Pushpa 2: ಪುಷ್ಪ-2 ರಿಲೀಸ್‌ನಿಂದ ಪಿವಿಆರ್ ಐನಾಕ್ಸ್ ಷೇರು ಹೈ ಜಂಪ್?
Pushpa 2: ಗ್ಲೋಬಲ್ ಬ್ರೋಕರೇಜ್ ಸಂಸ್ಥೆ ಯುಬಿಎಸ್, ಪಿವಿಆರ್ ಐನಾಕ್ಸ್ ಷೇರಿನ ದರದ ಟಾರ್ಗೆಟ್ ಅನ್ನು 2,000 ರೂ.ಗೆ ಏರಿಸಿದೆ. ಈಗ ದರ 1,500 ರೂ. ಆಸುಪಾಸಿನಲ್ಲಿದೆ. ಮಾರುಕಟ್ಟೆ ವಿಶ್ಲೇಷಕರ ಪ್ರಕಾರ ಪುಷ್ಪಾ 2 ಸಿನಿಮಾ ಹಿಂದಿಯಲ್ಲಿ 600 ಕೋಟಿ ರೂ. ಹಾಗೂ ದಕ್ಷಿಣದ ಇತರ ಭಾಷೆಗಳಲ್ಲಿ 400 ಕೋಟಿ ರೂ. ಸಂಗ್ರಹಿಸುವ ನಿರೀಕ್ಷೆ ಇದೆ.
Rakshita Karkera
December 4, 2024
ಮುಂಬೈ: ಬಹು ನಿರೀಕ್ಷಿತ ಪುಷ್ಪ- 2(Pushpa 2) ಸಿನಿಮಾ ಡಿಸೆಂಬರ್ 5ರಂದು ತೆರೆ ಕಾಣುತ್ತಿದ್ದು, ಬಳಿಕ ಪಿವಿಆರ್ ಐನಾಕ್ಸ್ ಷೇರು ಹೈ ಜಂಪ್ ಆಗಲಿದೆ ಎಂಬ ನಿರೀಕ್ಷೆ ಉಂಟಾಗಿದೆ. ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಸಿನಿಮಾದ ಅಡ್ವಾನ್ಸ್ ಬುಕಿಂಗ್ ಕೇವಲ 48 ಗಂಟೆಗಳಲ್ಲೇ 100 ಕೋಟಿ ರೂ. ದಾಟಿದೆ.
Pushpa: The Rule - Part 2 First Day Advance Booking ReportPushpa 2 has crossed 44 Cr advance Booking mark (without block seats) in India with 1 day and 6 hours remaining. pic.twitter.com/3tw7eVsCL3— IamLOki𓄋 (@Stranger7696) December 3, 2024
ಗ್ಲೋಬಲ್ ಬ್ರೋಕರೇಜ್ ಸಂಸ್ಥೆ ಯುಬಿಎಸ್, ಪಿವಿಆರ್ ಐನಾಕ್ಸ್ ಷೇರಿನ ದರದ ಟಾರ್ಗೆಟ್ ಅನ್ನು 2,000 ರೂ.ಗೆ ಏರಿಸಿದೆ. ಈಗ ದರ 1,500 ರೂ. ಆಸುಪಾಸಿನಲ್ಲಿದೆ. ಮಾರುಕಟ್ಟೆ ವಿಶ್ಲೇಷಕರ ಪ್ರಕಾರ ಪುಷ್ಪಾ 2 ಸಿನಿಮಾ ಹಿಂದಿಯಲ್ಲಿ 600 ಕೋಟಿ ರೂ. ಹಾಗೂ ದಕ್ಷಿಣದ ಇತರ ಭಾಷೆಗಳಲ್ಲಿ 400 ಕೋಟಿ ರೂ. ಸಂಗ್ರಹಿಸುವ ನಿರೀಕ್ಷೆ ಇದೆ.
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯಿಸಿರುವ ಪುಷ್ಪ 2 ಸಿನೆಮಾ ನಾಳೆ ಅಂದ್ರೆ ಡಿಸೆಂಬರ್ 5ಕ್ಕೆರಿಲೀಸ್ ಆಗ್ತಿದೆ. ಜನರು ಕೂಡ ನೋಡೋದಕ್ಕೆ ಕಾಯ್ತಿದ್ದಾರೆ. ಅಷ್ಟೇ ಅಲ್ಲ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವವರು ಕೂಡ ಕನ್ನಡಿಗರೇ.. ನಾಯಕಿಯಾಗಿ ರಶ್ಮಿಕಾ ಮಂದಣ್ಣ, ಸ್ಪೆಷಲ್ ಸಾಂಗ್‌ನಲ್ಲಿ ಶ್ರೀಲೀಲ, ಖಳನಾಯಕನ ಪಾತ್ರದಲ್ಲಿ ನಟ ಧನಂಜಯ್ ಅಭಿನಯಿಸಿದ್ದಾರೆ.
ಬೆಂಗಳೂರಿನಲ್ಲೇ ಟಿಕೆಟ್ ಬಲು ದುಬಾರಿ
ಇನ್ನು ಬೆಂಗಳೂರಿನಲ್ಲಿ ಟಿಕೆಟ್ ದರ ಹೆಚ್ಚಿದೆ. ಮಲ್ಟಿಪ್ಲೆಕ್ಸ್ಗಳಲ್ಲಿ 1000 ದಿಂದ 1200 ರೂಪಾಯಿಗಳಿದೆ. ಕಡಿಮೆ ದರ್ಜೆಯ ಟಿಕೆಟ್ ಬೆಲೆಯೂ ಸಹ 800 ರಿಂದ 9000 ರೂಪಾಯಿ ಇದೆ. ಇನ್ನು ಎಸಿ, ಡಿಜಿಟಲ್ ಚಿತ್ರಮಂದಿರಗಳಲ್ಲಿ ಬಾಲ್ಕನಿ ಟಿಕೆಟ್ ಬೆಲೆ 600 ರಿಂದ 800 ರೂಪಾಯಿ ಇದೆ. ಬಹುತೇಕ ಚಿತ್ರಮಂದಿರಗಳಲ್ಲಿ ಬಾಲ್ಕನಿ ಟಿಕೆಟ್ ಬೆಲೆ 600 ಹಾಗೂ ಕಡಿಮೆ ದರ್ಜೆಯ ಟಿಕೆಟ್ ಬೆಲೆ 500 ಅಥವಾ 450 ಇಡಲಾಗಿದೆ. ಇನ್ನು ಎಲ್ಲೋ ಕೆಲವೇ ಕೆಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ 300 ರೂಪಾಯಿಗೆ ಪುಷ್ಪ 2 ಟಿಕೆಟ್ ಮಾರಾಟವಾಗುತ್ತಿದೆ. ಬೆಂಗಳೂರಿನಲ್ಲಿ ‘ಪುಷ್ಪ 2’ ಸಿನಿಮಾದ ಅಂದಾಜು ಸರಾಸರಿ ಟಿಕೆಟ್ ಬೆಲೆ 800 ರಿಂದ 900 ಎನ್ನಬಹುದು.ಅಲ್ಲಿಗೆ ಇಡೀ ದೇಶದಲ್ಲಿ ‘ಪುಷ್ಪ 2’ ಸಿನಿಮಾದ ಟಿಕೆಟ್ಗಳು ಅತಿ ಹೆಚ್ಚು ಬೆಲೆಗೆ ಮಾರಾಟವಾಗುತ್ತಿರುವುದು ಬೆಂಗಳೂರಿನಲ್ಲಿಯೇ. ಮುಂಬೈಗಿಂತಲೂ ದುಬಾರಿ ಬೆಲೆಗೆ ಬೆಂಗಳೂರಿನಲ್ಲಿ ಟಿಕೆಟ್ಗಳು ಮಾರಾಟವಾಗುತ್ತಿವೆ.
ಈ ಸುದ್ದಿಯನ್ನೂ ಓದಿ: Pushpa 2 : ʼಪುಷ್ಪ 2ʼ ಗೆ ಸೆನ್ಸಾರ್ ಬೋರ್ಡ್‌ನಿಂದ ಆಕ್ಷೇಪಣೆ – ಹಿಂಸಾತ್ಮಕ ದೃಶ್ಯಗಳಿಗೆ ಕತ್ತರಿ!