Chikkaballapur News: ಬೆದರಿಕೆಗಳಿಗೆ ಭಯಪಡುವ ಶಾಸಕ ನಾನಲ್ಲ ಎಂದ ಶಾಸಕರ ಕ್ಷಮೆಯಾಚನೆಗೆ ದಸಂಸ ಒತ್ತಾಯ
ಪಾತಪಾಳ್ಯದಲ್ಲಿ ನಡೆದ ಜನಸ್ಪಂಧನ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಮ್ಮುಖ ದಲ್ಲಿ ದಲಿತರು ರೋಲ್ ಕಾಲ್ ಮಾಡುವವರು, ದಲಿತರ ಬೆದರಿಕೆ ಗಳಿಗೆ ನಾನು ಭಯಪಡುವವನಲ್ಲ ಎಂದು ಶಾಸಕ ಸುಬ್ಬಾರೆಡ್ಡಿ ನೀಡಿರುವ ಹೇಳಿಕೆಯನ್ನು ದಲಿತ ಸಂಘಟನೆಗಳ ಒಕ್ಕೂಟ ಖಂಡಿಸುತ್ತಿದ್ದು, ಸಾರ್ವಜನಿಕವಾಗಿ ಶಾಸಕರು ದಲಿತರ ಕ್ಷಮೆ ಕೇಳ ಬೇಕೆಂದು ಒತ್ತಾಯಿಸಿದರು
![Chikkaballapur News: ಬೆದರಿಕೆಗಳಿಗೆ ಭಯಪಡುವ ಶಾಸಕ ನಾನಲ್ಲ ಎಂದ ಶಾಸಕರ ಕ್ಷಮೆಯಾಚನೆಗೆ ದಸಂಸ ಒತ್ತಾಯ](https://cdn-vishwavani-prod.hindverse.com/media/original_images/CHK25.jpg)
ಬಾಗೇಪಲ್ಲಿ ಪಟ್ಟಣದ ಪತ್ರಕರ್ತರ ಭವನದಲ್ಲಿ ದಲಿತ ಸಂಘಟನೆ ಒಕ್ಕೂಟದ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿ ಶಾಸಕ ಸುಬ್ಬಾರೆಡ್ಡಿ ದಲಿತರಲ್ಲಿ ಕ್ಷಮೆಯಾಚಿಸುವಂತೆ ಒತ್ತಾಯಿಸಿದರು. ಮುಖಂಡರಾದ ಚಿನ್ನಪೂಜಪ್ಪ, ಗೂಳೂರು ಲಕ್ಷ್ಮೀನಾರಾಯಣ, ಎಂ.ವಿ. ಲಕ್ಷ್ಮೀನರಸಿಂಹಪ್ಪ, ಜಯಂತ್ ಇದ್ದರು
![Profile](https://vishwavani.news/static/img/user.png)
ಬಾಗೇಪಲ್ಲಿ: ರೋಲ್ ಕಾಲ್ ಮಾಡುವ ದಲಿತ ಮುಖಂಡರ ಬೆದರಿಕೆಗಳಿಗೆ ಬಯಪಡುವ ಶಾಸಕ ನಾನಲ್ಲ ಎಂದು ಸರ್ಕಾರಿ ಕಾರ್ಯಕ್ರಮದಲ್ಲಿ ದಲಿತರ ಬಗ್ಗೆ ಹಗರುವಾಗಿ ಮಾತನಾಡಿರುವ ಶಾಸಕ ಸುಬ್ಬಾರೆಡ್ಡಿ ತಪ್ಪೋಪ್ಪಿಕೊಂಡು ಸಾರ್ವಜನಿಕವಾಗಿ ದಲಿತರಲ್ಲಿ ಕ್ಷಮೆಯಾಚಿಸಬೇಕೆಂದು ಬಾಗೇಪ ಲ್ಲಿ ತಾಲೂಕಿನ ದಲಿತ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.
ಬಾಗೇಪಲ್ಲಿ ಪಟ್ಟಣದ ಪತ್ರಕರ್ತರ ಭವನದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಸುದ್ದಿಗೋಷ್ಠಿ ಅಯೋಜಿಸಿ ಪಾತಪಾಳ್ಯದಲ್ಲಿ ನಡೆದ ಜನಸ್ಪಂಧನ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ದಲಿತರು ರೋಲ್ ಕಾಲ್ ಮಾಡುವವರು, ದಲಿತರ ಬೆದರಿಕೆ ಗಳಿಗೆ ನಾನು ಭಯಪಡುವವನಲ್ಲ ಎಂದು ಶಾಸಕ ಸುಬ್ಬಾರೆಡ್ಡಿ ನೀಡಿರುವ ಹೇಳಿಕೆಯನ್ನು ದಲಿತ ಸಂಘಟನೆಗಳ ಒಕ್ಕೂಟ ಖಂಡಿಸುತ್ತಿದ್ದು, ಸಾರ್ವಜನಿಕವಾಗಿ ಶಾಸಕರು ದಲಿತರ ಕ್ಷಮೆ ಕೇಳ ಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ: Chikkaballapur(Chinthamani) News: ಮರುಗಮಲ್ಲ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಗುರುವಂದನಾ ಕಾರ್ಯಕ್ರಮ
ದಲಿತ ಮುಖಂಡ ಚಿನ್ನ ಪೂಜಪ್ಪ ಮಾತನಾಡಿ, ಬಾಗೇಪಲ್ಲಿ ಕ್ಷೇತ್ರದ ದಲಿತರ ಶೇ.80ರಷ್ಟು ಮತ ಗಳನ್ನು ಪಡೆದಿರುವ ಸುಬ್ಬಾರೆಡ್ಡಿ ಮೂರನೇ ಅವಧಿಗೆ ಶಾಸಕರಾಗಿದ್ದಾರೆ. ಅಂತಹ ದಲಿತರ ಮತ ಗಳಿಂದ ಶಾಸಕರಾಗಿರುವ ನೀವು ಸರ್ಕಾರಿ ಜನಸ್ಪಂದನ ಕಾರ್ಯಕ್ರಮದ ವೇಧಿಕೆಯಲ್ಲಿ ದಲಿತರು ರೋಲ್ ಕಾಲ್ ಮಾಡುವವರು, ರೋಲ್ ಕಾಲ್ ದಲಿತರ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ ಎಂದು ದಲಿತರ ಬಗ್ಗೆ ಕೀಳಾಗಿ ಮಾತನಾಡುವ ಅವಶ್ಯಕತೆ ಏನಿದೆ ? ಎಂದು ಶಾಸಕ ಸುಬ್ಬಾರೆಡ್ಡಿ ಅವರನ್ನು ಪ್ರಶ್ನಿಸಿದರು.
