#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Saif Ali Khan: ಅಂಗಡಿಯಿಂದ ಹೆಡ್‌ಫೋನ್‌ ಖರೀದಿಸಿ ತೆರಳಿದ ಶಂಕಿತ ; ಸೈಫ್‌ ಮನೆಗೆ ನುಗ್ಗಿದ್ದ ಆರೋಪಿಯ ಮತ್ತೊಂದು ಸಿಸಿಟಿವಿ ದೃಶ್ಯ ವೈರಲ್‌

ಸೈಫ್‌ ಅಲಿ ಖಾನ್‌ ಮೇಲೆ ದಾಳಿ ನಡೆಸಿದ್ದ ವ್ಯಕ್ತಿಯ ಮತ್ತೊಂದು ಸಿಸಿಟಿವಿ ದೃಶ್ಯ ಪೊಲೀಸರಿಗೆ ದೊರೆತಿದ್ದು, ಆತ ಅಂಗಡಿಯಿಂದ ಹೆಡ್‌ಫೋನ್‌ ಖರೀದಿಸಿದ್ದಾನೆ. ನಂತರ ಅಲ್ಲಿಂದ ತೆರಳಿದ್ದಾನೆ. ಸದ್ಯ ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಸೈಫ್‌ ಅಲಿ ಖಾನ್‌ ಮೇಲೆ ದಾಳಿ ನಡೆಸಿದ್ದ ಶಂಕಿತ ಆರೋಪಿಯ ಮತ್ತೊಂದು ಸಿಸಿಟಿವಿ ದೃಶ್ಯ ವೈರಲ್‌ !

Saif ali Khan

Profile Vishakha Bhat Jan 18, 2025 3:09 PM

ಮುಂಬೈ ಜ.18.2025 : ಬಾಲಿವುಡ್‌ ನಟ ಸೈಫ್‌ ಅಲಿ (Saif Ali Khan) ಖಾನ್‌ ಅವರ ಮನೆ ಮೇಲೆ ದಾಳಿ ನಡೆದಿದ್ದು, ದರೋಡೆಕೋರನೊಬ್ಬ ಬುಧವಾರ ಮಧ್ಯರಾತ್ರಿ ಸುಮಾರು 2.30 ರ ವೇಳೆಗೆ ಖಾನ್‌ ಅವರ ಮನೆಗೆ ನುಗ್ಗಿ 1 ಕೋಟಿ ರೂ. ಗೆ ಬೇಡಿಕೆ ಇಟ್ಟಿದ್ದಾನೆ. ನಂತರ ಸೈಫ್‌ ಅಲಿ ಖಾನ್‌ ಅವರಿಗೆ ಆರು ಬಾರಿ ಚಾಕುವಿನಿಂದ ಇರಿದಿದ್ದಾನೆ. ನಂತರ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ತನಿಖೆಯಲ್ಲಿ ಒಂದೊಂದೇ ವಿಷಯ ಬೆಳಕಿಗೆ ಬರುತ್ತಿದೆ.

ಬುಧವಾರ ಮಧ್ಯರಾತ್ರಿ 2.30 ರ ವೇಳೆಗೆ ಮನೆಗೆ ನುಗ್ಗಿದ ಆರೋಪಿ ಸೈಫ್‌ ಕಿರಿ ಮಗ ಜಹಾಂಗೀರ್‌ ಕೋಣೆಗೆ ನುಗ್ಗಿದ್ದಾನೆ. ನಂತರ ಸೈಫ್‌ ಅಲಿ ಖಾನ್‌ಗೆ ಎಚ್ಚರವಾಗಿ ಆತನನ್ನು ತಡೆಯಲು ಪ್ರಯತ್ನಪಟ್ಟಿದ್ದಾರೆ. ಆಗ ಆರೋಪಿ ಸೈಫ್‌ಗೆ ಚಾಕುವಿನಿಂದ ಇರಿದು ಅಲ್ಲಿಂದ ಪರಾರಿಯಾಗಿದ್ದಾನೆ. ಆತ ಮನೆ ಒಳಗೆ ಹೋಗುತ್ತಿರುವ ದೃಶ್ಯ ಹಾಗೂ ಮನೆಯಿಂದ ಹೊರಬರುತ್ತಿರುವ ದೃಶ್ಯ ಸಿಸಿಟವಿಯಲ್ಲಿ ಸೆರೆಯಾಗಿತ್ತು. ಇದೀಗ ಆರೋಪಿಯ ಮತ್ತೊಂದು ಸಿಸಿಟಿವಿ ಫೂಟೇಜ್‌ ಲಭ್ಯವಾಗಿದ್ದು, ಘಟನೆಗೂ ಮೊದಲಿನದಾ ಇಲ್ಲವೇ ಘಟನೆಯ ನಂತರದ ಸೆರೆ ಆದ ವಿಡಿಯೋ ಇದಾಗಿದೆಯಾ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



