ಕ್ಯಾನ್ಸರ್ ಗುಣಪಡಿಸುವ ಸೈಬರ್‌ಕ್ನೈಫ್ ಎಸ್ 7 ಉಪಕರಣದಿಂದ ಇದೀಗ ಪಾರ್ಕಿನ್ಸನ್ ಕಾಯಿಲೆಗೂ ಚಿಕಿತ್ಸೆ
ಪಾರ್ಕಿನ್ಸನ್ ಸಮಸ್ಯೆಯಿಂದ ಬಳಲುತ್ತಿದ್ದ 75 ವರ್ಷದ ವೃದ್ಧನಿಗೆ ಈ ತಂತ್ರಜ್ಞಾನ ಬಳಸಿಕೊಂಡು ಕೇವಲ15 ನಿಮಿಷಗಳ ಕಾರ್ಯವಿಧಾನದಲ್ಲಿ ಯಾವುದೇ ಅರಿವಳಿಕೆ ನೀಡದೆಯೇ ಯಶಸ್ವಿಯಾಗಿ ಚಿಕಿತ್ಸೆ ಯನ್ನು ಸಹ ನೀಡಲಾಗಿದೆ. ಇದು, ಪಾರ್ಕಿನ್ಸನ್ ಕಾಯಿಲೆಗೆ ಸೈಬರ್‌ಕ್ನೈಫ್ ಎಸ್ 7 ವ್ಯವಸ್ಥೆಯನ್ನು ಬಳಸಿ ಚಿಕಿತ್ಸೆ ನೀಡಿದ ಕರ್ನಾಟಕದ ಮೊದಲ ಪ್ರಕರಣವಾಗಿದೆ.


ಬೆಂಗಳೂರು: ಕ್ಯಾನ್ಸರ್ ಗುಣಪಡಿಸಲು ಬಳಸುವ ಸೈಬರ್‌ಕ್ನೈಫ್ ಎಸ್ 7 ಉಪಕರಣದಿಂದ ಪಾರ್ಕಿ ನ್ಸನ್ ಕಾಯಿಲೆಯನ್ನೂ ಕೆಲವೇ ಕ್ಷಣಗಳಲ್ಲಿ ಗುಣಪಡಿಸುವ ವಿಧಾನವನ್ನು ಎಚ್‌ಸಿಜಿ ಕ್ಯಾನ್ಸರ್ ಕೇಂದ್ರ ರಾಜ್ಯದಲ್ಲಿ ಮೊದಲ ಬಾರಿಗೆ ಪರಿಚಯಿಸಿದೆ.
ಅಷ್ಟೆ ಅಲ್ಲದೆ, ಪಾರ್ಕಿನ್ಸನ್ ಸಮಸ್ಯೆಯಿಂದ ಬಳಲುತ್ತಿದ್ದ 75 ವರ್ಷದ ವೃದ್ಧನಿಗೆ ಈ ತಂತ್ರಜ್ಞಾನ ಬಳಸಿಕೊಂಡು ಕೇವಲ15 ನಿಮಿಷಗಳ ಕಾರ್ಯವಿಧಾನದಲ್ಲಿ ಯಾವುದೇ ಅರಿವಳಿಕೆ ನೀಡದೆಯೇ ಯಶಸ್ವಿಯಾಗಿ ಚಿಕಿತ್ಸೆಯನ್ನು ಸಹ ನೀಡಲಾಗಿದೆ. ಇದು, ಪಾರ್ಕಿನ್ಸನ್ ಕಾಯಿಲೆಗೆ ಸೈಬರ್‌ಕ್ನೈಫ್ ಎಸ್ 7 ವ್ಯವಸ್ಥೆಯನ್ನು ಬಳಸಿ ಚಿಕಿತ್ಸೆ ನೀಡಿದ ಕರ್ನಾಟಕದ ಮೊದಲ ಪ್ರಕರಣವಾಗಿದೆ.
ಇದನ್ನೂ ಓದಿ: Health Tips: ಹುದುಗು ಬರಿಸಿದ ಆಹಾರ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು?