ಶಾಸಕರಾದ ನಿಮ್ಮ ಬಳಿ ಯಾರಾದರೂ ರೋಲ್ ಕಾಲ್ ಮಾಡಿ ನಿಮ್ಮನ್ನು ಹೆದರಿಸುತ್ತಿದ್ದರೆ ಅಂತಹ ಮುಖಂಡರ ವಿರುದ್ದ ಪೊಲೀಸರಿಗೆ ದೂರು ಸಲ್ಲಿಸಿ, ಕಾನೂನು ಕ್ರಮ ಜರುಗಿಸಿ, ಅಷ್ಟೇ ಹೊರತು ದಲಿತರ ಬಗ್ಗೆ ಬಹಿರಂಗ ವೇದಿಕೆಗಳಲ್ಲಿ ಬಾಯಿಗೆ ಬಂದಂತೆ ಮಾತನಾಡಿದರೆ ಚುನಾ ವಣೇ ಸಮಯದಲ್ಲಿ ನಮಗೆ ತಕ್ಕಪಾಠ ಕಲಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ರಾಜ್ಯಾಧ್ಯಂತ ನಿಮ್ಮ ನೈತಿಕತೆ ಬಗ್ಗೆ ದಲಿತ ಸಂಘಟನೆಗಳಿಂದ ಹೋರಾಟ ನಡೆಸಲಿದ್ದಾರೆ. ಸರ್ಕಾರದಲ್ಲಿ ಸಚಿವ ರಾಗಬೇಕಾಗಿರುವ ನೀವು ಕ್ಷೇತ್ರದ ದಲಿತರಲ್ಲಿ ಕ್ಷಮೆಯಾಚಿಸದಿದ್ದರೆ ರಾಜ್ಯದಲ್ಲೆಡೆ ಸಂಚಾರ ಮಾಡುವ ವೇಳೆ ದಲಿತರು ನಿಮಗೆ ಧಿಕ್ಕಾರ ಹಾಕಲಿದ್ದಾರೆಂದು ಎಚ್ಚರಿಸಿದರು.
ದಲಿತ ಮುಖಂಡ ಎಂ.ವಿ.ಲಕ್ಷ್ಮೀ ನರಸಿಂಹಪ್ಪ ಮಾತನಾಡಿ, ಕ್ಷೇತ್ರದ ಶಾಸಕರಿಗೆ ನಾವೆಲ್ಲರೂ ಮತ ಹಾಕಿ ಗೆಲ್ಲಿಸಿಕೊಂಡಿದ್ದೇವೆ. ನಮ್ಮ ದಲಿತರ ಮತಗಳಿಂದ ಶಾಸಕರಾಗಿರುವ ಸುಬ್ಬಾರೆಡ್ಡಿ ಅವರನ್ನು ನಾವು ಯಾವೊತ್ತೂ ಭಯಪಡಿ, ಹೆದರಿಕೊಳ್ಳಿ ಅಂತ ಎಲ್ಲಿಯೂ ಬೆದರಿಕೆ ಹಾಕಿಲ್ಲ. ಅದರೂ ದಲಿತರ ಬಗ್ಗೆ ಅಸಭ್ಯವಾಗಿ ಮಾತನಾಡಿರುವುದನ್ನು ದಲಿತ ಸಂಘಟನೆಗಳ ಒಕ್ಕೂಟ ತೀವ್ರವಾಗಿ ಖಂಡಿಸಿದ್ದು, ಶಾಸಕರು ಈ ಕೂಡಲೆ ಕ್ಷಮೆಯಾಚಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಗೂಳೂರು ಲಕ್ಷ್ಮೀ ನಾರಾಯಣ, ಜಯಂತ್, ನಾಗಪ್ಪ, ಎನ್.ನಾರಾಯಣಸ್ವಾಮಿ, ಸಾಯಿ, ಡಿ.ಈಶ್ವರಪ್ಪ, ಗಂಗುಲಮ್ಮ, ರಾಜಪ್ಪ, ವೆಂಕಟೇಶ್, ಈಶ್ವರ್, ರಮಾದೇವಿ, ಎನ್.ಇ.ವೆಂಕಟೇಶ್, ಅಂಜಿನಪ್ಪ, ಹೊಸಹುಡ್ಯ ಕೃಷ್ಣಪ್ಪ ಮತ್ತಿತರರು ಇದ್ದರು.