Chikkaballapur News: ಯುವಜನತೆ ಅಪರಾಧಿಕ ಕೃತ್ಯಗಳಿಂದ ದೂರವಿರಲಿ: ರಾಜ್ಯ ಉಪಾಧ್ಯಕ್ಷ ವೆಂಕಟರೋಣಪ್ಪ ಕರೆ
ಭಾರತೀಯರ ಧರ್ಮಗ್ರಂಥವಾದ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಸಮಾನವಾದ ಅವಕಾಶ ಗಳನ್ನು ನೀಡಿದೆ. ಸಂವಿಧಾನಾತ್ಮಕ ಸವಲತ್ತು ಪಡೆಯುವ ಪ್ರತಿಯೊಬ್ಬರು ಈ ನೆಲದ ಕಾನೂನಿಗೆ ಬದ್ಧ ರಾಗಿ ತಮ್ಮ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದಾಗ ಮಾತ್ರವೇ ಸಂವಿಧಾನದ ಆಶಯಗಳು ಈಡೇರು ತ್ತವೆ.ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಯಾಗಿ ಆರೋಗ್ಯವಂತ ಸಮಾಜ ನಿರ್ಮಾಣ ವಾಗಲಿದೆ
Source : Chikkaballapur Reporter
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇತ್ತೀಚಿಗೆ ಅಪರಾಧಿಕ ಕೃತ್ಯಗಳು ಹೆಚ್ಚಿರುವುದು ನೋವಿನ ಸಂಗತಿ. ಯುವಜನತೆ ಸಮಾಜಬಾಹಿರ ಕಾನೂನು ಬಾಹಿರ ಕೃತ್ಯಗಳಿಂದ ದೂರವಿರುವ ಮೂಲಕ ಭವ್ಯ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಹಳ್ಳಿ ಮಕ್ಕಳ ಸಂಘಟನೆಯ ರಾಜ್ಯ ಉಪಾಧ್ಯಕ್ಷ ವೆಂಕಟರೋಣಪ್ಪ ಕರೆ ನೀಡಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಹಳ್ಳಿ ಮಕ್ಕಳ ಸಂಘಟನೆ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಅಪರಾಧ ತಡೆ ಮತ್ತು ಜನಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರತೀಯರ ಧರ್ಮಗ್ರಂಥವಾದ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಸಮಾನವಾದ ಅವಕಾಶ ಗಳನ್ನು ನೀಡಿದೆ. ಸಂವಿಧಾನಾತ್ಮಕ ಸವಲತ್ತು ಪಡೆಯುವ ಪ್ರತಿಯೊಬ್ಬರು ಈ ನೆಲದ ಕಾನೂನಿಗೆ ಬದ್ಧರಾಗಿ ತಮ್ಮ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದಾಗ ಮಾತ್ರವೇ ಸಂವಿಧಾನದ ಆಶಯಗಳು ಈಡೇರುತ್ತವೆ.ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಯಾಗಿ ಆರೋಗ್ಯವಂತ ಸಮಾಜ ನಿರ್ಮಾಣ ವಾಗಲಿದೆ. ಈ ದಿಸೆಯಲ್ಲಿ ಹಳ್ಳಿ ಮಕ್ಕಳ ಸಂಘಟನೆ ಯುವಜನತೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಅಪರಾಧ ತಡೆ ಹಾಗೂ ಜನಜಾಗೃತಿ ಅಭಿಯಾನ ಹಮ್ಮಿಕೊಂಡಿದೆ ಎಂದರು.
ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ್ ಮಾತಾಡಿ ಶಾಲಾ ಕಾಲೇಜು ಶಿಕ್ಷಣ ಪಡೆಯುತ್ತಿರುವ ಪ್ರತಿ ಯೊಬ್ಬರೂ ಕೂಡ ೧೮ ವರ್ಷ ತುಂಬುವವರೆಗೆ ವಾಹನ ಚಾಲನ ಮಾಡಬಾರದು.ಚಾಲನಾ ಪರವಾನಗಿ ಪಡೆದೇ ದ್ವಿಚಕ್ರ, ತ್ರಿಚಕ್ರ,ಕಾರು ಇತ್ಯಾದಿ ವಾಹನ ಚಾಲನೆ ಮಾಡುವುದನ್ನು ರೂಢಿಸಿ ಕೊಳ್ಳಬೇಕು.ವಾಹನ ಚಾಲನೆ ಮೈಬೈಲ್ ಬಳಕೆ ಬೇಡ, ದ್ವಿಚಕ್ರವಾಹದಲ್ಲಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ,ಕಾರಾದರೆ ಸೀಟ್ ಬೆಲ್ಟ್ ಧರಿಸಬೇಕು. ಮಧ್ಯಪಾನ ಮಾಡಿ ವಾಹನ ಚಲಾಯಿಸಲೇಬಾರದು. ಪೋಷಕರು ಕೂಡ ಅಪ್ರಾಪ್ತರಿಗೆ ವಾಹನ ನೀಡಿ ಕಾನೂನು ಉಲ್ಲಂಘಿಸಬಾರದು.