ಈ ಕುರಿತು ಮಾತನಾಡಿದ ಎಚ್‌ಸಿಜಿಯ ಕ್ರಿಯಾತ್ಮಕ ರೇಡಿಯೊ ಸರ್ಜರಿಯ ಲಿಡ್ ವಿಕಿರಣದ ಆಂಕೊಲಾಜಿಸ್ಟ್ ಡಾ.ಲೋಹಿತ್ ರೆಡ್ಡಿ, 75 ವರ್ಷದ ವರ್ಷದ ವೃದ್ಧನು ಕಳೆದ ನಾಲ್ಕು ವರ್ಷ ದಿಂದ, ವಯೋಸಹಜ ನರವೈಜ್ಞಾನಿಕ ಪಾರ್ಕಿನ್ಸನ್ ಕಾಯಿಲೆಗೆ ತುತ್ತಾಗಿದ್ದರು ಇದರಿಂದ ಅವರ ಕೈ ನಡುಕ, ತಲೆ ಅಲುಗಾಡುವುದು ಹೆಚ್ಚುತ್ತಲೇ ಇತ್ತು. ಎಷ್ಟೇ ಔಷಧ ತೆಗೆದುಕೊಂಡರು ಹಾಗೂ ಪಾರ್ಕಿನ್ಸನ್ ಸಂಬಂಧಿಸಿದ ಚಿಕಿತ್ಸೆ ಪಡೆದರೂ ಗುಣಮುಖವಾಗಿರಲಿಲ್ಲ. ಇವರು ಎಚ್‌ಸಿಜಿಯಲ್ಲಿ ಸೈಬರ್‌ಕ್ನೈಫ್ ಎಸ್ 7 ಸೌಲಭ್ಯ ಇರುವುದು ತಿಳಿದ ಬಳಿಕ ಇಲ್ಲಿಗೆ ದಾಖಲಾದರು. ಸೈಬರ್‌ಕ್ನೈಫ್ ಎಸ್ 7 ಸೌಲಭ್ಯವು, ಕ್ಯಾನ್ಸರ್ ಗುಣಪಡಿಸಲು ಹಾಗೂ ಪತ್ತೆಹಚ್ಚಲು ಬಳಸಲಾಗುತ್ತದೆ. ಈ ತಂತ್ರ ಜ್ಞಾನವನ್ನು ಪಾರ್ಕಿನ್ಸನ್ ಕಾಯಿಲೆಯಂತಹ ಕ್ರಿಯಾತ್ಮಕ ನರವೈಜ್ಞಾನಿಕ ಅಸ್ವಸ್ಥತೆಗಳನ್ನು ಗುಣಪಡಿಸಲು ಸಹ ಬಳಸಬಹುದು ಎಂಬುದನ್ನು ಪತ್ತೆಹಚ್ಚಿದೆವು. ಕೇವಲ15 ನಿಮಿಷಗಳ ಕಾರ್ಯ ವಿಧಾನದಲ್ಲಿ ಯಾವುದೇ ಅರಿವಳಿಕೆ ಅಗತ್ಯವಿಲ್ಲದೇ ಸುಲಭವಾಗಿ ಚಿಕಿತ್ಸೆ ನೀಡಲಾಯಿತು ಎಂದರು.
ಈ ಕುರಿತು ಮಾತನಾಡಿದ ಹೆಲ್ತ್‌ಕೇರ್ ಗ್ಲೋಬಲ್ ಎಂಟರ್‌ಪ್ರೈಸಸ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಡಾ. ಬಿ.ಎಸ್. ಅಜಯ್‌ಕುಮಾರ್, ನಮ್ಮ ತಂಡವು ಪೀಡಿತ ಮೆದುಳಿನ ಪ್ರದೇಶವನ್ನು ನಿಖರವಾಗಿ ನಕ್ಷೆ ಮಾಡಲು ಸೀಮಿತ ಮೆದುಳಿನ ಡೋಪಮೈನ್ ಪಿಇಟಿ ಸ್ಕ್ಯಾನ್ ಮತ್ತು 3ಟಿ ಎಂಆರ್‌ಐ ಅನು ಕ್ರಮವನ್ನು ಒಳಗೊಂಡಂತೆ ಸುಧಾರಿತ ಇಮೇಜಿಂಗ್ ತಂತ್ರಗಳನ್ನು ಬಳಸಿಕೊಂಡಿತು.
ಸೈಬರ್‌ಕ್ನೈಫ್ ಎಸ್ 7 ವ್ಯವಸ್ಥೆಯು ಈ ಪ್ರದೇಶಗಳನ್ನು ನಿಖರತೆಯೊಂದಿಗೆ ಗುರಿಯಾಗಿಸಿ, ಸ್ಥಗಿತ ಗೊಳಿಸಿದರು, ಇದರ ಪರಿಣಾಮವಾಗಿ ರೋಗಿಯು ಯಾವುದೇ ಅಡ್ಡಪರಿಣಾಮಗಳಿಲ್ಲದೆ ಚಿಕಿತ್ಸೆಯ ನಂತರದ ಎರಡು ದಿನಗಳಲ್ಲಿ ಸಂಪೂರ್ಣವಾಗಿ ನಡುಕದಿಂದ ಮುಕ್ತರಾಗಿದ್ದಾರೆ ಎಂದು ವಿವರಿಸಿ ದರು.