Rajendra Bhat Column: ಅವರು ಬದುಕಿದ್ದರೆ ಈಗ ನೂರು ತುಂಬುತ್ತಿತ್ತು!

Rajendra Bhat Column: ಅವರು ಬದುಕಿದ್ದರೆ ಈಗ ನೂರು ತುಂಬುತ್ತಿತ್ತು!

Profile ಹರೀಶ್‌ ಕೇರ Dec 4, 2024 9:05 AM
ಸ್ಫೂರ್ತಿಪಥ ಅಂಕಣ: ಎಲ್ ಎಸ್ ಶೇಷಗಿರಿರಾಯರು ಕನ್ನಡದ ನಿಜವಾದ ಅಸ್ಮಿತೆ
ರಾಜೇಂದ್ರ ಭಟ್‌ ಕೆ.
Rajendra Bhat Column: 2007ರಲ್ಲಿ ಉಡುಪಿಯಲ್ಲಿ ನಡೆದ ಅಖಿಲ ಭಾರತ 74ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ (Kannada Sahitya Sammelana) ಅಧ್ಯಕ್ಷತೆ ವಹಿಸಿದ್ದ ಅವರ ಮಾತುಗಳಿಗೆ, ಸಜ್ಜನಿಕೆಗೆ ಶರಣಾಗಿದ್ದೆ. ಅಷ್ಟು ದೊಡ್ಡ ಲೇಖಕರಾಗಿದ್ದರೂ ತಾನು ಏನೂ ಅಲ್ಲ ಎಂಬ ಅವರ ಆರಂಭದ ಮಾತುಗಳು ಹೃದಯದಲ್ಲಿ ಗಟ್ಟಿಯಾಗಿ ಕೂತಿದ್ದವು. ಪ್ರೊ.ಎಲ್ ಎಸ್ ಶೇಷಗಿರಿರಾಯರು (LS Sheshagiri rao) ಕನ್ನಡ ಸಾರಸ್ವತ ಲೋಕದ ಧ್ರುವತಾರೆ ಎಂದು ನನಗೆ ಅಂದು ಅರ್ಥವಾಗಿ ಹೋಗಿತ್ತು.
ಬಾಲ್ಯದಲ್ಲಿ ಓದಿದ್ದ 510 ಭಾರತ ಭಾರತಿ ಪುಸ್ತಕಗಳು
ನಾನು ಬಾಲ್ಯದಲ್ಲಿ ಅತೀ ಹೆಚ್ಚು ಓದಿದ್ದು 'ಭಾರತ ಭಾರತೀ 'ಎಂಬ ಸಣ್ಣ ಸಣ್ಣ ಪುಸ್ತಕಗಳನ್ನು. ಅವುಗಳು ಐಕಾನ್ ವ್ಯಕ್ತಿಗಳ ಬದುಕನ್ನು ಚಂದವಾಗಿ ಪರಿಚಯ ಮಾಡುವ 30-40 ಪುಟಗಳ ಪಾಕೆಟ್ ಗಾತ್ರದ ಪುಸ್ತಕಗಳು. ಅದು ನನಗೆ ಅದ್ಭುತ ಜ್ಞಾನವನ್ನು ಕೊಟ್ಟ ಜ್ಞಾನದ ಹಣತೆಗಳು. ಅದೇ ರೀತಿಯಾಗಿ ಕಿರಿಯರ ಕರ್ನಾಟಕ ಕೃತಿ ಸಂಪುಟಗಳು, ಬೆಂಗಳೂರು ದರ್ಶನ ಸಂಪುಟ, ಸಪ್ನಾ ದಿವ್ಯ ದರ್ಶನ ಮಾಲೆ (101 ಪುಸ್ತಕಗಳು), ಸ್ವಾತಂತ್ರ್ಯೋತ್ತರ ಕನ್ನಡ ಸಾಹಿತ್ಯ ಸಂಸ್ಕೃತಿ……. ಅಷ್ಟೂ ಪುಸ್ತಕಗಳ ಸಂಪಾದಕರು ನಮ್ಮ ಶೇಷಗಿರಿ ರಾಯರು. ನಮ್ಮ ಬಾಲ್ಯದ ಓದಿನ ಮೂಲಕ ನಮ್ಮ ಕನ್ನಡವನ್ನು ಶ್ರೀಮಂತಗೊಳಿಸಿದ ಕೀರ್ತಿಯು ಖಂಡಿತವಾಗಿಯೂ ಅವರಿಗೇ ಸಲ್ಲಬೇಕು.
