ಗ್ಯಾರಂಟಿ ಯೋಜನೆ ವಂಚಿತರಿಗೆ ನ್ಯಾಯ ಒದಗಿಸಲು ಮೊದಲ ಆದ್ಯತೆ ನೀಡಲಾಗುವುದು: ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಹಳ್ಳಿ ರಮೇಶ್
ದೇಶದಲ್ಲಿ ಮೊದಲ ಬಾರಿಗೆ 54 ಸಾವಿರ ಕೋಟಿ ಮೀಸಲಾಗಿಟ್ಟ ಏಕೈಕ ರಾಜ್ಯ ನಮ್ಮದು.ಇದಕ್ಕೆ ನ್ಯಾಯ ಕೊಡುವ ಕೆಲಸ ನಾವೆಲ್ಲ ಕೂಡಿ ಮಾಡಬೇಕಿದೆ. ವಿರೋಧ ಪಕ್ಷಗಳು ಟೀಕಿಸುವುದು ಸಹಜ. ವಾಸ್ತವವಾಗಿ ಇವೆಲ್ಲಾ ಜನರಿಗೆ ಅನುಕೂಲ ಮಾಡಿಕೊಡುವ ಯೋಜನೆಗಳೇ ಆಗಿವೆ ಎಂದರು
ಚಿಕ್ಕಬಳ್ಳಾಪುರ : ಯಾವುದೇ ಜಾತಿ ಧರ್ಮ ಲಿಂಗ ಭಾಷೆಯ ತಾರತಮ್ಯವಿಲ್ಲದೆ ಜಿಲ್ಲೆಯ ಜನತೆಗೆ ಗ್ಯಾರೆಂಟಿ ಯೋಜನೆಗಳನ್ನು ತಲುಪುವಂತೆ ಮಾಡಲು ಮೊದಲ ಆಧ್ಯತೆ ನೀಡಲಾಗುವುದು ಎಂದು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಹಳ್ಳಿ ರಮೇಶ್ ತಿಳಿಸಿದರು.
ನಗರ ಹೊರವಲಯ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಕಛೇರಿ ಉದ್ಘಾಟಿಸಿ ಅವರು ಮಾತನಾಡಿದರು.
ಇದನ್ನೂ ಓದಿ: Chikkaballapur News: ಯುವಜನತೆ ಅಪರಾಧಿಕ ಕೃತ್ಯಗಳಿಂದ ದೂರವಿರಲಿ: ರಾಜ್ಯ ಉಪಾಧ್ಯಕ್ಷ ವೆಂಕಟರೋಣಪ್ಪ ಕರೆ
ಮೊದಲಿಗೆ ಶಾಸಕ ಪ್ರದೀಪ್ ಈಶ್ವರ್,ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್,ಗ್ಯಾರೆAಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಮೇಲ್ವಿಚಾರಣೆ ಸಮಿತಿ ರಾಜ್ಯ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ. ರೇವಣ್ಣ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ದೇಶದಲ್ಲಿ ಮೊದಲ ಬಾರಿಗೆ 54 ಸಾವಿರ ಕೋಟಿ ಮೀಸಲಾಗಿಟ್ಟ ಏಕೈಕ ರಾಜ್ಯ ನಮ್ಮದು.ಇದಕ್ಕೆ ನ್ಯಾಯಕೊಡುವ ಕೆಲಸ ನಾವೆಲ್ಲ ಕೂಡಿ ಮಾಡಬೇಕಿದೆ. ವಿರೋಧ ಪಕ್ಷಗಳು ಟೀಕಿಸುವುದು ಸಹಜ. ವಾಸ್ತವಾಗಿ ಇವೆಲ್ಲಾ ಜನರಿಗೆ ಅನುಕೂಲ ಮಾಡಿಕೊಡುವ ಯೋಜನೆಗಳೇ ಆಗಿವೆ ಎಂದರು.
ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಐದು ಗ್ಯಾರೆಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಮೇಲ್ವಿಚಾರಣೆಗೆ ಜಿಲ್ಲಾ ಮಟ್ಟದಲ್ಲಿ ಅನುಷ್ಠಾನ ಪ್ರಾಧಿಕಾರ, ತಾಲೂಕು ಮಟ್ಟದಲ್ಲಿ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳನ್ನು ಸರಕಾರ ರಚಿಸಲಾಗಿದೆ. ಜಿಲ್ಲೆಯ ಪ್ರಾಧಿ ಕಾರದ ಅಧ್ಯಕ್ಷನಾಗಿ ಇಂದು ನಾನು ವಿದ್ಯುಕ್ತವಾಗಿ ಕಛೇರಿ ಉದ್ಘಾಟಿಸಿ ಪದಗ್ರಹಣ ಮಾಡಿದ್ದೇನೆ. ಇನ್ನಷ್ಟೇ ಜಿಲ್ಲೆಯ ಪ್ರಗತಿಯ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದು ನಂತರ ಮಾಧ್ಯ ಮಕ್ಕೆ ಅಂಕಿಅಂಶಗಳ ಸಹಿತ ಸಮಗ್ರ ವಿಚಾರ ಮುಟ್ಟಿಸುತ್ತೇನೆ ಎಂದರು.
