Rohit Sharma: ಮಾಧ್ಯಮದವರ ಮೇಲೆ ಗರಂ ಆದ ಟೀಮ್ ಇಂಡಿಯಾ ನಾಯಕ ರೋಹಿತ್
Rohit Sharma: ಹೊಸ ನಿಯಮಗಳು ಶಿಕ್ಷೆಯಲ್ಲ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಹೇಳಿದ್ದಾರೆ.
ಮುಂಬಯಿ: ಚಾಂಪಿಯನ್ಸ್ ಟ್ರೋಫಿಗೆ ತಂಡ ಪ್ರಕಟಿಸುವ ವೇಳೆ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ ಮಾಧ್ಯಮದವರ ಮೇಲೆ ಕೋಪಗೊಂಡ ಘಟನೆ ನಡೆದಿದೆ. ಇತ್ತೀಚೆಗೆ ಬಿಸಿಸಿಐ ಆಟಗಾರರ ಮೇಲೆ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದ ಬಗ್ಗೆ ವರದಿಗಾರರು ರೋಹಿತ್‌ಗೆ ಪ್ರಶ್ನೆ ಕೇಳಿದರು. ಈ ವೇಳೆ ತಾಳ್ಮೆ ಕಳೆದುಕೊಂಡ ರೋಹಿತ್, 'ಈ ನಿಯಮಗಳ ಬಗ್ಗೆ ನಿಮಗೆ ಹೇಳಿದ್ದು ಯಾರು ? ಇದು ಅಧಿಕೃತವಾಗಿ ಬಂದಿದೆಯೇ?, ಅಧಿಕೃತವಾದ ಬಳಿಕ ಈ ಬಗ್ಗೆ ಮಾತನಾಡುತ್ತೇವೆʼ ಎಂದು ಗರಂ ಆದರು.
ಆಸ್ಟ್ರೇಲಿಯಾ ಪ್ರವಾಸದ ವೈಫಲ್ಯದ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಆಟಗಾರರು ಇನ್ನು ಮುಂದೆ 10 ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕು ಎಂದು ಬಿಸಿಸಿಐ ಆದೇಶಿಸಿತ್ತು. ಈ ನಿಯಮದ ಪ್ರಕಾರ , ದೇಶೀಯ ಕ್ರಿಕೆಟ್ ಕಡ್ಡಾಯ, ವಿದೇಶ ಪ್ರವಾಸದ ವೇಳೆ ಆಟಗಾರರ ಪತ್ನಿ, ಕುಟುಂಬಸ್ಥರು ಜತೆಗಿರುವುದಕ್ಕೆ ಕಾಲ ಮಿತಿ, ಸರಣಿ ವೇಳೆ ವೂಯಕ್ತಿಕ ಜಾಹೀರಾತು ಶೂಟಿಂಗ್, ಮ್ಯಾನೇಜರ್, ಕಾರ್ಯದರ್ಶಿ, ಶೆಫ್‌ಗಳನ್ನು, ಲಗೆಜ್ ಮಿತಿ ಸೇರಿ ಹಲವು ನಿಯಮಗಳನ್ನು ಜಾರಿಗೆ ತಂದಿತ್ತು. ಆದರೆ ರೋಹಿತ್ ಈ ಬಗ್ಗೆ ಕೇಳಿದ ಪ್ರಶ್ನೆಗೆ ಗರಂ ಆಗುವ ಜತೆಗೆ ಇದು ಅಧಿಕೃತವಾಗಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ ಚಾಂಪಿಯನ್ಸ್ ಟ್ರೋಫಿ ಉದ್ಘಾಟನೆಯಲ್ಲಿ ರೋಹಿತ್ ಶರ್ಮ ಹಾಜರ್?
ಏತನ್ಮಧ್ಯೆ, ಹೊಸ ನಿಯಮಗಳು ಶಿಕ್ಷೆಯಲ್ಲ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಹೇಳಿದ್ದಾರೆ. 'ಪ್ರತಿ ತಂಡವು ಕೆಲವು ನಿಯಮಗಳನ್ನು ಹೊಂದಿದೆ ಎಂದು ನಾನು ಭಾವಿಸುತ್ತೇನೆ. ನಾವು ವಿವಿಧ ವಿಷಯಗಳ ಬಗ್ಗೆ ಮಾತನಾಡಿದ್ದೇವೆ. ಕಳೆದ ಕೆಲವು ತಿಂಗಳುಗಳಲ್ಲಿ ತಂಡದಲ್ಲಿ ಕೆಲವು ಬದಲಾವಣೆಗಳು ಮತ್ತು ಹೆಚ್ಚಿನ ಬಾಂಧವ್ಯದ ಅಗತ್ಯವನ್ನು ನಾವು ನೋಡಿದ್ದೇವೆ' ಎಂದು ಅಗರ್ಕರ್ ಹೇಳಿದರು.
'ಇದು ಶಾಲೆಯಲ್ಲ, ಇದು ಶಿಕ್ಷೆಯಲ್ಲ. ನಮಗೆ ಕೆಲವು ನಿಯಮಗಳಿವೆ ಮತ್ತು ರಾಷ್ಟ್ರೀಯ ತಂಡಕ್ಕಾಗಿ ಆಡುವಾಗ, ನಿಯಮಗಳನ್ನು ಅನುಸರಿಸಬೇಕು. ಇವರು ಶಾಲಾ ಮಕ್ಕಳಲ್ಲ. ಇವರು ಅನುಭವಿ ಆಟಗಾರರು. ಅವರಿಗೆ ತಮ್ಮನ್ನು ತಾವು ಹೇಗೆ ನಿಭಾಯಿಸಬೇಕೆಂದು ತಿಳಿದಿದೆ. ಆದರೆ, ಅಂತಿಮವಾಗಿ ದೇಶಕ್ಕಾಗಿ ಆಡುವಾಗ ನಿಯಮಗಳನ್ನು ಅನುಸರಿಸಬೇ' ಎಂದು ಹೇಳಿದರು.