ಸ್ಟಾರ್‌ಗಳ ವೈಫಲ್ಯದ ನಡುವೆ ಸೆಂಚುರಿ ಬಾರಿಸಿ ಸೈ ಎನಿಸಿಕೊಂಡ ಶಾರ್ದುಲ್ ಠಾಕೂರ್!
ಪ್ರಸ್ತುತ ನಡೆಯುತ್ತಿರುವ 2024-25ರ ರಣಜಿ ಟ್ರೋಫಿ ಟೂರ್ನಿಯ ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ಮಂಬೈ ತಂಡದ ಆಲ್‌ರೌಂಡರ್ ಶಾರ್ದುಲ್ ಠಾಕೂರ್ ಶತಕವನ್ನು ಸಿಡಿಸಿದ್ದಾರೆ. ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್, ಅಜಿಂಕ್ಯ ರಹಾನೆ, ಯಶಸ್ವಿ ಜೈಸ್ವಾಲ್ ವೈಫಲ್ಯ ಅನುಭವಿಸಿದರೂ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಶಾರ್ದುಲ್, ತಮ್ಮ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಎರಡನೇ ಶತಕವನ್ನು ಪೂರ್ಣಗೊಳಿಸಿದ್ದಾರೆ.

Shardul Thakur Scored Century

ಮುಂಬೈ: ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಹೊರತಾಗಿಯೂ ಶಾರ್ದುಲ್ ಠಾಕೂರ್ (Shardul Thakur) ಜಮ್ಮು ಮತ್ತು ಕಾಶ್ಮೀರ ವಿರುದ್ಧದ 2024-25ರ ರಣಜಿ ಟ್ರೋಫಿ (Ranji Trophy 2024-25) ಪಂದ್ಯದಲ್ಲಿ ಶತಕವನ್ನು ಬಾರಿಸಿದ್ದಾರೆ. ಆ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿ ಜೀವನದಲ್ಲಿ ಎರಡನೇ ಶತಕವನ್ನು ಪೂರ್ಣಗೊಳಿಸಿದ್ದಾರೆ. ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಶಾರ್ದುಲ್ ಠಾಕೂರ್, ಇದೀಗ ಶತಕವನ್ನು ಸಿಡಿಸುವ ಮೂಲಕ ಬಿಸಿಸಿಐ ಆಯ್ಕೆದಾರರಿಗೆ ತಿರುಗೇಟು ನೀಡಿದ್ದಾರೆ.
ಇಲ್ಲಿನ ಬಿಕೆಸಿ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮುಂಬೈ ತಂಡ ಅತ್ಯಂತ ಬಲಿಷ್ಠವಾಗಿದೆ. ಏಕೆಂದರೆ ಭಾರತ ಟೆಸ್ಟ್ ತಂಡದ ಆರಂಭಿಕರಾದ ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್, ಅಜಿಂಕ್ಯ ರಹಾನೆ, ಶಿವಂ ದುಬೆ ಸೇರಿದಂತೆ ಸ್ಟಾರ್ ಆಟಗಾರರೇ ಮುಂಬೈ ಪರ ಆಡುತ್ತಿದ್ದಾರೆ. ಆದರೆ, ಈ ಎಲ್ಲಾ ಸ್ಟಾರ್ ಆಟಗಾರರು ಕೂಡ ಜಮ್ಮು-ಕಾಶ್ಮೀರದ ಬೌಲರ್‌ಗಳ ಎದುರು ಮಕಾಡೆ ಮಲಗಿದರು.
Ranji Trophy: ಪಂಜಾಬ್ ವಿರುದ್ಧ ದ್ವಿಶತಕ ಸಿಡಿಸಿದ ಕನ್ನಡಿಗ ಸ್ಮರಣ್ ರವಿಚಂದ್ರನ್!
ಇದರ ಕಾರಣ ಪ್ರಥಮ ಇನಿಂಗ್ಸ್‌ನಲ್ಲಿ ಮುಂಬೈ ತಂಡ ಕೇವಲ 120 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ನಂತರ ಜಮ್ಮು ಕಾಶ್ಮೀರ 206 ರನ್ ಗಳಿಸಿ ಪ್ರಥಮ ಇನಿಂಗ್ಸ್‌ನಲ್ಲಿ ಮುನ್ನಡೆ ಪಡದಿತ್ತು. ಭಾರಿ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಮುಂಬೈ ತಂಡ, 101 ರನ್‌ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕ್ರೀಸ್‌ಗೆ ಬಂದ ಶಾರ್ದುಲ್ ಠಾಕೂರ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದರು.