ಶಾಲಾ ವಿದ್ಯಾರ್ಥಿಗಳು ರಸ್ತೆ ದಾಟುವಾಗ ಎರಡೂ ಬದಿ ವಾಹನಗಳಿಲ್ಲದ್ದನ್ನು ಖಚಿತ ಪಡಿಸಿ ಕೊಂಡು ದಾಟಬೇಕು.ಬೈಕ್ ಸವಾರ ಮತ್ತು ಹಿಂಬದಿ ಕುಳಿತವರು ಇಬ್ಬರೂ ಕೂಡ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.ರಸ್ತೆ ಬದಿ ವ್ಯಾಪಾರಿಗಳು, ತಳ್ಳುಗಾಡಿ ವ್ಯಾಪಾರಿಗಳು ಪಾದಚಾರಿ ಮಾರ್ಗಬಿಟ್ಟು ವ್ಯಾಪಾರ ವ್ಯವಹಾರ ಮಾಡುವುದರಿಂದ ದಂಡದಿAದ ಪಾರಾಗಬಹುದು ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ಸಂಚಾರ ಸುರಕ್ಷತೆ ಬಗ್ಗೆ ಜಾಥಾ ಮಾಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ವಾಪಸಂದ್ರ ಸರಕಾರಿ ಶಾಲೆಯ ೨೫೦ ಮಕ್ಕಳಿಗೆ ನೋಟ್ ಪುಸ್ತಕ, ಪೆನ್ನು, ಸಿಹಿ ವಿತರಿಸಿದರು.
ವೇದಿಕೆಯಲ್ಲಿ ನಗರಠಾಣೆ ಸಬ್ ಇನ್ಸ್ಪೆಕ್ಟರ್ ಅಮರ್ ಮೋಗ್ಲಿ,ಮಾಧ್ಯಮ ಮಿತ್ರರಾದ ಲಕ್ಷ್ಮಣ್ ರಾಜು,ಟಿ.ಎಸ್.ನಾಗೇಂದ್ರ ಪ್ರಸಾದ್, ಸಂಚಾರಿ ಠಾಣೆ ಸಬ್ ಇನ್ಸ್ಪೆಕ್ಟರ್ ಮಂಜುಳ,ತಿಪ್ಪೇನಹಳ್ಳಿ ನಾರಾಯಣ್,ಹಳ್ಳಿಮಕ್ಕಳ ಸಂಘದ ವೀರಸಂಗಯ್ಯ ಇದ್ದರು.
೨೦ಸಿಬಿಪಿಎಂ೬: ಜಿಲ್ಲೆಯಲ್ಲಿ ಇತ್ತೀಚಿಗೆ ಅಪರಾಧಿಕ ಕೃತ್ಯಗಳು ಹೆಚ್ಚಿರುವುದು ನೋವಿನ ಸಂಗತಿ. ಯುವಜನತೆ ಸಮಾಜಬಾಹಿರ ಕಾನೂನು ಬಾಹಿರ ಕೃತ್ಯಗಳಿಂದ ದೂರವಿರುವ ಮೂಲಕ ಭವ್ಯ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಹಳ್ಳಿ ಮಕ್ಕಳ ಸಂಘಟನೆಯ ರಾಜ್ಯ ಉಪಾಧ್ಯಕ್ಷ ವೆಂಕಟರೋಣಪ್ಪ ಕರೆ ನೀಡಿದರು.
ಇದನ್ನೂ ಓದಿ: Chikkaballapur News: ಅಧಿಕಾರಿಗಳು ದರ್ಪ ಬಿಟ್ಟು ನ್ಯಾಯಯುತ ತೆರವುಗೊಳಿಸಿ