ಈ ಹುದ್ದೆ ನಾನು ಬಯಸಿ ಪಡೆದಿದ್ದಲ್ಲ, ಬದಲಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್, ಗ್ಯಾರೆಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಮೇಲ್ವಿಚಾರಣೆ ಸಮಿತಿ ರಾಜ್ಯ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ. ರೇವಣ್ಣ ಅವರ ಒತ್ತಾಯಕ್ಕೆ ಕಟ್ಟುಬಿದ್ದು ಅಧಿಕಾರ ವಹಿಸಿಕೊಂಡಿದ್ದೇನೆ. ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ ಅವರ ರಾಜೀನಾಮೆ ಬಗ್ಗೆ ನಾನು ರೇವಣ್ಣ ಅವರ ಗಮನಕ್ಕೆ ತಂದಿದ್ದೇನೆ.ಅವರು ಅಸಮಧಾನ ವ್ಯಕ್ತಪಡಿಸಿದ್ದಾರೆ.ನೀವು ಅಧಿಕಾರ ವಹಿಸಿಕೊಳ್ಳಿ ಎಂದರು, ಉಸ್ತುವಾರಿ ಸಚಿವರು ನನಗೆ ಆದೇಶಪತ್ರ ನೀಡಿದಾಗ ನಾನು ಬೇಡ ಎಲ್ಲಲು ಆಗುವುದಿಲ್ಲವಲ್ಲ.ಪಕ್ಷದ ಹೈಕಮಾಂಡ್ ಮುಂದೆ ಯಾವ ಸ್ಥಾನ ನೀಡಿದರೂ ಕೊಟ್ಟ ಕೆಲಸ ಮಾಡಲು ನಾನು ಸಿದ್ದು ನನ್ನ ಅಭಿಮಾನಿಗಳೂ ಬದ್ಧ ಎಂದರು.
ನನ್ನ ಅವಧಿಯಲ್ಲಿ ರಾಜ್ಯ ಸರಕಾರದ ಜನಪರ ಯೋಜನೆಗಳಾದ ಗೃಹಲಕ್ಷ್ಮೀ ,ಶಕ್ತಿ ಅನ್ನಭಾಗ್ಯ, ಯುವನಿಧಿ, ಗೃಹಜ್ಯೋತಿ ಮೊದಲಾದ ಗ್ಯಾರೆಂಟಿ ಯೋಜನೆಗಳು ರಾಜ್ಯದ ೫ ಕೋಟಿ ಉಪಯೋಗ ಜನತೆಗೆ ಸರಿಯಾದ ರೀತಿಯಲ್ಲಿ ತಲುಪುತ್ತಿದೆಯೇ, ಇಲ್ಲವೇ ಎಂಬುದರ ಉಸ್ತುವಾರಿಯ ಜತೆಗೆ ಅನುಷ್ಟಾನದಲ್ಲಿ ಎದುರಾಗುವ ತೊಂದರೆಗಳನ್ನು ನಿವಾರಿಸಿ ಸರಕಾರಕ್ಕೆ ಒಳ್ಳೆಯ ಹೆಸರು ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ.ಈ ವೇಳೆ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗಿದ್ದರೆ ನ್ಯಾಯ ಕೊಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಇದೇ ವೇಳೆ ಚಿಕ್ಕಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೇಶವರೆಡ್ಡಿ,ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಜನಾರ್ಧನ್, ಇಂಟಕ್‌ನ ರಾಮಪ್ಪ, ರಾಜ್‌ಬಾಬು,ಜಾತವಾರ ರಾಮಕೃಷ್ಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಮ್, ಪ್ರಧಾನ ಕಾರ್ಯದರ್ಶಿ ಸುರೇಶ್, ಮಹಮ್ಮದ್ ದಾವೂದ್, ಕಣಿತಹಳ್ಳಿ ವೆಂಕಟೇಶ್, ರಾಜಾಕಾಂತ್, ರಾಜೇಶ್,ಬಾಬಾಜಾನ್.ಮಧು, ಹಿತ್ತಲಹಳ್ಳಿ ಸುರೇಶ್ ಮತ್ತಿತರರು ಇದ್ದರು.