1⃣0⃣0⃣ for Shardul Thakur against Jammu & Kashmir in #RanjiTrophy !!@imShard pic.twitter.com/Y2goxrHrDq
— The Gorilla (News & Updates) (@iGorilla19) January 24, 2025
ಶಾರ್ದುಲ್ ಠಾಕೂರ್ ಭರ್ಜರಿ ಶತಕ
ಇವರು ಆಡಿದ 105 ಎಸೆತಗಳಲ್ಲಿ ಶತಕವನ್ನು ಪೂರ್ಣಗೊಳಿಸಿದ್ದರು. ಆ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿ ಜೀವನದ ಎರಡನೇ ಶತಕವನ್ನು ಪೂರ್ಣಗೊಳಿಸಿದ್ದರು. ಒಟ್ಟಾರೆ ಎರಡನೇ ದಿನದಾಟದ ಅಂತ್ಯಕ್ಕೆ ಶಾರ್ದುಲ್ ಠಾಕೂರ್ 119 ಎಸೆತಗಳಲ್ಲಿ 17 ಮನಮೋಹಕ ಬೌಂಡರಿಗಳೊಂದಿಗೆ ಅಜೇಯ 113 ರನ್‌ಗಳನ್ನು ಗಳಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇನ್ನು ಇವರಿಗೆ ಎಂಟನೇ ವಿಕೆಟ್‌ಗೆ ಸಾಥ್ ನೀಡಿದ್ದ ತನುಷ್ ಕೋಟಿಯನ್ 119 ಎಸೆತಗಳಲ್ಲಿ 6 ಬೌಂಡರಿಗಳೊಂದಿಗೆ ಅಜೇಯ 58 ರನ್‌ಗಳನ್ನು ಕಲೆ ಹಾಕಿದ್ದಾರೆ. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಎಂಟನೇ ವಿಕೆಟ್‌ಗೆ 173 ರನ್‌ಗಳನ್ನು ಗಳಿಸಿದ್ದು, ಮುಂಬೈ ತಂಡವನ್ನು ಅಪಾಯದಿಂದ ಪಾರು ಮಾಡಿದ್ದಾರೆ.
Ranji Trophy: ಜಡೇಜಾ ಸ್ಪಿನ್ ಕಮಾಲ್; ಡೆಲ್ಲಿಗೆ 10 ವಿಕೆಟ್ ಸೋಲು
188 ರನ್ ಮುನ್ನಡೆ ಸಾಧಿಸಿದ ಮುಂಬೈ
ಶಾರ್ದುಲ್ ಠಾಕೂರ್ ಹಾಗೂ ತನುಷ್ ಕೋಟಿಯನ್ ದೊಡ್ಡ ಜೊತೆಯಾಟದ ಬಲದಿಂದ ಮುಂಬೈ ತಂಡ, ಎರಡನೇ ದಿನದಾಟದ ಅಂತ್ಯಕ್ಕೆ 67 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 274 ರನ್‌ಗಳನ್ನು ಕಲೆ ಹಾಕಿದೆ. ಆ ಮೂಲಕ ಅಜಿಂಕ್ಯ ರಹಾನೆ ಪಡೆ 188 ರನ್‌ಗಳ ಮುನ್ನಡೆಯನ್ನು ಪಡೆದುಕೊಂಡಿದೆ. ಇದಕ್ಕೂ ಮುನ್ನ ಯಶಸ್ವಿ ಜೈಸ್ವಾಲ್ (26 ರನ್) ಹಾಗೂ ರೋಹಿತ್ ಶರ್ಮಾ (28) ಅವರು ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಇನಿಂಗ್ಸ್ ಆಡುವಲ್ಲಿ ವಿಫಲರಾಗಿದ್ದರು. ನಂತರ ಅಜಿಂಕ್ಯ ರಹಾನೆ (16) ಹಾಗೂ ಶ್ರೇಯಸ್ ಅಯ್ಯರ್ (17) ಅವರು ಕೂಡ ವಿಫಲರಾಗಿದ್ದರು.