#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Chikkaballapur News: ವಿಶ್ವದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ರಚಿತವಾದ ಆಡಳಿತ ನೀಡಿದವರು ಶ್ರೀಕೃಷ್ಣದೇವರಾಯರು

ಮಂಗಳವಾರ ಸಂಜೆ ೩.೩೦ಕ್ಕೆ ಎಂ.ಜಿ ರಸ್ತೆಯ ಮರಳು ಸಿದ್ಧೇಶ್ವರ ದೇವಾಲಯದ ಬಳಿ ಶ್ರೀಕೃಷ್ಣ ದೇವ ರಾಯರ ರಥವನ್ನು ಆಹ್ವಾನಿಸಲಿದ್ದು, ಅಲ್ಲಿಂದ ಶ್ರೀ ಯೋಗಿನಾರೇಯಣ ಯತೀಂದ್ರರ ದೇವಾಲಯಕ್ಕೆ ಕರೆದೊಯ್ದು, ಅಲ್ಲಿ ಪೂಜೆ ಸಲ್ಲಿಸಿದ ಬಳಿಕ ವಿವಿಧ ಕಲಾತಂಡಗಳೊಂದಿಗೆ ನಗರದಲ್ಲಿ ರಥ ಸಂಚರಿಸ ಲಿದೆ.

ಶ್ರೀಕೃಷ್ಣ ದೇವರಾಯರ ಜಯಂತ್ಯುತ್ಸವದ ಅಂಗವಾಗಿ ನಾಳೆ ರಥೋತ್ಸವ ಆಗಮನ

ಶ್ರೀಕೃಷ್ಣ ದೇವರಾಯರ ಜಯಂತ್ಯೋತ್ಸವದ ಅಂಗವಾಗಿ ನಾಳೆ ರಥೋತ್ಸವ ಆಗಮನವಾಗಲಿದೆ ಎಂದು ಕೆ.ವಿ.ನವೀನ್‌ಕಿರಣ್ ತಿಳಿಸಿದರು.

Profile Ashok Nayak Feb 10, 2025 10:15 PM

ಚಿಕ್ಕಬಳ್ಳಾಪುರ : ಇತಿಹಾಸ ಕಂಡ ಅತ್ಯಂತ ಸಮೃದ್ಧ ವಿಜಯನಗರ ಸಾಮ್ರಾಜ್ಯದ ಅರಸ ಶ್ರೀಕೃಷ್ಣದೇವರಾಯರ 555ನೇ ಜಯಂತ್ಯುತ್ಸವ ಪ್ರಯುಕ್ತ ರಾಜ್ಯಾದ್ಯಂತ ಸಂಚರಿಸುತ್ತಿರುವ ಶ್ರೀಕೃಷ್ಣದೇವರಾಯರ ರಥವು ಮಂಗಳವಾರ ನಗರಕ್ಕೆ ಆಗಮಿಸಲಿದ್ದು, ಬಲಿಜಿಗರು ಸೇರಿ ಎಲ್ಲ ಸಮುದಾಯಗಳೂ ಆಗಮಿಸಿ ಯಶಸ್ವಿ ಮಾಡಬೇಕೆಂದು ಕೆ.ವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ವಿ. ನವೀನ್‌ ಕಿರಣ್ ಕೋರಿದರು. ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಟಿ ಯಲ್ಲಿ ಮಾತನಾಡಿ, ವಿಶ್ವದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ರಚಿತವಾದ ಆಡಳಿತ ನೀಡಿದವರು ಶ್ರೀಕೃಷ್ಣದೇವರಾಯರು.

ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಅಲ್ಲನ ಶ್ರೀಮಂತಿಕೆಯ ಬಗ್ಗೆ ಚೀನಾದ ಇತಿಹಾಸಕಾರ ಹೂಯೆನ್‌ತ್ಸಾಂಗ್ ಉಲ್ಲೇಖಿಸಿದ್ದಾರೆಂದರೆ ಆಗಿನ ಆಡಳಿತ ಹೇಗಿತ್ತು ಎಂಬುದಕ್ಕೆ ನಿದರ್ಶನವಾಗಿದೆ ಎಂದರು.

ಇದನ್ನೂ ಓದಿ: Chikkaballapur News: ಬೆದರಿಕೆಗಳಿಗೆ ಭಯಪಡುವ ಶಾಸಕ ನಾನಲ್ಲ ಎಂದ ಶಾಸಕರ ಕ್ಷಮೆಯಾಚನೆಗೆ ದಸಂಸ ಒತ್ತಾಯ

ಇಂತಹ ಜಗತ್‌ಪ್ರಸಿದ್ಧ ಆಡಳಿತ ನೀಡಿದ ಶ್ರೀಕೃಷ್ಣ ದೇವರಾಯರು ಜನಿಸಿ 555 ವರ್ಷಗಳಾಗಿದ್ದು, ಸಮುದಾಯದ ಕೀರ್ತಿ ಮುಖಟವಾದ ಶ್ರೀಕೃಷ್ಣದೇವರಾಯರ 555ನೇ ಜಯಂತಿ ಅದ್ಧೂರಿಯಾಗಿ ಆಚರಿಸಲು ರಾಜ್ಯ ಬಲಿಜ ಯುವಶಕ್ತಿ ಮುಂದಾಗಿರುವುದು ಸಂತಸದ ವಿಚಾರ. ಶ್ರೀಕೃಷ್ಣ ದೇವಾ ರಯರ ಜಯಂತಿ ಬಗ್ಗೆ ನಾಡಿನೆಲ್ಲೆಡೆ ಜಾಗೃತಿ ಮೂಡಿಸುವ ಉದ್ಧೇಶದಿಂದ ಶ್ರೀಕೃಷ್ಣದೇವರಾಯರ ರಥ ರಾಜ್ಯಾದ್ಯಂತ ಸಂಚರಿಸುತ್ತಿದೆಯೆಂದು ಹೇಳಿದರು.