ದಾಳಿಕೋರನು ಬಾಂದ್ರಾ ರೈಲು ನಿಲ್ದಾಣದಲ್ಲಿ ಬೇರೆ ಉಡುಪಿನಲ್ಲಿ-ನೀಲಿ ಶರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾನೆ. ಅಲ್ಲಿ ಆತ ರೈಲು ಹತ್ತಿದಿರಬಹುದು ಎಂದು ಊಹಿಸಲಾಗಿದೆ. ಅದೇ ನೀಲಿ ಶರ್ಟ್ ಧರಿಸಿ ದಾದರ್ ಅಂಗಡಿಗೆ ಆತ ತೆರಳಿದ್ದಾನೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಅಂಗಡಿಯಿಂದ ಹೆಡ್‌ಫೋನ್ ಖರೀದಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶಂಕಿತ ದಾಳಿಕೋರನ ಮತ್ತೊಂದು ಸಿಸಿಟಿವಿ ಕ್ಯಾಮೆರಾ ದೃಶ್ಯಗಳಲ್ಲಿ, ದಾಳಿಯ ಮೊದಲು, ಅವನು ಶೂ ರ್ಯಾಕ್‌ನಲ್ಲಿ ಪಾದರಕ್ಷೆಗಳನ್ನು ಜೋಡಿಸುವುದನ್ನು ಕಾಣಬಹುದು. ಆದರೆ, ವಿಡಿಯೋದಲ್ಲಿ ಅವರು ಏನು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಸದ್ಯ ಆತನ ಮುಖವನ್ನೇ ಹೋಲುವ ವ್ಯಕ್ತಿಯನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದರು. ಆದರೆ ಆ ವ್ಯಕ್ತಿಗೆ ಈ ಪ್ರಕರಣಕ್ಕೆ ಸಂಬಂಧವಿಲ್ಲ ಎಂದು ನಂತರ ತಿಳಿದು ಬಂದಿದೆ.

ಈ ಸುದ್ದಿಯನ್ನೂ ಓದಿ : Saif Ali Khan : ಕುಟುಂಬವನ್ನು ಕಾಪಾಡಲು ತನ್ನ ಜೀವವನ್ನೇ ಪಣಕ್ಕಿಟ್ಟರಾ ಸೈಫ್‌ ಅಲಿ ಖಾನ್‌ ? ಆ 30 ನಿಮಿಷದಲ್ಲಿ ನಡೆದಿದ್ದಾದರೂ ಏನು?

ಸೈಫ್‌ ಅಲಿ ಖಾನ್‌ ಅವರ ಮನೆಕೆಲಸದಾಕೆ ಹೇಳಿಕೆ ಪ್ರಕಾರ ಆರೋಪಿಯು ಸುಮಾರು ಮೂವತ್ತರ ಆಸು ಪಾಸಿನವನಾಗಿದ್ದು, ತೆಳ್ಳಗೆ ಕಪ್ಪಗಿದ್ದಾನೆ ಎಂದಿದ್ದರು. ಸದ್ಯ ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.