19ನೆ ವರ್ಷಕ್ಕೆ ಅವರು ಇಂಗ್ಲಿಷ್ ಉಪನ್ಯಾಸಕರಾದರು!
1925 ಫೆಬ್ರುವರಿ ಆರರಂದು ಬೆಂಗಳೂರಿನಲ್ಲಿ ಜನಿಸಿದ ರಾಯರು ತಮ್ಮ ಪ್ರತಿಭೆಯ ಬಲದಿಂದ 19ನೆಯ ವರ್ಷಕ್ಕೆ ಇಂಗ್ಲೀಷ್ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು! ಆಗ ಕಲಿಕೆಯಲ್ಲಿ ಮುಂದೆ ಇದ್ದ ವಿದ್ಯಾರ್ಥಿಗಳಿಗೆ ಎರಡೆರಡು ತರಗತಿಗೆ ಭಡ್ತಿ ಕೊಡುವ ಪದ್ಧತಿ ಇತ್ತು. ಇದರ ಪೂರ್ಣ ಪ್ರಯೋಜನ ಪಡೆದ ರಾಯರು 19ನೆಯ ವಯಸ್ಸಿಗೆ ಮೈಸೂರು ವಿವಿಯ ಕಾಲೇಜುಗಳಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿ ಸೇವೆ ಆರಂಭ ಮಾಡಿದರು! ಹಾಗೆಯೇ 41 ಸುದೀರ್ಘ ವರ್ಷಗಳಷ್ಟು ವಿದ್ಯಾರ್ಥಿಗಳ ಮೆಚ್ಚಿನ ಪ್ರಾಧ್ಯಾಪಕರಾಗಿ ಅವರು 1985ರಲ್ಲಿ ನಿವೃತ್ತರಾದರು.
ಬರವಣಿಗೆಗೆ ಗುರುಗಳ ದೀಕ್ಷೆ
ಬಿ ಎಂ ಶ್ರೀಯವರ ನೇರ ಶಿಷ್ಯತ್ವ, ಅನಕೃ ಅವರ ಒಡನಾಟ ಅವರನ್ನು ಕನ್ನಡ ಸಾಹಿತ್ಯದ ಕಡೆಗೆ ಎಳೆದುಕೊಂಡು ಬಂದವು. ಹಾಗೆ ಅವರು ತಮ್ಮ 90ನೆಯ ವಯಸ್ಸಿನವರಿಗೂ ಬಿಡುವೇ ಇಲ್ಲದೇ ಬರೆದರು. ನೂರಾರು ಗ್ರಂಥಗಳನ್ನು ಸಂಪಾದನೆ ಮಾಡಿದರು. ಅದರಲ್ಲೂ ಜ್ಞಾನಗಂಗೋತ್ರಿ ಪ್ರಕಟಿಸಿದ ಬೃಹತ್ ವಿಶ್ವಕೋಶವನ್ನು ಸಂಪಾದಿಸಿದ ಅವರ ಬದ್ಧತೆ ಮತ್ತು ಉತ್ಸಾಹಗಳನ್ನು ನಾವು ಮೆಚ್ಚದಿರಲು ಸಾಧ್ಯವೇ ಇಲ್ಲ. ಅಷ್ಟೇ ಘನವಾದ ENCYCLOPAEDIA of INDIAN WRITINGS ಮತ್ತು ENCYCLOPAEDIA of Modern Indian Literature ಇಂತಹ ಬೃಹತ್ ಸಂಪುಟಗಳು ಅವರಿಂದ ಹುಟ್ಟು ಪಡೆದವು. ಅಂತಹ ಸಂಪುಟಗಳನ್ನು ಸಂಪಾದಿಸುವುದು ಭಾರೀ ತಾಳ್ಮೆಯನ್ನು ಬೇಡುವ ಕೆಲಸವಾಗಿದೆ. ಭಾರತೀಯ ಸಾಹಿತ್ಯ ಸಮೀಕ್ಷೆ ( 2 ಬೃಹತ್ ಸಂಪುಟಗಳು) ಮತ್ತು ಕನ್ನಡ ತಾಯಿಗೆ ನಮನ ಸಂಪುಟಗಳು ಶೇಷಗಿರಿರಾಯರ ಸಾಹಿತ್ಯ ಕೃಷಿಗೆ ಸಾಕ್ಷಿಯಾಗಿ ಕನ್ನಡ ಸಾರಸ್ವತ ಲೋಕಕ್ಕೆ ಪದಾರ್ಪಣೆ ಆದವು. ಅವರು ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಬರೆದ ಅಷ್ಟೂ ಸಣ್ಣ ಕಥೆಗಳು ತುಂಬಾನೇ ಜನಪ್ರಿಯ ಆಗಿವೆ. ನೂರಾರು ಇಂಗ್ಲೀಷ್ ಕವಿತೆಗಳ ಭಾವಾನುವಾದ ಅವರಿಗೆ ಆಪ್ತವಾದ ಕೆಲಸವಾಗಿದ್ದು ಒಂದರ್ಥದಲ್ಲಿ ಕನ್ನಡಕ್ಕೆ ಹತ್ತಾರು ಶ್ರೇಷ್ಠ ಇಂಗ್ಲೀಷ್ ಕವಿಗಳನ್ನು ಪರಿಚಯಿಸುವ ಕೆಲಸವೂ ಅವರಿಂದಾಯಿತು ಎಂದು ಖಚಿತವಾಗಿ ಹೇಳಬಹುದು.
ಕನ್ನಡ ಪುಸ್ತಕ ಪ್ರಾಧಿಕಾರದ ಮೊದಲ ಅಧ್ಯಕ್ಷರು
ಕರ್ನಾಟಕ ಸರಕಾರ ಅವರನ್ನು 1964ರಲ್ಲಿ ನೂತನವಾಗಿ ರಚನೆಯಾದ ಕನ್ನಡ ಪುಸ್ತಕ ಪ್ರಾಧಿಕಾರದ ಮೊದಲ ಅಧ್ಯಕ್ಷರಾಗಿ ನೇಮಕ ಮಾಡಿತು. ಕನ್ನಡಪರವಾದ ಗೋಕಾಕ್ ಚಳುವಳಿ ಆರಂಭವಾದಾಗ ರಾಯರು ಬೀದಿಗೆ ಇಳಿದು ದೀರ್ಘ ಹೋರಾಟ ಮಾಡಿದ್ದರು. ಅವರ ಗುರುಗಳಾದ ಬಿ ಎಂ ಶ್ರೀಯವರಿಂದ ಸ್ಫೂರ್ತಿ ಪಡೆದು ರಾಯರು ಕನ್ನಡದ ಎಲ್ಲ ಚಳುವಳಿಗಳಲ್ಲಿ ಮುಂಚೂಣಿಯ ಪಾತ್ರ ವಹಿಸಿದ್ದರು. ಎಲ್ಲಿಗೆ ಕನ್ನಡದ ನಿಯೋಗ ಹೋಗುವಾಗಲೂ ಆಲ್ಲಿ ರಾಯರು ಅನಿವಾರ್ಯ ಎನ್ನುವಷ್ಟರಮಟ್ಟಿಗೆ ಅವರು ಕನ್ನಡದ ವಕ್ತಾರರು ಆಗಿದ್ದಾರೆ.
