‌- ವೆಸ್ಟ್ ಇಂಡೀಸ್ VS ಆಸ್ಟ್ರೇಲಿಯಾ - 1978
  • 121 ರನ್- ರೆಹಮಾನುಲ್ಲಾ ಗುರ್ಬಝ್‌- ಅಫ್ಘಾನಿಸ್ತಾನ VS ಐರ್ಲೆಂಡ್ - 2021
  • *124 ರನ್- ಮಾರ್ಕ್ ಚಾಪ್ಮನ್- ಹಾಂಗ್ ಕಾಂಗ್ VS ಯುಎಇ- 2015124 ರನ್- ಕಾಲಿನ್ ಇಂಗ್ರಾಮ್- ದಕ್ಷಿಣ ಆಫ್ರಿಕಾ VS ಜಿಂಬಾಬ್ವೆ - 2010


ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ

26ರ ವಯಸ್ಸಿನ ಎಡಗೈ ಆಟಗಾರ ಮ್ಯಾಥ್ಯೂ ಬ್ರಿಯಝ್ಕಾ ಈಗಾಗಲೇ ಬಾಂಗ್ಲಾದೇಶ ವಿರುದ್ಧ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆದರೆ, ಅವರು ರನ್ ಗಳಿಸದೆ ವಿಕೆಟ್ ಒಪ್ಪಿಸಿದ್ದರು. ಇದೀಗ ಪಾಕಿಸ್ತಾನ, ನ್ಯೂಜಿಲೆಂಡ್ ನಡುವಣ ತ್ರಿಕೋನ ಏಕದಿನ ಸರಣಿಯ ವೇಳೆ ಅನುಭವಿ ಆಟಗಾರರಾದ ೇಡೆನ್ ಮಾರ್ಕ್ರಮ್, ಎನ್ರಿಚ್ ಕ್ಲಾಸೆನ್ ಅವರು ಎಸ್‌ಎ20 ಲೀಗ್‌ನಲ್ಲಿ ಆಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಮ್ಯಾಥ್ಯೂ ಬ್ರಿಯಝ್ಕಾ ಅವರಿಗೆ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಬ್ರಿಯಝ್ಕಾ ಪದಾರ್ಪಣೆ ಪಂದ್ಯದಲ್ಲೇ ಶತಕ (150 ರನ್) ಸಿಡಿಸಿ ವಿಶ್ವ ದಾಖಲೆ ಬರೆದಿದ್ದಾರೆ. ಅಲ್ಲದೆ 10 ಟಿ20ಐ ಪಂದ್ಯಗಳಿಂದ ಮ್ಯಾಥ್ಯೂ ಬ್ರಿಯಝ್ಕಾ 151 ರನ್ ಬಾರಿಸಿದ್ದು, 51 ಗರಿಷ್ಠ ರನ್ ಆಗಿದೆ.

ಮ್ಯಾಥ್ಯೂ ಬ್ರಿಯಝ್ಕಾ ಶತಕ ವ್ಯರ್ಥ

ಮ್ಯಾಥ್ಯೂ ಬ್ರಿಯಝ್ಕಾ ಅವರ ಶತಕದ ಹೊರತಾಗಿಯೂ ದಕ್ಷಿಣ ಆಫ್ರಿಕಾ ತಂಡ, ಎದುರಾಳಿ ನ್ಯೂಜಿಲೆಂಡ್‌ ವಿರುದ್ಧ 6 ವಿಕೆಟ್‌ಗಳಿಂದ ಸೋಲು ಅನುಭವಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡ, ತನ್ನ ಪಾಲಿನ 50 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 304 ರನ್‌ಗಳನ್ನು ಕಲೆ ಹಾಕಿತು. ಬಳಿಕ 305 ರನ್‌ಗಳ ಗುರಿ ಹಿಂಬಾಲಿಸಿದ ನ್ಯೂಜಿಲೆಂಡ್‌ ತಂಡ, ಕೇನ್‌ ವಿಲಿಯಮ್ಸನ್‌ (133*) ಅವರ ಅಜೇಯ ಶತಕದ ಬಲದಿಂದ 48.4 ಓವರ್‌ಗಳಿಗೆ 308 ರನ್‌ ಗಳಿಸಿ ಸತತ ಎರಡನೇ ಗೆಲುವು ಪಡೆಯಿತು.