ಮಂಗಳವಾರ ಸಂಜೆ ೩.೩೦ಕ್ಕೆ ಎಂ.ಜಿ ರಸ್ತೆಯ ಮರಳು ಸಿದ್ಧೇಶ್ವರ ದೇವಾಲಯದ ಬಳಿ ಶ್ರೀಕೃಷ್ಣ ದೇವರಾಯರ ರಥವನ್ನು ಆಹ್ವಾನಿಸಲಿದ್ದು, ಅಲ್ಲಿಂದ ಶ್ರೀ ಯೋಗಿನಾರೇಯಣ ಯತೀಂದ್ರರ ದೇವಾಲಯಕ್ಕೆ ಕರೆದೊಯ್ದು, ಅಲ್ಲಿ ಪೂಜೆ ಸಲ್ಲಿಸಿದ ಬಳಿಕ ವಿವಿಧ ಕಲಾತಂಡಗಳೊಂದಿಗೆ ನಗರದಲ್ಲಿ ರಥ ಸಂಚರಿಸಲಿದೆ. ನಂತರ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ರಥವನ್ನು ದೊಡ್ಡ ಬಳ್ಳಾಪುರಕ್ಕೆ ಬೀಳ್ಕೊಡಲಾಗುವುದು ಎಂದು ಹೇಳಿದರು.

ಶ್ರೀನಿವಾಸಮೂರ್ತಿ, ನಾಯನಹಳ್ಳಿ ನಾರಾಯಣಸ್ವಾಮಿ, ನಗರಸಭಾ ಸದಸ್ಯ ನರಸಿಂಹಮೂರ್ತಿ, ಡಾಂಬುಶ್ರೀನಿವಾಸ್, ಎಸ್.ಆರ್.ರಾಮು, ಮೊಬೈಲ್ ಬಾಬು, ರಾಮು ಫರ್ನೀರ‍್ಸ್ ಮಾಲೀಕ ರಾಮು ಇದ್ದರು.

*
ಚಿಕ್ಕಬಳ್ಳಾಪುರದಲ್ಲಿ ನಿರ್ಮಾಣವಾಗುತ್ತಿರುವ ಕನ್ನಡ ಭವನಕ್ಕೆ ಶ್ರೀಕೃಷ್ಣದೇವರಾಯರ ಕಲಾ ಭವನ ಎಂದು ನಾಮಕರಣ ಮಾಡಬೇಕು ಎಂದು ಈಗಾಗಲೇ ಶಾಸಕರಿಗೆ ಮನವಿ ಮಾಡಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಬಳಿಯೂ ಈಗಾಗಲೇ ಚರ್ಚೆ ನಡೆಸಲಾಗಿದ್ದು, ಶ್ರೀಕೃಷ್ಣದೇವರಾಯರ ಹೆಸರೇ ಅಂತಿಮ ಆಗಲಿದೆ ಎಂದು ಮುಖಂಡ ಡ್ಯಾನ್ಸ್ ಶ್ರೀನಿವಾಸ್ ತಿಳಿಸಿದರು.

*
ಎಸ್.ಪಿ.ಶ್ರೀನಿವಾಸ್ ಮಾತನಾಡಿ ಕನ್ನಡ ಭವನದ ಮುಂದೆ ಶ್ರೀಕೃಷ್ಣದೇವರಾಯರ ಪುತ್ಥಳಿ ನಿರ್ಮಾಣ ಮಾಡುವ ಬಗ್ಗೆಯೂ ಚರ್ಚೆ ನಡೆಸಲಾಗಿದ್ದು, ಅಲ್ಲದೆ ಚಿಕ್ಕಬಳ್ಳಾಪುರದಲ್ಲಿ ಶಿಕ್ಷಣ ಕ್ರಾಂತಿ ಮಾಡಿದ ಸಿವಿ ವೆಂಕಟರಾಯಪ್ಪರ ಪುತ್ಥಳಿಯನ್ನು ನಗರಸಭೆ ಆವರಣದಲ್ಲಿ ಪ್ರತಿಷ್ಠಾಪಿ ಸಲು ಶಾಸಕರು ಆಸಕ್ತಿ ತೋರಿದ್ದಾರೆ. ಶೀಘ್ರದಲ್ಲಿಯೇ ಉಭಯ ನಾಯಕರ ಪ್ರತಿಮೆ ನಗರದಲ್ಲಿ ಪ್ರತಿಷ್ಠಾಪನೆಯಾಗಲಿದೆ ಎಂದು ಹೇಳಿದರು.