ಕನ್ನಡ ಸಾಹಿತ್ಯ ಲೋಕದಲ್ಲಿ ಯಾವೆಲ್ಲ ಪ್ರಶಸ್ತಿಗಳು ಇವೆಯೋ ಅವೆಲ್ಲವನ್ನೂ ಪಡೆದ ಕೀರ್ತಿ ಅವರದ್ದು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ವಿಶ್ವ ಮಾನವ ಪ್ರಶಸ್ತಿ, ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವರ್ಧಮಾನ ಸಾಹಿತ್ಯ ಪ್ರಶಸ್ತಿ, ಕಾರಂತರ ಹೆಸರಿನ ಕವಿ ಸಮ್ಮಾನ ಪ್ರಶಸ್ತಿ, ಮಾಸ್ತಿ ಸಾಹಿತ್ಯ ಪ್ರಶಸ್ತಿ….ಇವೆಲ್ಲವನ್ನೂ ಅವರು ಪಡೆದಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪಡೆದ ಎಷ್ಟೋ ಸಾಹಿತಿಗಳಿಗಿಂತ ಹೆಚ್ಚು ಮತ್ತು ಮೌಲ್ವಿಕವಾಗಿ ಅವರು ಬರೆದಿದ್ದಾರೆ ಎನ್ನುವುದು ಹಲವು ಹಿರಿಯ ಸಾಹಿತಿಗಳ ಅಭಿಮತವಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಕೂಡ ಅವರು ಸೇವೆ ಸಲ್ಲಿಸಿದ್ದನ್ನು ನಾವು ಮರೆಯಲು ಸಾಧ್ಯವೇ ಇಲ್ಲ.
ನಾನೊಬ್ಬ ಸಾಮಾನ್ಯ ಕಾರ್ಯಕರ್ತ ಎನ್ನುತ್ತಿದ್ದರು!
ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕನ್ನಡದ ಸೇವೆ ಮಾಡಿದ್ದರೂ ನಾನು ಏನೂ ಅಲ್ಲ, ನಾನೊಬ್ಬ ಕನ್ನಡದ ಸಾಮಾನ್ಯ ಸ್ವಯಂಸೇವಕ ಎನ್ನುತ್ತಾ ಅವರು ಉಡುಪಿ ಸಮ್ಮೇಳನದಲ್ಲಿ ಅಧ್ಯಕ್ಷ ಭಾಷಣ ಆರಂಭಿಸಿದ್ದರು. ಅದರಂತೆಯೇ ನಡೆದುಕೊಂಡರು. 'ನನ್ನಂತಹ ನೂರಾರು ಬರಹಗಾರರಿಗೆ ಅವರು ಮಾರ್ಗದರ್ಶಕರಾಗಿದ್ದರು ' ಎಂದು ಹಿರಿಯ ಸಾಹಿತಿ ಡಾಕ್ಟರ್ ಚಿದಾನಂದ ಮೂರ್ತಿ ಹೃದಯ ತುಂಬಿ ಹೇಳಿದ್ದಾರೆ. ಅವರು ಬದುಕಿದ್ದಾಗ (ನಿಧನ 2019) ಅವರಿಗೆ ಜ್ಞಾನಪೀಠದ ಗೌರವ ದೊರೆಯಲೇ ಬೇಕಿತ್ತು. ಈ ವರ್ಷ ಶೇಷಗಿರಿರಾಯರ ಜನ್ಮಶತಮಾನೋತ್ಸವ ವರ್ಷ. ಅದನ್ನು ಆಚರಣೆ ಮಾಡುವುದರ ಮೂಲಕ ಸರಕಾರ, ಕನ್ನಡ ಸಾಹಿತ್ಯ ಪರಿಷತ್ತು ಆ ಕೊರತೆಯನ್ನು ತುಂಬಿಸಬೇಕು ಎನ್ನುವುದು ನನ್ನ ಆಗ್ರಹ ಮತ್ತು ಅಭಿಮತ.
ಇದನ್ನೂ ಓದಿ: Faith: ರಾಜೇಂದ್ರ ಭಟ್‌ ಅಂಕಣ: ದೇವರ ನಂಬಿಕೆಯು ದೊಡ್ಡದಾ? ವಿಜ್ಞಾನದ ಸಿದ್ಧಾಂತಗಳು ದೊಡ್ಡದಾ?
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

urea
2:13 PM January 22, 2025

ಕೃಷಿ ಸಬ್ಸಿಡಿಗೆ ರೈತರು ಬಿಟ್ಟು ಉಳಿದವರೆಲ್ಲ ಫಲಾನುಭವಿಗಳು!

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು