Reliance: ಮಹಾಕುಂಭ ಮೇಳ 2025; ಯಾತ್ರಾರ್ಥಿಗಳಿಗೆ ಸೇವೆ ಒದಗಿಸಲು ಆರ್‌ಸಿಪಿಎಲ್ ಸಹ ಭಾಗಿ

ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಸಮ್ಮೇಳನಗಳಲ್ಲಿ ಒಂದು ಎನಿಸಿಕೊಂಡಿರುವ ಮಹಾ ಕುಂಭ ಮೇಳ- 2025 ರಲ್ಲಿ ರಿಲಯನ್ಸ್ ಕನ್‌ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (ಆರ್‌ಸಿಪಿಎಲ್) (Reliance) ಸಹ ಭಕ್ತಾದಿಗಳಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಈ ಕುರಿತ ವಿವರ ಇಲ್ಲಿದೆ.

image-544cef1b-a0c9-4ee2-bfc4-9f1fa2644358.jpg
Profile Vishwavani News January 13, 2025
ಪ್ರಯಾಗರಾಜ್ (ಉತ್ತರಪ್ರದೇಶ): ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಸಮ್ಮೇಳನಗಳಲ್ಲಿ ಒಂದು ಎನಿಸಿಕೊಂಡಿರುವ ಮಹಾ ಕುಂಭ ಮೇಳ- 2025 ರಲ್ಲಿ ರಿಲಯನ್ಸ್ ಕನ್‌ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (ಆರ್‌ಸಿಪಿಎಲ್) (Reliance) ಸಹ ಭಕ್ತಾದಿಗಳಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಆರ್‌ಸಿಪಿಎಲ್ ಮೂಲತಃ ಭಾರತದಾದ್ಯಂತ ಸಮುದಾಯ ಸೇವೆಯಲ್ಲಿ ತೊಡಗಿಕೊಳ್ಳುವುದಕ್ಕೆ ಬದ್ಧವಾಗಿದೆ. ಈ ಕುಂಭ ಮೇಳದಲ್ಲಿ ಪಾಲ್ಗೊಳ್ಳುವ ಹತ್ತಾರು ಲಕ್ಷ ಮಂದಿಗೆ ತುಂಬ ಪ್ರಮುಖವಾದ ಆಲೋಚನೆ ಹಾಗೂ ಪರಿಣಾಮಕಾರಿಯಾದ ಸರಣಿ ಉಪಕ್ರಮಗಳ ಮೂಲಕ ಸೇವೆ ಒದಗಿಸಲಿದೆ. ಇದರೊಂದಿಗೆ ಯಾತ್ರಾರ್ಥಿಗಳಿಗೆ ಸಂತುಷ್ಟವಾದ ಅನುಭವ ಒದಗಿಸುವಲ್ಲಿ ಅವಿಭಾಜ್ಯ ಪಾತ್ರವನ್ನು ವಹಿಸುತ್ತದೆ. image-e2bbbbc3-6040-4d9a-abf8-ff6e6e330acd.jpg ಇದೊಂದು ಪವಿತ್ರವಾದ ಕಾರ್ಯಕ್ರಮವಾಗಿದ್ದು, ʼಏಕತೆಯ ಮಹಾಯಜ್ಞʼ ಎಂಬ ಅಗ್ಗಳಿಕೆ ಪಡೆದುಕೊಂಡಿದೆ. ಇದರಲ್ಲಿ ಸೇವೆ ಸಲ್ಲಿಸುವುದಕ್ಕೆ ಆರ್‌ಸಿಪಿಎಲ್‌ಗೆ ಸಿಕ್ಕಿರುವ ಈ ಅವಕಾಶ ಗೌರವ ಮತ್ತು ಹೆಮ್ಮೆ ಎನಿಸುತ್ತದೆ. ರಾಷ್ಟ್ರೀಯ ಸಾಮರಸ್ಯ ಹಾಗೂ ಅಧ್ಯಾತ್ಮ ಯೋಗಕ್ಷೇಮವನ್ನು ಉತ್ತೇಜಿಸುವ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ಇದು ಬಿಂಬಿಸುತ್ತದೆ. ಜನರೊಂದಿಗೆ ಗಹನವಾದ ಸಂಪರ್ಕವನ್ನು ಬೆಳೆಸುವ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಬೆಂಬಲಿಸುವ ಆರ್‌ಸಿಪಿಎಲ್‌ ಸಮರ್ಪಣಾ ಭಾವನೆಯನ್ನು ಉತ್ತೇಜಿಸುತ್ತದೆ. ʼಮಹಾ ಕುಂಭಮೇಳ 2025 ರಲ್ಲಿ ನಾವು ಭಾಗವಹಿಸುತ್ತಿರುವುದರಿಂದ ಈ ಭವ್ಯವಾದ ಆಧ್ಯಾತ್ಮಿಕ ಸಭೆಯ ಚೈತನ್ಯವನ್ನು ಗೌರವಿಸುವುದರ ಜತೆಗೆ ನಮ್ಮ ಉತ್ಪನ್ನಗಳು ಮತ್ತು ಸೇವೆಗಳೊಂದಿಗೆ ಎಲ್ಲ ಯಾತ್ರಿಕರು ಹಾಗೂ ಗ್ರಾಹಕರ ದೈನಂದಿನ ಜೀವನವನ್ನು ಸಬಲಗೊಳಿಸುತ್ತಿದ್ದೇವೆ. ಒಂದು ಕಂಪನಿಯಾಗಿ ನಾವು ಭಾರತೀಯ ಸಂಪ್ರದಾಯಗಳಲ್ಲಿ ಆಳವಾಗಿ ಬೇರುಗಳ ಜತೆಗೆ ತಳುಕು ಹಾಕಿಕೊಂಡಿದ್ದೇವೆ ಮತ್ತು ಈ ಪವಿತ್ರ ಕಾರ್ಯಕ್ರಮದ ಸಮಯದಲ್ಲಿ ಸಮುದಾಯಕ್ಕೆ ಸೇವೆ ಸಲ್ಲಿಸಲು ನಮ್ಮ ಬ್ರ್ಯಾಂಡ್‌ಗಳು, ಸಂಪನ್ಮೂಲಗಳು ಹಾಗೂ ಅಚಲ ಬದ್ಧತೆಯ ಮೂಲಕ ಭಾರತೀಯ ಗ್ರಾಹಕ ಪರಂಪರೆಯನ್ನು ಮರುಶೋಧನೆ ಮಾಡುತ್ತಿದ್ದೇವೆʼ ಎಂದು ರಿಲಯನ್ಸ್ ಕನ್‌ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್‌ನ ಮುಖ್ಯ ಕಾರ್ಯಾಚರಣಾ ಅಧಿಕಾರಿ ಕೇತನ್ ಮೋದಿ ಹೇಳಿದರು. ಮಹಾ ಕುಂಭಮೇಳದ ಭಾಗವಾಗಿ ಯಾತ್ರಿಕರ ಪ್ರಯಾಣದ ಉತ್ತಮ ಅನುಭವವನ್ನು ಹೆಚ್ಚಿಸಲು ಆರ್‌ಸಿಪಿಎಲ್ ಬಹು ಆಯಾಮದ ಸೇವೆಗಳು ಮತ್ತು ಅದರ ವ್ಯಾಪಕ ಶ್ರೇಣಿಯ ಗ್ರಾಹಕ ಉತ್ಪನ್ನಗಳನ್ನು ಒದಗಿಸುತ್ತದೆ. ಇದರಲ್ಲಿ ಯಾತ್ರಿಕರು ತಮ್ಮ ಆಧ್ಯಾತ್ಮಿಕ ಪ್ರಯಾಣದ ಸಮಯದಲ್ಲಿ ದೇಹದಲ್ಲಿ ನೀರಿನ ಅಂಶ ಕಡಿಮೆ ಆಗದಂತೆ ಮತ್ತು ಚೈತನ್ಯಶೀಲರಾಗಿರುವುದನ್ನು ಖಚಿತಪಡಿಸಿಕೊಳ್ಳಲು ಅಗತ್ಯವಾದ ಉಪಾಹಾರಗಳನ್ನು ಒದಗಿಸುವುದು ಸಹ ಸೇರಿದೆ. ಸ್ಪಷ್ಟ, ಓದಲು ಸುಲಭವಾದ ಫಲಕಗಳು ಮತ್ತು ಬ್ರ್ಯಾಂಡಿಂಗ್‌ನೊಂದಿಗೆ ಯಾತ್ರಿಕರಿಗೆ ಸಹಾಯ ಮಾಡಲು, ಕಾರ್ಯಕ್ರಮದ ವಿಶಾಲ ವ್ಯಾಪ್ತಿಯಲ್ಲಿ ಸರಾಗವಾಗಿ ಸಾಗಿಸಲು, ಸೂಚನಾ ಫಲಕಗಳು ಮತ್ತು ನಿರ್ದೇಶನ ಫಲಕಗಳನ್ನು ಸಹ ಅಳವಡಿಸಲಾಗುತ್ತಿದೆ. ಈ ಸುದ್ದಿಯನ್ನೂ ಓದಿ | Job Guide: ಆಯಿಲ್‌ & ನ್ಯಾಚುರಲ್‌ ಕಾರ್ಪೋರೇಷನ್‌ನಲ್ಲಿದೆ 108 ಹುದ್ದೆ; ಆನ್‌ಲೈನ್‌ ಮೂಲಕ ಹೀಗೆ ಅರ್ಜಿ ಸಲ್ಲಿಸಿ ಆರ್‌ಸಿಪಿಎಲ್‌ನ ಪ್ರಮುಖ ಪಾನೀಯ ಬ್ರ್ಯಾಂಡ್‌ನಿಂದ ಚಿಂತನಶೀಲವಾಗಿ ವಿನ್ಯಾಸಗೊಳಿಸಲಾದ ಸ್ಥಳವಾದ ಕ್ಯಾಂಪಾ ಆಶ್ರಮವು ಯಾತ್ರಿಕರು ವಿಶ್ರಾಂತಿ ಪಡೆಯಲು ಸುರಕ್ಷಿತ ಮತ್ತು ಪ್ರಶಾಂತವಾದ ನೆಲೆಯನ್ನು ನೀಡುತ್ತದೆ. ಆತಿಥ್ಯ ಮತ್ತು ಕಾಳಜಿಯ ಮನೋಭಾವವನ್ನು ಗಟ್ಟಿಗೊಳಿಸುತ್ತದೆ. ಆರ್‌ಸಿಪಿಎಲ್ ಆರಾಮ್ ಸ್ಥಳ (ವಿಶ್ರಾಂತಿ ಪ್ರದೇಶಗಳು) ಅನ್ನು ಸಹ ನಿರ್ವಹಿಸುತ್ತದೆ, ಇದು ಯಾತ್ರಿಕರಿಗೆ ಅವರ ದೀರ್ಘ ಮತ್ತು ಕಷ್ಟಕರ ಪ್ರಯಾಣದ ಸಮಯದಲ್ಲಿ ವಿಶ್ರಾಂತಿಯನ್ನು ಪಡೆಯಲು ಆರಾಮದಾಯಕ ವಿಶ್ರಾಂತಿ ವಲಯಗಳಾಗಿವೆ.
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